Search
  • Follow NativePlanet
Share
» »ವಿಜಯವಾಡದಲ್ಲಿರುವ ಕನಕ ದುರ್ಗಾ ಪವಿತ್ರ ದೇವಾಲಯ

ವಿಜಯವಾಡದಲ್ಲಿರುವ ಕನಕ ದುರ್ಗಾ ಪವಿತ್ರ ದೇವಾಲಯ

ಕನಕ ದುರ್ಗಾ ದೇವಾಲಯದ ಬಗ್ಗೆ ಒಂದು ಮಾಹಿತಿ ಈ ಲೇಖನದಲ್ಲಿ

By Manjula Balaraj Tantry

ಕನಕಾ ದುರ್ಗಾ ಪವಿತ್ರ ಮಂದಿರವು ವಿಜಯವಾಡದಲ್ಲಿದೆ. ವಿಜಯವಾಡದಲ್ಲಿರುವ ಕನಕಾ ದುರ್ಗಾ ದೇವಾಲಯವು ಶಕ್ತಿ, ಶ್ರೀಮಂತಿಕೆ ಮತ್ತು ದಯೆಯನ್ನು ಕರುಣಿಸುವ ಶಕ್ತಿರೂಪೆ ದುರ್ಗಾ ದೇವಿಯ ವಾಸಸ್ಥಾನವಾಗಿದೆ, ಇದನ್ನು ವಿಜಯವಾಡದ ದೇವತೆ ಎಂದು ಪರಿಗಣಿಸಲಾಗುತ್ತದೆ ಮತ್ತು ವಿಶೇಷವಾಗಿ ನವರಾತ್ರಿ ಸಮಯದಲ್ಲಿ ಲಕ್ಷಾಂತರ ಯಾತ್ರಿಗಳು ಭೇಟಿ ನೀಡುತ್ತಾರೆ. ಕೃಷ್ಣ ನದಿಯ ದಡದಲ್ಲಿರುವ ಇಂದ್ರಕೀಲಾದ್ರಿ ಬೆಟ್ಟದ ಮೇಲಿರುವ ಈ ಪುರಾತನ ದೇವಾಲಯದ ಬಗ್ಗೆ ಹಲವು ಪುರಾಣಕಥೆಗಳಿವೆ.

ಇಲ್ಲಿರುವ ದೇವಿಯ ಮತ್ತು ಶಿವನ ಮೂರ್ತಿಯು ತಾನಾಗಿಯೇ ಉದ್ಭವವಾಗಿರುವುದೆನ್ನುವ ಪ್ರತೀತಿಯಿದೆ. ಇಲ್ಲಿಯ ವಿಶೇಷತೆಯೆಂದರೆ, ದುರ್ಗೆಯು ಶಿವನ ಬಲಭಾಗದಲ್ಲಿ ಆಸೀನಳಾಗಿದ್ದಾಳೆ. ಇದು ಬೇರೆ ದೇವಾಲಯಗಳಿಗಿಂತ ವಿಭಿನ್ನವಾದುದಾಗಿದೆ ಯಾಕೆಂದರೆ ಬೇರೆ ದೇವಾಲಯಗಳಲ್ಲಿ ದೇವಿಯ ಮೂರ್ತಿಯು ತಮ್ಮ ಸಂಗಾತಿಯ ಎಡ ಭಾಗದಲ್ಲಿರುತ್ತದೆ. ಇಲ್ಲಿ ಬಲ ಭಾಗದಲ್ಲಿರುವುದು ದೇವಿಯ ಪ್ರಾಮುಖ್ಯತೆಯನ್ನು ಪ್ರತಿಬಿಂಭಿಸುತ್ತದೆ.

1. ವಿಜಯವಾಡದಲ್ಲಿರುವ ಕನಕ ದುರ್ಗಾ ಪವಿತ್ರ ದೇವಾಲಯ

1. ವಿಜಯವಾಡದಲ್ಲಿರುವ ಕನಕ ದುರ್ಗಾ ಪವಿತ್ರ ದೇವಾಲಯ

PC: Kapil28

ಬಹಳ ವರ್ಷಗಳ ಹಿಂದೆ ಅಸುರನು ಈ ಪರ್ವತದ ಒಳಗೆ ಪ್ರವೇಶಿಸಿದ್ದ ಎಂದು ಹೇಳಲಾಗುತ್ತದೆ. ಕೀಲಾ ಎಂಬ ಅಸುರನು ದುರ್ಗಾದೇವಿಯನ್ನು ಪ್ರಸನ್ನ ಪಡಿಸಲು ತೀವ್ರವಾದ ತಪಸ್ಸು ಮಾಡಿದನು. ಅವನ ತಪಸ್ಸಿಗೆ ಮೆಚ್ಚಿದ ದುರ್ಗೆಯು ವರವನ್ನು ಕೇಳಲು ಹೇಳುತ್ತಾಳೆ ಇದರಿಂದ ಸಂತೋಷಗೊಂಡ ಅಸುರನು ದೇವಿಯು ಸದಾ ತನ್ನ ಹೃದಯದಲ್ಲಿ ಇರಬೇಕೆಂದು ವರ ಕೇಳುತ್ತಾನೆ.

ಇದಕ್ಕೆ ಒಪ್ಪಿದ ದೇವಿಯು ಅಸುರನನ್ನು ಅಲ್ಲಿಯೇ ಅಂದರೆ ಕೃಷ್ಣ ನದಿಯ ಬಯಲು ಪ್ರದೇಶದಲ್ಲಿ, ಪರ್ವತದ ರೂಪದಲ್ಲಿ ಇರಬೇಕೆಂದು ಹೇಳುತ್ತಾಳೆ ಮತ್ತು ಕೃತಯುಗದಲ್ಲಿ ರಾಕ್ಷಸರ ಹತ್ಯೆಯ ನಂತರ, ಅವಳು ಅವನ ಹೃದಯದಲ್ಲಿ ಉಳಿಯುತ್ತೇನೆ ಎಂದು ಭರವಸೆ ನೀಡುತ್ತಾಳೆ. ಅವಳ ಮಾತಿನಂತೆ ದುರ್ಗೆಯು ಮಹಿಷಾಸುರನನ್ನು ಕೊಂದ ಬಳಿಕ ಈ ಕೀಲಾ ಪರ್ವತಕ್ಕೆ ಬಂದು ಮಾತಿನಂತೆ ಪರ್ವತದ ಹೃದಯಭಾಗದಲ್ಲಿ ನೆಲೆಸಿದಳು.

2. ವಿಜಯವಾಡದಲ್ಲಿರುವ ಕನಕ ದುರ್ಗಾ ಪವಿತ್ರ ದೇವಾಲಯ

2. ವಿಜಯವಾಡದಲ್ಲಿರುವ ಕನಕ ದುರ್ಗಾ ಪವಿತ್ರ ದೇವಾಲಯ

PC: Offical Site

ಮಹಾಭಾರತದ ಪ್ರಕಾರ ಅರ್ಜುನನು ಪಾಶುಪತ್ರಾಸ್ತ್ರ ವನ್ನು ಪಡೆಯಲು ಶಿವನ ಮೆಚ್ಚಿಸಲು ತಪಸ್ಸು ಪ್ರಾರಂಭಿಸಿದ್ದ ಅಧಿಕೃತ ತಾಣ ಇದು ಎನ್ನಲಾಗುತ್ತದೆ. ಈ ಶಸ್ತ್ರಾಸ್ತ್ರ ವನ್ನು ಯಾರು ಹೊಂದಿರುವನೋ ಅವನು ವೈರಿಗಳ ಮೇಲೆ ವಿಜಯಶಾಲಿಯಾಗುವನು ಎಂದು ಹೇಳಲಾಗುತ್ತದೆ. ಅರ್ಜುನನ ಭಕ್ತಿಗೆ ಮೆಚ್ಚಿದ ಶಿವ ಹಾಗೂ ಪಾರ್ವತಿಯರು ಬೇಡರ ವೇಷದಲ್ಲಿ ಪ್ರತ್ಯಕ್ಷರಾಗುತ್ತಾರೆ.

ಶಿವನು ತನ್ನ ಬೇಟೆಯನ್ನು ಪ್ರಾರಂಭಿಸಿ ಮದಭರಿತ ವನ್ಯ ಹಂದಿಯನ್ನು ಅಟ್ಟಿಸಿಕೊಂಡು ಅರ್ಜುನನು ತಪಸ್ಸು ಮಾಡುತ್ತಿದ್ದ ಇಂದ್ರಕೀಲಾ ಪರ್ವತದ ತುದಿಗೆ ಬರುತ್ತಾನೆ. ಅದು ಅರ್ಜುನನ ಕಡೆಗೆ ಬರಲು ಅರ್ಜುನನು ತನ್ನ ಬಾಣ ಬಿಡುತ್ತಾನೆ ಅದೇ ಸಮಯದಲ್ಲಿ ಶಿವನೂ ಬಾಣಬಿಡುತ್ತಾನೆ ಈ ಬಾಣಗಳು ಏಕ ಸಮಯದಲ್ಲಿ ಹಂದಿಗೆ ತಾಗುತ್ತದೆ ಮತ್ತು ಶಿವ ಮತ್ತು ಅರ್ಜುನರ ನಡುವೆ ಹಂದಿಯನ್ನು ಕೊಂದುದರ ಬಗ್ಗೆ ಜಗಳ ನಡೆದು ಯುದ್ದಕ್ಕೆ ಕೊಂಡೊಯ್ಯುತ್ತದೆ.

3. ವಿಜಯವಾಡದಲ್ಲಿರುವ ಕನಕ ದುರ್ಗಾ ಪವಿತ್ರ ದೇವಾಲಯ

3. ವಿಜಯವಾಡದಲ್ಲಿರುವ ಕನಕ ದುರ್ಗಾ ಪವಿತ್ರ ದೇವಾಲಯ

PC: Krishna Chaitanya Velaga

ಅರ್ಜುನನು ತಾನು ಯುದ್ದ ಮಾಡುವ ಮೊದಲು ತಾನು ಮಣ್ಣಿನಿಂದ ಮಾಡಿದ ಶಿವಲಿಂಗಕ್ಕೆ ಪೂಜೆ ಮಾಡಲು ಹೂಗಳನ್ನು ಅರ್ಪಿಸುತ್ತಾನೆ ಹೀಗೆ ಮಾಡುವಾಗ ಆ ಹೂವು ಬೇಡನ ಮೇಲೆ ಬೀಳುತ್ತದೆ. ಆವಾಗ ಅರ್ಜುನನಿಗೆ ಬೇಡರ ವೇಷದಲ್ಲಿ ಬಂದವರು ಶಿವ ಪಾರ್ವತಿಯರು ಎಂದು ಅರಿವಾಗುತ್ತದೆ. ಕೂಡಲೆ ಶಿವ ಪಾರ್ವತಿಯರು ತಮ್ಮ ಮಾರುವೇಷ ತೊರೆದು ತಮ್ಮ ನಿಜ ರೂಪದಲ್ಲಿ ಅರ್ಜುನನಿಗೆ ದರ್ಶನ ನೀಡುತ್ತಾರೆ ಮತ್ತು ಪಾಶುಪತಾಸ್ತ್ರವನ್ನು ನೀಡಿ ಆಶೀರ್ವದಿಸುತ್ತಾರೆ.

4.ದೇವಾಲಯದಲ್ಲಿ ನವರಾತ್ರಿ ಆಚರಣೆ

4.ದೇವಾಲಯದಲ್ಲಿ ನವರಾತ್ರಿ ಆಚರಣೆ

PC: Krishna Chaitanya Velaga

ದೇವಾಲಯದಲ್ಲಿ 4 ಅಡಿ ಎತ್ತರವಿರುವ ದೇವಿಯ ವಿಗ್ರಹವಿದ್ದು ಅದು ಸುಂದರವಾದ ಆಭರಣಗಳಿಂದ ಅಲಂಕರಿಸಲ್ಪಟ್ಟಿದೆ. ಇಲ್ಲಿ ದುರ್ಗಾ ದೇವಿಯು ಎಂಟು ತೋಳುಗಳನ್ನು ಹೊಂದಿರುವಂತೆ ಚಿತ್ರಿಸಲಾಗಿದೆ, ಪ್ರತಿಯೊಂದೂ ಆಯುಧಗಳನ್ನು ಹಿಡಿದಿದ್ದು ರಾಕ್ಷಸ ಮಹಿಷಾಸುರ ಮೇಲೆ ನಿಂತಿರುವ ಭಂಗಿಯಲ್ಲಿದೆ.

ಇತರ ಎಲ್ಲಾ ದೇವಿ ದೇವಾಲಯಗಳಂತೆ ನವರಾತ್ರಿ ಇಲ್ಲಿ ಪ್ರಮುಖವಾದ ಉತ್ಸವವಾಗಿದೆ.ಈ ಹಬ್ಬದ ಸಂದರ್ಭಕ್ಕಾಗಿ ವಿವಿಧ ದೇವತೆಗಳನ್ನು ಚಿತ್ರಿಸಲಾಗಿದೆ, ಇದು ಲಕ್ಷಾಂತರ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಈ ದಿನಗಳಲ್ಲಿ ಈ ದೇವತೆಗಳ ಆಶೀರ್ವಾದವನ್ನು ಪಡೆಯಲು ಯಾತ್ರಾರ್ಥಿಗಳು ಬರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X