Search
  • Follow NativePlanet
Share
» »ಬ್ರಹ್ಮಾಂಡವೇ ಬೆರಗಾಗುವ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಎಲ್ಲಿದೆ ಗೊತ್ತ?

ಬ್ರಹ್ಮಾಂಡವೇ ಬೆರಗಾಗುವ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಎಲ್ಲಿದೆ ಗೊತ್ತ?

ದಶಾವತಾರಿ ನಾರಾಯಣನು ರಾಜಸಿಂಹಾಸನದ ಮೇಲೆ ಕುಳಿತು ಈ ಸರ್ವ ಪ್ರಪಂಚವನ್ನೇ ಆಳುತ್ತಿರುವ ಅರಸನಂತೆ ಕಾಣುತ್ತಾನೆ. ಇಂತಹ ಸುಂದರ ಮೂರ್ತಿಯು ನವ ದೆಹಲಿಯ ಅಕ್ಷರಧಾಮದಲ್ಲಿದೆ. ಈ ದೇವಾಲಯವು ಬಣ್ಣಿಸಲು ಅಸಾಧ್ಯಾವಾದಂತಹ ಸುಂದರವಾಗಿದ್ದು ಆಕರ್ಷಕ ಕಟ್ಟಡ

ದೇವಾಲಯದಲ್ಲಿ ಅತ್ಯಂತ ಆಕರ್ಷಣಿಯವಾದ ದೇವಾಲಯವೆಂದರೇ ದೆಹಲಿಯಲ್ಲಿರುವ ಸ್ವಾಮಿ ನಾರಾಯಣನ ದೇವಾಲಯ. ಈ ದೇವಾಲಯದ ಸೌಂದರ್ಯ ಸ್ವಗವಿದ್ದಂತೆ. ಕೇವಲ ಕೇಳಿದರೆ ಅಲ್ಲ ಅಲ್ಲಿಯ ವೈಭವನ್ನು ನೋಡಿಯೇ ಕಣ್ಣು ತುಂಬಿಕೊಳ್ಳಬೇಕು. ದಶಾವತಾರಿ ನಾರಾಯಣನು ರಾಜಸಿಂಹಾಸನದ ಮೇಲೆ ಕುಳಿತು ಈ ಸರ್ವ ಪ್ರಪಂಚವನ್ನೇ ಆಳುತ್ತಿರುವ ಅರಸನಂತೆ ಕಾಣುತ್ತಾನೆ.

ಇಂತಹ ಸುಂದರ ಮೂರ್ತಿಯು ನವ ದೆಹಲಿಯ ಅಕ್ಷರಧಾಮದಲ್ಲಿದೆ. ಈ ದೇವಾಲಯವು ಬಣ್ಣಿಸಲು ಅಸಾಧ್ಯಾವಾದಂತಹ ಸುಂದರವಾಗಿದ್ದು ಆಕರ್ಷಕ ಕಟ್ಟಡವನ್ನು ಹೊಂದಿದೆ. ಈ ಸ್ಥಳಕ್ಕೆ ಒಮ್ಮೆ ಭೇಟಿ ಕೊಟ್ಟರೆ ಜೀವನದಲ್ಲಿ ಎಂದೂ ಮರೆಯಲು ಅಸಾಧ್ಯವಾದ ಸುಂದರ ತಾಣದ ಅನುಭವವಾಗುತ್ತದೆ. ಒಮ್ಮೆ ಹೊಗಿ ಬನ್ನಿ.

ಪ್ರಸುತ್ತ ಲೇಖನದಲ್ಲಿ ಸ್ವಗದಂತೆ ಕಂಗೊಳಿಸುತ್ತಿರುವ ನಾರಾಯಾಣನ ದೇವಾಲಯ ಬಗ್ಗೆ ತಿಳಿಯೋಣ.

1.ದೇವಾಲಯ ಎಲ್ಲಿದೆ?

1.ದೇವಾಲಯ ಎಲ್ಲಿದೆ?

ಈ ಪವಿತ್ರ ದೇವಾಲಯವು ಭಾರತ ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿದೆ. ಈ ಸುಂದರವಾದ ಹಾಗೂ ವಿಶ್ವವಿಖ್ಯಾತ ನಾರಾಯಣನ ದೇವಾಲಯವನ್ನು ಯಮುನಾ ನದಿಯ ದಡದಲ್ಲಿ ನಿರ್ಮಿಸಲಾಗಿದೆ. ನವ ದೆಹಲಿಯ ನೂಯ್ಡ ಮೊರ್‍ನಲ್ಲಿ ಅಕ್ಷರಧಾಮವಿದೆ.
PC:vaibhav shukla

2.ವಿಶ್ವದ ಅತಿದೊಡ್ಡ ಹಿಂದು ದೇವಾಲಯ

2.ವಿಶ್ವದ ಅತಿದೊಡ್ಡ ಹಿಂದು ದೇವಾಲಯ

ಈ ದೇವಾಲಯವು ತನ್ನದೇ ಆದ ವಾಸ್ತು ಶಿಲ್ಪದಿಂದ ಹಾಗೂ ವಿಸ್ತಿರ್ಣದಿಂದ ಜಗತ್ ವಿಖ್ಯಾತಿ ಪಡೆದಿದೆ. ಅತಿ ದೊಡ್ಡ ಹಿಂದೂ ದೇವಾಲಯ ಎಂದು ಗಿನ್ನೆಸ್ ದಾಖಲೆಯಲ್ಲಿ ಸ್ಥಾನ ಪಡೆದುಕೊಂಡಿದೆ.
PC:Vinayaraj

ನಿರ್ಮಾಣ

ನಿರ್ಮಾಣ

ನವದೆಹಲಿಯಲ್ಲಿ ಸುಮಾರು 1000 ಎಕರೆಯ ಅದ್ವಿತಿಯ ಪರಿಸರವಿರುವ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ. ಭಾರತದಲ್ಲಿಯೇ ಏಕೈಕ ಬೃಹತ್ ಸ್ವಾಮಿ ನಾರಾಯಣನ ದೇವಾಲಯವಾಗಿದೆ. ನಾರಾಯಣನ ದೇವಾಲಯವನ್ನು ಭಗವಾನ್ ಸ್ವಾಮಿಯ ನೆನಪಿಗೆ ಸ್ಥಾಪಿಸಲಾಯಿತು.
PC:Vinayaraj

ಭಗವಾನ್ ಸ್ವಾಮಿ

ಭಗವಾನ್ ಸ್ವಾಮಿ

ಭಗವಾನ್ ಸ್ವಾಮಿಯವರು ಸಂತರಾಗಿದ್ದು, ಸುಮಾರು 30 ಎಕರೆ ಪ್ರದೇಶದಲ್ಲಿ ಇವರ ಭವ್ಯವಾದ ಸ್ಮಾರಕವನ್ನು ಶಾಂತಿ ಮತ್ತು ಸಹಬಾಳ್ವೆಗಳಿಗಾಗಿ ಸಮರ್ಪಿತವಾಗಿದೆ. ದೇವಾಲಯದ ಎತ್ತರ 42 ಮೀಟರ್ ಹಾಗೂ 96 ಮೀಟರ್ ಅಗಲವಿದೆ.
PC:Vinayaraj

ನಾರಾಯಣನ ಮುರ್ತಿ

ನಾರಾಯಣನ ಮುರ್ತಿ

ಭಗವಾನ್ ಸ್ವಾಮಿ ನಾರಾಯಣನು ಮೂರ್ತಿಯು ಸುಮಾರು 11 ಅಡಿ ಎತ್ತರದ ಪಂಚಲೋಹದ್ದಾಗಿದೆ. ಈ ಸ್ವಾಮಿಯು ಸಿಂಹಾಸನದ ಮೇಲೆ ವಿರಾಜಮಾನವಾಗಿರುವ ಹಾಗೇ ಮೂರ್ತಿ ಇದೆ.
PC:Swaminarayan Sanstha

ವಾಸ್ತುಶಿಲ್ಪ

ವಾಸ್ತುಶಿಲ್ಪ

ಈ ದೇವಾಲಯದ ವಾಸ್ತು ಶಿಲ್ಪವಂತೂ ಅತ್ಯಂತ ಮನಮೋಹಕವಾಗಿದೆ. 2005 ರಲ್ಲಿ ಉದ್ಘಾಟನೆಗೊಂಡ ಈ ದೇವಾಲಯದ ವಾಸ್ತು ಶಿಲ್ಪವು ಗುಲಾಬಿ ಬಣ್ಣದ ಮರಳು ಕಲ್ಲುಗಳು ಹಾಗೂ ಬಿಳಿ ಅಮೃತ ಶಿಲೆಗಳನ್ನು ಬಳಸಿ ನಿರ್ಮಿಸಲಾಗಿದೆ. ರಾತ್ರಿ ವೇಳೆ ಸ್ವಗದಂತೆ ಗೋಚರಿಸುತ್ತದೆ.
PC::Alivewilson

ಶಿಲ್ಪಗಳು

ಶಿಲ್ಪಗಳು

ಈ ದೇವಾಲಯದಲ್ಲಿ ಸುಮಾರು 234 ಸ್ತಂಭಗಳಿವೆ ಹಾಗೂ ಸುಂದರವಾದ 9 ಮಂಟಪಗಳಿವೆ. 90 ರಮಣೀಯವಾದ ಶಿಖರಗಳು ಮತ್ತು 20 ಸಾವಿರಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳಿವೆ. ಈ ಶಿಲ್ಪಗಳನ್ನು ಲೋಹವನ್ನು ಬಳಸಿ ನಿರ್ಮಿಸಲಾಗಿದೆ.
PC:ArishG

ಪುಷ್ಕರಣಿ

ಪುಷ್ಕರಣಿ

ಈ ದೇವಾಲಯದಲ್ಲಿರುವ ಪುಷ್ಕರಣಿಯು ದೇಶದಲ್ಲಿಯೇ ಅತಿ ದೊಡ್ಡದಾದುದು. ಸುಮಾರು 2670 ಮೆಟ್ಟಿಲುಗಳ ಮಧ್ಯೆ ಇದೆ.
PC::Balurbala

ಏನೆನಿದೆ?

ಏನೆನಿದೆ?

ಈ ದೇವಾಲಯದಲ್ಲಿ ಕಮಲಾಕರದ ಯಜ್ಞ ಕುಂಡವಿದೆ. ಮ್ಯೂಸಿಕಲ್ ಕಾರಂಜಿಗಳಿವೆ. ನೀರಿನ ಕಾರಂಜಿಗಳನ್ನು ನೋಡುವುದೇ ಒಂದು ಅಪೂರ್ವ ಸೊಗಸು.
PC:Balurbala

ಕೆತ್ತನೆಗಳು

ಕೆತ್ತನೆಗಳು

ಈ ಪವಿತ್ರ ಪುಣ್ಯಕ್ಷೇತ್ರದಲ್ಲಿ ಸುಂದರ ಮಂಟಪಗಳಿವೆ. ಸ್ತಂಭಗಳಲ್ಲಿ ಬೃಹತ್ ಆನೆಗಳು, ಹಕ್ಕಿಗಳು ಹಾಗೂ ಕೆಲವು ಪ್ರಾಣಿಗಳ ವಿವಿಧ ಭಂಗಿಗಳ ಕೆತ್ತನೆ ಅತ್ಯಂತ ಮನಮೋಹಕವಾಗಿದೆ.
PC:Sujit kumar

ಅಕ್ಷರಧಾಮ ಸ್ಮಾರಕ

ಅಕ್ಷರಧಾಮ ಸ್ಮಾರಕ

ಇಲ್ಲಿ ಸುಮಾರು 500 ಪರಮಹಂಸರ ಹಲವು ಮೂರ್ತಿಗಳಿವೆ. ಅಮೃತ ಶಿಲೆಯ 65 ಅಡಿ ಎತ್ತರದ ಲೀಲಾ ಮಂಟಪ, ಭಕ್ತ ಮಂಟಪ ಹಾಗೂ ಭಕ್ತಮಂಟಪಗಳಿವೆ.
PC::Rao'djunior

ಹೋರಬಾಗದಲ್ಲಿ

ಹೋರಬಾಗದಲ್ಲಿ

ಅಕ್ಷರಧಾಮದ ಹೊರಭಾಗದಲ್ಲಿ ಹಲವಾರು ಹಿಂದೂ ದೇವತೆಗಳಾದ ಸರಸ್ವತಿ, ಲಕ್ಷ್ಮಿ, ಪಾರ್ವತಿ ಮೊದಲಾದ ದೇವಿಯರ ಮತ್ತು ಗೋಪಿ ಕೃಷ್ಣರ ರಾಸ ಲೀಲೆಗಳ ಸುಮಾರು 180 ಅಡಿಗಳ ಶಿಲ್ಪಗಳಿವೆ.
PC:Smn25hzb

ನೌಕವಿಹಾರ

ನೌಕವಿಹಾರ

ಅಕ್ಷರಧಾಮದಲ್ಲಿ ನೌಕವಿಹಾರ ಕೂಡ ಹೋಗಬಹುದಾಗಿದೆ. ಇಲ್ಲಿ ವಸ್ತು ಪ್ರದರ್ಶನಗಳು ಕೂಡ ಇವೆ.
PC:Daniel Echeverri

ದ್ವಾರಗಳು

ದ್ವಾರಗಳು

ಈ ಮೊಹೊನ್ನತ ದೇವಾಲಯದಲ್ಲಿ 3 ವಿಶಿಷ್ಟವಾದ ದ್ವಾರಗಳಿವೆ. ಅವುಗಳೆಂದರೆ ಭಕ್ತಿ ದ್ವಾರ, ಮಯೂರ ದ್ವಾರ ಹಾಗೂ ದಶ ದೌರವಾಗಿದೆ.
PC:Juthani1

ನಾರಾಯಣ ಸರೋವರ

ನಾರಾಯಣ ಸರೋವರ

ಈ ಅಕ್ಷರಧಾಮದಲ್ಲಿ ಮೂರು ದಿಕ್ಕುಗಳಲ್ಲೂ ನಾರಾಯಣ ಸರೋವರ ನಿರ್ಮಾಣವಾಗಿವೆ. ಅತ್ಯಂತ ಪವಿತ್ರವಾದ ಜಲ ಎಂದು ಬಿಂಬಿತವಾಗಿದೆ.
PC:Juthani1

ಭೋಜನ ಶಾಲೆ

ಭೋಜನ ಶಾಲೆ

ಇಲ್ಲಿ ಭೋಜನ ಶಾಲೆಯು ಶುದ್ಧವಾದ ಹಾಗೂ ಸ್ವಾಧಿಷ್ಟವಾದ ಆಹಾರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಲಾಗುತ್ತದೆ. ಈ ಭೋಜನ ಶಾಲೆಯನ್ನು ಪ್ರೇಮವತೀ ಭೋಜನ ಶಾಲೆ ಎಂದು ಕರೆಯಲಾಗುತ್ತದೆ.
PC:World

ಬೋಚನಸನ್ವಾಸಿ ಶ್ರೀ ಅಕ್ಷರಪುರುಷೋತ್ತಮ ಸ್ವಾಮಿ ಸಂಸ್ಥಾನ

ಬೋಚನಸನ್ವಾಸಿ ಶ್ರೀ ಅಕ್ಷರಪುರುಷೋತ್ತಮ ಸ್ವಾಮಿ ಸಂಸ್ಥಾನ

ಅಕ್ಷರಧಾಮ ದೇವಾಲಯಗಳನ್ನು ಮಾಹಾರಾಜ ಸ್ವಾಮಿ ಬೋಚನಸನ್ವಾಸಿ ಶ್ರೀ ಅಕ್ಷರಪುರುಷೋತ್ತಮ ಸ್ವಾಮಿ ಸಂಸ್ಥಾನ ನೇತೃತ್ವದಲ್ಲಿ ವಿಶ್ವದ ಹಲವಾರು ಕಡೆಯಲ್ಲಿ ಸ್ಥಾಪಿಸಲಾಗುತ್ತಿದೆ.
PC:Kapil.xerox

ಈ ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯ

ಈ ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯ

ಬೆಳಗ್ಗೆ 10:30 ರಿಂದ ಸಂಜೆ 6:30ರವರೆಗೆ ಉತ್ತಮ ಸಮಯವಾಗಿದೆ.
PC:vaibhav shukla

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X