• Follow NativePlanet
Share
» »ಹಾಸನದಲ್ಲಿನ ಪ್ರಸಿದ್ಧ ತಾಣಗಳಿವು......

ಹಾಸನದಲ್ಲಿನ ಪ್ರಸಿದ್ಧ ತಾಣಗಳಿವು......

Written By:

ಹಾಸನ ನಮ್ಮ ಕರ್ನಾಟಕ ಜಿಲ್ಲೆಯಲ್ಲಿನ ಪ್ರಸಿದ್ಧವಾದ ಪ್ರವಾಸಿತಾಣಗಳಲ್ಲಿ ಒಂದು. ಹೊಯ್ಸಳರ ಆಳ್ವಿಕೆಯ ಸಮಯದಲ್ಲಿ ಹಾಸನವನ್ನು ಆಡಳಿತ ಕೇಂದ್ರವಾಗಿಸಿ ಕೊಂಡಿದ್ದರು. ಹಾಸನ ಜಿಲ್ಲೆಯ ಬೇಲೂರು ಅವರ ರಾಜಧಾನಿಯಾಗಿತ್ತು. ಇಂದು ಹಾಸನ ಜಿಲ್ಲೆಯ ಹೊಯ್ಸಳ ವಾಸ್ತುಶಿಲ್ಪಕ್ಕೆ ಪ್ರಪಂಚದಾದಂತ್ಯ ಪ್ರಖ್ಯಾತತೆ ಪಡೆದಿದೆ.

ಇಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು, ದೇಶ, ವಿದೇಶಗಳಿಂದ ಹಾಸನ ಜಿಲ್ಲೆಗೆ ಪ್ರವಾಸಕ್ಕೆ ಭೇಟಿ ನೀಡುತ್ತಾರೆ. ಅವುಗಳಲ್ಲಿ ಗೋರೂರು ಡ್ಯಾಂ (ಅಣೆಕಟ್ಟು), ಶೆಟ್ಟಿ ಹಳ್ಳಿ ಚರ್ಚ್(ಹಾಸನ), ಬಿಸಿಲೆ ಘಾಟ್, ಹಾಸನಾಂಬೆ ದೇವಾಲಯ, ಹಾಸನ ಮ್ಯೂಸಿಯಂ ಇನ್ನೂ ಹಲವಾರು.

ಬೆಂಗಳೂರಿನಿಂದ ಸುಮಾರು 182 ಕಿ.ಮೀ ದೂರದಲ್ಲಿದೆ ಹಾಸನ. ಹಾಸನಕ್ಕೆ ಸುಮಾರು 3 ಗಂಟೆ 40 ನಿಮಿಷಗಳ ಪ್ರಯಾಣ ಮಾಡಿ ಸುಂದರವಾದ ಈ ಪ್ರದೇಶಗಳಿಗೆ ಭೇಟಿ ನೀಡಬಹುದು.

ಹೊಯ್ಸಳೇಶ್ವರ ದೇವಾಲಯ

ಹೊಯ್ಸಳೇಶ್ವರ ದೇವಾಲಯ

ಹಾಸನ ಜಿಲ್ಲೆಯಲ್ಲಿ ಹೊಯ್ಸಳೇಶ್ವರ ದೇವಾಲಯವು ಅತ್ಯಂತ ಪ್ರಸಿದ್ಧವಾದುದು. ಇಲ್ಲಿ ನಾಗೇಶ್ವರ ಹಾಗು ಚನ್ನಕೇಶ್ವರ ದೇವಾಲಯಗಳಿವೆ ಈ ದೇವಾಲಯವು ಅವಳಿ ದೇವಾಲಯವಾಗಿದ್ದು, ಮೊಗೆಲ್ ಎಂಬ ಹಳ್ಳಿಯ ತುದಿಯಲ್ಲಿದೆ. ಈ ದೇವಾಲಯಗಳು ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಸುಂದರವಾದ ವಾಸ್ತು ಶಿಲ್ಪಕ್ಕೆ ಈ ದೇವಾಲಯವು ಪ್ರಖ್ಯಾತಿಯನ್ನು ಪಡೆದಿದೆ.


PC:Dineshkannambadi

ಗೋರೂರು ಡ್ಯಾಂ

ಗೋರೂರು ಡ್ಯಾಂ

ಗೋರೂರು ಡ್ಯಾಂ ಹಾಸನದಿಂದ 22 ಕಿ.ಮೀ ದೂರದಲ್ಲಿದೆ. ಇದನ್ನು ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ ಅಣೆಕಟ್ಟಾಗಿದೆ. ಈ ಸೇತುವೆಗೆ ಹೇಮಾವತಿ ಜಲಾಶಯ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಈ ಸ್ಥಳವು ಪಿಕ್ನಿಕ್‍ಗೆ ಹೇಳಿ ಮಾಡಿಸಿದ ಸ್ಥಳ ಎಂದರೆ ತಪ್ಪಾಗಲಾರದು.


PC:Pramod sj

ಗೋರೂರು ಡ್ಯಾಂ

ಗೋರೂರು ಡ್ಯಾಂ

ಈ ಸ್ಥಳದಲ್ಲಿ ಪರವಾಸುದೇವ ಮತ್ತು ಯೋಗ ನರಸಿಂಹ ದೇವಾಲಯಗಳಿವೆ. ಈ ಸ್ಥಳದಲ್ಲಿ ನಿಮ್ಮ ಸಂಗಾತಿಯ ಜೊತೆ ಏಕಾಂತವಾಗಿ ಕಾಲ ಕಳೆಯಬಹುದಾಗಿದೆ. ಯಾವುದೇ ಜನಸಂದಣಿ ಇಲ್ಲಿ ಇರುವುದಿಲ್ಲ. ಹಾಗಾಗಿಯೇ ಈ ಗೋರೂರು ಡ್ಯಾಂಗೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

PC:PP Yoonus

ಶೆಟ್ಟಿ ಹಳ್ಳಿ ಚರ್ಚ್

ಶೆಟ್ಟಿ ಹಳ್ಳಿ ಚರ್ಚ್

ಶೆಟ್ಟಿ ಹಳ್ಳಿ ಚರ್ಚ್ ಸುಮಾರು 450 ವರ್ಷಗಳ ಇತಿಹಾಸವನ್ನು ಹೊಂದಿರುವ ಪ್ರಾಚೀನವಾದ ಕಟ್ಟಡವಾಗಿದೆ. ಈ ಚರ್ಚ್ ವಿಭಿನ್ನವಾದ ಗೋಥಿಕ್ ವಾಸ್ತುಶಿಲ್ಪವನ್ನು ಹೊಂದಿದೆ. ಹೇಮಾವತಿ ನದಿಯ ಹಿನ್ನೀರು ಚರ್ಚ್ ಅನ್ನು ಕೆಲವುಮ್ಮೆ ಮುಳುಗಿಸುತ್ತದೆ.

PC:Pramod sj

ಶೆಟ್ಟಿ ಹಳ್ಳಿ ಚರ್ಚ್

ಶೆಟ್ಟಿ ಹಳ್ಳಿ ಚರ್ಚ್

ಆದರೆ ಬೇಸಿಗೆಯ ಸಮಯದಲ್ಲಿ ನೀರು ಇರುವುದಿಲ್ಲ. ಹಾಗಾಗಿ ಬೇಸಿಗೆಯ ಸಮಯದಲ್ಲಿ ಒಮ್ಮೆ ಶೆಟ್ಟಿ ಚರ್ಚ್ ಹಳ್ಳಿಗೆ ಭೇಟಿ ನೀಡಬಹುದಾಗಿದೆ.

ಬಿಸಿಲೆ ಘಾಟ್ ಅಥವಾ ಅರಣ್ಯ ಪ್ರದೇಶ

ಬಿಸಿಲೆ ಘಾಟ್ ಅಥವಾ ಅರಣ್ಯ ಪ್ರದೇಶ

ಬಿಸಿಲೆ ಘಾಟ್ ರಿಸರ್ವ್ ಅರಣ್ಯ ಹಾಸನ ಜಿಲ್ಲೆಯ ಸಕಲೇಶ್ ಪುರ ತಾಲ್ಲೂಕಿನಲ್ಲಿದೆ. ಈ ಘಾಟ್‍ನ ಸೌಂದರ್ಯ ಅತ್ಯಂತ ಸುಂದರವಾಗಿದ್ದು, ಇದರ ನೈಸರ್ಗಿಕ ಸೊಬಗಿನಿಂದ ಪ್ರವಾಸಿಗರನ್ನು ಆರ್ಕಷಿಸುತ್ತದೆ. ಬಿಸಿಲೆ ಘಾಟ್ ಸಮೀಪದಲ್ಲಿ ಬಿಸಿಲೆ ಎಂಬ ಗ್ರಾಮ ಕೂಡ ಇದೆ.

PC:Manu gangadhar

ಬಿಸಿಲೆ ಘಾಟ್ ಅಥವಾ ಅರಣ್ಯ ಪ್ರದೇಶ

ಬಿಸಿಲೆ ಘಾಟ್ ಅಥವಾ ಅರಣ್ಯ ಪ್ರದೇಶ

ದಕ್ಷಿಣಕ್ಕೆ ಕೊಡಗು ಜಿಲ್ಲೆಯ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ ಮತ್ತು ಪಶ್ಚಿಮದಲ್ಲಿ ಕುಕ್ಕೆ ಸುಬ್ರಮಣ್ಯ ಸ್ವಾಮಿಯ ಅರಣ್ಯ ಪ್ರದೇಶವಿದೆ. ಟ್ರೆಕ್ಕಿಂಗ್ ಮಾಡುವ ಯುವಕರಿಗೆ ಇದೊಂದು ಅದ್ಭುತವಾದ ಸ್ಥಳವಾಗಲಿದೆ.


PC:Ashwin Kumar

ಹಾಸನಾಂಬೆ ದೇವಾಲಯ

ಹಾಸನಾಂಬೆ ದೇವಾಲಯ

ಹಾಸನಾಂಬ ದೇವಾಲಯವು ಸುಮಾರು 800 ವರ್ಷಗಳ ಪ್ರಾಚೀನವಾದ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಪಾರ್ವತಿ ಸ್ವರೂಪಿಣಿ ನೆಲೆಸಿದ್ದಾಳೆ. ಈ ದೇವಾಲಯದ ದೇವತೆಯು ಹಾಸನ ಜಿಲ್ಲೆಯ ಮುಖ್ಯ ದೇವತೆಯಾಗಿದ್ದಾಳೆ. ವಿಶೇಷವೆನೆಂದರೆ ವಾರದ ಎರಡೇ ದಿನಗಳ ಕಾಲ ಈ ದೇವಾಲಯದ ಗರ್ಭಗುಡಿ ತೆರೆಯುತ್ತಾರೆ.

ಹಾಸನಾಂಬೆ ದೇವಾಲಯ

ಹಾಸನಾಂಬೆ ದೇವಾಲಯ

ಇಲ್ಲಿನ ಆಶ್ಚರ್ಯ ಏನಪ್ಪ ಎಂದರೆ ವರ್ಷಕ್ಕೆ ಒಮ್ಮೆ ಈ ತಾಯಿಯ ಮುಂದೆ ನೀರು, ಅಕ್ಕಿಯ ಚೀಲ, ಒಂದು ದೀಪ ಹಚ್ಚಿ ಇಡುತ್ತಾರೆ. ಒಂದು ವರ್ಷದ ಸರಿಯಾಗಿ ತಾಯಿಯ ಬಾಗಿಲು ತೆರದೆರೆ ಅಕ್ಕಿ ಹಾಗು ದೀಪ ಉರಿಯುತ್ತಾ ಇರುತ್ತದೆ.

ವಸ್ತು ಸಂಗ್ರಹಾಲಯ(ಮ್ಯೂಸಿಯಂ)

ವಸ್ತು ಸಂಗ್ರಹಾಲಯ(ಮ್ಯೂಸಿಯಂ)

ಹಾಸನ ಜಿಲ್ಲೆಯಲ್ಲಿ ವಸ್ತು ಸಂಗ್ರಹಾಲಯವಿದೆ. ಇದನ್ನು 1977ರಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಪುರಾತತ್ವ ಶಾಸ್ತ್ರದ ಪ್ರಾಮುಖ್ಯತೆ ಹೊಂದಿರುವ ಪುರಾತನ ಸಂಗ್ರಹವನ್ನು ಇದು ಹೊಂದಿದೆ.

PC:Scott Liddell

ವಸ್ತು ಸಂಗ್ರಹಾಲಯ(ಮ್ಯೂಸಿಯಂ)

ವಸ್ತು ಸಂಗ್ರಹಾಲಯ(ಮ್ಯೂಸಿಯಂ)

ಇಲ್ಲಿ ಹಲವಾರು ವರ್ಣಚಿತ್ರಗಳು, ಶಿಲ್ಪಗಳು, ಶಾಸನಗಳು, ಶಸ್ತ್ರಾಸ್ತ್ರಗಳು ಮತ್ತು ನಾಣ್ಯಗಳ ದೊಡ್ಡ ಸಂಗ್ರಹಾಲಯವನ್ನು ಇಲ್ಲಿ ಕಾಣಬಹುದಾಗಿದೆ. ಇದು ಮಹಾರಾಜರ ಉದ್ಯಾನವನವಾಗಿದೆ.

PC:Donostiako Elizbarrutia

PC:

ತಲುಪುವ ಬಗೆ?

ತಲುಪುವ ಬಗೆ?

ರೈಲ್ವೆ ನಿಲ್ದಾಣ: ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಹಾಸನ ಜಂಗ್ಷನ್. ಇಲ್ಲಿಂದ ಸುಲಭವಾಗಿ ಈ ಪ್ರವಾಸಿ ತಾಣಗಳಿಗೆಲ್ಲಾ ಒಮ್ಮೆ ಭೇಟಿ ನೀಡಬಹುದಾಗಿದೆ.

ವಿಮಾನ ನಿಲ್ದಾಣ: ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮೈಸೂರು ವಿಮಾನ ನಿಲ್ದಾಣ. ಇಲ್ಲಿಂದ ಹಾಸನಕ್ಕೆ ಸುಮಾರು 136 ಕಿ.ಮೀ ದೂರದಲ್ಲಿದೆ.

ರಸ್ತೆ ಮಾರ್ಗವಾಗಿ: ಬೆಂಗಳೂರಿನಿಂದ ಹಾಸನಕ್ಕೆ ನೇರವಾದ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಸೌಕರ್ಯವಿದೆ.


PC:eric snopel

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ