Search
  • Follow NativePlanet
Share
» »ಭಾರತದಲ್ಲಿ ಮಹಿಳೆಯರು ತನ್ನ ಪತಿಯರಿಗಾಗಿ ನಿರ್ಮಾಣ ಮಾಡಿದ ಸ್ಮಾರಕಗಳಿವು

ಭಾರತದಲ್ಲಿ ಮಹಿಳೆಯರು ತನ್ನ ಪತಿಯರಿಗಾಗಿ ನಿರ್ಮಾಣ ಮಾಡಿದ ಸ್ಮಾರಕಗಳಿವು

Written By:

ಸಾಮಾನ್ಯವಾಗಿ ನಮಗೆ ತಿಳಿದಿರುವಂತೆ ಪುರುಷರೇ ತಮ್ಮ ಪ್ರೀತಿ ಮಹಿಳೆಯರಿಗಾಗಿ ಸ್ಮಾರಕಗಳನ್ನು ನಿರ್ಮಿಸಿರುವುದು ಎಂದು ಕೊಂಡಿದ್ದಾರೆ. ಪ್ರತಿಯೊಬ್ಬ ಪ್ರೀತಿಯಲ್ಲಿ ಸೋತ ಯುವಕ ಯುವತಿ ಕೈ ಕೊಟ್ಟಾಗ ಮೊದಲು ಸಂಭಾಷಣೆ ನಡೆಸುವುದೇ ತಾಜ್ ಮಹಾಲ್ ಉದಾಹರಣೆಯಾಗಿ. ಷಹಜಾಹನ್ ತನ್ನ ಪತ್ನಿಯ ನೆನಪಿಗಾಗಿ ತಾಜ್ ಮಹಲ್‍ನಂತಹ ಅಪೂರ್ವವಾದ ಕಟ್ಟಡವನ್ನು ನಿರ್ಮಾಣ ಮಾಡಿದ ಎಂದು. ಆದರೆ ಹೆಣ್ಣು ಮಕ್ಕಳು ಏನೂ ನಿರ್ಮಿಸಿಲ್ಲ ಎಂದು ಕೊಳ್ಳುವವರೆ ಹೆಚ್ಚು.

ಆದರೆ ಮಹಿಳೆಯರು ಕೂಡ ಕಡಿಮೆ ಇಲ್ಲ. ಅವರು ಹಲವಾರು ಸ್ಮಾರಕ, ಕಟ್ಟಡಗಳನ್ನು ತಮ್ಮ ಪತಿಗಾಗಿ ನಿರ್ಮಾಸಿದ್ದಾರೆ ಎಂಬುದು ನಿಮಗೆ ಗೊತ್ತ?. ಆಶ್ಚರ್ಯ ಪಡುತ್ತಿದ್ದೀರಾ? ಹೌದು ನೀವು ಓದುತ್ತಿರುವುದು ನಿಜವೇ. ಮಹಿಳೆಯರು ಕೂಡ ತಮ್ಮ ಪತಿಯರ ನೆನಪಿಗಾಗಿ ಸ್ಮಾರಕಗಳನ್ನು ಹಾಗೂ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಅವುಗಳು ಯಾವುವು? ಎಂದು ಕೇಳುತ್ತಾ ಇದ್ದೀರಾ? ಹಾಗಾದರೆ ಲೇಖನದ ಮೂಲಕ ತಿಳಿಯಿರಿ.

ವೀರುಪಾಕ್ಷ ದೇವಾಲಯ, ಪಟ್ಟದ ಕಲ್ಲು, ಕರ್ನಾಟಕ

ವೀರುಪಾಕ್ಷ ದೇವಾಲಯ, ಪಟ್ಟದ ಕಲ್ಲು, ಕರ್ನಾಟಕ

ಪಟ್ಟದ ಕಲ್ಲುನಲ್ಲಿರುವ ವೀರುಪಾಕ್ಷ ದೇವಾಲಯವನ್ನು ಪಲ್ಲವ ರಾಜರ ಮೇಲೆ ತನ್ನ ಪತಿ ರಾಜ ವಿಕ್ರಮಾಧಿತ್ಯ ವಿಜಯವನ್ನು ನೆನಪಿಸಿಕೊಳ್ಳುವ ಸಲುವಾಗಿ ಕ್ರಿ.ಶ 740ರಲ್ಲಿ ರಾಣಿ ಲೋಕಾ ಮಹಾದೇವಿಯವರು ಈ ದೇವಾಲಯವನ್ನು ನಿರ್ಮಿಸಿದರು.

ವೀರೂಪಾಕ್ಷ ದೇವಲಯವು ಅತ್ಯಂತ ಸುಂದರವಾಗಿದೆ. ಈ ದೇವಾಲಯದ ಮೂಲ ಹೆಸರು ಲೋಕೇಶ್ವರ. ಪಟ್ಟದ ಕಲ್ಲಿನಲ್ಲಿರುವ ಈ ವೀರೂಪಾಕ್ಷ ದೇವಾಲಯವು ಸುಂದರವಾದ ಕೆತ್ತನೆ ಹಾಗೂ ಸುಂದರವಾದ ಶಿಲ್ಪಕಲೆಗಳಿಂದ ಅಲಂಕರಿಸಲ್ಪಟ್ಟಿದೆ.


PC:Arian Zwegers


ಮೋಹಿನಿಶ್ವರ ಶಿವಾಲಯ ದೇವಾಲಯ, ಗುಲ್ಮರ್ಗ್

ಮೋಹಿನಿಶ್ವರ ಶಿವಾಲಯ ದೇವಾಲಯ, ಗುಲ್ಮರ್ಗ್

ಈ ಮೋಹಿನಿಶ್ವರ ಶಿವಾಲಯದ ದೇವಾಲಯವನ್ನು ಪರ್ವತದ ಮೇಲೆ ನಿರ್ಮಾಣ ಮಾಡಲಾಗಿದೆ. ಮಹಾರಾಣಿ ಮೋಹಿನಿ ಕಾಶ್ಮೀರ ರಾಜನಾದ ರಾಜಾ ಹರಿ ಸಿಂಗ್‍ನ ಪತ್ನಿ. ಮೋಹಿನಿಯು 1915 ರಲ್ಲಿ ಈ ದೇವಾಲಯವನ್ನು ತನ್ನ ಪತಿಗಾಗಿ ನಿರ್ಮಿಸಿದಳು ಎನ್ನಲಾಗಿದೆ.

ಈ ದೇವಾಲಯಕ್ಕೆ ಆವಳ ಹೆಸರೇ ಈಡಲಾಗಿದೆ. ಪರ್ವತದ ನಡುವೆ ಇರುವ ಈ ದೇವಾಲಯವು ಅತ್ಯಂತ ಸುಂದರವಾಗಿ ಕಾಣುತ್ತದೆ. ತಂಪಾದ ವಾತಾವರಣ, ಇಳಿಜಾರು, ದಡ್ಡವಾದ ಹಸಿರು ಮೊದಲಾದ ಪ್ರಾಕೃತಿಕ ಸೌಂದರ್ಯವನ್ನು ಇಲ್ಲಿ ಸವಿಯಬಹುದಾಗಿದೆ.

ಲಾಲ್ ದರ್ವಾಜಾ ಮಸೀದಿ, ಉತ್ತರ ಪ್ರದೇಶ

ಲಾಲ್ ದರ್ವಾಜಾ ಮಸೀದಿ, ಉತ್ತರ ಪ್ರದೇಶ

ಸಂತ ಸೈಯಿದ್ ಅಲಿ ದಾವೂದ್ ಕುತುಬುದ್ದಿನ್‍ಗೆ ಮೀಸಲಾಗಿರುವ ಈ ಲಾಲ್ ದರ್ವಾಜಾ ಮಸಿದಿಯನ್ನು 1447 ರಲ್ಲಿ ಜಾನ್ಪುರ್ನ್ ಸುಲ್ತಾನ್ ಮಹಮೊದ್ ಶಾರ್ಖಿಯ ರಾಣಿ ರಾಜೇ ಬೀಬಿ ಅವರು ತಮ್ಮ ಪತಿಗಾಗಿ ನಿರ್ಮಿಸಿದರು.

ಲಾಲ್ ದರ್ವಾಜಾ ಮಸೀದಿ ಚಿಕ್ಕದಾಗಿದೆ. ಈ ಮಸೀದಿಯು ಅಟಾಲಾ ಮಸೀದಿಯಂತೆ ಇದೆ. ವಿಶೇಷವೆನೆಂದರೆ ಆಕೆಯ ಪತಿ ಆಳ್ವಿಕೆಯ ಅವಧಿಯಲ್ಲಿ ಈ ಪ್ರದೇಶದಲ್ಲಿ ಬಾಲಕಿಯರ ಮೊದಲ ಶಾಲೆಯನ್ನೂ ಕೂಡ ರಾಣಿ ಸ್ಥಾಪಿಸಿದ್ದಳಂತೆ.

PC: Beglar, Joseph David

ಮಿರ್ಜನ ಕೋಟೆ, ಕುಮಟಾ, ಕರ್ನಾಟಕ

ಮಿರ್ಜನ ಕೋಟೆ, ಕುಮಟಾ, ಕರ್ನಾಟಕ

ಮಿರ್ಜನ ಕೋಟೆಯು ತನ್ನ ಅದ್ಭುತ ವಾಸ್ತು ಶಿಲ್ಪದ ಸೊಬಗಿಗೆ ಹೆಸರುವಾಸಿಯಾಗಿದೆ. ಮಿರ್ಜನ ಕೋಟೆಯು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿಯಲ್ಲಿದೆ. ಇಲ್ಲಿ ಎತ್ತರದ ಗೋಡೆಗಳು, ಎತ್ತರದ ಗುಡ್ಡಗಳಿಂದ ಅವೃತ್ತಗೊಂಡಿದೆ.

ಈ ಸುಂದರವಾದ ಕೋಟೆಯನ್ನು ರಾಣಿ ಚೆನ್ನಭೈರಾದೇವಿ ತನ್ನ ಪತಿಗಾಗಿ ನಿರ್ಮಾಣ ಮಾಡಿದಳು ಎಂದು ಇತಿಹಾಸವಿದೆ. ಇಲ್ಲಿ ಆನೇಕ ಸುರಂಗ ಮಾರ್ಗಗಳು, ರಹಸ್ಯವಾದ ಬಾಗಿಲುಗಳು, ಗಡಿಯಾರದ ಗೋಪುರಗಳು ಇನ್ನೂ ಹಲವಾರು ಸೊಬಗನ್ನು ಇಲ್ಲಿ ಕಾಣಬಹುದಾಗಿದೆ.


PC:Sydzo

ರಾಣಿ-ಕಿ-ವಾವ್

ರಾಣಿ-ಕಿ-ವಾವ್

ರಾಣಿ-ಕಿ-ವಾವ್ ಎಂಬುದು ಒಂದು ಬಾವಿ. ಈ ಬಾವಿಯನ್ನು 11 ನೇ ಶತಮಾನದಲ್ಲಿ ಸೊಲಂಕಿ ರಾಜವಂಶದ ಪತಿ ರಾಜ ಭೀಮ ದೇವನಿಗೋಸ್ಕರ ಪತ್ನಿ ಉದಯಮತಿ ನಿರ್ಮಿಸಿರುವ ಬಾವಿ ಇದು. ಈ ಬಾವಿಯಲ್ಲಿ ಹಲವಾರು ಶಿಲ್ಪಗಳಿವೆ. ನೀವು ಜೀವನದಲ್ಲಿ ಎಲ್ಲೂ ಕಂಡಿರದ ಬಾವಿ ಇದು.

ಇದೊಂದು ನೀರಿನ ನಿರ್ವಹಣೆ ವ್ಯವಸ್ಥೆಯಾಗಿದ್ದು, 7 ಹಂತದ ಮೆಟ್ಟಿಲುಗಳನ್ನು ಈ ಬಾವಿಯು ಹೊಂದಿದೆ. ಇಲ್ಲಿ 500 ಕ್ಕಿಂತಲೂ ಹೆಚ್ಚಾಗಿ ಪ್ರಮುಖವಾದ ಶಿಲ್ಪಾಕೃತಿಗಳನ್ನು ಕಾಣಬಹುದಾಗಿದೆ. ಈ ಬಾವಿಯು 64 ಮೀಟರ್ ಎತ್ತರ ಹಾಗೂ 27 ಮೀಟರ್ ಅಗಲ ಹೊಂದಿದೆ.

PC:Bethany Ciullo


ಇಟ್ಮದ್ ಉದ್ ದೌಲಾ, ಆಗ್ರಾ, ಉತ್ತರ ಪ್ರದೇಶ

ಇಟ್ಮದ್ ಉದ್ ದೌಲಾ, ಆಗ್ರಾ, ಉತ್ತರ ಪ್ರದೇಶ

ಯಮುನಾ ನದಿಯ ಎಡ ದಂಡೆಯ ಮೇಲೆ ಇರುವ ಇಟ್ಮಾದ್ ಉದ್ ದೌಲಾವನ್ನು ಯೂರ್ನ ನದಿಯ ದಂಡೆಯಲ್ಲಿ ಈ ಇಟ್ಮದ್ ಉದ್ ದೌಲಾ ಸ್ಮಾರಕವಿದೆ. ಈ ಸ್ಮಾರಕವು ಜಾನಿ ಬೆಗಾಂ ತನ್ನ ಪತಿ ಮಿರ್ಸ ಖಾಯಿಸ್ ಬ್ಯಾಕ್‍ಗಾಗಿ ನಿರ್ಮಾಣ ಮಾಡಿರುವ ಸ್ಮಾರಕವಾಗಿದೆ.

ಸಮಾಧಿ ಒಂದು ಚತುರ್ಭುಜದ ಕೇಂದ್ರವಾಗಿದೆ. ಅದರ ಸುತ್ತಲಿನ ಚಾರ್ ಬಾಗ್ ಮಾದರಿಯಲ್ಲಿಯೇ ತೋಟವನ್ನು ಕೂಡ ನಿರ್ಮಿಸಲಾಗಿದೆ. ಇಲ್ಲಿನ ಸಮಾಧಿಯು ಪರ್ಷಿಯನ್ ಶಾಸನವನ್ನು ಹೊಂದಿದೆ.

PC:Jon Connell

ಹುಮಾಯೂನ್ ಸಮಾಧಿ, ದೆಹಲಿ

ಹುಮಾಯೂನ್ ಸಮಾಧಿ, ದೆಹಲಿ

ದೆಹಲಿಯ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಹುಮಾಯೂನ್ ಸಮಾಧಿ, ಇದನ್ನು ಎರಡನೇ ಮೊಗಲ್ ದೊರೆ ಹುಮಾಯೂನ್ ಪತ್ನಿ ನಿರ್ಮಿಸಿದ ಕಟ್ಟಡವಾಗಿದೆ. ಈ ಸುಂದರ ವಾಸ್ತುಶಿಲ್ಪದ ಸೌಂದರ್ಯದ ಕಟ್ಟಡವು ನಿಜಾಮುದ್ದೀನ್ ಪ್ರದೇಶದಲ್ಲಿ ನೆಲೆಸಿದೆ.

ಭಾರತೀಯ ಉಪಖಂಡದ ಮೊದಲ ಉದ್ಯಾನ ಸಮಾಧಿಯು ಪರ್ಷಿಯನ್ ವಾಸ್ತುಶೈಲಿಯಿಂದ ಪ್ರಭಾವಕ್ಕೆ ಒಳಗಾಗಿದೆ. ಹಾಗಾಗಿ ಈ ಪ್ರವಾಸಿ ತಾಣಕ್ಕೆ ದೇಶ, ವಿದೇಶಗಳಿಂದ ಈ ಹುಮಾಯೂನ್ ಸಮಾಧಿಗೆ ಭೇಟಿ ನೀಡುತ್ತಿರುತ್ತಾರೆ.

PC:Adeel Anwer

 ಖಾಯರ್ ಅಲ್ ಮನಾಜಿಲ್. ದೆಹಲಿ

ಖಾಯರ್ ಅಲ್ ಮನಾಜಿಲ್. ದೆಹಲಿ

ಈ ಸುಂದರವಾದ ಖಾಯರ್ ಅಲ್ ಮನಾಜಿಲ್ ಎಂಬ ಕಟ್ಟಡವು ಭಾರತ ರಾಜಧಾನಿ ದೆಹಲಿಯಲ್ಲಿದೆ. ಈ ಕಟ್ಟಡವನ್ನು 1561 ರಲ್ಲಿ ಮೊಗಲ್ ಚಕ್ರವರ್ತಿ ಅಕ್ಬರ್ ಕಾಲದಲ್ಲಿ ನಿರ್ಮಾಣವಾದ ಮಹಲ್ ಆಗಿದೆ.

ಅಕ್ಬರ್‍ನ ಆಸ್ಥಾನದಲ್ಲಿ ಮಹಾ ಅಂಗಾ ಎಂಬ ಪ್ರಭಾವ ಶಾಲಿ ಮಹಿಳೆಯು ಅಕ್ಬರ್‍ಗೊಸ್ಕರ ನಿರ್ಮಾಣ ಮಾಡಿದ ಕಟ್ಟಡ ಇದಾಗಿದೆ. ಇದೊಂದು ಪ್ರವಾಸಿ ತಾಣವಾಗಿದ್ದು, ಹಲವಾರು ಪ್ರವಾಸಿಗರು ಈ ಮಹಲ್‍ಗೆ ಭೇಟಿ ನೀಡುತ್ತಾರೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more