Search
  • Follow NativePlanet
Share
» »2018ರ ಹೊಸವರ್ಷದ ಸಂಭ್ರಮಾಚರಣೆ ಮಾಡಲು ಸೂಕ್ತವಾದ ಸ್ಥಳಗಳು

2018ರ ಹೊಸವರ್ಷದ ಸಂಭ್ರಮಾಚರಣೆ ಮಾಡಲು ಸೂಕ್ತವಾದ ಸ್ಥಳಗಳು

By Staff

ನೂರಾರು ಖ್ಯಾತ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಕೇರಳ ರಾಜ್ಯದ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾಗಿದೆ ಪೆರಿಯಾರ್ ರಾಷ್ಟ್ರೀಯ ಉದ್ಯಾನ. ಹುಲಿ ಮೀಸಲು ಪ್ರದೇಶವಾಗಿರುವ ಇದು ಅದ್ವಿತೀಯ ಪ್ರವಾಸಿ ತಾಣವಾಗಿದ್ದು ವೈವಿಧ್ಯಮಯ ಜೀವಸಂಕುಲ, ನಯನ ಮನೋಹರ ಪ್ರಕೃತಿ, ರೋಮಾಂಚನಗೊಳಿಸುವ ಕೆರೆ ಹಾಗೂ ದೋಣಿ ವಿಹಾರದಂತಹ ಚಟುವಟಿಗಳನ್ನು ಹೊಂದಿದೆ.

ನೀವು ಕುಟುಂಬದೊಂದಿಗಾಗಲಿ ಅಥವಾ ಸ್ನೇಹಿತರೊಂದಿಗಾಗಲಿ ಒಮ್ಮೆಯಾದರೂ ಈ ಪೆರಿಯಾರ್ ರಾಷ್ಟ್ರೀಯ ಉದ್ಯಾನದ ತೆಕ್ಕಡಿ ಸ್ಥಳಕ್ಕೆ ಭೆಟಿ ನೀಡಲೇಬೇಕು. ತೆಕ್ಕಡಿಯು ಕುಮಳಿ ಎಂಬ ಪಟ್ಟಣಕ್ಕೆ ಹತ್ತಿರವಾಗಿದ್ದು ಅಲ್ಲಿಂದ ತೆಕ್ಕಡಿಗೆ ಬಸ್ಸುಗಳು ದೊರೆಯುತ್ತವೆ. ಇಲ್ಲಿನ ಪ್ರಶಾಂತ ಪರಿಸರ ನಿಮ್ಮೆಲ್ಲ ಒತ್ತಡ-ಬೇಸರಗಳನ್ನು ಕ್ಷಣ ಮಾತ್ರದಲ್ಲಿ ದೂರ ಮಾಡಿ ಮತ್ತೆ ಹುರುಪೆಂಬ ಬೇರು ಚಿಗುರುವಂತೆ ಮಾಡುತ್ತದೆ.

ನಿಮಗಿಷ್ಟವಾಗಬಹುದಾದ : ಎಂದಿಗೂ ಮರೆಯಲಾಗದ ಅಲೆಪ್ಪಿ ಪ್ರವಾಸ

ತೆಕ್ಕಡಿ, ಕೇರಳದ ರಾಜಧಾನಿ ತಿರುವನಂತಪುರಂನಿಂದ 257 ಕಿ.ಮೀ, ತಮಿಳುನಾಡಿನ ಮದುರೈ ನಗರದಿಂದ 114 ಕಿ.ಮೀ, ಕೊಚ್ಚಿ ನಗರದಿಂದ 145 ಕಿ.ಮೀ ಹಾಗೂ ಕರ್ನಾಟಕದ ಬೆಂಗಳೂರಿನಿಂದ 507 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು ಇಲ್ಲಿಗೆ ತೆರಳಲು ಈ ಎಲ್ಲ ನಗರಗಳಿಂದ ಬಸ್ಸುಗಳು ದೊರೆಯುತ್ತವೆ.

ಪ್ರಸ್ತುತ ಲೇಖನದ ಮೂಲಕ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ತೆಕ್ಕಡಿ ಎಂಬ ಪ್ರಖ್ಯಾತ ಪ್ರವಾಸಿ ತಾಣದ ನಯನ ಮನೋಹರ ಚಿತ್ರಗಳನ್ನು ಸ್ಲೈಡುಗಳ ಮೂಲಕ ವೀಕ್ಷಿಸಿ ಹಾಗೂ ಒಂದ್ಸಲ ಭೇಟಿ ನೀಡಿ ಬಂದ್ಬಿಡಿ.

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ತೆಕ್ಕಡಿಯು ಪ್ರಮುಖವಾಗಿ ತನ್ನಲ್ಲಿರುವ ತೆಕ್ಕಡಿ ಕೆರೆಯಿಂದಾಗಿಯೆ ಹೆಚ್ಚು ಪ್ರಸಿದ್ಧಿಯಾಗಿದೆ. ಆಹಾ...ಈ ಕೆರೆಯಲ್ಲಿ ದೋಣಿ ವಿಹಾರ ಮಾಡುವಾಗ ನಮ್ಮಲ್ಲಿ ನಾವೆ ಕಳೆದು ಹೋಗುತ್ತೆವೇನೊ ಎನ್ನುವಷ್ಟು ಅದ್ಭುತವಾಗಿದೆ ಸುತ್ತಮುತ್ತಲಿನ ರಮ್ಯ ಪ್ರಕೃತಿಯ ನೋಟ.

ಚಿತ್ರಕೃಪೆ: Pratheesh mishra

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ಪೆರಿಯಾರ್ ರಾಷ್ಟ್ರೀಯ ಉದ್ಯಾನದಲ್ಲಿ ಪೆರಿಯಾರ್ ನದಿಗೆ ನಿರ್ಮಿಸಲಾದ ಒಂದು ಸುಂದರ ಆಣೆಕಟ್ಟೆಂದರೆ ಮುಳ್ಳಪೆರಿಯಾರ್ ಆಣೆಕಟ್ಟು. ಈ ಆಣೆಕಟ್ಟಿನಿಂದ ರೂಪಗೊಂಡ ಜಲಾಶಯವೆ ತೆಕ್ಕಡಿ ಕೆರೆಯಾಗಿ ಅಸಂಖ್ಯಾತ ಪ್ರವಾಸಿಗರನ್ನು ದೇಶದೆಲ್ಲೆಡೆಯಿಂದ ಆಕರ್ಷಿಸುತ್ತದೆ.

ಚಿತ್ರಕೃಪೆ: Pratheesh mishra

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ಒಬ್ಬರು,ಇಬ್ಬರು ಕುಳಿತುಕೊಳ್ಳಬಹುದಾದಂತಹ ಚಿಕ್ಕ ದೋಣಿಯಿಂದ ಹಿಡಿದು ಬಹುಜನರು ಏಕಕಾಲದಲ್ಲಿ ವಿಹರಿಸುವಂತಹ ದೊಡ್ಡ ದೊಣಿಗಳೂ ಈ ಕೆರೆಯಲ್ಲಿ ಪ್ರವಾಸಿಗರನ್ನು ವಿಹಾರಕ್ಕೆಂದು ಕರೆದುಕೊಂಡು ಹೋಗುತ್ತವೆ.

ಚಿತ್ರಕೃಪೆ: Jonathanawhite

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ದೋಣಿ ವಿಹಾರದ ಸಮಯದಲ್ಲಿ ಅದೃಷ್ಟವಿದ್ದಲ್ಲಿ ಕಾಣಬಹುದಾದ ಸುಂದರ ದೃಶ್ಯವೆಂದರೆ ಸಾಲುಗಟ್ಟಲೆ ಆನೆಗಳ ಹಿಂಡು ನೀರು ಕುಡಿಯಲು ತಟದ ಬಳಿ ಬರುವುದು ಅದರಂತೆ ಬೈಸನ್, ಜಿಂಕೆ ಹಾಗೂ ಇತರೆ ಪ್ರಾಣಿಗಳೂ ಸಹ ಬರುವುದು. ಈ ಒಂದು ನೋಟವನ್ನು ಎಂದಿಗೂ ಮರೆಯುವಂತಿಲ್ಲ.

ಚಿತ್ರಕೃಪೆ: Ben3john

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ಅಲ್ಲದೆ ತೆಕ್ಕಡಿಯು ಅತಿ ದಟ್ಟವಾದ ಹಾಗೂ ವೈವಿಧ್ಯಮಯವಾದ ಸಸ್ಯ ಸಂಪತ್ತನ್ನೊಳಗೊಂಡ ಅದ್ಭುತ ಪ್ರದೇಶವಾಗಿದೆ. ಸಾಂಬಾರು ಪದಾರ್ಥಗಳಾದ ಕರಿ ಮೆಣಸು, ಏಲಕ್ಕಿ, ದಾಲ್ಚಿನಿ, ಶುಂಠಿ ಮುಂತಾದ ಪದಾರ್ಥಗಳಿಗೆ ಇದು ಅಕ್ಷರಶಃ ಸ್ವರ್ಗವೆ ಆಗಿದೆ. ಕರಿಮೆಣಸಿನ ಗಿಡ.

ಚಿತ್ರಕೃಪೆ: Thierry Leclerc

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ಕಾಫಿ ಹಾಗೂ ಸಾಂಬಾರು ಪದಾರ್ಥಗಳನ್ನು ಬೆಳೆಯುವ ತೋಟ ನೋಡಬೇಕೆಂದಿದ್ದರೆ ತೆಕ್ಕಡಿಯಿಂದ ಕೇವಲ ಐದು ಕಿ.ಮೀ ದೂರದಲ್ಲಿರುವ ಮುರಿಕ್ಕಾಡಿ ಎಂಬಲ್ಲಿಗೆ ಭೆಟಿ ನೀಡಬಹುದು. ಮಂತ್ರಮುಗ್ಧಗೊಳಿಸುವ ಅದ್ಭುತವಾದ ತೋಟಗಳ ನೋಟ ತಮ್ಮ ಮೈಮಾಟದಿಂದ ನಿಮ್ಮನ್ನು ಮೊಡಿ ಮಾಡುತ್ತವೆ.

ಚಿತ್ರಕೃಪೆ: Geoshrad

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ತೆಕ್ಕಡಿಯ ಕುಮಳಿ ಪಟ್ಟಣದಿಂದ ಕೇವಲ 15 ಕಿ.ಮೀ ದೂರದಲ್ಲಿ ಚೆಲ್ಲರ್ ಕೋವಿಲ್ ಎಂಬ ಸುಂದರ, ಹಸಿರು ಬೆಟ್ಟಗುಡ್ಡಗಳಿಂದ ಆವರಿಸಿದ ಹಳ್ಳಿಯಿದೆ. ತೆಕ್ಕಡಿಗೆ ಬರುವ ಅನೇಕ ಪ್ರವಾಸಿಗರಲ್ಲಿ ಅದರಲ್ಲೂ ವಿಶೇಷವಾಗಿ ವಿದೇಶಿ ಪ್ರವಾಸಿಗರು ಇಲ್ಲಿರುವ ಚಿಕ್ಕ ಜಲಪಾತವೊಂದಕ್ಕೆ ಭೇಟಿ ನೀಡಲು ಬರುತ್ತಾರೆ. ಕುಳಿತಲ್ಲಿಯೆ ತೆಕ್ಕಡಿ ದರ್ಶನ ಮಾಡಿ ಮುಂದಿನ ಸ್ಲೈಡುಗಳಿಂದ....

ಚಿತ್ರಕೃಪೆ: celblau

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ತೆಕ್ಕಡಿ ಕೆರೆಯಲ್ಲಿ ಥಟ್ ಎಂದು ತನ್ನ ಪಾಲಿನ ಆಹಾರ ಕಬಳಿಸುತ್ತಿರುವ ಹಕ್ಕಿ.

ಚಿತ್ರಕೃಪೆ: Ranna M V

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ತೆಕ್ಕಡಿಯ ಪೆರಿಯಾರ್ ಕೆರೆಯಲ್ಲಿ ಮಂಜು ಮುಸುಕಿದ ವಾತಾವರಣದಲ್ಲಿ ಒಬ್ಬಂಟಿಗನಾಗಿ ಪಯಣಿಸುತ್ತಿರುವ ದೋಣಿ.

ಚಿತ್ರಕೃಪೆ: Ranna M V

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ತೆಕ್ಕಡಿ ಕೆರೆಯು ಚಿತ್ರೀಕರಣಕ್ಕೂ ಹೆಸರುವಾಸಿ. ನೀವು ಯಾವುದಾದರೂ ಚಿತ್ರದಲ್ಲಿ ಈ ರೀತಿಯ ನೋಟ ನೋಡಿರಲೇಬೇಕಲ್ಲವೆ?

ಚಿತ್ರಕೃಪೆ: Rakesh R

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ವಾತಾವರಣದಲ್ಲಿ ಘಮ ಘಮ ಎಂದು ಕಂಪನ್ನು ಪಸರಿಸುವ ತೆಕ್ಕಡಿ ಚಹಾ ತೋಟಗಳ ಸುಂದರ ನೋಟ.

ಚಿತ್ರಕೃಪೆ: Thierry Leclerc

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ಸ್ಪೈಸ್ ಗಾರ್ಡನ್ ಅಥವಾ ಮಸಾಲಾ ಪದಾರ್ಥಗಳ ಉದ್ಯಾನ ತೆಕ್ಕಡಿಯ ಮತ್ತೊಂದು ವಿಶೇಷವಾಗಿದೆ. ಇಲ್ಲಿ ಸಾಂಬಾರು ಪದಾರ್ಥಗಳ ಸಸ್ಯಗಳೊಂದಿಗೆ ವೈವಿಧ್ಯಮಯ ಪುಷ್ಪಗಳ ಗಿಡಗಳನ್ನೂ ವೀಕ್ಷಿಸಬಹುದು.

ಚಿತ್ರಕೃಪೆ: Appaiah

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ಗಿಡಗಳಿಂದ ರಬ್ಬರ್ ತೆಗೆಯುವಿಕೆ ತೆಕ್ಕಡಿಯ ಒಂದು ಉದ್ಯಮವಾಗಿದೆ. ಸಾಕಷ್ಟು ಜನರು ಈ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಸಾಕಷ್ಟು ರಬ್ಬರ್ ಗಿಡಗಳನ್ನು ತೆಕ್ಕಡಿಯಲ್ಲಿ ಕಾನಬಹುದು.

ಚಿತ್ರಕೃಪೆ: Thierry Leclerc

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ಶಾಂತವಾಗಿ ಹಾಗೂ ಅಷ್ಟೆ ಗಂಭೀರವಾಗಿ ಹರಡಿಕೊಂಡಿರುವ ಪೆರಿಯಾರ್ ರಾಷ್ಟ್ರೀಯ ಉದ್ಯಾನದ ದಟ್ಟ ಕಾಡುಗಳು.

ಚಿತ್ರಕೃಪೆ: Appaiah

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ಇಳಿ ಸಂಜೆಯ ಹೊತ್ತಿನಲ್ಲಿ ಸೂರ್ಯ ರಶ್ಮಿಗಳು ತೆಕ್ಕಡಿ ಕೆರೆಯನ್ನು ಸ್ಪರ್ಶಿಸಿದ ಸಂದರ್ಭದಲ್ಲಿ...

ಚಿತ್ರಕೃಪೆ: senthilvasanm

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ಹಿನ್ನಿಲೆಯಲಿ ಜೀವದುಂಬಿದ ಮರಗಳ ಮಧ್ಯದಲಿ ನೀರೊಳು ಒಣಗಿದ ಮರಗಳ ಕಲರವ.

ಚಿತ್ರಕೃಪೆ: nevil zaveri

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ತೆಕ್ಕಡಿಯಲ್ಲಿ ದೋಣಿ ವಿಹಾರಕ್ಕೆ ಹೊರಡುವ ಮೊದಲು ಶುಲ್ಕ ಪಾವತಿಸಿ ಟಿಕೆಟ್ ಕೊಳ್ಳುವ ಕೇಂದ್ರ. ಇದು ಬೋಟಿಂಗ್ ಕುರಿತಂತೆ ಸಮಗ್ರ ಮಾಹಿತಿ ಒದಗಿಸುವ ಕೇಂದ್ರವೂ ಹೌದು.

ಚಿತ್ರಕೃಪೆ: Neon

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ತೆಕ್ಕಡಿಯಲ್ಲಿ ಚಾರಣವನ್ನೂ ಸಹ ಕೈಗೊಳ್ಳಬಹುದಾಗಿದೆ. ಒಬ್ಬ ಮಾರ್ಗದರ್ಶಿಯನ್ನೊಳಗೊಂಡ ಈ ಚಾರಣ ಮಾರ್ಗವು ಪೆರಿಯಾರ್ ಅರಣ್ಯದಲ್ಲಿ ಸಾಗುವುದರಿಂದ ಕಾಡಿನ ಹಲವು ವಿಶೇಷತೆಗಳನ್ನು ಚಾರಣದ ಮೂಲಕ ಆಸ್ವಾದಿಸಬಹುದಾಗಿದೆ.

ಚಿತ್ರಕೃಪೆ: Kir360

ಮೋಡಿ ಮಾಡುವ ತೆಕ್ಕಡಿ:

ಮೋಡಿ ಮಾಡುವ ತೆಕ್ಕಡಿ:

ತೆಕ್ಕಡಿಯ ಕಮಳಿ ಪಟ್ಟಣದಲ್ಲಿ ಆನೆ ಸಫಾರಿ ಲಭ್ಯವಿದ್ದು ಪ್ರವಾಸಿಗರು ಬೇಕಾದರೆ ಅದರ ಆನಂದವನ್ನು ಪಡೆಯಬಹುದು.

ಚಿತ್ರಕೃಪೆ: Rameshng

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X