Search
  • Follow NativePlanet
Share
» »2022ರ ಓಣಂ ಪ್ರಯುಕ್ತ : ಕೇರಳದ ಈ ಸ್ಥಳಗಳಿಗೆ ಭೇಟಿ ಕೊಟ್ಟು ಓಣಂ ಹಬ್ಬದ ಆಚರಣೆಗಳನ್ನು ವೀಕ್ಷಿಸಿ.

2022ರ ಓಣಂ ಪ್ರಯುಕ್ತ : ಕೇರಳದ ಈ ಸ್ಥಳಗಳಿಗೆ ಭೇಟಿ ಕೊಟ್ಟು ಓಣಂ ಹಬ್ಬದ ಆಚರಣೆಗಳನ್ನು ವೀಕ್ಷಿಸಿ.

ಭಾರತದ ಕೇರಳ ರಾಜ್ಯದ ಅತ್ಯಂತ ದೊಡ್ಡ ಹಬ್ಬ ಓಣಂ ಇದು ಮಲೆಯಾಳಿ ತಿಂಗಳು ಚಿಂಗಮ್ (ಆಗಸ್ಟ್ - ಸೆಪ್ಟಂಬರ್) ನಲ್ಲಿ ಬೀಳುತ್ತದೆ. ಮತ್ತು ಈ ವರ್ಷ ಓಣಂ ಅನ್ನು ಆಗಸ್ಟ್ 30 ರಿಂದ ಸೆಪ್ಟೆಂಬರ್ 8 ರ ವರೆಗೆ ಆಚರಿಸಲಾಗುತ್ತಿದೆ. ದೀಪಗಳು, ಸಂತೋಷ ಮತ್ತು ಆಚರಣೆಗಳನ್ನು ಒಳಗೊಂಡ ಓಣಂ ಹತ್ತು ದಿನಗಳವರೆಗೆ ಆಚರಿಸಲಾಗುವ ಹಬ್ಬವಾಗಿದ್ದು, ಮಹಾಬಲಿ ಚಕ್ರವರ್ತಿಯನ್ನು ಮನೆಗಳಿಗೆ ಆಹ್ವಾನಿಸುವ ಸಂಕೇತವಾಗಿ ಆಚರಿಸುವ ಹಬ್ಬ ಹಾಗೂ ಇದನ್ನು ದೇವರ ಸ್ವಂತ ನಾಡು ಎಂದೇ ಪ್ರಸಿದ್ದಿಯನ್ನು ಪಡೆದ ಕೇರಳದ ವಾರ್ಷಿಕ ಸುಗ್ಗಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ.

ಈ ಪವಿತ್ರ ಓಣಂ ನ ಹತ್ತು ದಿವಸಗಳನ್ನು ಆಥಂ, ಚೈತಿರ, ಚೋಡಿ, ವೈಶಾಕಂ, ಅನಿಝ್ಹಮ್, ತ್ರಿಕೇಟ, ಮೂಲಂ, ಪೂರದಮ್, ಉತ್ರಾದಮ್, ಮತ್ತು ತಿರುವೊಣಂ ಎಂದು ಹೆಸರಿಸಲಾಗುತ್ತದೆ. ಇವುಗಳು ಮಲೆಯಾಳಿ ಸಂಸ್ಕೃತಿ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುವ ಹಬ್ಬವಾಗಿದೆ.

ಇಲ್ಲಿ ಒಣಂ ಆಚರಣೆಯನ್ನು ನೋಡಬಹುದಾದಂತಹ ಕೆಲವು ಸ್ಥಳಗಳ ಪಟ್ಟಿ ಮಾಡಲಾಗಿದೆ

ತಿರುವನಂತಪುರಂ (ಅಥವಾ ತ್ರಿವೇಂಡ್ರಂ )

ತಿರುವನಂತಪುರಂ (ಅಥವಾ ತ್ರಿವೇಂಡ್ರಂ )

ದೇವರ ಸ್ವಂತ ದೇಶವೆಂದು ಕರೆಯಲ್ಪಡುವ ಕೇರಳದ ರಾಜಧಾನಿಯಾದ ತ್ರಿವೆಂಡ್ರಮ್ ಸ್ವತ

ಒಂದು ಹಬ್ಬದ ವಾತಾವರಣವನ್ನು ತನ್ನಲ್ಲಿ ಹೊಂದುತ್ತಾ ಅತ್ಯಂತ ಸುಂದರವಾಗಿ ಕಾಣುತ್ತದೆ. ಈ ಸಮಯದಲ್ಲಿ ಎಲ್ಲಾ ಮನೆಗಳಲ್ಲಿಯೂ ದೀಪಗಳಿಂದ ಬೆಳಗಲಾಗುತ್ತದೆ, ರಸ್ತೆಗಳು ಬಣ್ಣ ಬಣ್ಣಗಳಿಂದ ಅಲಂಕೃತವಾಗಿರುತ್ತವೆ ಮತ್ತು ಜನರು ಸಂತೋಷ ಹಾಗೂ ಸಡಗರದಿಂದ ಓಡಾಡುತ್ತಾ ಇರುವುದನ್ನು ಕಾಣುತ್ತಾ ಹಬ್ಬದ ಸಂಭ್ರಮವನ್ನು ಎಲ್ಲೆಡೆ ಕಾಣಬಹುದಾಗಿದೆ. ಈ ನಗರದ ಬೀದಿಗಳಲ್ಲಿ ನಡೆದಾಡಿದರೆ ಸಾಕು ನೀವು ಕೇರಳದ ಸಂಕ್ಕೃತಿಯನ್ನು ಹತ್ತಿರದಿಂದ ಮತ್ತು ಹೆಚ್ಚು ವಿವರವಾಗಿ ಗಮನಿಸಬಹುದು. ಅಷ್ಟೇ ಅಲ್ಲ ಇಲ್ಲಿಯ ಇನ್ನಿತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬಗಳು ಒಂದು ಸ್ಥಳದಲ್ಲಿ ನಡೆಯುವುದನ್ನೂ ನೋಡಬಹುದಾಗಿದೆ.

ಪಲಕ್ಕಾಡ್

ಪಲಕ್ಕಾಡ್

ಓಣಂ ಸಮಯದಲ್ಲಿ ನಡೆಯುವ ವಿಶೇಷ ಕುಸ್ತಿ ಕ್ರೀಡೆಯನ್ನು ಓಣತಲ್ಲು ಎಂದು ಕರೆಯಲಾಗುತ್ತದೆ, ಇದು ಬಹಳ ಪ್ರಸಿದ್ಧವಾಗಿದೆ ಮತ್ತು ಮಧ್ಯ-ಉತ್ತರ ಕೇರಳದಲ್ಲಿ ವರ್ಷಗಳಿಂದ ಅಭ್ಯಾಸ ಮಾಡಲಾಗುತ್ತಿದೆ. ಈ ಜನಪ್ರಿಯ ಸಮಾರಂಭದಲ್ಲಿ, ಇಬ್ಬರು ಸ್ಪರ್ಧಿಗಳು ಭಾಗವಹಿಸುತ್ತಾರೆ ಮತ್ತು ಪರಸ್ಪರ ಕುಸ್ತಿಯಾಡುತ್ತಾರೆ. ಓಣಂನ ಅದ್ದೂರಿ ಊಟದ ನಂತರ ಮಧ್ಯಾಹ್ನ ಓಣತಲ್ಲು ನಡೆಯುತ್ತದೆ.

ಕನ್ನೂರ್

ಕನ್ನೂರ್

ಪೂಜೆಯ ಒಂದು ಜನಪ್ರಿಯ ರೂಪವಾದ ತೆಯ್ಯಮ್ ಇದು ಕೇರಳ ರಾಜ್ಯದ ಉತ್ತರ ಮಲಬಾರ್ ಪ್ರದೇಶದಲ್ಲಿ ಆಚರಿಸಲಾಗುತ್ತದೆ. ತೆಯ್ಯಂ ಈ ಹಬ್ಬವನ್ನು ಕೆಳವರ್ಗದ ಸಮುದಾಯದ ಜನರು ಆಚರಿಸುತ್ತಾರೆ ಹಾಗೂ ಸಾರ್ವಜನಿಕರು ತೆಯ್ಯಮ್ ಅನ್ನು ದೇವರೆಂದು ಪರಿಗಣಿಸಿ ಆಶೀರ್ವಾದವನ್ನು ಪಡೆಯಬಯಸುತ್ತಾರೆ. ಈ ಪ್ರದೇಶದಲ್ಲಿ 'ಓಣಪೊಟ್ಟನ್' ಎಂದು ಕರೆಯಲ್ಪಡುವ ಇನ್ನೊಂದು ಪರಿಕಲ್ಪನೆಯೂ ಇದೆ. ಅದ್ಭುತವಾದ ಓಣಂನ ವಿಭಿನ್ನ ರೂಪಗಳು ಮತ್ತು ಪರಿಕಲ್ಪನೆಗಳಿಗೆ ಸಾಕ್ಷಿಯಾಗಲು ಈ ಪ್ರದೇಶಗಳಿಗೆ ಭೇಟಿ ಕೊಡಿ.

ತ್ರಿಶೂರ್

ತ್ರಿಶೂರ್

ಓಣಂನ ಒಂದು ವಿಭಿನ್ನ ಶೈಲಿ ಮತ್ತು ಹಬ್ಬದ ಸೆಳೆತವನ್ನು ಅನುಭವಿಸಬೇಕಾದಲ್ಲಿ ತ್ರಿಶೂರ್ ಗೆ ಭೇಟಿ ಕೊಡಿ ಇಲ್ಲಿ ನೂರಾರು ಜನ ಪುರುಷರು ಹುಲಿಯ ಹಾಗೆ ವೇಷ ಹಾಕಿಕೊಂಡು ನೃತ್ಯ ಮಾಡುವುದನ್ನು ಕಾಣಬಹುದಾಗಿದೆ. ಇದು ತ್ರಿಶೂರ್‌ನ ಸ್ವರಾಜ್ ರೌಂಡ್‌ನಲ್ಲಿ ನಡೆಯುತ್ತದೆ, ಇದು ಓಣಂ ಸಮಯದಲ್ಲಿ ಭೇಟಿ ಕೊಡಲು ತಪ್ಪದೇ ಇರುವ ಸ್ಥಳವಾಗಿದೆ.

ಅಲ್ಲೆಪ್ಪೀ

ಅಲ್ಲೆಪ್ಪೀ

ಕೇರಳದ ಹಿನ್ನೀರಿನಲ್ಲಿರುವ ಸುಂದರವಾದ ಹೌಸ್ ಬೋಟ್ ಗಳಲ್ಲಿ ಓಣಂ ಆಚರಿಸುವ ಒಂದು ಆಯ್ಕೆಯೂ ಇದ್ದು, ಇದು ನಿಮ್ಮನ್ನು ಸ್ಥಳೀಯ ಜೀವನ, ಆಹಾರ, ಮತ್ತು ಇಲ್ಲಿಯ ಜನರು ಹತ್ತು ದಿನಗಳ ಪವಿತ್ರ ಓಣಂ ಹಬ್ಬವನ್ನು ಹೇಗೆ ಆಚರಿಸುತ್ತಾರೆ ಎನ್ನುವ ವಿಷಯಕ್ಕೆ ನಿಮ್ಮನ್ನು ಸಂಪರ್ಕಿಸುತ್ತದೆ. ಆದ್ದರಿಂದ ನೀವು ಎಲ್ಲೆಡೆ ಪ್ರಕೃತಿಯಿಂದ ಆವರಿಸಿರುವ ಅಲೆಪ್ಪಿಯನ್ನು ಈ ವಾರ್ಷಿಕ ಹಬ್ಬವನ್ನು ಆಚರಿಸುವ ಸಮಯದಲ್ಲಿ ಭೇಟಿ ಕೊಡಲೇ ಬೇಕು

ಎರ್ನಾಕುಲಂ

ಎರ್ನಾಕುಲಂ

ಸುಪ್ರಸಿದ್ಧ ಅಥಾಚಮಯಂ ಹಬ್ಬದ ಆಚರಣೆಯೊಂದಿಗೆ, ಓಣಂ ಎರ್ನಾಕುಲಂಗೆ ಭೇಟಿ ನೀಡಲು ಉತ್ತಮ ಸಮಯವಾಗಿದ್ದು, ಎರ್ನಾಕುಲಂಗೆ ಅತ್ಯಂತ ಸಮೀಪದಲ್ಲಿರುವ ತ್ರಿಪ್ಪುನಿತುರಾದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಬೃಹತ್ ಬೀದಿ ಮೆರವಣಿಗೆ, ಸಾಂಪ್ರದಾಯಿಕ ಪ್ರದರ್ಶನಗಳು, ಸಂಗೀತಗಾರರು ಮತ್ತು ಕೇರಳದ ಸಾಂಪ್ರದಾಯಿಕ ಕಲಾಕೃತಿಗಳು ಇತ್ಯಾದಿಗಳನ್ನು ಈ ಹಬ್ಬದ ಸಮಯದಲ್ಲಿ ಇಲ್ಲಿ ಪ್ರದರ್ಶಿಸಲಾಗುತ್ತದೆ.

Read more about: onam kerala ಓಣಂ ಕೇರಳ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X