
ಪಿನ್ ಭಾಬಾ ಪಾಸ್ ಚಾರಣ, ಚಾರಣಿಗರು ಹಚ್ಚ ಹಸಿರಿನ ಪರ್ವತಗಳು ಮತ್ತು ಬಂಜರು ಭೂಮಿಯನ್ನು ವೀಕ್ಷಿಸುವ ಕೆಲವು ಟ್ರೆಕ್‌ಗಳಲ್ಲಿ ಒಂದಾಗಿದೆ. ಪಿನ್ ಭಾಬಾ ಪಾಸ್ ದಟ್ಟ ಕಾಡುಗಳ ಮೇಲೆ ಅಡ್ಡಲಾಗಿರುತ್ತದೆ ಇದು 16,125 ಫೀಟ್ಎತ್ತರದಲ್ಲಿದೆ.
ಎಲ್ಲಿದೆ ಈ ಭಾಬಾ ಪಾಸ್
ಹಿಮಾಚಲ ಪ್ರದೇಶದ ಕಿನ್ನೌರ್ ಮತ್ತು ಸ್ಪಿತಿ ಕಣಿವೆಗಳ ನಡುವೆ ಇದೆ ಭಾಬಾ ಪಾಸ್. ಈ ದಾರಿಯನ್ನು ಸ್ಥಳೀಯ ಕುರುಬರು ಆಗಾಗ್ಗೆ ಬಳಸುತ್ತಾರೆ.
ಕಾಫ್ನುದಿಂದ ಪ್ರಾರಂಭವಾಗುತ್ತದೆ
ಭಾಬಾ ಪಾಸ್ ಟ್ರೆಕ್ ಕಿನ್ನೌರ್ ಹಸಿರು ಮತ್ತು ಸ್ಪಿತಿ ಕಣಿವೆಯ ಬಂಜರು ಎತ್ತರದ ಮರುಭೂಮಿಗಳನ್ನು ಸಂಯೋಜಿಸುತ್ತದೆ. ಕಿನ್ನೌರ್ ಕಣಿವೆಯಲ್ಲಿರುವ ಕಾಫ್ನುದಿಂದ ಈ ಟ್ರೆಕ್ ಪ್ರಾರಂಭವಾಗುತ್ತದೆ ಮತ್ತು ಭಾಬ ನದಿ ತೀರದಲ್ಲಿ ಹಚ್ಚ ಹಸಿರಿನ ಹುಲ್ಲುಗಾವಲುಗಳು ಮತ್ತು ಮೇಯಿಸುವಿಕೆ ಕ್ಷೇತ್ರಗಳ ಮೂಲಕ ಹಾದುಹೋಗುತ್ತದೆ.
ಕ್ಯಾಂಪಿಂಗ್ ಮಾಡಬಹುದು
ಅತಿಥಿ ಗೃಹಗಳು ಎಲ್ಲಾ ಸ್ಥಳಗಳಿಗೆ ಲಭ್ಯವಿದೆ. ನೈಸರ್ಗಿಕ ಸೌಂದರ್ಯದ ಕಾರಣದಿಂದಾಗಿ ಟ್ರೆಕ್ಕಿಂಗ್ ಮಾಡುವವರು ಸಹ ಕ್ಯಾಂಪಿಂಗ್ ಅನ್ನು ಅಳವಡಿಸಿಕೊಳ್ಳಬಹುದು. ಮಾರ್ಗದಲ್ಲಿ ಅತಿಥಿ ಮನೆಗಳಲ್ಲಿ ನೀರು ಲಭ್ಯವಿದೆ. ಮರುಬಳಕೆ ಆಯ್ಕೆಯು ಲಭ್ಯವಿದ್ದಾಗ ಸಮಂಜಸವಾದ ಪ್ರಮಾಣದಲ್ಲಿ ನೀರನ್ನು ತುಂಬಿಸಿಕೊಳ್ಳುವುದು ಉತ್ತಮ.
ಬೆಚ್ಚಗಿನ ಬಟ್ಟೆಗಳು
ನೀವು ಪ್ರಯಾಣಿಸುತ್ತಿದ್ದ ಯಾವುದೇ ಸಮಯದಲ್ಲಿ ನೀವು ಬೆಚ್ಚಗಿನ ಬಟ್ಟೆಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ನಿಮ್ಮ ಟ್ರೆಕ್ಕಿಂಗ್ ಗೇರ್ ಮತ್ತು ಸಲಕರಣೆಗಳೊಂದಿಗೆ ಯಾವಾಗಲೂ ಸಿದ್ಧರಾಗಿರಿ. ನಿಮ್ಮ ಔಷಧಿಗಳನ್ನು ಮತ್ತು ಶೂಗಳನ್ನು ಅಗತ್ಯವಾಗಿ ಕೊಂಡೊಯ್ಯಲೇ ಬೇಕು. ಡಾಬಾಗಳುದಾರಿಯುದ್ದಕ್ಕೂ ಲಭ್ಯವಿದೆ. ಆದರೆ ನಿವು ಚಾರಣ ಪ್ರಾರಂಭಿಸಿದ ನಂತರ ಅವಶ್ಯಕವಿರುವ ಆಹಾರಗಳನ್ನು ಕೊಂಡೊಯ್ಯುವುದು ಅಗತ್ಯ.
ಪರವಾನಗಿ ಪಡೆದುಕೊಳ್ಳಿ
ಈ ಪ್ರದೇಶದ ಟ್ರೆಕ್ಕಿಂಗ್‌ಗಾಗಿ ಮುಂಚಿತವಾಗಿ ಎಲ್ಲ ಪರವಾನಗಿಗಳನ್ನು ನೀವು ಪಡೆದುಕೊಳ್ಳಬೇಕು. ಪ್ರತಿ ಕ್ಷಣದಲ್ಲಿ ಹವಾಮಾನ ಎತ್ತರದಲ್ಲೂ ಎತ್ತರದ ಬದಲಾಗುತ್ತಾ ಇರುತ್ತದೆ. ನಿಮ್ಮ ಜೊತೆ ವೃತ್ತಿಪರ ಮಾರ್ಗದರ್ಶಿಯನ್ನು ಕೊಂಡ್ಯೊಯ್ಯಿರಿ. ಕ್ಯಾಮೆರಾಕ್ಕೆ ಚಾರ್ಜ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ಎಕ್ಸ್‌ಟ್ರಾ ಬ್ಯಾಟರಿಯನ್ನು ಕೊಂಡೊಯ್ಯಿರಿ.
ಯಾವಾಗ ಭೇಟಿ ನೀಡುವುದು ಸೂಕ್ತ
ಭಾಬ ಪಾಸ್ ಅನ್ನು ಮೇ ಮತ್ತು ಅಕ್ಟೋಬರ್ ನಡುವಿನ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಟ್ರೆಕ್ಕಿಂಗ್ ಮಾಡಬಹುದು. ಆದರೆ ಜೂನ್ ನಿಂದ ಆಗಸ್ಟ್ ವರೆಗಿನ ಮಾನ್ಸೂನ್ ಅವಧಿಯ ನಂತರ ಉತ್ತಮವಾಗಿದೆ. ಮಾನ್ಸೂನ್ ಮಳೆಗಾಲದಲ್ಲಿಚಾರಣದ ಹಾದಿಗಳು ಜಾರುತ್ತದೆ.
ತಲುಪುವುದು ಹೇಗೆ?
ರೈಲು: ದೆಹಲಿನಿಂದ ಪಠಾನ್ಕೋಟ್‌ವರೆಗೆ ಪ್ರತಿ ಗಂಟೆಗೂ ರೈಲುಗಳು ಇವೆ. ಹೊಸದಿಲ್ಲಿ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 8:50 ಕ್ಕೆ ಹೊರಟು, 4:20 ಕ್ಕೆ ಪಠಾನ್ಕೋಟ್ ತಲುಪುತ್ತದೆ. ಪಠಾನ್ಕೋಟ್‌ನಿಂದ ಶಿಮ್ಲಾಕ್ಕೆ ಬಸ್ ತೆಗೆದುಕೊಳ್ಳಿ. ಶಿಮ್ಲಾದಿಂದ ರಾಂಪುರ್‌ಗೆ ಬಸ್ ತೆಗೆದುಕೊಳ್ಳಿ. ನಂತರ ಟ್ಯಾಕ್ಸಿ ಅನ್ನು ಕಾಫ್ನುಗೆ ಬಾಡಿಗೆ ಪಡೆದುಕೊಳ್ಳಿ.
ರಸ್ತೆ: ಕಾಫ್ನುಗೆ ದೆಹಲಿಯಿಂದ ಕಾಪ್ನುಗೆ 560 ಕಿ.ಮೀ.ದೂರವಿದೆ. ಇಲ್ಲಿಗೆ ಬಸ್ ವ್ಯವಸ್ಥೆ ಇದೆ.