Search
  • Follow NativePlanet
Share
» »ತೀರ್ಥಹಳ್ಳಿಯಲ್ಲಿ ವಿಜೃಂಬಣೆಯಿಂದ ಆಚರಿಸಲಾಗುವ ಎಳ್ಳಮವಾಸ್ಯೆ.....

ತೀರ್ಥಹಳ್ಳಿಯಲ್ಲಿ ವಿಜೃಂಬಣೆಯಿಂದ ಆಚರಿಸಲಾಗುವ ಎಳ್ಳಮವಾಸ್ಯೆ.....

ಮಲೆನಾಡಿನ ಅದ್ಭುತವಾದ ಗಿರಿಕನ್ಯೆಯರ ಮಧ್ಯೆ ಸುಂದರವಾದ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತಿರುವ ಸ್ಥಳವೇ ತೀರ್ಥಹಳ್ಳಿ. ತೀರ್ಥಹಳ್ಳಿಯು ಶಿವಮೊಗ್ಗ ನಗರದಿಂದ ಸುಮಾರು 65 ಕಿ.ಮೀ ಗಳಷ್ಟು ದೂರ ಮತ್ತು ಬೆಂಗಳೂರಿನಿಂದ ಸುಮಾರು 346 ಕಿ.ಮೀ ದೂರದಲ್

ಮಲೆನಾಡಿನ ಅದ್ಭುತವಾದ ಗಿರಿಕನ್ಯೆಯರ ಮಧ್ಯೆ ಸುಂದರವಾದ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತಿರುವ ಸ್ಥಳವೇ ತೀರ್ಥಹಳ್ಳಿ. ತೀರ್ಥಹಳ್ಳಿಯು ಶಿವಮೊಗ್ಗ ನಗರದಿಂದ ಸುಮಾರು 65 ಕಿ.ಮೀ ಗಳಷ್ಟು ದೂರ ಮತ್ತು ಬೆಂಗಳೂರಿನಿಂದ ಸುಮಾರು 346 ಕಿ.ಮೀ ದೂರದಲ್ಲಿದೆ. ಹಿಂದೆ ತೀರ್ಥಹಳ್ಳಿಯನ್ನು "ಹಿಮವಿಲ್ಲದ ಕಾಶ್ಮೀರ" ಎಂದು ಕರೆಯುತ್ತಿದ್ದರು.

ಹಿಂದೂಗಳ ಪ್ರಕಾರ ಮಾರ್ಗಶಿರ ಮಾಸದ ಮೊದಲ ಹೊಸ ಚಂದ್ರ ದಿನ ಅಂದರೆ ಅಮಾವಸ್ಯೆಯಂದು ಆಚರಿಸಲಾಗುವ ಎಳ್ಳು ಅಮಾವಸ್ಯೆ ಎಂದು ಕರೆಯುತ್ತಾರೆ. ಈ ಅಮಾವಸ್ಯೆಯನ್ನು ಅತ್ಯಂತ ವಿಶೇಷವಾಗಿ ಸಡಗರದಿಂದ ಜಾತ್ರೆ ಆಚರಿಸಲಾಗುತ್ತದೆ. ತೀರ್ಥಹಳ್ಳಿಯ ಪ್ರಮುಖ ಆಕರ್ಷಣೆ ಎಂದರೆ ಅದಯ ರಾಮೇಶ್ವರ ದೇವಾಲಯ.

ಮೂರು ದಿನ ನಡೆಯುವ ಜಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿರುತ್ತಾರೆ. ಇಲ್ಲಿ ಹಲವಾರು ರುಚಿ ರುಚಿಯಾದ ಭಕ್ಷ್ಯಗಳು, ಮನರಂಜನಾ ಚಟುವಟಿಕೆಗಳು, ಆಟಿಕೆಗಳು ಇನ್ನೂ ಹಲವಾರು ಆಕರ್ಷಣೆ ಇಲ್ಲಿ ಕಾಣಬಹುದಾಗಿದೆ.

ಪ್ರಸ್ತುತ ಲೇಖನದಲ್ಲಿ ತೀರ್ಥಹಳ್ಳಿಯ ಎಳ್ಳಮವಾಸ್ಯೆಯ ಜಾತ್ರೆಯ ಬಗ್ಗೆ ಮಾಹಿತಿಯನ್ನು ಪಡೆಯೋಣ.

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ಈ ಪ್ರದೇಶಕ್ಕೆ ತೀರ್ಥಹಳ್ಳಿ, ಪರಶುರಾಮ ಕ್ಷೇತ್ರ, ರಾಮಕ್ಷೇತ್ರ ಎಂಬ ಹಲವಾರು ಹೆಸರು ಬರಲು ಹಾಗು ಅಮಾವಸ್ಯೆಯ ದಿನದಂದು ಅದ್ಧೂರಿಯಾಗಿ ಜಾತ್ರೆ ಆಚರಣೆ ಮಾಡುಲು ಒಂದು ಕಥೆ ಇದೆ. ಈ ಕಥೆ ಅತ್ಯಂತ ರೋಚಕವಾಗಿದ್ದು, ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಸ್ಥಳ ಪುರಾಣವಾಗಿದೆ.

PC: Manjeshpv

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ಹಿಂದೆ ಜಮದಗ್ನಿ ಋಷಿಯ ಆದೇಶದಂತೆ ಅವರ ಮಗನಾದ ಪರಶುರಾಮನು ತನ್ನ ಕೊಡಲಿಯಿಂದ ತಾಯಿಯ ಶಿರವನ್ನು ಕತ್ತರಿಸುತ್ತಾರೆ. ತನ್ನ ತಾಯಿಯ ಶಿರವನ್ನು ಕತ್ತರಿಸಿದ ನಂತರ ಕೊಡಲಿಗೆ ಅಂಟಿದ ರಕ್ತದ ಕಲೆಯನ್ನು ತೊಳೆಯಲು ಹಲವಾರು ನದಿಗಳಿಗೆ ತೆರಳುತ್ತಾನೆ. ಆದರೆ ಎಳ್ಳಿನ ಗಾತ್ರದಷ್ಟು ಕೂಡ ರಕ್ತದ ಕಲೆಯು ಹೋಗುವುದಿಲ್ಲ.


PC: Manjeshpv

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ಕೊನೆಗೆ ಈ ಕ್ಷೇತ್ರದಲ್ಲಿ ಹರಿಯುತ್ತಿರುವ ತುಂಗಾ ನದಿಯಲ್ಲಿ ಪರಶುರಾಮ ತನ್ನ ಕೊಡಲಿಯನ್ನು ಅದ್ದಿದಾಗ ಕೊಡಲಿಗೆ ತಾಕಿದ್ದ ಕೊನೆಯ ಒಂದು ಹನಿಯ ರಕ್ತದ ಕಲೆ ಹೊರಟು ಹೋಯಿತು. ಈ ರೀತಿಯಾಗಿ ಪಾವಿತ್ರ್ಯತೆ ಹೊಂದಿರುವ ತುಂಗಾ ನದಿಯು ತೀರ್ಥಕ್ಕೆ ಸಮಾನವಾಗಿರುವುದರಿಂದ ಇದಕ್ಕೆ ತೀರ್ಥಹಳ್ಳಿ ಎಂದು ಕರೆಯಲಾಯಿತು.

PC:Hari Prasad Nadig

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ಈ ಕಾರಣಕ್ಕಾಗಿಯೇ ಈ ಸ್ಥಳದಲ್ಲಿ ಸ್ನಾನ ಮಾಡಿದರೆ ಸರ್ವ ಪಾಪಗಳು ಪರಿಹಾರವಾಗುತ್ತದೆ ಎಂದು ಅಚಲವಾದ ನಂಬಿಕೆಯಾಗಿದೆ. ಹಾಗಾಗಿಯೇ ಎಳ್ಳು ಅಮಾವಸ್ಯೆಯ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಿ ತುಂಗೆಯಲ್ಲಿ ಮಿಂದು ಪುನೀತರಾಗುತ್ತಾರೆ.

PC: Manjeshpv

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ಇನ್ನೊಂದು ದಂತಕಥೆಯ ಪ್ರಕಾರ, ಒಮ್ಮೆ ರಾವಣನ ಸಂಬಂಧಿ ಮಾರೀಚ ಎಂಬ ಅಸುರ ರಾವಣನ ಆದೇಶದಂತೆ ಸೀತೆಯನ್ನು ಸಮ್ಮೋಹನಗೊಳಿಸಲು ಸುಂದರವಾದ ಜಿಂಕೆಯ ರೂಪದಲ್ಲಿ ಬದಲಾಗುತ್ತಾನೆ. ಅದನ್ನು ಕಂಡು ಸೀತೆಯು ಆ ಜಿಂಕೆ ತನಗೆ ಬೇಕು ಎಂದು ಆಸೆಯನ್ನು ರಾಮನಲ್ಲಿ ವ್ಯಕ್ತಪಡಿಸುತ್ತಾಳೆ.

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯಲ್ಲಿ ಹರಿಯುತ್ತಿರುವ ತುಂಗಾ ನದಿ ತಟದಲ್ಲಿ ನೆಲೆಸಿರುವ ರಾಮೇಶ್ವರ ದೇವಾಲಯವು ಅತ್ಯಂತ ಆಕರ್ಷಣೀಯ ಸ್ಥಳವಾಗಿದೆ. ಕಲ್ಲಿನಲ್ಲಿ ನಿರ್ಮಾಣ ಮಾಡಲಾಗಿರುವ ಈ ದೇವಾಲಯವನ್ನು ಶಿವನನ್ನು ಲಿಂಗ ಸ್ವರೂಪವಾಗಿ ಪೂಜಿಸಲಾಗುತ್ತದೆ. ಈ ದೇವಾಲಯದ ಬಳಿಯೇ ಪರಶುರಾಮ ತೀರ್ಥವನ್ನು ಕೂಡ ಕಾಣಬಹುದಾಗಿದೆ.

PC: Manjeshpv

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ರಾಮೇಶ್ವರದಲ್ಲಿ ಒಂದು ಅದ್ಭುತವಾದ ಶಿವಲಿಂಗವಿದೆ. ಈ ಶಿವಲಿಂಗವನ್ನು ಸ್ವತಃ ಪರಶುರಾಮನೇ ಪ್ರತಿಷ್ಟಾಪಿಸಿದ ಎನ್ನಲಾಗಿದೆ. ಪರಶುರಾಮ ತನ್ನ ಕೊಡಲಿಗೆ ಅಂಟಿದ ರಕ್ತದ ಎಳ್ಳಿನಂತಹ ಕಲೆಯನ್ನು ಶುದ್ಧಗೊಳಿಸಿದ ದಿನ ಮಾರ್ಗಶಿರ ಮಾಸದ ಹೊಸ ಚಂದ್ರ ದಿನದಂದೆ.

PC: Manjeshpv

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ಅದ್ದರಿಂದ ಈ ದಿನವನ್ನು ಎಳ್ಳು ಅಮಾವಸ್ಯೆಯ ದಿನವಾಗಿ ಅದ್ಧೂರಿಯಾಗಿ ತೀರ್ಥಹಳ್ಳಿಯಲ್ಲಿ ಆಚರಿಸಲಾಗುತ್ತದೆ. ಸಹಜವಾಗಿಯೇ ಸುಂದರವಾಗಿರುವ ಈ ಸ್ಥಳ, ಜಾತ್ರೆಯಿಂದಾಗಿ ಮತ್ತಷ್ಟು ಸುಂದರವಾಗಿ ಕಾಣುತ್ತದೆ.

PC: Manjeshpv

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ಉತ್ಸವದ ಮೊದಲನೆಯ ದಿನದಂದು ರಾಮೇಶ್ವರ ದೇವಾಲಯದಲ್ಲಿ ಉತ್ಸವ ಮೂರ್ತಿಯನ್ನು ಸಡಗರದಿಂದ ತುಂಗಾ ನದಿಯ ಬಳಿ ಇರುವ ಪರಶುರಾಮ ತೀರ್ಥಕ್ಕೆ ತಂದು ಪುಣ್ಯಾಭಿಷೇಕವನ್ನು ಆಚರಿಸಲಾಗುತ್ತದೆ. ನಂತರ ನೆರೆದಿರುವ ಭಕ್ತಾದಿಗಳು ತುಂಗೆಯ ಪವಿತ್ರ ನೀರಿನಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ.


PC: Manjeshpv

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ಎರಡನೇಯ ದಿನದಂದು ತೇರನ್ನು ಭಕ್ತಾದಿಗಳು ಎಳೆಯುತ್ತಾರೆ. ಆ ಸಮಯದಲ್ಲಿ ರಾಮೇಶ್ವರ ದೇವಾಲಯದ ತೇರನ್ನು ಸುಂದರವಾಗಿ ಸಿಂಗರಿಸಿ ಎಳೆಯಲಾಗುತ್ತದೆ.


PC: Manjeshpv

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ಕೊನೆಯ ದಿನದಂದು ಉತ್ಸವ ಮೂರ್ತಿಯನ್ನು ತುಂಗಾ ನದಿಯಲ್ಲಿ ತೆಪ್ಪದ ಮೂಲಕ ಕುರುವಳ್ಳಿ ಎಂಬಲ್ಲಿಗೆ ತೆಗೆದುಕೊಂಡು ಹೋಗಿ ಮತ್ತೆ ಮರಳಿ ಬರಲಾಗುತ್ತದೆ. ಇದನ್ನು ತೆಪ್ಪೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.


PC: Manjeshpv

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ಜಾತ್ರೆಯಲ್ಲಿ ಕಣ್ಮನ ಸೆಳೆಯುವ ವಿವಿಧ ಮನರಂಜನಾ ಚಟುವಟಿಕೆಗಳ ರಚನೆಗಳು.

PC: Manjeshpv

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ದೇವರ ಅಭಿಷೇಕ, ನೈವೇದ್ಯಕ್ಕೆಂದು ಪೂಜಾ ಸಾಮಗ್ರಿಗಳು ಭಕ್ತರಿಗೆ ಮಾರಲು ಕುಳಿತಿರುವ ವ್ಯಾಪಾರಿಗಳು.


PC: Manjeshpv

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ರಾಮೇಶ್ವರ ದೇವಾಲಯದಲ್ಲಿರುವ ಕಂಬದ ಗಣಪತಿ.

PC: Manjeshpv

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತುಂಗಾ ನದಿ ತಟದಲ್ಲಿ ವಿಹಾರರ್ಥ ಬರುವ ಪ್ರವಾಸಿಗರ ರುಚಿ ತಣಿಸಲು ಸಿದ್ಧವಾಗುತ್ತಿರುವ ಪುಟ್ಟ ಚಾಟ್ ಅಂಗಡಿ.

PC: Manjeshpv

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ತೀರ್ಥಹಳ್ಳಿಯ ಎಳ್ಳಮವಾಸ್ಯೆ

ಎಳ್ಳುಮಾವಸ್ಯೆಯ ಸಂದರ್ಭದಲ್ಲಿ ಬಾನಲ್ಲಿ ಮೂಡಿ ಬರುವ ಪಟಾಕಿ ಸಿಡಿ ಮದ್ದುಗಳ ಚಿತ್ತಾರ.

PC: Manjeshpv

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X