Search
  • Follow NativePlanet
Share
» »ಭಾರತದ ಈ ದೇವಾಲಯಗಳಿಗೆ ಭೇಟಿ ಕೊಟ್ಟು ಜಗದೋದ್ದಾರಕ ವಿಷ್ಣುವಿನ ಕೃಪೆಗೆ ಪಾತ್ರರಾಗಿ!

ಭಾರತದ ಈ ದೇವಾಲಯಗಳಿಗೆ ಭೇಟಿ ಕೊಟ್ಟು ಜಗದೋದ್ದಾರಕ ವಿಷ್ಣುವಿನ ಕೃಪೆಗೆ ಪಾತ್ರರಾಗಿ!

ವಿಷ್ಣುವಿನ ಅವತಾರಗಳಲ್ಲೊಂದಾಗಿರುವ ಅನಂತದೇವರನ್ನು ಪೂಜಿಸಲಾಗುವ ಒಂದು ದಿನವೇ ಅನಂತ ಚತುರ್ದಶಿ ಎಂದು ಕರೆಯಲ್ಪಡುತ್ತದೆ. ಅನಂತ ಚತುರ್ದಶಿಯಂದು, ವಿಷ್ಣುವಿನ ಅನುಯಾಯಿಗಳು ಒಂದು ದಿನವಿಡೀ ಉಪವಾಸವಿದ್ದು ಪವಿತ್ರ ದಾರವನ್ನು ಪೂಜಾ ಸಮಯದಲ್ಲಿ ಕಟ್ಟಿ ಕೊಳ್ಳುತ್ತಾರೆ. ಈ ವರ್ಷ ಅನಂತ ಚತುರ್ದಶಿಯನ್ನು ಸೆಪ್ಟಂಬರ್ 9ರಂದು ಆಚರಿಸಲಾಗುವುದು.

ಅನಂತ ಚತುರ್ದಶಿಯಂದು ಎರಡು ಮಹತ್ವದ ಆಚರಣೆಗಳಿವೆ ಮೊದಲನೆಯದಾಗಿ ಗಣಪತಿ ವಿಸರ್ಜನೆ ಯಾಗಿದ್ದು ಅನಂತ ಚತುರ್ದಶಿಯಂದು ಗಣೇಶ ಹಬ್ಬವು ಕೊನೆಗೊಳ್ಳುತ್ತದೆ. ಗಣಪತಿಯ ಪ್ರತಿಷ್ಠಾಪಿತ ಮೂರ್ತಿಗಳನ್ನು ದೊಡ್ಡ ಮೆರವಣಿಗೆಯ ಮೂಲಕ ಸರೋವರದಲ್ಲಿ, ನದಿಗಳಲ್ಲಿ, ಅಥವಾ ಸಮುದ್ರದಲ್ಲಿ ಮುಳುಗಿಸಲು ಕೊಂಡೊಯ್ಯಲಾಗುತ್ತದೆ. ಈ ವರ್ಷ ವಿದಾಯ ಹೇಳುತ್ತಾ ಮುಂದಿನವರ್ಷ ಅಷ್ಟೇ ಉತ್ಸಾಹದಿಂದ ಆಚರಿಸುತ್ತೇವೆ ಎನ್ನುವ ಆಶ್ವಾಸನೆ ಹೊರುತ್ತಾ ಗಣೇಶನ ವಿಗ್ರಹವನ್ನು ವಿಸರ್ಜಿಸಲಾಗುತ್ತದೆ.

ಈ ವರ್ಷ ಅಂದರೆ 2022ರ ಅನಂತ ಚತುರ್ದಶಿಯ ಪ್ರಯುಕ್ತ ನೀವು ವಿಷ್ಣು ದೇವರು ಹಾಗೂ ಅವರ ಅವತಾರಗಳಿಗೆ ಅರ್ಪಿತವಾದ ಪ್ರಸಿದ್ದ ದೇವಾಲಯಗಳಿಗೆ ಭೇಟಿ ಕೊಡಬಹುದು

ಲಕ್ಷ್ಮೀನಾರಾಯಣ ದೇವಾಲಯ (ದೆಹಲಿ)

ಲಕ್ಷ್ಮೀನಾರಾಯಣ ದೇವಾಲಯ (ದೆಹಲಿ)

ಬಿರ್ಲ ಮಂದಿರ್ ಎಂದೂ ಕರೆಯಲಾಗುವ ಈ ದೇವಾಲಯದಲ್ಲಿ ನಾರಾಯಣ ದೇವರ ವಿಗ್ರಹವನ್ನು ಪೂಜಿಸಲಾಗುತ್ತದೆ. 1939ರಲ್ಲಿ ನಿರ್ಮಿಸಲಾದ ಈ ದೇವಾಲಯದ ನಿರ್ಮಾಣವು ಪೂರ್ಣಗೊಂಡ ನಂತರ ಮಹಾತ್ಮಾ ಗಾಂಧೀಜಿಯವರಿಂದ ಉದ್ಘಾಟಿಸಲ್ಪಟ್ಟಿತು. ಸುಮಾರು 6.5 ಎಕರೆ ಪ್ರದೇಶಗಳ ವಿಸ್ತಾರದಲ್ಲಿ ಹರಡಿರುವ ಈ ದೇವಾಲಯವು ಹಲವಾರು ಕಾರಂಜಿಗಳು, ದೇವಾಲಯಗಳು, ತೋಟಗಳನ್ನು ಹೊಂದಿದ್ದು ದೆಹಲಿಯ ಅತ್ಯಂತ ಪ್ರಮುಖವಾದ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದೆ. ಈ ದೇವಾಲಯವು ಪ್ರಶಾಂತವದ ಮತ್ತು ಶುದ್ದವಾದ ಪರಿಸರವನ್ನು ಒದಗಿಸಿಕೊಡುತ್ತದೆ ಮತ್ತು ಬುದ್ದ, ಗಣೇಶಮ್ ಮತ್ತು ಹನುಮಾನ್ ಜಿ ಮುಂತಾದ ದೇವರುಗಳ ಸಣ್ಣ ಸಣ್ಣ ಗುಡಿಗಳನ್ನು ಹೊಂದಿದೆ.

ಬದರಿನಾಥ ದೇವಾಲಯ / ಬದ್ರಿ ವಿಶಾಲ್ ( ಉತ್ತರಾಖಂಡ್)

ಬದರಿನಾಥ ದೇವಾಲಯ / ಬದ್ರಿ ವಿಶಾಲ್ ( ಉತ್ತರಾಖಂಡ್)

ಬದರಿನಾಥವು ನಿಸ್ಸಂದೇಹವಾಗಿಯೂ ವಿಷ್ಣುದೇವರಿಗೆ ಅರ್ಪಿತವಾದ ಅತ್ಯಂತ ಪ್ರಮುಖವಾಗಿ ಗುರುತಿಸಲ್ಪಡುವ ದೇವಾಲಯಗಳಲ್ಲೊಂದಾಗಿರುವ ವಿಷ್ಣುವಿನ ಬದರಿ ಅವತಾರದ ದೇವಾಲಯವಾಗಿದೆ. ಪ್ರತೀವರ್ಷ ಜಗತ್ತಿನಾದ್ಯಂತದ ವೀಕ್ಷಕರು ಮತ್ತು ಪ್ರಪಂಚದಾದ್ಯಂತದ ವಿಷ್ಣುವಿನ ಅನುಯಾಯಿಗಳು ಇಲ್ಲಿ ಪಾದಯಾತ್ರೆ ಮಡುತ್ತಾರೆ. ಇಲ್ಲಿಯ ಪವಿತ್ರತೆಯಲ್ಲಿ ಭಕ್ತಿಯಿಂದ ತಮ್ಮನ್ನು ತಾವು ತೊಡಗಿಸಿಕೊಂಡು ನಿರ್ವಾಣವನ್ನು ಪಡೆಯಲು ಬಯಸುವುದು ಸಹಜ. ಅಲ್ಲದೆ ಇಲ್ಲಿ ಹರಿಯುವ ಪವಿತ್ರ ಅಲಕಾನಂದ ನದಿಯಲ್ಲಿ ಸ್ನಾನ ಮಾಡಿ ಪುನೀತರಾಗುತ್ತಾರೆ.

ರಂಗನಾಥಸ್ವಾಮಿ ದೇವಾಲಯ (ತಮಿಳುನಾಡು)

ರಂಗನಾಥಸ್ವಾಮಿ ದೇವಾಲಯ (ತಮಿಳುನಾಡು)

ಸುಮಾರು 156 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಿತವಾದ ಮತ್ತು ಶ್ರೀರಂಗಂ ಪಟ್ಟಣದಲ್ಲಿ ನೆಲೆಸಿರುವ ಸುಂದರವಾದ ಮತ್ತು ಅದ್ಬುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿರುವ ಅತ್ಯಂತ ಭವ್ಯವಾದ ಭಾರತದ ಈ ದೇವಾಲಯವು ವಿಶ್ವದಲ್ಲಿಯೇ ಅತ್ಯಂತ ಸಮಗ್ರವಾಗಿದೆ. 1987 ರಲ್ಲಿ ನಿರ್ಮಿಸಲಾದ ಪ್ರಧಾನ ದೇವತೆಯ ವಿಗ್ರಹವು ಭಗವಾನ್ ವಿಷ್ಣುವಿನ ಒರಗಿರುವ ರೂಪದಲ್ಲಿದೆ. ವಿಷ್ಣು ಮತ್ತು ಅವನ ಅವತಾರಗಳನ್ನು ಹೊರತುಪಡಿಸಿ 50 ಕ್ಕೂ ದೇವರು ಮತ್ತು ದೇವತೆಗಳನ್ನು ಹೆಚ್ಚು ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ.

ಪದ್ಮನಾಭ ಸ್ವಾಮಿ ದೇವಾಲಯ (ಕೇರಳ)

ಪದ್ಮನಾಭ ಸ್ವಾಮಿ ದೇವಾಲಯ (ಕೇರಳ)

ಹೊಳೆಯುವ ಬಂಗಾರದ ಹೊರಪದರವನ್ನು ಹೊಂದಿರುವ ಜೊತೆಗೆ ಭಾರತದ ಅತ್ಯಂತ ಗಮನಸೆಳೆಯುವ ದೇವಾಲಯಗಳಲ್ಲೊಂದೆಂದು ಪ್ರಸಿದ್ದಿಯನ್ನು ಪಡೆದಿರುವ ಕೇರಳದ ಪದ್ಮನಾಭಸ್ವಾಮಿ ದೇವಾಲಯವು ದೇಶದ ಪ್ರಮುಖ ವಿಷ್ಣು ದೇವಾಲಯಗಳಲ್ಲೊಂದಾಗಿದೆ. ಎತ್ತರದ ಗೋಪುರಗಳುಗಳು ಮತ್ತು ತಮಿಳುನಾಡು ಮತ್ತು ಕೇರಳದ ಮಿಶ್ರಣವನ್ನು ಹೊಂದಿದ ವಾಸ್ತುಶಿಲ್ಪಶೈಲಿಯನ್ನು ಹೊಂದಿರುವ ಈ ದೇವಾಲಯವು ಹಿಂದು ಭಕ್ತರು ಮತ್ತು ಅಸಂಖ್ಯಾತ ವೈಷ್ಣವ ಪಂಥದ ಅನುಯಾಯಿಗಳನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಟ್ರಿಲಿಯನ್ ಡಾಲರ್ ಮೌಲ್ಯದ ಚಿನ್ನದ ನಾಣ್ಯಗಳು, ಪ್ರತಿಮೆಗಳು, ಸಿಂಹಾಸನಗಳು ಇತ್ಯಾದಿಗಳನ್ನು ಒಳಗೊಂಡಿರುವ ಅದರ ರಹಸ್ಯ ಭೂಗತ ಕೋಣೆಗಳನ್ನು ತೆರೆಯುವ ಮೂಲಕ ಇತ್ತೀಚೆಗೆ ದೇವಾಲಯವು ಹೆಚ್ಚು ಸುದ್ದಿ ಮಾಡಿತು.

ಮೂರನೇ ಕಮಾನು (ಬಿ) ಇನ್ನೂ ನಿಗೂಢವಾಗಿಯೇ ಉಳಿದಿದೆ ಏಕೆಂದರೆ ಇದನ್ನು ತೆರೆದಲ್ಲಿ, ಮಾಡುವ ಜನರ ಮೇಲೆ ವಿನಾಶಕಾರಿ ಶಕುನವಾಗಬಹುದೆಂಬ ಕಾರಣಕ್ಕಾಗಿ, ಅಲ್ಲಿರುವ ಪ್ರಧಾನ ಅರ್ಚಕರು ಇದನ್ನು ಹಾಗೆಯೇ ಬಿಡಲು ನಿರ್ಧರಿಸಿದರು. ನೀವು ಧಾರ್ಮಿಕ ವ್ಯಕ್ತಿಯಲ್ಲದಿದ್ದರೂ ಸಹ, ಅದರ ಐತಿಹಾಸಿಕ, ಪೌರಾಣಿಕ ಮತ್ತು ನಿಗೂಢ ಪ್ರಾಮುಖ್ಯತೆಗಾಗಿ ನೀವು ಅಲ್ಲಿಗೆ ಹೋಗಬಹುದು.

ಜಗನ್ನಾಥ ದೇವಾಲಯ (ಒಡಿಶಾ)

ಜಗನ್ನಾಥ ದೇವಾಲಯ (ಒಡಿಶಾ)

ಭಾರತದಾದ್ಯಂತ ಹೆಸರುವಾಸಿಯಾರುವ ಸಾಂಪ್ರದಾಯಿಕ ರಥಯಾತ್ರೆಯ ಜೊತೆಗೆ ಎಂಟನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ನಿರ್ಮಿಸಿದ ಭಾರತದ ಚಾರ್ ಧಾಮ್ ಯಾತ್ರೆಗೆ ಪುರಿ ಜಗನ್ನಾಥವು ಪ್ರಮುಖ ಸ್ಥಂಭಗಳಲ್ಲಿ ಒಂದಾಗಿದೆ. ಈ ದೇವಾಲಯವು ಅತ್ಯಂತ ಆದ್ಯಾತ್ಮಿಕತೆಯ ನೆಲೆಯಾಗಿದ್ದು, ವಿಷ್ಣು ದೇವರಿಗೆ ಅರ್ಪಿತವಾದುದಾಗಿದೆ. ರಥದ ರೂಪದಲ್ಲಿ ರಚಿಸಲ್ಪಟ್ಟಿರುವ ಈ ದೇವಾಲಯ ಸಂಕೀರ್ಣವು ಕಲೆ ಮತ್ತು ವಾಸ್ತುಶಿಲ್ಪವನ್ನು ಪ್ರದರ್ಶಿಸುವ ಮೇರು ಕೃತಿಯಾಗಿದ್ದು ಹಿಂದಿನ ಕಾಲದ ವಾಸ್ತುಶಿಲ್ಪದ ಗುಣಮಟ್ಟವನ್ನು ಎತ್ತಿ ಹಿಡಿಯುತ್ತದೆ.

ಈ ದೇವಾಲಯವು ಸಮುದ್ರದ ಪಕ್ಕದಲ್ಲಿದ್ದು, ಈ ಸ್ಥಳದಿಂದ ಅಪಾರ ಪ್ರಮಾಣದ ಭಕ್ತಿ ಮತ್ತು ಸಕಾರಾತ್ಮಕತೆಯನ್ನು ಹೊರಸೂಸುತ್ತದೆ, ಇದು ಆಧ್ಯಾತ್ಮಿಕತೆಯ ನೈಸರ್ಗಿಕ ಸೆಳವನ್ನು ಸೃಷ್ಟಿಸುವಂತೆ ಮಾಡುತ್ತದೆ. ಇಲ್ಲಿ ಪ್ರದಾನ ದೇವತೆಯನ್ನು ಮುಖಾಮುಖಿಯಾಗಿ ನೋಡುವುದರಿಂದ ಮೋಕ್ಷಪ್ರಾಪ್ತಿಯಾಗುತ್ತದೆ ಎಂದು ನಂಬಿಕೆಯಿರುವುದರಿಂದ ಜನರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.

ಶ್ರೀ ವೆಂಕಟೇಶ್ವರ ದೇವಾಲಯ(ಆಂಧ್ರಪದೇಶ)

ಶ್ರೀ ವೆಂಕಟೇಶ್ವರ ದೇವಾಲಯ(ಆಂಧ್ರಪದೇಶ)

ಭವ್ಯವಾದ ದೃಶ್ಯವನ್ನೊಳಗೊಂಡ ಪರ್ವತ ಹಾಗು ಹಚ್ಚ ಹಸುರಿನ ನಡುವೆ ಇರುವ ತಿರುಮಲ ಪಟ್ಟಣದಲ್ಲಿ ನೆಲೆಸಿರುವ ಈ ಗಮನ ಸೆಳೆಯುವ ಕಟು ಬಿಳಿಯ ದೇವಾಲಯವು ತಿರುಮಲ ಅಥವಾ ತಿರುಪತಿ ದೇವಾಲಯ ಎಂಬ ಹೆಸರಿಂದಲೂ ಕರೆಯಲ್ಪಡುತ್ತದೆ. ವಿಷ್ಣುದೇವರ ಅವತಾರಗಳಲ್ಲೊಂದೆಂದು ಕರೆಯಲಾಗುವ ಶ್ರೀ ವೆಂಕಟೇಶ್ವರ ದೇವರಿಗೆ ಅರ್ಪಿತವಾಗಿದೆ ಮತ್ತು ಇಲ್ಲಿ ದೇವರು ಮಾನವಕುಲವನ್ನು ವಿವಿಧ ತೊಂದರೆಗಳಿಂದ ರಕ್ಷಿಸಲು ಕಲಿಯುಗದಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.

ದೇಣಿಗೆ ವಿಷಯದಲ್ಲಿ, ಇದು ಭಾರತದ ಅತ್ಯಂತ ಶ್ರೀಮಂತ ದೇವಾಲಯವೆಂದು ಪರಿಗಣಿಸಲ್ಪಟ್ಟಿದೆ, ಇದು ಭಾರತದ ವಿವಿಧ ಭಾಗಗಳಿಂದ ಭಗವಂತನಿಗೆ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಹೋಗುವ ಹಿಂದೂ ಭಕ್ತರಲ್ಲಿ ಸಮಾನವಾಗಿ ಜನಪ್ರಿಯವಾಗಿದೆ. ಭವ್ಯವಾದ ಎತ್ತರದ ಶಿಖರಗಳಿಂದ ಸೊಗಸಾಗಿ ಕೆತ್ತಲ್ಪಟ್ಟಿವೆ ಮತ್ತು ನೈಸರ್ಗಿಕ ಸೌಂದರ್ಯದ ನಡುವೆ ಪ್ರಕಾಶಮಾನವಾಗಿ ಹೊಳೆಯುವ ಈ ದೇವಾಲಯವನ್ನು ದೂರದಿಂದಲೇ ಗುರುತಿಸಬಹುದು.

ಶ್ರೀನಾಥ್ ಜೀ ದೇವಾಲಯ (ರಾಜಸ್ಥಾನ)

ಶ್ರೀನಾಥ್ ಜೀ ದೇವಾಲಯ (ರಾಜಸ್ಥಾನ)

ನತ್ ದ್ವಾರದಲ್ಲಿ ನೆಲೆಸಿರುವ ಈ ದೇವಾಲಯವು ಪ್ರಮುಖವಾಗಿ ವೈಷ್ಣವ ಸಮುದಾಯದವರಿಗೆ ಅತ್ಯಂತ ಮುಖ್ಯವಾಗಿರುವ ಯಾತ್ರಾ ಕೇಂದ್ರಗಳಲ್ಲೊಂದಾಗಿದೆ. ಶ್ರೀನಾಥ್ ಜೀ ಅವರ ದೈವಿಕ ರೂಪವು ಇಲ್ಲಿ ಸ್ವಯಂ-ಪ್ರಕಟಿತವಾಗಿದೆ ಎಂದು ನಂಬಲಾಗಿದೆ ಮತ್ತು 17 ನೇ ಶತಮಾನದಲ್ಲಿ ಕೃಷ್ಣಜಿ ಎಂದು ಕರೆಯಲ್ಪಡುವ ಕೃಷ್ಣನ ಪ್ರಧಾನ ದೇವತೆಯ ವಿಗ್ರಹವನ್ನು ಇಲ್ಲಿಗೆ ತರಲಾಯಿತು. ಈ ದೇವಾಲಯವು ವಿಷ್ಣುವಿನ ಕೆಲವು ಅತೀಂದ್ರಿಯ ಮತ್ತು ಆಧ್ಯಾತ್ಮಿಕ ಕೇಂದ್ರಗಳಿಂದ ಕೂಡಿದ್ದು, ಮೀರಾಬಾಯಿಯ ಕಾಲದ ಐತಿಹಾಸಿಕ ವೃತ್ತಾಂತವನ್ನು ಹೊಂದಿದೆ. ಇದಲ್ಲದೆ, ಈ ದೇವಾಲಯವು ತನ್ನ ಬೃಹತ್ ಪಾಕಶಾಲೆಯ ಔತಣಗಳಿಗೆ ಸಹ ಪ್ರಸಿದ್ಧವಾಗಿದ್ದು, ಇದು ವಿವಿಧ ವಿಶೇಷ ಮತ್ತು ಶುಭ ಸಂದರ್ಭಗಳಲ್ಲಿ ನಡೆಯುತ್ತದೆ, ಅಲ್ಲಿ ದೇವಾಲಯವು ಪ್ರಪಂಚದಾದ್ಯಂತದ ಅಸಂಖ್ಯಾತ ಭಕ್ತರನ್ನು ತನ್ನಲ್ಲಿಗೆ ಸೆಳೆಯುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+