Search
  • Follow NativePlanet
Share
» »ಬರೀ 48 ಜನರಿಗಾಗಿ 15,256 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ ಒಂದು ಮತದಾನ ಕೇಂದ್ರ

ಬರೀ 48 ಜನರಿಗಾಗಿ 15,256 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ ಒಂದು ಮತದಾನ ಕೇಂದ್ರ

2019ರ ಲೋಕಸಭೆ ಚುನಾವಣೆಗಳು ಎಪ್ರಿಲ್ 11 ರಿಂದ ಆರಂಭವಾಗಲಿವೆ. ಭಾರತದಲ್ಲಿ ಸುಮಾರು 10.35 ಲಕ್ಷ ಮತದಾನ ಕೇಂದ್ರಗಳಿವೆ. ಅವುಗಳಲ್ಲಿ 15,256 ಅಡಿ ಎತ್ತರದಲ್ಲಿ ಒಂದು ಮತಗಟ್ಟೆಯನ್ನು ನಿರ್ಮಿಸಲಾಗಿದೆ . ಜನರು , ಮತದಾನ ಮಾಡಲು ಈ ಮತಗಟ್ಟೆಗೆ ಹೋಗಬೇಕು. ಆದರೆ ಈ ಮತಗಟ್ಟೆಯಲ್ಲಿ ಮತಚಲಾಯಿಸುವವರ ಸಂಖ್ಯೆ ಬರೀ 48 . ಈ 48 ಮಂದಿಗಾಗಿ ಒಂದು ಮತಗಟ್ಟೆಯನ್ನು ಅಳವಡಿಸಲಾಗಿದೆ. ಹಾಗಾದರೆ ಬನ್ನಿ ಈ ಅತ್ಯಂತ ಎತ್ತರದ ಮತಗಟ್ಟೆ ಎಲ್ಲಿದೆ ಅನ್ನೋದನ್ನು ತಿಳಿಯೋಣ.

ಎತ್ತರದ ಮತದಾನ ಕೇಂದ್ರ

ಎತ್ತರದ ಮತದಾನ ಕೇಂದ್ರ

PC:Gerd Eichmann
15,256 ಅಡಿ ಎತ್ತರದಲ್ಲಿರುವ ಈ ಮತಗಟ್ಟೆಯು ಹಿಮಾಚಲ ಪ್ರದೇಶದ ತಶಿಗಾಂಗ್‌ ಎನ್ನುವ ಹಳ್ಳಿಯಲ್ಲಿದೆ. ಇದು ವಿಶ್ವದ ಅತಿ ಎತ್ತರದ ಮತದಾನ ಕೇಂದ್ರವಾಗಿದೆ. ಹಿಮಾಚಲ ಪ್ರದೇಶದ ತಶಿಗಾಂಗ್ ಹಳ್ಳಿಯು 15,256 ಅಡಿ ಎತ್ತರದಲ್ಲಿದೆ. ತಶಿಗಾಂಗ್ ಗ್ರಾಮವು ಸ್ಪಿತಿ ಕಣಿವೆಯಲ್ಲಿ ನೆಲೆಗೊಂಡಿದೆ. ಇದು ಇಂಡೋ-ಚೀನಾದ ಗಡಿಯಿಂದ 30 ಕಿಲೋಮೀಟರ್ ಗಿಂತಲೂ ಕಡಿಮೆ ದೂರದಲ್ಲಿದೆ. ಇಲ್ಲಿನ ಮತದಾರರ ಸಂಖ್ಯೆ ಬರೀ 48. ತಶಿಗಾಂಗ್ ಗ್ರಾಮವು ವರ್ಷಪೂರ್ತಿ ಹಿಮಪಾತದಿಂದ ಮುಚ್ಚಲ್ಪಟ್ಟ ರಸ್ತೆಯನ್ನು ಹೊಂದಿದೆ. ಆದರೆ ಮತದಾರರು ಮತದಾನ ಮಾಡಲು ಮತಗಟ್ಟೆಗೆ ತಲುಪುವಲ್ಲಿ ಯಾವುದೇ ತೊಂದರೆ ಎದುರಿಸದಂತೆ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ, ಅತಿ ಎತ್ತರದ ಮತದಾನ ಕೇಂದ್ರವು ತಶಿಗಾಂಗ್ ಹಳ್ಳಿಯಿಂದ 160 ಕಿಲೋಮೀಟರ್ ದೂರದಲ್ಲಿರುವ ಹಿಕ್ಕಿಂನಲ್ಲಿತ್ತು.

 ಕಿಬ್ಬರ್‌ನಿಂದ 14 ಕಿಮೀ ದೂರದಲ್ಲಿದೆ

ಕಿಬ್ಬರ್‌ನಿಂದ 14 ಕಿಮೀ ದೂರದಲ್ಲಿದೆ

PC: Sumita Roy Dutta
ಸಾಮಾನ್ಯವಾಗಿ ಸ್ಪಿತಿ ಯಲ್ಲಿ, ರಸ್ತೆಗಳು ಕೇವಲ ಹೆಸರಿಗೆ ಮಾತ್ರ ಇವೆ. ಈ ಪ್ರದೇಶದ ವಿಶಿಷ್ಟ ಭೌಗೋಳಿಕ ಮತ್ತು ಹವಾಮಾನವು ತಡೆದುಕೊಳ್ಳಲು ಕಷ್ಟಕರವಾಗಿದೆ. ಕಿಬ್ಬರ್‌ನಿಂದ 14 ಕಿಮೀ ದೂರದಲ್ಲಿರುವ ತಶಿಗಾಂಗ್, ಅಲ್ಲಿಗೆ ತಲುಪಲು ಸುಮಾರು 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ರಸ್ತೆ ಸುಂದರವಾದದ್ದು, ಇದು ಸ್ಪಿತಿಯ ಇತರ ಭಾಗಗಳಿಗೆ ಹೋಲಿಸಿದರೆ ಸ್ವಲ್ಪಮಟ್ಟಿಗೆ ಹಸಿರನ್ನು ಹೊಂದಿದೆ. ರಸ್ತೆಗಳೇನು ಕಡಿದಾಗಿಲ್ಲ, ಆದರೆ ಇದು ಪರ್ವತಗಳ ಸುತ್ತ ತಿರುವನ್ನು ಹೊಂದಿದೆ.

ಹಳ್ಳಿಗಾಡಿನಂತಿದೆ

ಹಳ್ಳಿಗಾಡಿನಂತಿದೆ

PC: Zhangzhugang
ನಾವು ಈ ಬೆಟ್ಟಗಳ ಮೇಲೆ ಬಹಳಷ್ಟು ಹೂಗಳನ್ನು ನೋಡಬಹುದು. ಕಣಿವೆಯನ್ನು ಒಳಗೊಂಡ ವಿವಿಧ ಬಣ್ಣದ ಹೂವುಗಳ ಸಣ್ಣ ಪೊದೆಗಳು ವೀಕ್ಷಿಸಲು ಅದ್ಭುತವಾಗಿದೆ. ಈ ಹಳ್ಳಿಯಲ್ಲಿ 5 ಮನೆಗಳಿವೆ, ಅವುಗಳಲ್ಲಿ 2 ಬಳಸುತ್ತಿಲ್ಲ, ಕೆಲವು ಜಾನುವಾರು ಶೆಡ್‌ಗಳು ಮತ್ತು ಬೌದ್ಧ ಸ್ತೂಪಗಳಿವೆ. ಎಲ್ಲಾ ಮನೆಗಳು ಹಳೆಯ ಮತ್ತು ಹಳ್ಳಿಗಾಡಿನಂತಿವೆ.

ಯಾವುದೇ ಶಾಲೆಗಳಿಲ್ಲ

ಯಾವುದೇ ಶಾಲೆಗಳಿಲ್ಲ

PC:Arian Zwegers
ವಾಹನಗಳು ಇಲ್ಲಿಗೆ ತಲುಪಲು ಇದು ತುಂಬಾ ಕಷ್ಟಕರವಾಗಿರುತ್ತದೆ. ಮುಂಚಿತವಾಗಿ ಚಳಿಗಾಲದಲ್ಲಿ ಅವರು ಅಗತ್ಯವಾದಷ್ಟು ಆಹಾರ ಪದಾರ್ಥಗಳನ್ನು ಸಂಗ್ರಹಿಸುತ್ತಾರೆ. ಪ್ರತಿಯೊಬ್ಬರೂ ಮನೆಯೊಳಗೆ ಇರುತ್ತಾರೆ. ಅವರ ಜಾನುವಾರುಗಳನ್ನು ಮನೆಯೊಳಗೆ ಇರಿಸಲಾಗುವುದು. ಸಮೀಪದಲ್ಲಿ ಯಾವುದೇ ಶಾಲೆಗಳಿಲ್ಲ. ಆದ್ದರಿಂದ ಅವರು ತಮ್ಮ ಮಕ್ಕಳಿಗೆ ತಾವೇ ಕಲಿಸುತ್ತಾರೆ. ನಂತರ ಶಿಕ್ಷಣವನ್ನು ಪಡೆಯಲು ಕಿ ಅಥವಾ ಕಿಬ್ಬರ್‌ನಲ್ಲಿರುವ ಸಂಬಂಧಿಕರ ಬಳಿಗೆ ಕಳುಹಿಸುತ್ತಾರೆ.

ಚಾರಣಿಗರಿಗೆ ಸೂಕ್ತ ತಾಣ

ಚಾರಣಿಗರಿಗೆ ಸೂಕ್ತ ತಾಣ

PC:Wazzername9
ನೀವು ಕಿಬ್ಬರ್‌ನಿಂದ ತಶಿಗಾಂಗ್‌ಗೆ 14 ಕಿಮೀ ಚಾರಣ ಮಾಡಬಹುದು. ರಸ್ತೆಗಳು ವಾಕಿಂಗ್‌ಗೆ ಒಳ್ಳೆಯದು ಮತ್ತು ಇದು ಕಡಿದಾದ ಚಾರಣವಲ್ಲ. ಸ್ಪಿತಿಯ ಈ ಭಾಗವು ನಿಜವಾಗಿಯೂ ಸುಂದರವಾಗಿದೆ. ಅಥವಾ ಮತ್ತೆ ದಾರಿಯಲ್ಲಿ ನೀವು ಕಿಬ್ಬರ್ಗೆ ಹೋಗಬಹುದು. ಕಿಬ್ಬರ್‌ನಿಂದ ಕಝಾಗೆ ಬಸ್ 8 ಗಂಟೆಗೆ ಪ್ರಾರಂಭವಾಗುತ್ತದೆ. ಆದ್ದರಿಂದ ಬೆಳಿಗ್ಗೆ ಕಿಬ್ಬರ್‌ಗೆ ಚಾರಣ ಕೈಗೊಂಡು ನಂತರ ಬಸ್ ಮೂಲಕ ನೀವು ಕಾಜಾಗೆ ಹೋಗಬಹುದು.

ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು

ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು

PC: Christopher J Fynn
ಈ ಪರ್ವತಗಳ ಜನರ ಜೀವನ ತುಂಬಾ ಕಠಿಣವಾಗಿದೆ. ಪ್ರತಿಯೊಂದು ದಿನವೂ ಅವರು ಕಠಿಣ ಭೂಪ್ರದೇಶ ಮತ್ತು ಹವಾಮಾನ ಪರಿಸ್ಥಿತಿಗಳೊಂದಿಗೆ ಹೋರಾಡುತ್ತಾರೆ. ಆದರೆ ಅವರು ಸಂತೋಷದಿಂದ. ತಶಿಗಾಂಗ್ ಚಾರಣಿಗರಿಗೆ ಸೂಕ್ತ ತಾಣವಾಗಿದೆ. ಒಂದು ವೇಳೆ ನೀವು ತಶಿಗಾಂಗ್‌ಗೆ ಭೇಟಿ ನೀಡುವ ಯೋಚನೆಯಲ್ಲಿದ್ದರೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.

ಬ್ಲೂ ಷೀಪ್ ಹೋಂಸ್ಟೇ

ಬ್ಲೂ ಷೀಪ್ ಹೋಂಸ್ಟೇ

PC: Wazzername9
ಇಲ್ಲಿ ಒಂದು ಹೋಮ್‌ಸ್ಟೇ ಇದೆ. ಅದರ ಹೆಸರು ಬ್ಲೂ ಷೀಪ್ ಹೋಂಸ್ಟೇ. ತಶಿಗಾಂಗ್‌ನಲ್ಲಿ ಯಾವುದೇ ದೂರವಾಣಿ ನೆಟ್‌ವರ್ಕ್ ಇಲ್ಲ. ಆದ್ದರಿಂದ ಮುಂಚಿತವಾಗಿ ಬುಕಿಂಗ್ ಸಾಧ್ಯವಿಲ್ಲ. ಬಹುಪಾಲು ನೀವು ರಾತ್ರಿಯಲ್ಲಿ ಸೌಕರ್ಯಗಳು ಪಡೆಯುತ್ತೀರಿ, ಕೆಲವರು ಮಾತ್ರ ಇಲ್ಲಿಗೆ ಬರುತ್ತಾರೆ.
ಮೂರು ಹೊತ್ತಿನ ಊಟ ಸೇರಿದಂತೆ ದಿನಕ್ಕೆ 500ರೂ. ಹೋಮ್‌ಸ್ಟೇ ಶುಲ್ಕ.
ಗ್ರಾಮದಲ್ಲಿ ಆಧುನಿಕ ಶೌಚಾಲಯಗಳು ಲಭ್ಯವಿಲ್ಲ. ಒಂದೋ ನೀವು ಶುಷ್ಕ ಟಾಯ್ಲೆಟ್ ಅನ್ನು ಬಳಸಬೇಕು ಇಲ್ಲವೇ, ಮುಕ್ಕ ಬಯಲಿಗೆ ಹೋಗಬೇಕು.
ತಶಿಗಾಂಗ್ ಬಹಳ ಎತ್ತರದಲ್ಲಿರುವುದರಿಂದ ಬೇಕಾದ ವಸ್ತುಗಳಿಗಾಗಿ ಅಂಗಡಿ ಮುಗ್ಗಟ್ಟನ್ನು ಹುಡುಕಿಕೊಂಡು ಹೋಗೋದು ಅಷ್ಟೊಂದು ಸುಲಭವಲ್ಲ. ಹಾಗಾಗಿ ನಿಮಗೆ ಬೇಕಾಗಿರುವ ಔಷಧಿಗಳನ್ನೆಲ್ಲಾ ಮುಂಚಿತವಾಗಿ ಇಟ್ಟುಕೊಂಡಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X