» »ಈ ದೇವಾಲಯದಲ್ಲಿ ಶಿವಲಿಂಗ ಕಣ್ಣಿಗೆ ಕಾಣುವುದಿಲ್ಲವಂತೆ

ಈ ದೇವಾಲಯದಲ್ಲಿ ಶಿವಲಿಂಗ ಕಣ್ಣಿಗೆ ಕಾಣುವುದಿಲ್ಲವಂತೆ

Written By:

ಶಿವಾಲಯದಲ್ಲಿ ಶಿವಲಿಂಗವೇ ಇಲ್ಲದ ದೇವಾಲಯ ಎಲ್ಲಿಯಾದರೂ ನೋಡಿದ್ದೀರಾ? ಆದರೆ ಕೇರಳದಲ್ಲಿ ಆಂತಹ ವಿಭಿನ್ನವಾದ ದೇವಾಲಯವಿದೆ. ಕೇರಳ ರಾಜ್ಯದ ತ್ರಿಸೂರ ಜಿಲ್ಲೆ. ಈ ಜಿಲ್ಲೆಯನ್ನು ತ್ರಚೂರ ಎಂದು ಸಹ ಕರೆಯುತ್ತಾರೆ. ಈ ಜಿಲ್ಲೆಯಲ್ಲಿ ಪುರಾತನವಾದ ಹಿಂದೂ ದೇವಾಲಯಗಳು, ಚರ್ಚ್ ಹಾಗೂ ಮಸೀದಿಗಳಿವೆ. ಈ ಪ್ರದೇಶದಲ್ಲಿ ನಡೆಯುವ ಉತ್ಸವಗಳು ಕೇರಳದ ಮಹೋನ್ನತ ಸಮಾರಂಭ ಎಂದು ಭಾವಿಸಲಾಗುತ್ತದೆ.

ತ್ರಿಸೂರ್ ಎನ್ನುವ ಹೆಸರು "ತಿರು-ಶಿವ-ಪೆರೂರ್" ಅಂದರೆ ಪರಮಶಿವನ ಹೆಸರು ಹೊಂದಿರುವ ನಗರವಿದು ಎಂಬ ಅರ್ಥವನ್ನು ನೀಡುತ್ತದೆ. ಪುರಾತನ ಕಾಲದಲ್ಲಿ ಈ ನಗರವನ್ನು "ವಿಷಾಂಭಾದ್ರಿ ಪುರಂ" ಮತ್ತು "ದಕ್ಷಿಣ ಕೈಲಾಸ" ಎಂದೂ ಸಹ ಕರೆಯುತ್ತಿದ್ದರು. ತ್ರಿ-ಶಿವ-ಪರೂರ್ ಎಂದರೇ ಮೂರು ಶಿವಾಲಯವಿರುವ ದೇವಾಲಯ ಎಂದೂ ಕೂಡ ಅರ್ಥವಿದೆ.

ಹಾಗಾಗಿ ಈ ಪ್ರದೇಶದಲ್ಲಿ ವಡಕ್ಕುನಾಥ ದೇವಾಲಯ, ಅಶ್ವಕೇಶ್ವರ ಶಿವಾಲಯ ಮತ್ತು ಇರತ್ತವೀರಾ ಶಿವಾಲಯ ಎನ್ನುವ 3 ದೇವಾಲಯಗಳಿವೆ.

ಪ್ರಸ್ತುತ ಲೇಖನದಲ್ಲಿ ಶಿವಾಲಯದಲ್ಲಿ ಶಿವಲಿಂಗವೇ ಇಲ್ಲದ ದೇವಾಲಯದ ಬಗ್ಗೆ ತಿಳಿಯೋಣ.

ತ್ರಿಸೂರ್

ತ್ರಿಸೂರ್

ತ್ರಿಸೂರ್‍ನಲ್ಲಿ ಪೆರಿಯಾರ್ ನದಿ, ಚಲಕುಡಿ ನದಿ, ಕುರುಮಲಿ ನದಿ (ಕುರುವನ್ನೂರ್ ನದಿಯ ಉಪನದಿ) ಮತ್ತು ಪೊನ್ನೈ ಇನ್ನೂ ಹಲವಾರು ನದಿಗಳು ಈ ಪ್ರದೇಶದ ಸಮೀಪದಲ್ಲಿ ಹರಿಯುತ್ತಿದೆ. ಈ ನದಿಗಳು ಕೇರಳದ ಅತ್ಯಂತ ಪವಿತ್ರವಾದ ನದಿ ಎಂದು ಭಾವಿಸಲಾಗುತ್ತದೆ.


PC:Adarsh Padmanabhan


ಅರೆಬಿಯನ್ ಸಮುದ್ರ

ಅರೆಬಿಯನ್ ಸಮುದ್ರ

ಈ ಪವಿತ್ರವಾದ ನದಿಗಳು ಪೂರ್ವದ ಪರ್ವತದಿಂದ ಜನ್ಮಿಸಿ ಅಲ್ಲಿಂದ ಪಶ್ಚಿಮ ಭಾಗಕ್ಕೆ ಪ್ರವಹಿಸಿ ಅರೆಬಿಯನ್ ಸಮುದ್ರಕ್ಕೆ ಸೇರುತ್ತದೆ.

PC:Aruna


ಅಥಿರಪಲ್ಲಿ ಜಲಪಾತ

ಅಥಿರಪಲ್ಲಿ ಜಲಪಾತ

ಈ ಪ್ರಧಾನ ನದಿಗಳಲ್ಲಿ ಕೆಲವು ಉಪನದಿಗಳ ಸಂಗಮವಾಗುತ್ತದೆ. ಈ ಜಿಲ್ಲೆಯಲ್ಲಿ ಅಥಿರಪಲ್ಲಿ ಜಲಪಾತ (ಭಾರತೀಯ ನಯಾಗರಾ) ಗಳನ್ನು ಸಹ ಕಾಣಬಹುದಾಗಿದೆ. ಈ ಜಲಪಾತವು ಅತ್ಯಂತ ರಮಣೀಯವಾಗಿದೆ. ಇಲ್ಲಿಗೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

PC:Adarsh Padmanabhan

ಸಂಪ್ರದಾಯ

ಸಂಪ್ರದಾಯ

ತ್ರ್ರಿಸೂರ ಅತ್ಯಂತ ಸುಂದರವಾದ ಚಾರಿತ್ರಿ ಸಂಪ್ರದಾಯವನ್ನು ಹೊಂದಿದೆ. ಕೇರಳದ ಸಾಂಸ್ಕøತಿಕ ಕೇಂದ್ರವಾಗಿ ಗುರುತಿಸಿಕೊಂಡಿರುವ ಪ್ರಸಿದ್ಧವಾದ ಸ್ಥಳ ತ್ರಿಸೂರು. ಸಾಮಾನ್ಯವಾಗಿ ತಿಳಿದಂತೆ ಕೇರಲದ ಸಂಪ್ರದಾಯವು ಅತ್ಯಂತ ವಿಭಿನ್ನವಾಗಿದ್ದು. ದಕ್ಷಿಣ ಭಾರತದ ಹೆಸರಾಂತ ಸಂಸ್ಕ್ರತಿಯೆಂದೇ ಖ್ಯಾತಿಯಾಗಿದೆ.


PC:Mullookkaaran

ಕಣ್ಣಿಗೆ ಕಾಣದ ಶಿವಲಿಂಗ

ಕಣ್ಣಿಗೆ ಕಾಣದ ಶಿವಲಿಂಗ

ಕೇರಳದ ಮುಖ್ಯ ಮೂರು ಶಿವಲಿಂಗಗಳಿವೆ ಅವುಗಳೆಂದರೆ ವಡಕ್ಕುನಾಥ ದೇವಾಲಯ, ಅಶ್ವಕೇಶ್ವರ ಶಿವಾಲಯ ಮತ್ತು ಇರತ್ತವೀರಾ ಶಿವಾಲಯ ಎನ್ನುವ 3 ದೇವಾಲಯಗಳು. ಅವುಗಳಲ್ಲಿ ವಡಕ್ಕು ನಾಥ ದೇವಾಲಯದಲ್ಲಿ ಶಿವಲಿಂಗದ ದರ್ಶನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.


PC:Rkrish67

ಎಣ್ಣೆಯಿಂದ ಅಭಿಷೇಕ

ಎಣ್ಣೆಯಿಂದ ಅಭಿಷೇಕ

ವಡಕ್ಕು ನಾಥ ಶಿವಲಿಂಗಕ್ಕೆ ಸಾವಿರಾರು ವರ್ಷಗಳಿಂದ ಎಣ್ಣೆಯಿಂದ ಅಭಿಷೇಕ ಮಾಡಿ ಮಾಡಿ ಶಿವ ಲಿಂಗವು ಒಂದು ಗುಡ್ಡೆಯ ರೀತಿ ಮಾರ್ಪಾಟಾಗಿದೆ ಎಂತೆ. ಸುಮಾರು 5 ರಿಂದ 6 ಮೀಟರ್ ಎತ್ತರದ ಎಣ್ಣೆಯ ಗುಡ್ಡೆಯ ಕೆಳಗೆ ಶಿವಲಿಂಗ ಮುಚ್ಚಿ ಹೋಗಿರುವುದರಿಂದ ಲಿಂಗದ ದರ್ಶನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

PC:Jayeshj

ಬೇಸಿಗೆ

ಬೇಸಿಗೆ

ಈ ಶಿವಲಿಂಗದ ಮೇಲೆ ಸಾವಿರಾರು ವರ್ಷದಿಂದ ಅಭಿಷೇಕ ಮಾಡಿ ಗುಡ್ಡೆಯ ರೀತಿಯಾಗಿದೆ. ಅತ್ಯಂತ ಬೇಸಿಗೆ ಕಾಲದಲ್ಲೂ ಕೂಡ ಲಿಂಗದ ಮೇಲೆ ಇರುವ ಎಣ್ಣೆಯ ಗಡ್ಡೆಗಳು ಸ್ವಲ್ಪವೂ ಕರಗುವುದಿಲ್ಲವಂತೆ.

PC:Rkrish67

ಮಕ್ಕಳು

ಮಕ್ಕಳು

ಈ ದೇವಾಲಯದ ಒಳಗೆ ಒಂದು ವರ್ಷದ ಪುಟ್ಟ ಮಕ್ಕಳನ್ನು ಒಳ ಪ್ರವೇಶವನ್ನು ನೀಡುವುದಿಲ್ಲ. ಇಲ್ಲಿ ಹಲವಾರು ದೇಶ ವಿದೇಶಗಳಿಂದ ಈ ಪವಿತ್ರವಾದ ದೇವಾಲಯಕ್ಕೆ ಬರುತ್ತಾರೆ.


PC:Aruna

ಸಂಪ್ರಾದಾಯ ವಸ್ತ್ರಧಾರಣ

ಸಂಪ್ರಾದಾಯ ವಸ್ತ್ರಧಾರಣ

ಈ ಪವಿತ್ರವಾದ ದೇವಾಲಯದ ಒಳಗೆ ಪ್ರವೇಶ ಪಡೆಯಬೇಕಾದರೆ ಸಂಪ್ರದಾಯಿಕ ವಸ್ತ್ರವನ್ನು ಧರಿಸಬೇಕು. ಮಹಾಶಿವ ರಾತ್ರಿಯದಿನದಂದೂ ಈ ದೇವಾಲಯವನ್ನು ಅತ್ಯಂತ ಸುಂದರವಾಗಿ ಅಲಂಕಾರ ಹಾಗೂ ತೆಜೋಮಯವಾಗಿ ಮಾರ್ಪಡಿಸುತ್ತಾರೆ.

PC:Manojk

ಏಕೈಕ ಶಿವಲಿಂಗ

ಏಕೈಕ ಶಿವಲಿಂಗ

ಪ್ರಪಂಚದಲ್ಲಿ ಶಿವಲಿಂಗ ಕಣ್ಣಿಗೆ ಗೋಚಾರವಾಗದೇ ದರ್ಶನ ನೀಡುವ ಏಕೈಕ ಶಿವಲಿಂಗ ಈ ದೇವಾಲಯವಾಗಿದೆ.

PC:Krish9

ಅರಸರ ಆಳ್ವಿಕೆ

ಅರಸರ ಆಳ್ವಿಕೆ

ತ್ರಿಸೂರ್ ಪ್ರದೇಶವನ್ನು 9 ನೇ ಶತಮಾನ ಹಾಗೂ 12 ನೇ ಶತಮಾನದ ಮಧ್ಯೆ ಭಾಗದಲ್ಲಿ ಮಹಾ ಉದಯಪುರಕ್ಕೆ ಸೇರಿದ ಕುಲಶೇಖರ ರಾಜರು ಆಳ್ವಿಕೆ ನಡೆಸಿದರು. ಇವರೇ ಈ ದೇವಾಲಯವನ್ನು ನಿರ್ಮಿಸಿರಬೇಕು ಎಂಬ ಅನುಮಾನಗಳಿವೆ.

PC:Challiyan

ತ್ರಿಸೂರು

ತ್ರಿಸೂರು

ತ್ರಿಸೂರಿನಿಂದ ಸುಮಾರು 25 ಕಿ,ಮೀ ದೂರದಲ್ಲಿ ಗುರುವಾಯೂರೆಲ್ ಎಂಬ ಪ್ರಖ್ಯಾತವಾದ ಕೃಷ್ಣನ ದೇವಾಲಯವಿದೆ. ದೇಶ ವಿದೇಶಗಳಿಂದ ಈ ಪವಿತ್ರವಾದ ಕೃಷ್ಣನ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಹಿಂದೂಗಳ ದೇವಾಲಯಗಳೇ ಅಲ್ಲದೇ ಮುಸ್ಲಿಮರ ಹಾಗೂ ಕ್ರೈಸ್ತರ ಯಾತ್ರಾ ಸ್ಥಳಗಳು ಕೂಡ ಇವೆ.

ಮಸೀದಿ

ಮಸೀದಿ

ಚರ್ಮನ್ ಜಮಾ ಮಸೀದಿ ಹಿಂದೂ ದೆವಾಲಯದ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ಪ್ರಪಂಚದಲ್ಲಿನ ಮದೀನಾ ತದನಂತರದ ನಿರ್ಮಾಣ ಮಾಡಿರುವ 2 ನೇ ಮಸೀದಿ ಎಂದು ಭಾವಿಸಲಾಗಿದೆ.

Please Wait while comments are loading...