Search
  • Follow NativePlanet
Share
» »ವಿಶ್ವದ ಅತ್ಯಂತ ಐಷಾರಾಮಿ ಹಾಗೂ ದುಬಾರಿ ಮನೆಗಳ ಬಗ್ಗೆ ತಿಳಿದಿರುವಿರಾ?

ವಿಶ್ವದ ಅತ್ಯಂತ ಐಷಾರಾಮಿ ಹಾಗೂ ದುಬಾರಿ ಮನೆಗಳ ಬಗ್ಗೆ ತಿಳಿದಿರುವಿರಾ?

ವಿಶ್ವದ ಅತ್ಯಂತ ದುಬಾರಿ ಮನೆಗಳ ಪಟ್ಟಿ ಈ ಕೆಳಗಿನಂತಿವೆ

ಕನಸಿನ ಮನೆಯನ್ನು ಹೊಂದುವುದು ಜೀವನದ ಅತ್ಯಂತ ಪ್ರಮುಖ ಭಾಗವಾಗಿದೆ. ನಮ್ಮದೇ ಆದ ಸ್ವಂತ ಮನೆಯನ್ನು ಹೊಂದಿದ್ದು, ಅದರ ಜೊತೆಗೆ ಸುಂದರವಾದ ತೋಟವನ್ನು ಹೊಂದುವುದು ಮತ್ತು ಸುಂದರವಾದ ಲಿವಿಂಗ್ ಏರಿಯಾ ಇತ್ಯಾದಿಗಳನ್ನು ಹೊಂದಿರುವ ಸುಂದರ ಮನೆಯನ್ನು ಹೊಂದುವುದು ಎಲ್ಲರ ಕನಸಾಗಿರುತ್ತದೆ. ಆದರೆ ನೂರಾರು ಕೊಠಡಿಗಳು, ಬಹು ಪಾರ್ಕಿಂಗ್ ಮಹಡಿಗಳು ಮತ್ತು ನಿಮ್ಮ ಮನೆಯ ಮೇಲೆ ಹೆಲಿಪ್ಯಾಡ್ ಹೊಂದಿರುವ 77,000 ಚದರ ಮೀಟರ್ ಗಾತ್ರದ ಕಟ್ಟಡದಲ್ಲಿ ಮನೆಯನ್ನು ನೀವು ಎಂದಾದರೂ ಊಹಿಸಿದ್ದೀರಾ?

ಜನರು ಅಂತಹ ಮನೆಗಳನ್ನು ಹೊಂದಿದ್ದಾರೆ ಎಂದರೆ ನಂಬುವಿರಾ ಹೌದು! ಭಾರತದಿಂದ ಲಂಡನ್‌ಗೆ, ಲಂಡನ್‌ನಿಂದ ನ್ಯೂಯಾರ್ಕ್‌ವರೆಗೆ ಹೀಗೆಯೇ ಇರುವ ಮನೆಗಳನ್ನು ಹೊಂದಿರುವ ಪ್ರಪಂಚದಾದ್ಯಂತದಲ್ಲಿ ಜನರಿದ್ದಾರೆ.

ಜಗತ್ತಿನ ಅತ್ಯಂತ ದುಬಾರಿಯಾದ ಮನೆಗಳ ಪಟ್ಟಿಯು ಈ ಕೆಳಗಿನಂತಿವೆ

 ಬಕಿಂಗ್ಹ್ಯಾಮ್ ಅರಮನೆ - $4.9 ಮಿಲಿಯನ್

ಬಕಿಂಗ್ಹ್ಯಾಮ್ ಅರಮನೆ - $4.9 ಮಿಲಿಯನ್

ಬಕಿಂಗ್ಹ್ಯಾಮ್ ಅರಮನೆ, ಬ್ರಿಟಿಷ್ ರಾಜಮನೆತನದ ಅಧಿಕೃತ ಲಂಡನ್ ನಿವಾಸವಾಗಿದ್ದು, ಇದು ಜಗತ್ತಿನ ಅತ್ಯಂತ ದುಬಾರಿ ಮನೆಯಾಗಿದೆ. ಈ ಅರಮನೆಯು 775 ಕೊಠಡಿಗಳ ಜೊತೆಗೆ 188 ಸಿಬ್ಬಂದಿ ಕೊಠಡಿಗಳು, 52 ರಾಯಲ್ ಮತ್ತು ಅತಿಥಿ ಮಲಗುವ ಕೋಣೆಗಳು, 78 ಸ್ನಾನಗೃಹಗಳು ಮತ್ತು 92 ಕಚೇರಿಗನ್ನು ಹೊಂದಿದೆ ಅಲ್ಲದೆ ಬಕಿಂಗ್‌ಹ್ಯಾಮ್‌ನಲ್ಲಿರುವ ಉದ್ಯಾನವನ ಒಂದೇ ಬರೋಬ್ಬರಿ 40 ಎಕರೆಗಳಷ್ಟು ವಿಸ್ತಾರವಾಗಿದೆ.

ಬಕಿಂಗ್ಹ್ಯಾಮ್ ಅರಮನೆಯು ಸಾರ್ವಜನಿಕರಿಗೆ ಭೇಟಿ ನೀಡಲು ತೆರೆದಿರುತ್ತದೆ ಇದು ಅತ್ಯುತ್ತಮವಾದ ಇತಿಹಾಸ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವುದರಿಂದ ಲಂಡನ್‌ನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಅಂದಾಜು ಮೌಲ್ಯ: $4.9 ಬಿಲಿಯನ್

ಸ್ಥಳ: ಲಂಡನ್, ಯುಕೆ

ಮಾಲೀಕರು: ಇಂಗ್ಲೆಂಡ್ ರಾಣಿ.

ಆಂಟಿಲಿಯಾ - $2.2 ಬಿಲಿಯನ್

ಆಂಟಿಲಿಯಾ - $2.2 ಬಿಲಿಯನ್

ವಿಶ್ವದ ಅಗ್ರ ಸ್ಥಾನದಲ್ಲಿರುವ ಮನೆಗಳ ಪೈಕೆ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಂಟಿಲಿಯಾ ಅಲಂಕರಿಸಿದ್ದು, ಇದು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಒಡೆತನದಲ್ಲಿದೆ.

ಇದು 27 ಮಹಡಿಗಳನ್ನು ಹೊಂದಿರುವ 400,000 ಚದರ ಅಡಿಗಳಲ್ಲಿ ಹರಡಿದ್ದು, ಇದರಲ್ಲಿ 6 ಮಹಡಿಗಳನ್ನು ಕುಟುಂಬಕ್ಕೆ ಸಮರ್ಪಿಸಲಾಗಿದೆ, ಹಾಗೂ 6 ಅಂತಸ್ತಿನ ಪಾರ್ಕಿಂಗ್, 2 ಅಂತಸ್ತಿನ ಆರೋಗ್ಯ ಕೇಂದ್ರ, 50 ಆಸನದ ಹೋಮ್ ಥಿಯೇಟರ್ ಮತ್ತು 3 ರೂಫ್-ಟಾಪ್ ಹೆಲಿಕಾಪ್ಟರ್ ಪ್ಯಾಡ್‌ಗಳನ್ನು ಹೊಂದಿದೆ.ಆಂಟಿಲಿಯಾ, ಅದರ ದೊಡ್ಡ ಎತ್ತರವನ್ನು ಲೆಕ್ಕಿಸದೆ, 8ರ ತೀವ್ರತೆಯ ಭೂಕಂಪಗಳನ್ನು ತಡೆದುಕೊಳ್ಳುವ ರೀತಿಯಲ್ಲಿ ನಿರ್ಮಿಸಲಾಗಿದೆ.

ಅಂದಾಜು ಮೌಲ್ಯ: $2.2 ಬಿಲಿಯನ್

ಸ್ಥಳ: ಮುಂಬೈ, ಭಾರತ

ಮಾಲೀಕರು: ಮುಖೇಶ್ ಅಂಬಾನಿ.

ವಿಲ್ಲಾ ಲಿಯೋಪೋಲ್ಡಾ- $750 ಮಿಲಿಯನ್

ವಿಲ್ಲಾ ಲಿಯೋಪೋಲ್ಡಾ- $750 ಮಿಲಿಯನ್

ವಿಶ್ವದ ಅಗ್ರ ಮೂರು ಅತ್ಯಂತ ದುಬಾರಿ ಮನೆಗಳ ಪಟ್ಟಿಯಲ್ಲಿ ಬ್ರೆಜಿಲಿನ ಬ್ರೆಜಿಲಿಯನ್ ಲೋಕೋಪಕಾರಿ ಲಿಲಿ ಸಫ್ರಾ ಅವರ ಒಡೆತನದಲ್ಲಿರುವ ವಿಲ್ಲಾ ಲಿಯೋಪೋಲ್ಡಾವು ಸೇರಿದ್ದು, ಈ ಮನೆಯು ಇನ್ನಿತರ ಹಲವಾರು ಗಮನಾರ್ಹ ಮಾಲೀಕರನ್ನು ಹೊಂದಿದೆ.

ಈ 50-ಎಕರೆ ಅದ್ಭುತವಾದ ಮನೆಯು 11 ಮಲಗುವ ಕೋಣೆಗಳು, 14 ಸ್ನಾನಗೃಹಗಳು, ವಾಣಿಜ್ಯ ಹಸಿರುಮನೆ ಮತ್ತು ಎನಿಲ್ಲ ಎಂದು ಹೇಳಲಾಗದೇ ಇರುವ ಇದು ಫ್ರಾನ್ಸಿಸ್ ಆಲ್ಪ್ಸ್-ಮೆರಿಟೈಮ್ ವಿಭಾಗದಲ್ಲಿ ನೆಲೆಗೊಂಡಿದೆ. ಈ ಅದ್ಭುತ ವಿಲ್ಲಾ ಲಿಯೋಪೋಲ್ಡಾ 1955 ರ ಟು ಕ್ಯಾಚ್ ಎ ಥೀಫ್. ಎಂಬ ಚಲನಚಿತ್ರದಲ್ಲಿ ಕಾಣಿಸಿಕೊಂಡಿದೆ.

ಅಂದಾಜು ಮೌಲ್ಯ: $750 ಮಿಲಿಯನ್

ಸ್ಥಳ: ಫ್ರೆಂಚ್ ರಿವೇರಿಯಾ, ಫ್ರಾನ್ಸ್.

ಮಾಲೀಕರು: ಲಿಲಿ ಸಫ್ರಾ

ವಿಲ್ಲಾ ಲೆಸ್ ಸೆಡ್ರೆಸ್ - $430 ಮಿಲಿಯನ್

ವಿಲ್ಲಾ ಲೆಸ್ ಸೆಡ್ರೆಸ್ - $430 ಮಿಲಿಯನ್

ವಿಶ್ವದ ಅತ್ಯಂತ ದುಬಾರಿ ಮನೆಗಳ ಪಟ್ಟಿಯಲ್ಲಿ 1830ರಲ್ಲಿ ಬೆಲ್ಜಿಯಂ ನ ರಾಜನಿಂದ ನಿರ್ಮಿತವಾದ ಅತ್ಯಂತ ದುಬಾರಿ ಮನೆಯೂ ಸೇರಿದ್ದು ಇದು ವಿಶ್ವದ ದುಬಾರಿ ಮನೆಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆಯುತ್ತದೆ. ಈ ಮನೆಯು 18,000 ಚದರ ಅಡಿ ವಿಸ್ತೀರ್ಣ ಪ್ರದೇಶದಲ್ಲಿ ವಿಸ್ತರಿಸಿದ್ದು ಇದರ ಮೌಲ್ಯ ಅಂದಾಜು $ 430 ಮಿಲಿಯನ್ ಡಾಲರ್ ಗಳು ಎನ್ನಲಾಗುತ್ತದೆ.

ರಿನಾತ್ ಅಖ್ಮೆಟೋವ್ ಒಡೆತನದ ಈ ವಿಲ್ಲಾವು 14 ಮಲಗುವ ಕೋಣೆಗಳು, 3,000 ಪುಸ್ತಕ-ಹಿಡುವಳಿ ಲೈಬ್ರರಿ, ಒಲಿಂಪಿಕ್ ಗಾತ್ರದ ಈಜುಕೊಳ, ಬಾಲ್ ರೂಂ ಮತ್ತು 30 ಕುದುರೆಗಳಿಗೆ ಅವಕಾಶ ಕಲ್ಪಿಸುವ ಒಂದು ಸ್ಟೇಬಲ್ ಅನ್ನು ಹೊಂದಿದೆ.

ಅಂದಾಜು ಮೌಲ್ಯ: $4.3 ಮಿಲಿಯನ್

ಸ್ಥಳ: ಸೇಂಟ್-ಜೀನ್-ಕ್ಯಾಪ್-ಫೆರಾಟ್, ಫ್ರಾನ್ಸ್

ಮಾಲೀಕರು: ರಿನಾತ್ ಅಖ್ಮೆಟೋವ್

ಲೆಸ್ ಪಲೈಸ್ ಬುಲ್ಲೆಸ್ - $385 ಮಿಲಿಯನ್

ಲೆಸ್ ಪಲೈಸ್ ಬುಲ್ಲೆಸ್ - $385 ಮಿಲಿಯನ್

ವಿಶ್ವದ ದುಬಾರಿ ಮನೆಗಳ ಪಟ್ಟಿಯಲ್ಲಿ ಈ ಮನೆಯು ಒಂದು ವಿಭಿನ್ನವಾಗಿದೆ. ಲೆಸ್ ಪಲೈಸ್ ಬುಲ್ಲೆಸ್ ಪ್ರಪಂಚದ ಯಾವುದೇ ದುಬಾರಿ ಮನೆಗಳಂತೆ ಇರದೆ, ಅದರ ಆಕಾರ ಮತ್ತು ರಚನೆಯು ಬಹಳ ವಿಶಿಷ್ಟವಾಗಿದ್ದು, ಇದು ಮೆಡಿಟರೇನಿಯನ್ ಸಮುದ್ರದ ಮೇಲಿರುವ ವೀಕ್ಷಣೆಗಳೊಂದಿಗೆ ಇದನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳಲು ಯೋಗ್ಯವಾಗಿದೆ.

ಲೆಸ್ ಪಲೈಸ್ ಅನ್ನು "ಬಬಲ್ ಪ್ಯಾಲೇಸ್" ಎಂದೂ ಕರೆಯುತ್ತಾರೆ, ಏಕೆಂದರೆ ಇದು ಒಂದು ದೊಡ್ಡ, ಪೀಚ್-ಬಣ್ಣದ ಗುಳ್ಳೆಯಂತೆ, ವೃತ್ತಾಕಾರದ ಕಟ್ಟಡದಂತೆ ಕಾಣುತ್ತದೆ. ಈ ಮನೆಯನ್ನು ನಿರ್ಮಿಸಲು ಸ್ಫೂರ್ತಿಯು ಮನುಷ್ಯನ ಆರಂಭಿಕ ಯುಗದ ಕಲ್ಪನೆಯಿಂದ ತೆಗೆದುಕೊಳ್ಳಲಾಗಿದೆ.

ಅಂದಾಜು ಮೌಲ್ಯ: $385 ಮಿಲಿಯ

ಸ್ಥಳ: ಕ್ಯಾನೆಸ್, ಫ್ರಾನ್ಸ್

ಮಾಲೀಕರು: ಪಿಯರೆ ಕಾರ್ಡಿನ್.

ಫ಼ೋರ್ ಫೇರ್‌ಫೀಲ್ಡ್ ಪಾಂಡ್ - $248 ಮಿಲಿಯನ್

ಫ಼ೋರ್ ಫೇರ್‌ಫೀಲ್ಡ್ ಪಾಂಡ್ - $248 ಮಿಲಿಯನ್

ಜಗತ್ತಿನ ಅತ್ಯಂತ ದುಬಾರಿ ಮನೆಗಳ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದು, ನ್ಯಾಯಾರ್ಕ್ ಇದರ ಪಟ್ಟಿಯೊಳಗೆ ಬರದೆ ಇರಲು ಸಾಧ್ಯವೆ? ನ್ಯೂಯಾರ್ಕ್ ನಲ್ಲಿರುವ ಅತಂತ ದುಬಾರಿ ಮನೆಗಳಲ್ಲಿ ಫೋರ್ ಫ಼ೀಲ್ಡ್ ಪಾಂಡ್ ಒಂದು ಉತ್ತಮ ಉದಾಹರಣೆಯಾಗಿದ್ದು, ಇದು ಸುಮಾರು 63ಎಕರೆಗಳಷ್ಟು ಜಾಗದಲ್ಲಿ ಆವರಿಸಿಕೊಂಡಿದ್ದು, 29 ಮಲಗುವ ಕೋಣೆಗಳು, 39 ಸ್ನಾನಗೃಹಗಳು, 3 ಈಜುಕೊಳಗಳು, ಟೆನ್ನಿಸ್ ಕೋರ್ಟ್, ಮತ್ತು ಅತ್ಯಂತ ಆಸಕ್ತಿದಾಯಕವೆಂದರೆ 91 ಅಡಿ ಉದ್ದದ ಊಟದ ಕೋಣೆಯಿದ್ದು, ಇದು 105 ಜನರಿಗೆ ಸುಲಭವಾಗಿ ಒಮ್ಮೆಗೆ ಊಟ ಮಾಡುವ ಅವಕಾಶ ಕಲ್ಪಿಸುತ್ತದೆ.

ಉತ್ಪಾದನೆ ಮತ್ತು ಸ್ಮೆಲ್ಟಿಂಗ್ ನಲ್ಲಿ ಹೂಡಿಕೆ ಕಂಪನಿಯಾಗಿದ ರೆನ್ಕೋ ಸಮೂಹ ಸಂಸ್ಥೆಯ ಸ್ಥಾಪಕರಾದ ಇರಾ ರಿನ್ನೆರ್ಟ್ ಅವರ ಒಡೆತನಕ್ಕೆ ಸೇರಿದೆ.

ಅಂದಾಜು ಮೌಲ್ಯ: $248 ಮಿಲಿಯನ್

ಸ್ಥಳ: ನ್ಯೂಯಾರ್ಕ್, ಯುನೈಟೆಡ್ ಸ್ಟೇಟ್ಸ್

ಮಾಲೀಕರು: ಇರಾ ರೆನ್ನರ್ಟ್

 ಓಡಿಯನ್ ಟವರ್ ಪೆಂಟ್ ಹೌಸ್ - $330 ಮಿಲಿಯನ್

ಓಡಿಯನ್ ಟವರ್ ಪೆಂಟ್ ಹೌಸ್ - $330 ಮಿಲಿಯನ್

ಮೊನಾಕೊದಲ್ಲಿರುವ ಸುಂದರವಾದ ಪೆಂಟ್ ಹೌಸ್, ನೀಲಿ ಮೆಡಿಟರೇನಿಯನ್ ಸಮುದ್ರದ ಸ್ಪಷ್ಟ ನೋಟವನ್ನು ನೀಡುತ್ತದೆ. ಈ ಮನೆ ತನ್ನದೇ ಆದ ಅನಂತ ಪೂಲ್ ಹೊಂದಿದೆ. ಒಟ್ಟು ವಿಸ್ತೀರ್ಣ 35 ಚದರ ಅಡಿಗಳು 5 ಮಹಡಿಗಳನ್ನೊಳಗೊಂಡ ಈ ಮನೆಯು ಕಲ್ಪನೆಗೂ ಮೀರಿದ ಐಷಾರಾಮಿ ಜೀವನಶೈಲಿಯ ಉತ್ತಮ ಉದಾಹರಣೆಯಾಗಿದೆ.

ಇದು ಮಾಂಟೆ ಕಾರ್ಲೋದ ಗೋಲ್ಡನ್ ಸಿಟಾಡೆಲ್‌ನಲ್ಲಿದೆ ಮತ್ತು ಇದನ್ನು ಪ್ರಸಿದ್ಧ ವಾಸ್ತುಶಿಲ್ಪಿ ಅಲೆಕ್ಸಾಂಡ್ರೆ ಗಿರಾಲ್ಡಿ ವಿನ್ಯಾಸಗೊಳಿಸಿದ್ದಾರೆ, ಇದರಲ್ಲಿ ಓಡಿಯನ್ ಟವರ್ ಪೆಂಟ್‌ಹೌಸ್ ಅನ್ನು ಗ್ರೌಪ್ ಮಾರ್ಜೋಕೊ ಅವರು ಸ್ಥಾಪಿಸಿದ್ದಾರೆ.

ಅಂದಾಜು ಮೌಲ್ಯ: $330 ಮಿಲಿಯನ್

ಸ್ಥಳ: ಮೊನಾಕೊ

ಮಾಲೀಕರು: ಗ್ರೌಪ್ ಮಾರ್ಜೋಕೊ ಅವರ ಯೋಜನೆಯಾಗಿದೆ.

ಎಲಿಸನ್ ಎಸ್ಟೇಟ್ - $200 ಮಿಲಿಯನ್

ಎಲಿಸನ್ ಎಸ್ಟೇಟ್ - $200 ಮಿಲಿಯನ್

ಕ್ಯಾಲಿಫೋರ್ನಿಯಾದ ಎಲಿಸನ್ ಎಸ್ಟೇಟ್ ಜಗತ್ತಿನ ಅತ್ಯಂತ ದುಬಾರಿ ಮನೆಗಳಲ್ಲಿ ಒಂದೆನಿಸಿದ್ದು, ಇದು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಒರಾಕಲ್‌ನ ಸಹ-ಸಂಸ್ಥಾಪಕರಾದ ಲ್ಯಾರಿ ಎಲಿಸನ್ ಅವರ ಒಡೆತನಕ್ಕೆ ಸೇರಿದೆ. ಇದು ಅಸಾಧಾರಣ ಮಾನವ ನಿರ್ಮಿತ ಸರೋವರ, ಚಹಾ ಮನೆ ಮತ್ತು ಸ್ನಾನಗೃಹದೊಂದಿಗೆ 10 ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುವ ಒಂದು ಬೃಹತ್ ಆಸ್ತಿಯಾಗಿದೆ.

ಕ್ಯಾಲಿಫೋರ್ನಿಯಾದ ವುಡ್‌ಸೈಡ್‌ನಲ್ಲಿರುವ(ಮರಗಳಿಂದ ಕೂಡಿದ ಜಾಗ) ಈ ವೈಭವೋಪೇತ ಆಸ್ತಿಯು ಮ್ಯಾಪಲ್ಸ್, ಚೆರ್ರಿ ಹೂವುಗಳು, ಓಕ್ಸ್ ಮತ್ತು ರೆಡ್‌ವುಡ್‌ಗಳನ್ನು ಒಳಗೊಂಡಂತೆ ವಿಶ್ವದ ಅತ್ಯಂತ ದುಬಾರಿ ಮರಗಳನ್ನು ಒಳಗೊಂಡಿದೆ.

ಅಂದಾಜು ಮೌಲ್ಯ: $200 ಮಿಲಿಯನ್

ಸ್ಥಳ: ಕ್ಯಾಲಿಫೋರ್ನಿಯಾ, ಯುನೈಟೆಡ್ ಸ್ಟೇಟ್ಸ್

ಮಾಲೀಕರು: ಲ್ಯಾರಿ ಎಲಿಸನ್.

ಪಲಾಝೊ ಡಿ ಅಮೋರ್ - $195 ಮಿಲಿಯನ್

ಪಲಾಝೊ ಡಿ ಅಮೋರ್ - $195 ಮಿಲಿಯನ್

ಅತ್ಯಂತ ಯಶಸ್ವಿ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿ ಒಬ್ಬರಾದ ಜೆಫ್ ಗ್ರೀನ್ ಒಡೆತನದ ಈ ಮನೆಯು ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿರುವ ಹಾಲಿಡೇ ರೆಸಾರ್ಟ್‌ನಂತೆ ಕಾಣುತ್ತದೆ. ಇದರೊಂದಿಗೆ ಪಲಾಝೋ ಡಿ ಅಮೋರ್ ವಿಶ್ವದ ಅತಿದೊಡ್ಡ ಖಾಸಗಿ ನಿವಾಸಗಳಲ್ಲಿ ಒಂದಾಗಿದೆ.

ಪಲಾಝೊ ಡಿ ಅಮೋರ್ ಒಟ್ಟು 53-000 ಚದರ ಅಡಿ ವಿಸ್ತೀರ್ಣವನ್ನು 12 ಮಲಗುವ ಕೋಣೆಗಳು, 23 ಸ್ನಾನಗೃಹಗಳು, ಜಲಪಾತದ ವೀಕ್ಷಣೆಗಳೊಂದಿಗೆ ಈಜುಕೊಳಗಳು ಮತ್ತು ಚಲನಚಿತ್ರ ಮಂದಿರವನ್ನು ಹೊಂದಿದೆ.

ಅಂದಾಜು ಮೌಲ್ಯ: $195 ಮಿಲಿಯನ್

ಸ್ಥಳ: ಕ್ಯಾಲಿಫೋರ್ನಿಯಾ, ಯುನೈಟೆಡ್ ಸ್ಟೇಟ್ಸ್

ಮಾಲೀಕರು: ಜೆಫ್ ಗ್ರೀನ್.

18-19 ಕೆನ್ಸಿಂಗ್ಟನ್ ಗಾರ್ಡನ್ಸ್ - $128 ಮಿಲಿಯನ್

18-19 ಕೆನ್ಸಿಂಗ್ಟನ್ ಗಾರ್ಡನ್ಸ್ - $128 ಮಿಲಿಯನ್

18-19 ಕೆನ್ಸಿಂಗ್ಟನ್ ಗಾರ್ಡನ್ಸ್ - $128 ಇದು ಲಂಡನ್ ನಲ್ಲಿ ನೆಲೆಸಿದ್ದು, ಜಗತ್ತಿನ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಇದರ ಬೆಲೆ $128 ಬೆಲೆಗಳಾಗಿದ್ದು, ಈ ಐಷಾರಾಮಿ ಮನೆಯು 12-ಮಲಗುವ ಕೋಣೆ ಖಾಸಗಿ ಈಜುವ ಕೊಳ ಮತ್ತು ಸ್ಪಾ, ಫಿಟ್‌ನೆಸ್ ಸೆಂಟರ್ ಮತ್ತು ಬಹು ಟೆರೇಸ್‌ಗಳನ್ನು ಹೊಂದಿದೆ. ಇದು ಪಾರ್ಟಿ ಹಾಲ್ ಗಳು ಮತ್ತು ನಾಲ್ಕು ಊಟದ ಕೋಣೆಗಳನ್ನು ಹೊಂದಿದೆ. 19 ನೇ ಶತಮಾನದಲ್ಲಿ ನಿರ್ಮಿಸಲಾದ ಮನೆಯು ಸರಿಸುಮಾರು 55,000 ಚದರ ಅಡಿಯನ್ನು ಹೊಂದಿದೆ.

ವಿಶ್ವದ ಅತಿದೊಡ್ಡ ಉಕ್ಕು ತಯಾರಿಕೆ ಕಂಪನಿಯಾದ ಆರ್ಸೆಲರ್ ಮಿತ್ತಲ್‌ನ ಅಧ್ಯಕ್ಷ ಮತ್ತು ಸಿಇಒ ಆಗಿರುವ ಲಕ್ಷ್ಮಿ ಮಿತ್ತಲ್ ಒಡೆತನದಲ್ಲಿದೆ. ಲಕ್ಷ್ಮಿ ಮಿತ್ತಲ್ ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್ಟನ್ ಅವರ ನೆರೆಹೊರೆಯವರಾಗಿದ್ದಾರೆ.

ಅಂದಾಜು ಮೌಲ್ಯ: $128 ಮಿಲಿಯನ್

ಸ್ಥಳ: ಲಂಡನ್, ಇಂಗ್ಲೆಂಡ್

ಮಾಲೀಕರು: ಲಕ್ಷ್ಮಿ ಮಿತ್ತಲ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X