Search
  • Follow NativePlanet
Share
» »ಪುರುಷಾಂಗವನ್ನು ಹೊಂದಿರುವ ಶಿವಲಿಂಗ ಎಲ್ಲಿದೆ ಗೊತ್ತ?

ಪುರುಷಾಂಗವನ್ನು ಹೊಂದಿರುವ ಶಿವಲಿಂಗ ಎಲ್ಲಿದೆ ಗೊತ್ತ?

ಶಿವಾಲಯದಲ್ಲಿರುವ ಶಿವನ ಮೂರ್ತಿಯನ್ನು ದರ್ಶನ ಮಾಡುವುದು ಎಂದರೆ ನಿಜಕ್ಕೂ ಜೀವನದಲ್ಲಿನ ಯಾವುದೇ ಕಷ್ಟಗಳು ನಿವಾರಣೆ ಮಾಡಿಕೊಳ್ಳುವುದೇ ಆಗಿದೆ. ಸರ್ವಾಂತರಯಾಮಿಯಾಗಿರುವ ಆ ಮಹೇಶ್ವರನು ಲಿಂಗ ಸ್ವರೂಪಿಯಾಗಿ ದರ್ಶನವನ್ನು ನೀಡುತ್ತಾನೆ. ವೈಷ್ಣವರು, ಶ

ಶಿವಾಲಯದಲ್ಲಿರುವ ಶಿವನ ಮೂರ್ತಿಯನ್ನು ದರ್ಶನ ಮಾಡುವುದು ಎಂದರೆ ನಿಜಕ್ಕೂ ಜೀವನದಲ್ಲಿನ ಯಾವುದೇ ಕಷ್ಟಗಳು ನಿವಾರಣೆ ಮಾಡಿಕೊಳ್ಳುವುದೇ ಆಗಿದೆ. ಸರ್ವಾಂತರಯಾಮಿಯಾಗಿರುವ ಆ ಮಹೇಶ್ವರನು ಲಿಂಗ ಸ್ವರೂಪಿಯಾಗಿ ದರ್ಶನವನ್ನು ನೀಡುತ್ತಾನೆ. ವೈಷ್ಣವರು, ಶೈವರು ಎಂಬ ಯಾವುದೇ ಭೇದ-ಭಾವವಿಲ್ಲದೇ ಇರುವವರು ಕೂಡ ಶಿವಾಲಯಕ್ಕೆ ಭೇಟಿ ನೀಡುತ್ತಾರೆ. ನಾವು ದಿನನಿತ್ಯ ಶಿವಲಿಂಗದ ಮಹಿಮೆಯನ್ನು ನೋಡುತ್ತಾ, ಕೇಳುತ್ತಲೇ ಬಂದಿದ್ದೇವೆ.

ಹಾಗಾದರೆ ಈ ಲೇಖನದಲ್ಲಿಯೂ ಕೂಡ ಒಂದು ವಿಭಿನ್ನವಾದ ಶಿವಲಿಂಗದ ಬಗ್ಗೆ ಮಾಹಿತಿಯನ್ನು ಪಡೆಯೋಣ. ವಿಶೇಷ ಏನಪ್ಪ ಎಂದರೆ ಈ ಶಿವಾಲಯದಲ್ಲಿನ ಶಿವಲಿಂಗವನ್ನು ದರ್ಶನ ಮಾಡಿದರೆ ಸಕಲ ಪಾಪಗಳು ನಾಶವಾಗುತ್ತದೆ ಎಂದು ನಂಬಲಾಗಿದೆ. ಮುಖ್ಯವಾಗಿ ಇಲ್ಲಿನ ಶಿವಲಿಂಗವು ಪುರುಷಾಂಗ ಆಕಾರದಲ್ಲಿದ್ದು, ವಿಚಿತ್ರವಾಗಿದೆ. ಇಲ್ಲಿನ ಶಿವಲಿಂಗವು ಅತ್ಯಂತ ಪುರಾತನವಾದುದು, ಅಷ್ಟೇ ಅಲ್ಲ ಇದು ಸುಮಾರು 1 ನೇ ಶತಮಾನಕ್ಕೆ ಸೇರಿದ್ದು ಎಂದು ನಂಬಲಾಗಿದೆ.

ಈ ಲೇಖನದ ಮೂಲಕ ಆ ವಿಚಿತ್ರವಾದ ಶಿವಲಿಂಗ ಎಲ್ಲಿದೆ? ಆ ಶಿವಲಿಂಗವು ಪುರುಷಾಂಗ ರೂಪದಲ್ಲಿ ಇರಲು ಕಾರಣವೇನು? ಆ ಶಿವಲಿಂಗದ ಮಹಿಮೆಯಾದರೂ ಏನು ಎಂಬ ಹಲವಾರು ಪ್ರೆಶ್ನೆಗೆ ಉತ್ತರ ತಿಳಿಯೋಣ.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಆ ಶಿವಾಲಯವು ಭೂಮಿಯಿಂದ 6 ಅಡಿ ಒಳಗಿನಿಂದ ಬೆಳೆದಿದೆ. ಈ ಶಿವಾಲಯವು 1 ನೇ ಶತಮಾನಕ್ಕೆ ಸೇರಿದ್ದು ಎಂದು ಪುರಾತತ್ತ್ವ ಇಲಾಖೆಯವರಿಂದ ತಿಳಿದು ಬಂದಿದೆ. ಪ್ರಪಂಚದಲ್ಲಿ ಎಲ್ಲಿಯೂ ಕಾಣದೇ ಇರುವಂತಹ ವಿಭಿನ್ನವಾದ ಶಿವಲಿಂಗವನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿನ ಶಿವಲಿಂಗವು 7 ಅಡಿ ಎತ್ತರದಲ್ಲಿದ್ದಾನೆ. ಮುಖ್ಯವಾಗಿ ಈ ಶಿವಲಿಂಗವು ಪುರುಷಾಂಗವನ್ನು ಹೊಂದಿರುವ ವಿಚಿತ್ರವಾದ ಲಿಂಗವಾಗಿದೆ.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ದೇವಾಲಯದಲ್ಲಿನ ಶಿವಲಿಂಗದ ವಿಶೇಷವೆನೆಂದರೆ ಇಲ್ಲಿ ಕೇವಲ ಲಿಂಗವೇ ಅಲ್ಲದೇ ಶಿವನು ಮಾನವನ ವೇಷಧಾರಿಯಾಗಿ ನೆಲೆಸಿದ್ದಾನೆ. ಕೈಯಲ್ಲಿ ಗುರಾಣಿಯನ್ನು ಹಿಡಿದುಕೊಂಡು ಭೇಟೆಗಾರನಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾನೆ.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ದೇವಾಲಯವು ಆಂಧ್ರ ಪ್ರದೇಶ ರಾಜ್ಯದ ಗುಡಿಮಲ್ಲ, ಚಿತ್ತೂರು (ತಿರುಪತಿಗೆ ತೆರಳುವ ದಾರಿಯಲ್ಲಿ) ಮಂಡಲಕ್ಕೆ ಸೇರಿದ ಒಂದು ಗ್ರಾಮವಿದೆ. ಆಂಧ್ರದ ಶಾತವಾಹನರ ಕಾಲದ ಪುರಾತನವಾದ ಶಿವಾಲಯ ಎಂದು ಗುರುತಿಸಲಾಗಿದೆ. ಇದು ಕ್ರಿ.ಪೂ 2 ಅಥವಾ 3 ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಲೆಕ್ಕಚಾರ ಹಾಕಲಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಾಗಿ ಒಮ್ಮೆ ಚಂದ್ರಗಿರಿಯಲ್ಲಿನ ಮ್ಯೂಜಿಯಂನಲ್ಲಿ ಲಭ್ಯವಿದೆ.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ದೇವಾಲಯವನ್ನು ಕೆಲವು ಕಾಲ ಚಂದ್ರಗಿರಿ ರಾಜರು ಅಭಿವೃದ್ಧಿ ಪಡಿಸಿದರು. ತದನಂತರದ ಕಾಲದಲ್ಲಿ ಕೆಲವು ಮುಸ್ಲಿಂರ ದಾಳಿಯಿಂದಾಗಿ ಚಂದ್ರಗಿರಿ ಸಂಸ್ಥಾನದ ಜೊತೆ ಜೊತೆಗೆ ದೇವಾಲಯವನ್ನು ಕೂಡ ಹಾಳು ಮಾಡಿದರು. ಆದರೆ ಗರ್ಭಗುಡಿಯಲ್ಲಿನ ಮೂಲ ವಿರಾಟನಿಗೆ ಮಾತ್ರ ಯಾವುದೇ ಹಾನಿ ಆಗಲಿಲ್ಲ.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಗುಡಿಮಲ್ಲದ ಶಿವಾಲಯದಲ್ಲಿನ ಶಿವನು ಪರಮೇಶ್ವರನಾಗಿ ಪೂಜೆಗಳನ್ನು ಮಾಡಿಕೊಳ್ಳುತ್ತಿದ್ದಾನೆ. ಇಲ್ಲಿನ ಶಿವಲಿಂಗವು ಹಲವಾರು ವಿಶೇಷಗಳನ್ನು ಹೊಂದಿದೆ. ಅದೆನೆಂದರೆ ಶಿವಲಿಂಗವು ಭೂಮಿಯ ಕೆಳಭಾಗದಿಂದ ಆರಂಭಗೊಂಡಿರುವುದು. ಶಿವನು ಲಿಂಗ ರೂಪದಲ್ಲಿ ಅಲ್ಲದೇ ಮಾನವ ರೂಪದಲ್ಲಿ (ಬೇಟೆಗಾರ) ಇರುವುದು ಮತ್ತೊಂದು ವಿಶೇಷವಾಗಿದೆ.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವು ಕಾಫಿ ಬಣ್ಣದ ಕಲ್ಲಿನಲ್ಲಿ ಮಾಡಿರುವ ಮಾನವ ರೂಪಿ ಶಿವಲಿಂಗವಾಗಿದೆ. ಲಿಂಗವು ಸುಮಾರು 5 ಅಡಿ ಎತ್ತರ, 1 ಅಡಿ ಅಗಲವನ್ನು ಹೊಂದಿದೆ. ಇಲ್ಲಿನ ಸ್ವಾಮಿಯು ಕೈಗೆ ವಿವಿಧ ಆಭರಣಗಳು, ಸೊಂಟದಿಂದ ಕಾಲಿನವರೆಗೆ ನೇತಾಡುತ್ತಿರುವ ವಸ್ತ್ರವನ್ನು ಧರಿಸಿದ್ದಾನೆ.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಲಿಂಗದ ಅಗ್ರಭಾಗ ಮತ್ತು ಕೆಳಗಿನ ಭಾಗವು ಮಾನವನು ಒಂದು ಎತ್ತರವಾದ ಸ್ತಂಭದ ಮೇಲೆ ನಿಂತಿರುವುದಾಗಿ ಭಾಸವಾಗುತ್ತದೆ. ಇದು ಆದಿ ಪ್ರಾಚೀನವಾದ ಲಿಂಗ ಎಂದು ಗುರುತಿಸಲಾಗಿದೆ. ಗುಡಿಮಲ್ಲವು 2009 ರವರೆಗೆ ಪುರಾವಸ್ತು ಶಾಖೆಯವರ ಅಧೀನದಲ್ಲಿತ್ತು. ಅಲ್ಲಿಯವರೆಗೆ ಸ್ವಾಮಿಗೆ ಯಾವುದೇ ಪೂಜೆಗಳು ನೆರವೇರಲಿಲ್ಲ. ಹೀಗಾಗಿಯೇ ಪ್ರಜೆಗಳಿಗೆ ಈ ದೇವಾಲಯದ ಬಗ್ಗೆ ಅಷ್ಟು ಮಾಹಿತಿ ತಿಳಿದಿಲ್ಲ.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಗುಡಿಮಲ್ಲಂ ಎಂಬ ಸ್ಥಳವು ಒಂದು ಚಿಕ್ಕದಾದ ಗ್ರಾಮವಾಗಿದೆ. ತಿರುಪತಿಯಿಂದ ಸುಮಾರು 22 ಕಿ.ಮೀ ದೂರದಲ್ಲಿ ಈ ಶಿವಾಲಯವಿದೆ. ಈ ದೇವಾಲಯವನ್ನು ಪರಶುರಾಮೇಶ್ವರ ದೇವಾಲಯ ಎಂದೂ ಕೂಡ ಕರೆಯುತ್ತಾರೆ. ಅಷ್ಟು ದೂರ ತೆರಳಿ ದರ್ಶಿಸದೇ ಇರುವವರು ಚಂದ್ರಗಿರಿ ಕೋಟೆಯಲ್ಲಿ ಅದೇ ಶಿವಲಿಂಗವನ್ನು ಹೋಲುವ ಪ್ರತಿ ರೂಪವನ್ನು ಕಾಣಬಹುದು.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಇದು ಅತ್ಯಂತ ಪುರಾತನವಾದ ಶಿವಲಿಂಗವೆಂದೂ ಕೂಡ ಮನ್ನಣೆ ಪಡೆದಿದೆ. ಋಗ್ವೇದದ ಕಾಲಕ್ಕೆ ಈ ಶಿವಲಿಂಗವು ಸಂಬಂಧಿಸಿದೆ ಎಂದು ನಂಬಲಾಗಿದೆ. ಇದೊಂದು ಪ್ರಾಚೀನವಾದ ಲಿಂಗ ಪೂಜಾ ವಿಧಾನವೆಂದೂ ಸಹ ಹೇಳಲಾಗುತ್ತಿದೆ. ಗರ್ಭಗುಡಿಯು ಕೂಡ ಪುಷ್ಪಾಕಾರದಲ್ಲಿದ್ದು, ಗಂಭೀರವಾಗಿರುತ್ತದೆ.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ದೇವಾಲಯದ ಶಾಸನದ ಮೂಲಕ ಲಿಂಗವನ್ನು ಪರಮೇಶ್ವರನಾಗಿ ಕರೆಯುತ್ತಿದ್ದರು. ಈ ಲಿಂಗದ ಸುತ್ತಲೂ ನಡೆಸಿದ ಕೆಲವು ಅನ್ವೇಷಣೆಯ ಪ್ರಕಾರ 2 ನೇ ಶತಮಾನಕ್ಕೆ ಸೇರಿದ ಪ್ರಾಚೀನವಾದ ದೇವಾಲಯದ ಅವಶೇಷಗಳು ಕೂಡ ಬೆಳಕಿಗೆ ಬಂದಿವೆ. ಉಜ್ಜಯಿನಿಯಲ್ಲಿ ದೊರೆತ ನಾಣ್ಯಗಳ ಮೇಲೆ ಇರುವ ಚಿತ್ರಗಳನ್ನು ಇಲ್ಲಿನ ನಾಣ್ಯದ ಮೇಲೆಯೂ ಕೂಡ ಕಾಣಬಹುದಾಗಿದೆ.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಶಿವಲಿಂಗದ ಮೇಲೆ ಒಂದು ರೋಚಕವಾದ ಕಥೆ ಇದೆ. ಅದೆನೆಂದರೆ ಪುರಾಣಗಳ ಕಥೆಯ ಪ್ರಕಾರ ಪರಶುರಾಮನು ತನ್ನ ತಾಯಿಯ ಶಿರಛೇಧನ ಮಾಡಿದನಂತರ ಆ ದುಃಖದಿಂದ ಹೊರಬರಲು ಒಂದು ಶಿವಲಿಂಗವನ್ನು ಹುಡುಕುತ್ತಾ ಇರುತ್ತಾನೆ. ಹೀಗೆ ದಿನಗಳು ಕಳೆದ ನಂತರ, ಪರಶುರಾಮನಿಗೆ ಒಂದು ಅರಣ್ಯದಲ್ಲಿ ಶಿವಲಿಂಗ ದೊರೆಯುತ್ತದೆ.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಆ ಶಿವಲಿಂಗದ ಸಮೀಪ ಒಂದು ಕೊಳವನ್ನು ಸ್ಥಾಪನೆ ಮಾಡಿ, ಲಿಂಗವನ್ನು ಪ್ರತಿಷ್ಟಾಪಿಸಿ ಪೂಜಿಸುತ್ತಿರುತ್ತಾನೆ. ಆ ಕೊಳದಲ್ಲಿ ಒಂದು ಪವಿತ್ರವಾದ ದೈವಿಕ ಪುಷ್ಪವು ಹುಟ್ಟುತ್ತಾ ಇರುತ್ತದೆ. ಆ ಪುಷ್ಪದಿಂದಲೇ ಶಿವಲಿಂಗವನ್ನು ನಿತ್ಯವು ಪೂಜಿಸುತ್ತಿದ್ದನು. ಆ ಪುಷ್ಪವನ್ನು ಅರಣ್ಯದಲ್ಲಿನ ಜಂತುಗಳಿಂದ ಕಾಪಾಡಲು ಪರಶುರಾಮನು ಚಿತ್ರ ಸೇನ ಎಂಬ ಯಕ್ಷನನ್ನು ನೇಮಕ ಮಾಡುತ್ತಾನೆ.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಅದಕ್ಕೆ ಪ್ರತಿಯಾಗಿ ಪರಶುರಾಮನು ಯಕ್ಷನಿಗೆ ದಿನಿತ್ಯ ಒಂದು ಜೀವಿಯನ್ನು ಹಾಗು ಆಟದ ಬೊಂಬೆಯನ್ನು ನೀಡುತ್ತಿರುತ್ತಾನೆ. ಒಮ್ಮೆ ಪರಶುರಾಮನು ಇಲ್ಲದ ಸಮಯದಲ್ಲಿ ಚಿತ್ರಸೇನನು, ಆ ಪುಷ್ಪದಿಂದ ಶಿವನಿಗೆ ಪೂಜೆ ಮಾಡುತ್ತಾನೆ.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಪರಶುರಾಮ ಮರಳಿದ ನಂತರ ಅಲ್ಲಿ ಪುಷ್ಪವನ್ನು ನೋಡುತ್ತಾನೆ. ಅಲ್ಲಿ ಇಲ್ಲದೇ ಇರುವುದನ್ನು ಕಂಡ ಪರಶುರಾಮನು ಅತ್ಯಂತ ಕೋಪಗೊಂಡು ಚಿತ್ರ ಸೇನನ ಮೇಲೆ ಧಾಳಿ ಮಾಡುತ್ತಾನೆ. ಆ ಯುದ್ಧವು ಸರಿ ಸುಮಾರು 14 ವರ್ಷಗಳ ಕಾಲ ನಡೆಯುತ್ತದೆ. ಹಾಗಾಗಿಯೇ ಆ ಪ್ರದೇಶವನ್ನು ಗುಡಿಮಲ್ಲಂ ಎಂದು ಕರೆಯುತ್ತಾರೆ. ಆ ಯುದ್ಧ ಮುಗಿಯದೇ ಹೋದದ್ದರಿಂದ ಪರಮಶಿವನು ಪ್ರತ್ಯಕ್ಷವಾಗಿ, ತಾನು 2 ವಿಭಿನ್ನವಾದ ರೂಪವನ್ನು ಧರಿಸಿ ಏಕವಾಗುತ್ತಾನೆ ಎಂದು ಹೇಳುತ್ತಾನೆ.

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಹಾಗಾಗಿಯೇ ಇಲ್ಲಿನ ಶಿವಲಿಂಗದ ಒಂದು ಆಕಾರವು ಪರಶುರಾಮನಾಗಿ (ವಿಷ್ಣು ರೂಪದಲ್ಲಿ) ಮತ್ತೊಂದು ಆಕಾರದಲ್ಲಿ ಬ್ರಹ್ಮಸೇನನಾಗಿ ನೆಲೆಸಿದ್ದಾನೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಮತ್ತೊಂದು ರಹಸ್ಯವಾದ ಸನ್ನಿವೇಶವು ಪ್ರಚಾರದಲ್ಲಿದೆ. ಅದೆನೆಂದರೆ..

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ಲಿಂಗವನ್ನು ಒಮ್ಮೆ ದರ್ಶಿಸಿದರೆ ಸಾಕು ಜೀವನದಲ್ಲಿನ ಎಲ್ಲಾ ಪೀಡೆಗಳು ನಶಿಸುತ್ತವೆ!

ಈ ದೇವಾಲಯದಲ್ಲಿನ ಮತ್ತೊಂದು ಅದ್ಭುತವೆನೆಂದರೆ, ಉದಯಿಸುತ್ತಿರುವ ಸೂರ್ಯ ಕಿರಣಗಳು ಉತ್ತರಾಯಣ ಮತ್ತು ದಕ್ಷಿಣಾಯಣದಿಂದ 2 ಬಾರಿ ಕಲ್ಲಿನ ಗೋಡೆಯ ಮೇಲೆ ಕೆತ್ತನೆ ಮಾಡಿರುವ ಪ್ರಧಾನವಾದ ಶಿವಲಿಂಗದ ಮೇಲೆ ಕಿರಣಗಳು ಬೀಳುತ್ತದೆ. ಈ ಶಿಲ್ಪವನ್ನು ಕಂಡ ಹಲವಾರು ಮಂದಿ ಚರಿತ್ರಕಾರರು ಇದು ಋಗ್ವೇದ ಕಾಲದ್ದು ಎಂದು ಹೇಳುತ್ತಾರೆ.

ಹೇಗೆ ತೆರಳಬೇಕು?

ಹೇಗೆ ತೆರಳಬೇಕು?

ತಿರುಪತಿಯಿಂದ ರೇಣಿಗುಂಟ, ತಿರುಚಾನೂರ್‍ನ ಮೇಲೆ ಗುಡಿ ಮಲ್ಲಂಗೆ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ. ತಿರುಪತಿಯಿಂದ ಈ ದೇವಾಲಯಕ್ಕೆ ತೆರಳಲು ಕೇವಲ 42 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X