• Follow NativePlanet
Share
» »ತನ್ನೊಟ್ ಮಾತಾ ದೇವಾಲಯಲ್ಲಿನ ನಂಬಲಾಗದ ವಿಷಯಗಳು

ತನ್ನೊಟ್ ಮಾತಾ ದೇವಾಲಯಲ್ಲಿನ ನಂಬಲಾಗದ ವಿಷಯಗಳು

Written By:

ತನ್ನೊಟ್ ಮಾತಾ ದೇವಾಲಯವು ಭಾರತ ದೇಶದಲ್ಲಿನ ರಾಜಸ್ಥಾನ ರಾಜ್ಯದ ಜೈಸಲ್ಮೆರ್ ಜಿಲ್ಲೆಯಲ್ಲಿದೆ. ಈ ದೇವಾಲಯಕ್ಕೆ ಪುರಾತನ ಸಾಹಿತ್ಯ ಪ್ರಕಾರ ತನ್ನೊಟ್ ಮಾತಾಳ ಒಂದು ರೂಪವೇ ಹಿಂಗ್ಲಾಜ್ ಮಾತಾ ಹಾಗೂ ಕಾರಣೀ ಮಾತಾ. ಆದರೆ ಹಿಂಗ್ಲಾಜ್ ಮಾತಾ ಪಾಕಿಸ್ಥಾನದಲ್ಲಿ ನೆಲೆಸಿದ್ದಾಳೆ. 108 ಶಕ್ತಿ ಪೀಠಗಳಲ್ಲಿ ಒಂದಾದ ಹಿಂಗ್ಲಾಜ್ ಮಾತಾ ದೇವಾಲಯಕ್ಕೆ ಪಾಕಿಸ್ಥಾನದಲ್ಲಿನ ಹಲವಾರು ಮಂದಿ ನಮ್ಮ ಹಿಂದೂ ದೇವತೆಯನ್ನು ಆರಾಧಿಸುತ್ತಾರೆ.

ಈ ತನ್ನೊಟ್ ಗ್ರಾಮದಲ್ಲಿನ ಈ ದೇವಾಲಯವು ಪಾಕಿಸ್ತಾನದ ಸರಹದ್ದಿನ ಸಮೀಪದಲ್ಲಿದೆ. ಅಷ್ಟೇ ಅಲ್ಲದೇ 1971ರ ಅಂದಿನ ಭಾರತ ಹಾಗೂ ಪಾಕಿಸ್ತಾನ ಯುದ್ಧ ನಡೆದ ಲೊಂಗೆವಾಲಾ ಎನ್ನುವ ಪ್ರದೇಶಕ್ಕೆ ಸಮೀಪದಲ್ಲಿದೆ. ಪ್ರವಾಸಿಗರು ಈ ಮಾಹಿಮಾನ್ವಿತ ದೇವಾಲಯದ ಜೊತೆ ಜೊತೆಗೆ ಇಂಡೋ- ಪಾಕಿಸ್ತಾನದ ಸರಹದ್ದು ಕೂಡ ಒಮ್ಮೆ ಕಾಣಬಹುದಾಗಿದೆ.

ಪ್ರಸ್ತುತ ಲೇಖನದ ಮೂಲಕ ರಾಜಸ್ಥಾನದ ತನ್ನೊಟ್ ಮಾತಾ ದೇವಾಲಯದ ಕೆಲವು ನಂಬಲಾಗದ ವಿಷಯಗಳ ಬಗ್ಗೆ ತಿಳಿಯೋಣ.

ಚರಿತ್ರೆ

ಚರಿತ್ರೆ

ಇದು 1965ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಪಾಕಿಸ್ತಾನ ಸೈನ್ಯವು ಈ ದೇವಾಲಯವನ್ನು ಗುರಿಯಾಗಿಸಿಕೊಂಡು ಈ ಪ್ರದೇಶದ ಮೇಲೆ 3000 ಬಾಂಬುಗಳನ್ನು ಧ್ವಂಸಗೊಳಿಸಿತು. ಆದರೆ ತನ್ನೊಟ್ ಮಾತಾ ದೇವಾಲಯಕ್ಕೆ ಯಾವುದೇ ರೀತಿಯ ನಷ್ಟ ಸಂಭವಿಸಲಿಲ್ಲ.


PC:wikimedia.org

ತನ್ನೊಟ್ ಮಾತಾ

ತನ್ನೊಟ್ ಮಾತಾ

ಯುದ್ಧದ ನಂತರ ಪಾಕಿಸ್ತಾನ್ ಜನರಲ್ ಈ ಸಂಘಟನೆಯ ಕುರಿತು ಹಾಗೂ ಈ ಪ್ರದೇಶದಲ್ಲಿನ ದೇವಾಲಯವನ್ನು ರಕ್ಷಿಸಿದ ಆ ಶಕ್ತಿ ಯಾವುದು? ಎಂದು ತಿಳಿದುಕೊಳ್ಳಲು ಈ ಸ್ಥಳಕ್ಕೆ ಭೇಟಿ ನೀಡಲು ಭಾರತ ದೇಶಕ್ಕೆ ಬಂದನು.


PC:Suryansh Singh (DarkUnix)

ಬಾರ್ಡರ್ ಸೆಕ್ಯೂರಿಟಿ ಫೋರ್ಸ್

ಬಾರ್ಡರ್ ಸೆಕ್ಯೂರಿಟಿ ಫೋರ್ಸ್

ಯುದ್ಧದ ನಂತರ ದೇವಾಲಯದ ನಿರ್ವಹಣೆಯ ಮೇರೆಗೆ ಭಾರತ ದೇಶದ ಒಂದು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಸ್ವಾಧಿನ ಪಡಿಸಿಕೊಂಡಿತು. ಅಂದಿನಿಂದ ದೇವಾಲಯವನ್ನು ಬಿ.ಎಸ್.ಎಫ್ ಸೈನಿಕರು ನಿರ್ವಹಿಸುತ್ತಿದ್ದಾರೆ.

PC:Suryansh Singh (DarkUnix)

ಮ್ಯೂಸಿಯಂ

ಮ್ಯೂಸಿಯಂ

ಈ ದೇವಾಲಯವು ವಸ್ತು ಸಂಗ್ರಹಾಲಯವನ್ನು ಹೊಂದಿದೆ. ಇಲ್ಲಿ ಪಾಕಿಸ್ತಾನದ ಟ್ಯಾಂಕ್‍ಗಳಿಂದ ಗುಂಡು ಹಾರಿಸಲ್ಪಟ್ಟ ಬಾಂಬ್‍ಗಳನ್ನು ಸಂಗ್ರಹಿಸಿ ಇಡಲಾಗುತ್ತದೆ.


PC:Suresh Godara

ಇಂಡಿಯನ್ ಏರ್ ಫೊರ್ಸ್

ಇಂಡಿಯನ್ ಏರ್ ಫೊರ್ಸ್

ಈ ಪ್ರದೇಶದಲ್ಲಿ 1971 ರಂದು ಪಾಕಿಸ್ತಾನ ಮತ್ತು ಭಾರತ ದೇಶವು ಯುದ್ಧ ಪ್ರಾರಂಭಿಸುವ ಸಂದರ್ಭದಲ್ಲಿ ಇನ್ನೂ 4 ದಿನಗಳ ಮಟ್ಟಿಗೆ ಪಾಕಿಸ್ತಾನದ ಎಲ್ಲಾ ಟ್ಯಾಂಕುಗಳು ಮರಳಿನಲ್ಲಿ ಮುಚ್ಚಿ ಹೋಗಿತ್ತು. ಆದ್ದರಿಂದ ಹಾಗಾಗಿ ಭಾರತೀಯ ವಾಯುಪಡೆಯು ಸುಲಭವಾಗಿ ಬಾಂಬು ದಾಳಿಗಳಿಂದ ರಕ್ಷಣೆ ಪಡೆಯಿತು.

PC:Suryansh Singh (DarkUnix)

ಪಾಕಿಸ್ತಾನ ಟ್ಯಾಂಕುಗಳು

ಪಾಕಿಸ್ತಾನ ಟ್ಯಾಂಕುಗಳು

ಪಾಕಿಸ್ತಾನ ಟ್ಯಾಂಕುಗಳು ಭಾರತ ದೇಶವನ್ನು ಗುರಿಯಾಗಿಸಿಕೊಂಡರೂ ಕೂಡ ಒಂದೇ ಒಂದು ಇಂಚು ಕೂಡ ಅವರು ಚಲಿಸಲಾಗಲಿಲ್ಲವಂತೆ. ವಿಷೇಶವೆನೆಂದರೆ 200 ಕ್ಕಿಂತ ಹೆಚ್ಚು ಪಾಕಿಸ್ತಾನಿ ಟ್ಯಾಂಕ್ ಪಡೆಗಳು ಕೊಲ್ಲಲ್ಪಟ್ಟಿದ್ದು.

PC:Suryansh Singh (DarkUnix)

ಕ್ರಿ.ಶ 1965 ರಿಂದ 1971

ಕ್ರಿ.ಶ 1965 ರಿಂದ 1971

ಈ ದೇವಾಲಯದ ಸರಿಹದ್ದು ಕೇಂದ್ರದಿಂದ 10 ಕಿ.ಮೀ ಮಾತ್ರವೇ ಇರುವುದರಿಂದ ಈ ಪ್ರದೇಶವನ್ನು ರಕ್ಷಣ ಸೈನ್ಯ, ಬಿ.ಎಸ್,ಎಫ್ ಸೈನಿಕರು ಇಂದಿಗೂ ಈ ದೇವಾಲಯದ ಮುಂದೆ ತಮ್ಮ ವಾಹನವನ್ನು ನಿಲ್ಲಿಸಿ ಸುರಕ್ಷಿತವಾಗಿ ಯುದ್ಧ ನಡೆಯುವಂತೆ ಹರಸು ತಾಯಿ ಎಂದು ಬೇಡಿಕೊಳ್ಳುತ್ತಾರೆ. ದೇವಾಲಯದ ಸಮೀಪದಲ್ಲಿನ ಮರಳನ್ನು ತಮ್ಮ ಹಣೆಗೆ ಧರಿಸಿ ತಮ್ಮ ಪ್ರಯಾಣವನ್ನು ಮುಂದುವರೆಸುತ್ತಾರೆ.


PC:Suryansh Singh (DarkUnix)

ತನ್ನೊಟ್ ಗ್ರಾಮ ಜನಸಂಖ್ಯೆ

ತನ್ನೊಟ್ ಗ್ರಾಮ ಜನಸಂಖ್ಯೆ

ಈ ಪ್ರದೇಶವನ್ನು ದಾಟಿ ಒಳ ಪ್ರವೇಶ ಮಾಡಿದರೆ ಪ್ರತಿಯೊಂದು ಶತ್ರು ಸೈನ್ಯವು ಕೂಡ ತಮ್ಮ ಪ್ರಾಣವನ್ನು ಅರ್ಪಿಸಬೇಕಾದ್ದದ್ದೆ. ಇದು ವಾಸ್ತವಾಗಿ ನಡೆದ ಒಂದು ವರದಿ. ತನ್ನೊಟ್ ಗ್ರಾಮ ಜನರು ಕೇವಲ 492 ಮಂದಿ ಮಾತ್ರ. ಈ ಪ್ರದೇಶವು ಪಾಕಿಸ್ತಾನ ಸರಿಹದ್ದುವಿನಲ್ಲಿ ಇರುವುದರಿಂದ ಶತ್ರುಗಳ ಒಳ ಪ್ರವೇಶ ಮಾಡಲು ಸುಲಭವಾಗಿರುತ್ತದೆ.

PC:Suresh Godara

ದೇವಾಲಯಕ್ಕೆ ತಲುಪವ ಬಗೆ?

ದೇವಾಲಯಕ್ಕೆ ತಲುಪವ ಬಗೆ?

ಈ ತನ್ನೊಟ್ ಮಾತಾ ದೇವಾಲಯವು ಜೈಸಲ್ಮೆರ್ ನಗರದಿಂದ ಸುಮಾರು 153 ಕಿ.ಮೀ ದೂರದಲ್ಲಿದೆ. ಈ ದೇವಾಲಯಕ್ಕೆ ಸೇರಲು ಸುಮಾರು 2 ಗಂಟೆ ಕಾಲಾವಧಿ ಬೇಕಾಗುತ್ತದೆ.

PC:Suresh Godara

ಮರಳುಗಾಡು

ಮರಳುಗಾಡು

ಜೈಸಲ್ಮೆರ್ ಜಿಲ್ಲೆಯ ತನ್ನೊಟ್‍ನ ರಹದಾರಿಯಲ್ಲಿ ಕೆಲವು ಕಿ, ಮೀಟರ್ ದೂರದವರೆವಿಗೂ ಮರಳುಗಳ ಪರ್ವತವನ್ನು ಕಾಣಬಹುದು. ಇಲ್ಲಿ ಹೆಚ್ಚಾಗಿ ಮರಳಿನ ಪರ್ವತಗಳು ಇದ್ದು ರಮಣೀಯವಾದ ದೃಶ್ಯವನ್ನು ಸವಿಯಲು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದಾಗಿದೆ.

PC:wikimedia.org

ಭೇಟಿಗೆ ಉತ್ತಮವಾದ ಸಮಯ

ಭೇಟಿಗೆ ಉತ್ತಮವಾದ ಸಮಯ

ಈ ದೇವಾಲಯಕ್ಕೆ ಭೇಟಿ ನೀಡಲು ಉತ್ತಮವಾದ ಕಾಲಾವಧಿ ಎಂದರೆ ಅದು ನವೆಂಬರ್ ತಿಂಗಳಿನಿಂದ ಜನವರಿ ತಿಂಗಳವರೆಗೆ.


PC:Suresh Godara

ರಾಜಸ್ಥಾನ

ರಾಜಸ್ಥಾನ

ಈ ಪ್ರದೇಶವು ರಾಜಸ್ಥಾನದಲ್ಲಿನ ಥಾರ್ ಅರಣ್ಯ ಪ್ರದೇಶದಲ್ಲಿನ ಒಂದು ಅತ್ಯುತ್ತಮವಾದ ಪ್ರದೇಶವಾಗಿದೆ. ಈ ದೇವಾಲಯಕ್ಕೆ ಒಂದು ಬಾರ್ಡರ್ ಇದೆ.


PC:Paulrudd

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ