Search
  • Follow NativePlanet
Share
» »ಬಾಲ, ತರುಣ, ಸನ್ಯಾಸಿ ಶಿವನಿರುವ ಸ್ಥಳ!

ಬಾಲ, ತರುಣ, ಸನ್ಯಾಸಿ ಶಿವನಿರುವ ಸ್ಥಳ!

By Vijay

ಆದಿ ಶಂಕರರು ಭಜಗೋವಿಂದಂನಲ್ಲೊಂದು ಕಡೆ ಹೀಗೆ ವಿವರಿಸುತ್ತಾರೆ, "ಬಾಲಸ್ತಾವತ್ ಕ್ರೀಡಾಸಕ್ತಃ, ತರುಣಸ್ತಾವತ್ ತರುಣಿ ಸಕ್ತಃ, ವೃದ್ಧಸ್ತಾವತ್ ಚಿಂತಾ ಸಕ್ತಃ.... ". ಅಂದರೆ ಮನುಷ್ಯನು ಬಾಲ್ಯಾವಸ್ಥೆಯಲ್ಲಿ ತುಂಟುತನ, ಮೋಜು, ಆಟ ಮುಂತಾದ ವಿಚಾರಗಳಲ್ಲೆ ಬಲು ಆಸಕ್ತನಾಗಿರುತ್ತಾನೆ. ಯೌವ್ವನದಿ ಸ್ತ್ರೀತನದ ಆಕರ್ಷಣೆಗೊಳಗಾಗು, ಮದುವೆಯಾಗಿ ಭೋಗಾದಿಗಳನ್ನು ಅನುಭವಿಸುತ್ತಾನೆ.

ಕೊನೆಗೆ, ವೃದ್ಧಾಪ್ಯದಲ್ಲಿ ವೈರಾಗ್ಯ ಭಾವ ತಾಳುತ್ತ ಭಗವತ್ ಚಿಂತನೆಯಲ್ಲಿ ತೊಡಗುತ್ತಾನೆ. ಜೀವನದ ಈ ಘಟ್ಟಗಳನ್ನು ಮನುಷ್ಯನಾದವನು ಅನುಭವಿಸುವುದು ಸಾಮಾನ್ಯ. ಆದರೆ ಇದೇ ರೀತಿಯಲ್ಲಿ ದೇವರ ವಿವಿಧ ಘಟ್ಟಗಳನ್ನು ಪರಿಚಯಿಸುವ ದೇವಾಲಯಗಳು ಪ್ರಸಿದ್ಧ ಪ್ರವಾಸಿ ತಾಣವೊಂದರಲ್ಲಿದೆ ಎಂದು ನಿಮಗೆ ಗೊತ್ತೆ? ಆ ಪ್ರವಾಸಿ ತಾಣವು ಬೆಂಗಳೂರಿಗೆ ಬಹು ಹತ್ತಿರದಲ್ಲಿರುವುದಲ್ಲದೆ ಮೊದಲಿನಿಂದಲೂ ಬೆಂಗಳೂರಿಗರ ಬಲು ನೆಚ್ಚಿನ ತಾಣವಾಗಿ ಗಮನಸೆಳೆಯುತ್ತದೆ. ಇಲ್ಲಿ ಅದೆಷ್ಟೊ ಚಿತ್ರಗಳ ಚಿತ್ರೀಕರಣಗಳೂ ಸಹ ನಡೆದಿವೆ. ಹಾಗಾದರೆ ಆ ತಾಣ ಹಾಗೂ ಅಲ್ಲಿರುವ ಈ ದೇವಾಲಯಗಳ ಕುರಿತು ಈ ಲೇಖನದ ಮೂಲಕ ತಿಳಿಯಿರಿ.

ಪ್ರಮುಖ

ಪ್ರಮುಖ

ನಿಮಗೆಲ್ಲ ಪ್ರಾಯಶಃ ಗೊತ್ತಿರುವಂತೆ ತಮಿಳುನಾಡಿನಲ್ಲೆ ಹೇಗೆ ಚೋಳರ ವಾಸ್ತುಶೈಲಿಯು ಪ್ರಬುದ್ಧವಾಗಿ ಎಲ್ಲೆಡೆ ಗಮನಸೆಳೆಯುತ್ತದೊ ಅದೆ ರೀತಿಯಲ್ಲಿ ಕರ್ನಾಟಕವು ದ್ರಾವಿಡ ವಾಸ್ತುಶೈಲಿಗೆ ಹೆಚ್ಚಿನ ಆಶ್ರಯ ಒದಗಿಸಿದೆ ಎಂದು. ಅಂತಹ ಒಂದು ಪ್ರಖ್ಯಾತ ಬೆಟ್ಟ ತಾಣವು ತನ್ನಲ್ಲಿರುವ ಅದ್ಭುತ ದ್ರಾವಿಡಶೈಲಿಯ ದೇವಾಲಯಗಳಿಂದ ಗಮನಸೆಳೆಯುತ್ತದೆ. ಇದು ಮೊದಲೆ ಅದ್ಭುತ ಬೆಟ್ಟ ತಾಣ. ಆದಾಗ್ಯೂ ಧಾರ್ಮಿಕ ಮಹತ್ವವೂ ಪಡೆದಿದೆ.

ಚಿತ್ರಕೃಪೆ: Jnanaranjan sahu

ವಾಸ್ತುಶೈಲಿ

ವಾಸ್ತುಶೈಲಿ

ನಿಮಗೆ ಗೊತ್ತೆ, ಈ ತಾಣದಲ್ಲಿರುವ ದೇವಾಲಯಗಳು ದ್ರಾವಿಡ ಶೈಲಿಯ ದೇವಾಲಯಗಳಲ್ಲೆ ಅದರಲ್ಲೂ ಕರ್ನಾಟಕದ ಮಟ್ಟಿಗೆ ಅತ್ಯಂತ ಉತ್ತಮವಾದ ದ್ರಾವಿಡ ವಾಸ್ತುಶೈಲಿ ಹಾಗೂ ಅದ್ಭುತ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ ಎಂದು. ಈ ಅಂಶಕ್ಕೆ ಸಾಕಷ್ಟು ಇತಿಹಾಸಕಾರರು ಒಪ್ಪುತ್ತಾರೆ.

ಚಿತ್ರಕೃಪೆ: Bikashrd

ನಿರಾಸೆಯಾಗದು

ನಿರಾಸೆಯಾಗದು

ಅಂದರೆ ನಿಮಗೆ ದ್ರಾವಿಡ ವಾಸ್ತುಅಶೈಲಿಯ ಮಹೋನ್ನತ ಅಂಶಗಳನ್ನು, ಶ್ರೀಮಂತಿಕೆಯನ್ನು ನೋಡಬೇಕೆಂಬ ಬಯಕೆಯಿದ್ದಲ್ಲಿ, ಈ ತಾಣಕ್ಕೊಮ್ಮೆ ಭೇಟಿ ನೀಡಬಹುದು. ನೆನಪಿರಲಿ ಕೇವಲ ಐತಿಹಾಸಿಕ ಪ್ರವಾಸ ಇದಾಗುವುದೆಂದು ಮಾತ್ರ ಅಂದುಕೊಳ್ಳಬೇಡಿ.

ಚಿತ್ರಕೃಪೆ: Bikashrd

ರೋಮಾಂಚಕ

ರೋಮಾಂಚಕ

ಇದೊಂದು "ಥ್ರೀ ಇನ್ ಒನ್" ತಾಣ. ಅಂದರೆ ಅದ್ಭುತ ಪ್ರಾಕೃತಿಕ ಸಂಪತ್ತು ಹೊಂದಿರುವ ಚಾರಣಯೋಗ್ಯ ಸ್ಥಳ, ಧಾರ್ಮಿಕವಾಗಿ ಮಹತ್ವ ಪಡೆದಿರುವ ಕ್ಷೇತ್ರ ಹಾಗೂ ಅತಿಹಾಸಿಕವಾಗಿ ಆಕರ್ಷಿಸುವ ತಾಣವಾಗಿರುವುದರಿಂದ ಈ ತಾಣದ ಭೇಟಿ ನಿಮ್ಮ ಮನದಲ್ಲಿ ಸ್ಥಿರವಾಗಿ ಉಳಿಯಬಹುದು.

ಚಿತ್ರಕೃಪೆ: abhishekwanderer

ಐದು ಸಾಮ್ರಾಜ್ಯಗಳು

ಐದು ಸಾಮ್ರಾಜ್ಯಗಳು

ಅಲ್ಲದೆ ಇಲ್ಲಿನ ದೇವಾಲಯಗಳ ನಿರ್ಮಾಣದಲ್ಲಿ ಕಾಲದ ವಿವಿಧ ಸ್ತರಗಳಲ್ಲಿ ಐದು ಸಾಮ್ರಾಜ್ಯಗಳು ತಮ್ಮ ಕೊಡುಗೆಗಳನ್ನು ಸಲ್ಲಿಸಿವೆ ಎಂದರೆ ಅಚ್ಚರಿಯಾಗದೆ ಇರಲಾರದು. ಏಕೆಂದರೆ ವಿವಿಧ ಸಾಮ್ರಾಜ್ಯಗಳ ವಿವಿಧ ಸಮಯದಲ್ಲಿ ವಾಸ್ತುಶೈಲಿಯ ವಿಚಾರದಲ್ಲಿ ಯಾವುದೆ ರಾಜಿ ಮಾಡಿಕೊಳ್ಳಲಾಗಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Nikhil.kawale

ಬಲು ಪ್ರಖ್ಯಾತಿ

ಬಲು ಪ್ರಖ್ಯಾತಿ

ಮೂಲತಃ ಇದೊಂದು ಗಿರಿ ಪ್ರದೇಶವಾಗಿದ್ದು, ಆ ಗಿರಿಯ ಬುಡದಲ್ಲಿ ಎರಡು ದೇವಾಲಯಗಳಿದ್ದು ಗಿರಿಯ ಮೇಲೆ ಇನ್ನೊಂದು ದೇವಾಲಯವಿದೆ. ಈ ಮೂರೂ ದೇವಾಲಯಗಳು ಶಿವನಿಗೆ ಮುಡಿಪಾಗಿದ್ದು ಶಿವನ ಬಾಲ್ಯ, ಗ್ರಹಸ್ಥ ಹಾಗೂ ಸನ್ಯಾಸತ್ವದ ಭಾವವನ್ನು ಸೂಚಿಸುವ ದೇವಾಲಯಗಳಾಗಿ ಭಕ್ತರನ್ನು ಆಕರ್ಷಿಸುತ್ತವೆ.

ಚಿತ್ರಕೃಪೆ: Vinodtiwari2608

ಅದ್ಭುತ ಸೂರ್ಯೋದಯ

ಅದ್ಭುತ ಸೂರ್ಯೋದಯ

ಬೆಂಗಳೂರು ಬಳಿ ಇರುವ ಈ ತಾಣವು ವಾರಾಂತ್ಯದ ರಜೆ ಕಳೆಯಲು, ಪಿಕ್ನಿಕ್ ಅಥವಾ ಹಾಗೆ ಒಂದು ಸುತ್ತು ಹೊಡೆಯಲು ಹೇಳಿಮಾಡಿಸಿದಂತಿದೆ. ಒಂದೊಮ್ಮೆ ಇಲ್ಲಿ ಪ್ಯಾರಾಗ್ಲೈಡಿಂಗ್ ಮಾಡಲಾಗುತ್ತಿತ್ತು. ಇಲ್ಲಿ ಎರಡು ನದಿಗಳ ಮೂಲವು ಇದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ತಾಣವು ಸೂರ್ಯೋದಯದ ದೃಶ್ಯಕ್ಕೆ ನಿಜಕ್ಕೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Surajpandey86

ಊಹೆ ಮಾಡಿ ನೋಡಿ

ಊಹೆ ಮಾಡಿ ನೋಡಿ

ನಿಮಗೆ ಈಗಾಗಲೆ ಗೊತ್ತಾಗಿರ ಬೇಕಲ್ಲವೆ, ಯಾವುದೀ ತಾಣವೆಂದು? ಹೌದು, ನೀವು ಊಹಿಸಿದ್ದು ನಿಜ. ಇದೆ ಪ್ರಸಿದ್ಧ ನಂದಿಗ್ರಾಮ. ನಂದಿ ಬೆಟ್ಟಗಳಿಗೆ ಹೆಸರುವಾಸಿಯಾದ ಬೆಂಗಳೂರು ಬಳಿ ಇರುವ ಅದ್ಭುತ ಪ್ರವಾಸಿ ಸ್ಥಳ. ಧಾರ್ಮಿಕವಾಗಿಯೂ ಸಾಕಷ್ಟು ಪ್ರಖ್ಯಾತಿಗಳಿಸಿದ ಕ್ಷೇತ್ರ.

ಚಿತ್ರಕೃಪೆ: commons.wikimedia

ಶಿವನಿಗೆ ಮುಡಿಪಾಗಿವೆ

ಶಿವನಿಗೆ ಮುಡಿಪಾಗಿವೆ

ಇಲ್ಲಿರುವ ಪ್ರಮುಖ ಮೂರು ದೇವಾಲಯಗಳೆಂದರೆ, ಅರುಣಾಚಲೇಶ್ವರ ದೇವಾಲಯ, ಭೋಗನಂದೀಶ್ವರ ದೇವಾಲಯ ಹಾಗೂ ಯೋಗನಂದೀಶ್ವರ ದೇವಾಲಯ. ಅರುಣಚಲೇಶ್ವರ ಶಿವನು ಬಾಲ್ಯಾವಸ್ಥೆಯ ಶಿವನನ್ನು ಸೂಚಿಸಿದರೆ, ಹೆಚ್ಚು ಜನಪ್ರೀಯವಾದ ಭೋಗನಂದೀಶ್ವರ ದೇವಾಲಯವು ಯೌವ್ವನ ಹಾಗೂ ಗೃಹಸ್ಥಾಶ್ರಮದ ಭೋಗಜೀವನದ ಸಂಕೇತವಾಗಿದೆ.

ಚಿತ್ರಕೃಪೆ: Bikashrd

ಬೆಟ್ಟದ ಮೇಲೊಂದು

ಬೆಟ್ಟದ ಮೇಲೊಂದು

ಇನ್ನೂ ಮೂರನೇಯದಾಗಿ ಸನ್ಯಾಸತ್ವದ ಮಹತ್ವ ಸಾರುವ ಯೋಗನಸಿಂಹನ ದೇವಾಲಯವಿದೆ. ಮೊದಲೆರಡು ದೇವಾಲಯಗಳು ಬೆಟ್ಟದ ಕೆಳಗಿದ್ದರೆ ಮೂರನೇಯ ಯೋಗನಂದೀಶ್ವರನ ದೇವಾಲಯವು ಗುಡ್ಡದ ಮೇಲೆ ಸ್ಥಿತವಿದೆ. ಮಿಕ್ಕಂತೆ ಉಮಾಮಹಏಶ್ವರ, ಗಣಪ ಹೀಗೆ ಕೆಲವು ಇತರೆ ದೇಗುಲಗಳೂ ಸಹ ಇಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Akshatha Inamdar

ಎರಡಡಿ ಎತ್ತರ

ಎರಡಡಿ ಎತ್ತರ

ಮೊದಲೆ ಹೇಳಿದ ಹಾಗೆ ಅರುಣಾಚಲೇಶ್ವರ ಹಾಗೂ ಭೋಗನಂದೀಶ್ವರರ ದೇವಾಲಯಗಳು ಬೆಟ್ಟದ ಕೆಳಗೆ ಒಂದೆ ಸಂಕೀರ್ಣದಲ್ಲಿ ಕಂದುಬರುತ್ತವೆ. ಅರುಣಾಚಲೇಶ್ವರನ ದೇವಾಲಯದಲ್ಲಿ ಎರಡು ಅಡಿಗಳಷ್ಟು ಎತ್ತರದ ಸಿಂಹಗಣಪತಿಯ ವಿಗ್ರಹವಿದ್ದು ಅದರ ಮುಂದೆ ನಂದಿಯನ್ನು ಕೆತ್ತಲಾಗಿರುವುದನ್ನು ಕಾಣಬಹುದು. ಹತ್ತನೇಯ ಶತಮಾನದಲ್ಲಿ ಗಂಗರಿಂದ ಈ ದೇವಾಲಯ ನಿರ್ಮಾಣವಾಗಿದೆ ಎಂದು ತಿಳಿದುಬರುತ್ತದೆ. ಸಾಂದರ್ಭಿಕ ಚಿತ್ರ. ಸಿಂಹ ರೂಪದ ಗಣೇಶ.

ಚಿತ್ರಕೃಪೆ: commons.wikimedia

ನಿರ್ಮಾಣ

ನಿರ್ಮಾಣ

ಅರುಣಾಚಲೇಶ್ವರ ದೇವಾಲಯದ ನಂತರ ಚಿಕ್ಕದಾದ ಇನ್ನೊಂದು ದೇವಾಲಯವಿದ್ದು ಇದೂ ಸಹ ಹತ್ತನೇಯ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಇದೆ ಉಮಾಮಹೇಶ್ವರ ದೇಗುಲ. ಶಿವ-ಪಾರ್ವತಿಯರ ವಿಗ್ರಗಳು ಇಲ್ಲಿದ್ದು ಅವರ ಮುಂದೆ ಚಿಕ್ಕ ಕಲ್ಯಾಣ ಮಂಟಪವಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: MADHURANTHAKAN JAGADEESAN

ಮುಖ್ಯ ದೇವಾಲಯ

ಮುಖ್ಯ ದೇವಾಲಯ

ಇದರ ನಂತರ ಇರುವುದೆ ಬಲು ಪ್ರಮುಖವಾದ ಭೋಗನಂದೀಶ್ವರನ ದೇಗುಲ. ಚೋಳರಿಂದ ನಿರ್ಮಿಸಲ್ಪಟ್ಟ ದೇವಾಲಯ ಇದಾಗಿದ್ದು ಶಿವನ ವಿಗ್ರಹವು ನೋಡಿದಾಕ್ಷಣದಲ್ಲೆ ಚುಂಬಕದಂತೆ ಆಕರ್ಷಿಸಿ ಬಿಡುತ್ತದೆ. ಭಕ್ತಿಯಿಂದ ಗಮನಿಸುವವರಿಗೆ ಆ ವಿಗ್ರಹದಲ್ಲಿರುವ ಕಳೆಯು ಸಾಕ್ಷಾತ್ ಶಿವನ ಉಪಸ್ಥಿತಿ ಅದರಲ್ಲಿದೆ ಎಂದು ಭಾಸವಾಗುತ್ತದೆ.

ಚಿತ್ರಕೃಪೆ: Dineshkannambadi

ಪ್ರತಿನಿಧಿಸುತ್ತದೆ

ಪ್ರತಿನಿಧಿಸುತ್ತದೆ

ಇದು ಯೌವ್ವನದ ಘಟ್ಟವನ್ನು ಸೂಚಿಸುವ ಶಿವನ ದೇವಾಲಯವಾಗಿದ್ದು ಸಕಲ ಭೋಗಗಳು ಈ ಘಟ್ಟದಲ್ಲಿ ಅನುಭವಿಸುವುದರ ಸಂಕೇತವಾಗಿ ಭೋಗನಂದೀಶ್ವರ ಎಂದು ಕರೆಯಲ್ಪಟ್ಟಿದೆ. ಹಲವು ಮುಖ್ಯ ಸಂಭ್ರಮಾಚರಣೆ ಹಾಗೂ ಉತ್ಸವಗಳನ್ನು ಇಲ್ಲಿ ಆಚರಿಸಲಾಗುತ್ತದೆ. ಅರುಣಾಚಲೇಶ್ವರ ದೇವಾಯ ಶಿಖರ.

ಚಿತ್ರಕೃಪೆ: Bikashrd

ಯಾವುದೆ ಆಚರಣೆಗಳಿಲ್ಲ!

ಯಾವುದೆ ಆಚರಣೆಗಳಿಲ್ಲ!

ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಬೆಟ್ಟದ ಮೇಲಿರುವ ಯೋಗನಂದೀಶ್ವರನ ದೇವಾಲಯದಲ್ಲಿ ಕೆಲವು ನಿರ್ದಿಷ್ಟವಾದ ಉತ್ಸವಗಳನ್ನು ಹೊರತುಪಡಿಸಿ ಯಾವುದೆ ರೀತಿಯ ಸಂಭ್ರಮಾಚರಣೆಯ ಉತ್ಸವಗಳು ಇಲ್ಲಿ ನಡೆಯುವುದಿಲ್ಲ. ಏಕೆಂದರೆ ಈ ಶಿವನು ವೈರಾಗ್ಯದ ಪ್ರತಿನಿಧಿಯಾಗಿದ್ದು ಸನ್ಯಾಸತ್ವದ ಮಹತ್ವ ಸಾರುವ ಪರಮೇಶ್ವರನಲ್ಲಿ ಒಂದಾಗುವ ಯೋಗನಂದೀಶ್ವರನಾಗಿ ಪೂಜಿಸಲ್ಪಡುತ್ತಾನೆ.

ಚಿತ್ರಕೃಪೆ: Bikashrd

ಶೃಂಗತೀರ್ಥ

ಶೃಂಗತೀರ್ಥ

ಭೋಗನಂದೀಶ್ವರನ ದೇವಾಲಯದಾವರಣದಲ್ಲಿ ಒಂದು ಆಕರ್ಷಕವಾದ ಕಲ್ಯಾಣಿಯೂ ಸಹ ಇರುವುದು ದೇವಾಲಯಕ್ಕೆ ಹೆಚ್ಚಿನ ಮೆರುಗನ್ನು ನೀಡಿದೆ. ಇದನ್ನು ಶೃಂಗತೀರ್ಥ ಎಂದು ಕರೆಯುತ್ತಾರೆ. ಪ್ರತೀಯಂತೆ ನಂದಿಯು ತನ್ನ ಶೃಂಗಗಳಿಂದ (ಕೋಡುಗಳು) ಭೂಮಿಯನ್ನು ಅಗೆದಾಗ ಗಂಗೆಯು ಉದ್ಭವಳಾದ ಕಾರಣ ಈ ತೀರ್ಥವನ್ನು ಶೃಂಗತೀರ್ಥ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Bikashrd

ಹಾಗಾಗಿ ಆ ಹೆಸರು!

ಹಾಗಾಗಿ ಆ ಹೆಸರು!

ಅಲ್ಲದೆ ಇನ್ನೊಂದು ದಂತಕಥೆಯ ಪ್ರಕಾರ, ಈ ಸ್ಥಳದಲ್ಲಿ ಶೃಂಗ ಮಹಾಮುನಿಗಳು ತಪಸ್ಸನ್ನಾಚರಿಸಿದ ಕಾರಣ ಇದಕ್ಕೆ ಶೃಂಗತೀರ್ಥ ಎಂಬ ಹೆಸರು ಬಂದಿದೆ. ಇನ್ನೊಂದು ಗಮನಿಸಬೆಕಾದ ಅಂಶಗವೆಂದರೆ ಇದು ಪಿನಾಕಿನಿ ನದಿಯ ಮೂಲ ಅಥವಾ ಉಗಮ ಸ್ಥಳವಾಗಿದೆ ಎನ್ನಲಾಗುತ್ತದೆ. ಕಡಪದಲ್ಲಿ ಹರಿದಿರುವ ಪಿನಾಕಿನಿ ನದಿ.

ಚಿತ್ರಕೃಪೆ: Nikesh.kumar44

ಮನಸೆಳೆಯುತ್ತದೆ

ಮನಸೆಳೆಯುತ್ತದೆ

ಶೃಂಗತೀರ್ಥ ಕಲ್ಯಾಣಿಯ ಸುತ್ತಮುತ್ತ ಹೆಲವು ಅತಿ ಸುಂದರ ಕೆತ್ತನೆಗಳಿರುವ ಸಾಕಷ್ಟು ಶಿಲ್ಪಕಲೆಗಳನ್ನು ನೋಡಬಹುದಾಗಿದೆ. ಇಂದು ಅವು ಅವಶೇಷಗಳ ರೂಪದಲ್ಲಿದ್ದರೂ ಸಹ ಅದರ ಮೇಲಿರುವ ಪ್ರಬುದ್ಧ ಕೆತ್ತನೆಗಳು ಅವುಗಳ ಗಾಂಭೀರ್ಯವನ್ನು ಮುಗ್ಧತೆಯಿಂದ ಅನಾವರಣಗೊಳಿಸುತ್ತವೆ. ಮಳೆಗಾಲದ ಸಮಯದಲ್ಲಿ ನಂದಿ ಬೆಟ್ಟ.

ಚಿತ್ರಕೃಪೆ: Patan Fayaz

ಗಮನಸೆಳೆಯುತ್ತವೆ

ಗಮನಸೆಳೆಯುತ್ತವೆ

ಇನ್ನುಳಿದಂತೆ ಕೆಲವು ಪ್ರವಾಸಿ ಆಕರ್ಷಣೆಗಳಾದ ಟಿಪ್ಪು ಡ್ರಾಪ್, ಟಿಪ್ಪು ಕೋಟೆ, ಸೂರ್ಯೋದಯ ವೀಕ್ಷಣಾಕೇಂದ್ರ ಮುಂತಾದವುಗಳು ಇಲ್ಲಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಚಿಕ್ಕಬಳ್ಳಾಪುರದಲ್ಲಿರುವ ನಂದಿಬೆಟ್ಟವು ಬೆಂಗಳೂರಿನಿಂದ 60 ಕಿ.ಮೀ ಗಳಷ್ಟು ದೂರವಿದ್ದು ಸುಲಭವಾಗಿ ತಲುಪಬಹುದಾಗಿದೆ. ಚಳಿಗಾಲದಲ್ಲಿ.

ಚಿತ್ರಕೃಪೆ: Gupteshwari Sahu

ಮಾರ್ಗಸೂಚಿ

ಮಾರ್ಗಸೂಚಿ

ಸಾಮಾನ್ಯವಾಗಿ ದೇವನಹಳ್ಳಿ ವಿಮಾನ ನಿಲ್ದಾಣದ ನಂತರ ರಾಷ್ಟ್ರೀಯ ಹೆದ್ದಾರಿ ಏಳರ ಮೇಲೆ ಎಡ ತಿರುವು ಪಡೆದು ನಂದಿಬೆಟ್ಟಕ್ಕೆ ತೆರಳಲಾಗುತ್ತದೆ. ಅಷ್ಟಕ್ಕೂ ರಸ್ತೆಯು ಮುಂದೆ "T" ಆಕಾರದ ಜಂಕ್ಷನ್ ಹೊಂದಿದ್ದು ಅದರ ಎಡಭಾಗವು ನೇರವಾಗಿ ನಂದಿಬೆಟ್ಟಕ್ಕೆ ಸಮ್ಪರ್ಕ ಕಲ್ಪಿಸಿದರೆ ಬಲ ತಿರುವು ನೇರವಾಗಿ ಭೋಗನಂದೀಶ್ವರನ ದೇವಾಲಯಕ್ಕೆ ಕರೆದೊಯ್ಯುತ್ತದೆ.

ಚಿತ್ರಕೃಪೆ: Shravan Kamath94

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X