Search
  • Follow NativePlanet
Share
» »ಮಸಾಲಭರಿತ ಆಹಾರ ತಿನ್ನಬೇಕಾದರೆ ಇಲ್ಲಿಗೆ ಹೋಗಬೇಕು

ಮಸಾಲಭರಿತ ಆಹಾರ ತಿನ್ನಬೇಕಾದರೆ ಇಲ್ಲಿಗೆ ಹೋಗಬೇಕು

By Manjula Balaraj Tantry

ಭಾರತೀಯರು ಮಸಾಲಭರಿತ ಆಹಾರ ಪ್ರಿಯರಾಗಿರುವುದು ನಮಗೆಲ್ಲಾ ಗೊತ್ತಿರುವ ವಿಷಯವೇ . ಆದರೆ ಭಾರತದಲ್ಲಿ ಕೆಲವರು ಉಳಿದೆಲ್ಲವುಗಳಿಗಿಂತ ಇಂತಹ ಆಹಾರವನ್ನು ಇಷ್ಟ ಪಡುತ್ತಾರೆ. ಭಾರತದಲ್ಲಿ ನೀವು ಎಲ್ಲಾ ಕಡೆಗಳಲ್ಲೂ ಕೂಡಾ ಇಂತಹ ಆಹಾರಗಳು ಸಿಗುತ್ತವೆ ಆದರೆ ಕೆಲವು ರಾಜ್ಯಗಳಲ್ಲಿ ಆಹಾರದ ವಿಷಯಕ್ಕೆ ಬಂದರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ .

ಈ ಕೆಳಗಿನ ಪಟ್ಟಿಯು ಸಾಧಾರಣ ಮಟ್ಟದ ಮಸಾಲೆ ಭರಿತ ಆಹಾರದಿಂದ ಅತ್ಯಂತ ಮಸಾಲೆಯುಕ್ತ ಆಹಾರದ ಮಟ್ಟ ಹೆಚ್ಚಿರುವ ರಾಜ್ಯದವರೆಗೆ ಇದೆ. ಅದರ ಜೊತೆಗೆ ನೀವು ಈ ಲೇಖನವನ್ನು ಓದಿ. ನಾವು ಈ ಎಲ್ಲಾ ರಾಜ್ಯಗಳಿಗೂ ಹೋಗಿ ಇಲ್ಲಿ ಯಾವುದರ ಬಗ್ಗೆ ಮಾತಾಡುತ್ತಿದ್ದೇವೆ ಮತ್ತು ಯಾವುದನ್ನು ಪರಿಶೀಲನೆ ನಡೆಸುತ್ತೇವೆ ಎಂಬ ಭರವಸೆ ನೀಡುತ್ತೇವೆ. ನೀವು ಹೆಚ್ಚು ಮಸಾಲೆ ಪದಾರ್ಥಗಳನ್ನು ಇಷ್ಟ ಪಡುವವರಲ್ಲವಾದರೂ ನೀವು ಸಾಹಸಿಗಳಾಗಿದ್ದು ಮತ್ತು ನೀವು ತಿನ್ನುವ ಆಹಾರಗಳಲ್ಲಿ ಕೆಲವು ಗಮನಾರ್ಹವಾದ ಬದಲಾವಣೆ ಮಾಡಬಹುದಾಗಿದೆ.

ರಾಜಸ್ಥಾನ

ರಾಜಸ್ಥಾನ

ರಾಜಸ್ಥಾನದ ಜನರು ತಮ್ಮ ವರ್ಣರಂಜಿತ ಕರಕುಶಲತೆಗೆ ಕೆಂಪು ಕಟ್ಟಡಗಳು, ಅವರ ಭವ್ಯ ಇತಿಹಾಸ ಮತ್ತು ಅಲ್ಲಿಯ ಆಹಾರ ಕ್ರಮಗಳಿಗೆ ಹೆಸರುವಾಸಿಯಾದವರಾಗಿದ್ದಾರೆ. ರಾಜಸ್ಥಾನದ ಆಹಾರಗಳು ಶಾಖಾಹಾರಿ ಪಟ್ಟಿಯಲ್ಲಿ ಪ್ರಮುಖ ಸ್ಥಾನವನ್ನು ಅಲಂಕರಿಸುತ್ತವೆ. ವೈವಿಧ್ಯಮಯ ಶಾಖಾಹಾರಿ ಜನತೆಗೆ ಇದಕ್ಕಾಗಿ ಧನ್ಯವಾದ ಹೇಳಬೇಕು. ಈ ರಾಜ್ಯದ ಆಹಾರ ಗಳಲ್ಲಿ ಎಣ್ಣೆ ಮತ್ತು ಮಸಾಲೆ ಪದಾರ್ಥವನ್ನು ಹೆಚ್ಚಾಗಿ ಉಪಯೋಗಿಸಲು ಇಷ್ಟಪಡುತ್ತಾರೆ. ರಾಜಸ್ಥಾನದ ಕೆಲವು ಮಸಾಲೆಯುಕ್ತ ಆಹಾರಗಳಲ್ಲಿ ಗಾಟೇ ಕಿ ಸಬ್ಜಿ, ಕೇರ್‍ ಸಾಂಗ್ರಿಯಾ ಕೀ ಸಬ್ಜಿ ಮತ್ತು ಕೇರ್‍ ಉಪ್ಪಿನಕಾಯಿ ಇತ್ಯಾದಿಗಳು ಸೇರಿವೆ.

ನೀವೇನಾದರೂ ಮಾಂಸಾಹಾರಿಗಳಾಗಿದ್ದರೆ ಮತ್ತು ಮಸಾಲೆ ಭರಿತ ಆಹಾರ ಇಷ್ಟ ಪಡುವವರಾಗಿದ್ದಲ್ಲಿ ರಾಜಸ್ಥಾನದ ಇನ್ನೊಂದು ಮಸಾಲೆಯುಕ್ತ ಆಹಾರಗಳಲ್ಲಿ ಲಾಲ್ ಮಾನ್ಸ್ ಹೆಸರುವಾಸಿಯಾಗಿದ್ದಾಗಿದ್ದು ಇದು ನಿಮಗೆ ಹೇಳಿ ಮಾಡಿಸಿದ ಊಟಗಳಲ್ಲಿ ಒಂದಾಗಿದೆ. ಇದೊಂದು ಮಥಾನಿಯ ಎಂಬ ಅತ್ಯಂತ ಮಸಾಲೆಭರಿತ ಮೆಣಸಿನಕಾಯಿಯನ್ನು ಉಪಯೋಗಿಸಿ ಬೇಯಿಸಿದ ಮಟನ್ ನ ಒಂದು ಗ್ರೇವಿ ಯಾಗಿದೆ. ಮಥಾನಿಯ ಮೆಣಸಿನ ಕಾಯಿಗಳನ್ನು ರಾಜಸ್ಥಾನದ ಜೋಧಾಪುರ ಪಟ್ಟಣದಲ್ಲಿ ಬೆಳೆಸಲಾಗುತ್ತದೆ.

ಇಲ್ಲಿ ರುಚಿ ನೋಡಲೇ ಬೇಕಾದ ಆಹಾರ

ಇಲ್ಲಿ ರುಚಿ ನೋಡಲೇ ಬೇಕಾದ ಆಹಾರ

Adhikarikm

ಈ ರಾಜ್ಯವು ಮೆಣಸಿನಕಾಯಿಗಳ ಬೆಳೆಗೆ ಹೆಸರುವಾಸಿಯಾಗಿದೆ ಮತ್ತು ಕೆಲವು ಬೆರಳು ಚೀಪುವಂತೆ ಮಾಡುವ ಉಪ್ಪಿನ ಕಾಯಿಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ನೀವೇನಾದರೂ ಎಣ್ಣೆಯುಕ್ತ, ಮಸಾಲೆಯುಕ್ತ ಮತ್ತು ಭಕ್ಷ್ಯ ಭೋಜನಗಳನ್ನು ಸವಿಯಲು ಬಯಸುತ್ತಿರುವಿರಾದಲ್ಲಿ ಅದಕ್ಕೆ ಸೂಕ್ತವಾದ ಜಾಗವೆಂದರೆ ಅದು ರಾಜಸ್ಥಾನ.

ಈ ರಾಜ್ಯದ ಪ್ರತೀ ನಗರಗಳಲ್ಲಿಯೂ ವಿವಿಧ ಬಗೆಯ ವಿಭಿನ್ನ ಆಹಾರಗಳನ್ನು ಕಾಣಬಹುದಾಗಿದೆ. ಆದರೆ ಎಲ್ಲಾ ಕಡೆಗಳಲ್ಲೂ ಎಣ್ಣೆಯುಕ್ತ ಮತ್ತು ಮಸಾಲೆಯು ಆಹಾರದಲ್ಲಿರುವುದು ಒಂದೇ ರೀತಿಯಾಗಿರುತ್ತದೆ. ಆದರೂ ಕೂಡಾ ರಾಜಸ್ಥಾನಿ ಆಹಾರಗಳಲ್ಲಿರುವ ಎಣ್ಣೆ ಮತ್ತು ಮಸಾಲೆಗಳಿದ್ದರೂ ಇದು ರುಚಿಕರವಾದುದಾಗಿರುತ್ತದೆ.


ಇಲ್ಲಿ ರುಚಿ ನೋಡಲೇ ಬೇಕಾದ ಆಹಾರಗಳೆಂದರೆ : ಗಟ್ಟೇ ಕಿ ಸಬ್ಜಿ, ಲಾಲ್ ಮಾನ್ಸ್, ಕೇರ್‍ ಸಾಂಗ್ರಿ ಮತ್ತು ಮಿರ್ಚಿ ಬೊಂಡಾ

ನವ ದೆಹಲಿ

ನವ ದೆಹಲಿ

ನಾವು ದೇಶದ ಕಡಿಮೆ ಮಟ್ಟದ ಮಸಾಲೆಯಿಂದ ಉನ್ನತ ಮಟ್ಟದ ಮಸಾಲೆಯುಕ್ತ ಆಹಾರ ಪದಾರ್ಥಗಳ ಸ್ಥಳಗಳ ಬಗ್ಗೆ ಹೇಳುತ್ತಿದ್ದೇವೆ. ಇಂತಹ ಪಟ್ಟಿಯಲ್ಲಿ ನಂತರ ಬರುವುದೇ ನಮ್ಮ ದೇಶದ ರಾಜಧಾನಿ ದೆಹಲಿ. ನವದೆಹಲಿ ಫುಡ್ ಸ್ಟ್ರೀಟ್ ಗಳಿಗೆ ಹೆಸರುವಾಸಿಯಾದುದಾಗಿದೆ. ನಮಗೆ ಗೊತ್ತಿರುವಂತೆ ಇಲ್ಲಿಗೆ ಜನರು ಆಹಾರ ಸವಿಯುವ ಸಲುವಾಗಿಯೇ ಭೇಟಿ ಕೊಡುವವರಿದ್ದಾರೆ. ಇದು ಆಹಾರಪ್ರಿಯರ ಸ್ವರ್ಗವೆಂದೆನಿಸಿದೆ.

ಅನೇಕ ವರ್ಷಗಳಿಂದಲೂ ಅನೇಕ ಉತ್ತರ ಭಾರತೀಯ ಇತರ ರಾಜ್ಯದ ಜನರು ನವ ದೆಹಲಿಗೆ ಸ್ಥಳಾಂತರಗೊಂಡವರಿದ್ದಾರೆ. ಇದರಿಂದಾಗಿ ಇಲ್ಲಿ ಸಾಂಪ್ರದಾಯಿಕ ಆಹಾರಗಳ ಸಮ್ಮಿಲನವಾಗಿದೆ. ನವ ದೆಹಲಿ ಯಾವಾಗಲೂ ತರ ತರಹದ ಅಡುಗೆಗಳನ್ನು ಆಹಾರ ಪ್ರಿಯರಿಗೆ ಒದಗಿಸುತ್ತದೆ. ನವದೆಹಲಿಯ ಆಹಾರಗಳು ದಿನಕಳೆದಂತೆ ಹೇಗೆ ವಿಭಿನ್ನತೆಯನ್ನು ಹೊಂದಿದೆ ಎಂಬುದನ್ನು ನೋಡುವುದೇ ಒಂದು ಆಕರ್ಷಣೀಯವಾಗಿದೆ. ನೀವು ಎಲ್ಲಾ ತರಹದ ಮಸಾಲೆಯುಕ್ತ ಆಹಾರವನ್ನು ಇಷ್ಟ ಪಡುವವರಾಗಿದ್ದಲ್ಲಿ, ನವದೆಹಲಿಗೆ ಈ ಕೂಡಲೇ ಹೊರಡಿ ಈ ನಗರವು ನಿಮ್ಮನ್ನುಎಂದಿಗೂ ನಿರಾಸೆಗೊಳಿಸಲಾರದು.

ಇಲ್ಲಿ ತಿನ್ನಲೇ ಬೇಕಾದ ಆಹಾರ

ಇಲ್ಲಿ ತಿನ್ನಲೇ ಬೇಕಾದ ಆಹಾರ

Vashisthapathak2015

ಡೆಲ್ಲಿ ಚಾಟ್ ಅತ್ಯಂತ ಪ್ರಸಿದ್ದ ವಾದುವುಗಳಲ್ಲಿ ಒಂದಾಗಿದೆ ಮತ್ತು ಅತ್ಯಂತ ಇಷ್ಟ ಪಡುವ ಆಹಾರಗಳಲ್ಲೊಂದಾಗಿದೆ. ಆದರೆ, ಇಲ್ಲಿ ಇನ್ನೂ ಅನೇಕ ಆಹಾರಗಳಿದ್ದು ನೀವು ಇವುಗಳನ್ನು ಒಮ್ಮೆ ಪ್ರಯತ್ನಿಸಿ ನಿಮ್ಮ ಮಸಾಲೆಭರಿತ ಆಹಾರವನ್ನು ತಿನ್ನುವ ಆಸೆಯನ್ನು ಪೂರೈಸಿಕೊಳ್ಳಬಹುದಾಗಿದೆ. ಇಲ್ಲೂ ನೀವು ಸಾಹಸ ಮಾಡುವುದಾದರೆ ನಾಲಗೆ ಸುಡುವಂತಹ ಬಿಸಿಯಾದ ಮತ್ತು ಡೆತ್ ವಿಂಗ್ಸ್ ಗಳನ್ನೂ ಇಲ್ಲಿ ರುಚಿ ನೋಡಬಹುದಾಗಿದೆ.
ಇಲ್ಲಿ ತಿನ್ನಲೇ ಬೇಕಾದ ಆಹಾರಗಳೆಂದರೆ : ಮಸಾಲೆಭರಿತ ಆಲೂ ಚಾಟ್, ಬಿಸಿಯಾದ ಗೀನ್ ಬೀನ್ಸ್, ಬಿರಿಯಾನಿ ಮತ್ತು ಇನ್ನಿತರ ಚಾಟ್ ಗಳು

ಕೇರಳ

ಕೇರಳ

ನಮ್ಮ ಪಟ್ಟಿಯಲ್ಲಿ ನಂತರ ಬರುವ ಭಾರತದ ರಾಜ್ಯವೆಂದರೆ ಅದು ದಕ್ಷಿಣ ಭಾರತದ ಕೇರಳ . ನಾವು ಉತ್ತರ ಭಾರತದ ರಾಜ್ಯಗಳ ಬಗ್ಗೆ ತಿಳಿಸಿದ ನಂತರ ದಕ್ಷಿಣ ಭಾರತದ ರುಚಿಕರ ಆಹಾರಗಳ ಬಗ್ಗೆ ತಿಳಿಸಲೇಬೇಕಲ್ಲವೆ. ಜೊತೆಗೆ ದಕ್ಷಿಣ ಭಾರತದ ಆಹಾರಗಳು ಅಕ್ಕಿಯ ಕೆಕ್ ಗಳು, ಸ್ಟೀಮ್ಡ್ ಅಕ್ಕಿ, ದೋಸೆಗಳು ಮತ್ತು ಎಲ್ಲ ಆರೋಗ್ಯಕರವಾದುದಾಗಿದೆ. ಇಲ್ಲಿ ಎಲ್ಲಾ ಕಡೆ ಸಿಗುವ ಪಾಕಪದ್ದತಿಯ ಸಾಮಾನ್ಯ ವಿಷಯವೆಂದರೆ ಈ ಆಹಾರಗಳು ಒಂದೇ ಹಿತಕರವಾಗಿರುತ್ತದೆ. ಇಲ್ಲವೇ ಮಸಾಲೆಯ ಬದಲಿಗೆ ಕಟುವಾದ ಸುವಾಸನೆ ಭರಿತವಾದುದಾಗಿರುತ್ತದೆ.

ಆಹಾರದ ವಿಷಯಕ್ಕೆ ಬಂದಾಗ ದೇವರ ಸ್ವಂತ ದೇಶವಾದ ಕೇರಳವು ಪಾಕಪದ್ದತಿಯಲ್ಲಿ ತನ್ನ ಅಚ್ಚುಮೆಚ್ಚಿನ ಪ್ರಶಸ್ತಿಯನ್ನು ಉಳಿಸಿಕೊಂಡಿದೆ. ಇದು ಬಾಯಿ ನೀರೂರಿಸುವ ಕೆಲವು ಆಹಾರಗಳಿಗೆ ನೆಲೆಯಾಗಿದೆ. ಬೊಟ್ಟುಮಾಡಿ ಹೇಳಬೇಕೆಂದರೆ ಕೇರಳದ ಸಮುದ್ರಾಹಾರಿ ಪಾಕಪದ್ದತಿಯು ಎಲ್ಲರನ್ನು ಸೆಳೆಯುವಂತಹುದಾಗಿದೆ.. ಇದು ಮಾಂಸಾಹಾರಿಯಾಗಿರುತ್ತದೆ ಅಥವಾ ಇದನ್ನು ನಾವು ಸಮುದ್ರಾಹಾರ ಪ್ರಿಯರ ಸ್ವರ್ಗವೆಂದು ಹೇಳಬಹುದೆ? ಕೇರಳವು ಮಸಾಲೆಭರಿತ ಕರಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಯ ನಾಲಿಗೆ ಸುಡುವಂತಹ ಮತ್ತು ನಾಲಿಗೆ ಹರಿಯುವುದೋ ಎನ್ನುವಂತಹ ಕರಿಗಳು ಮಸಾಲೆಭರಿತ ಆಹಾರಪ್ರಿಯರಿಗೆ ಇದನ್ನು ಸೇವಿಸುವುದೇ ಒಂದು ಹವ್ಯಾಸ ಎನ್ನುವಂತಾಗಿದೆ.

ಇಲ್ಲಿ ತಿನ್ನಲೇ ಬೇಕಾದ ಆಹಾರ

ಇಲ್ಲಿ ತಿನ್ನಲೇ ಬೇಕಾದ ಆಹಾರ

ಕೇರಳದ ಮೀನುಗಳು ಮತ್ತು ಅದರ ಆಹಾರ ಪಾಕಪದ್ದತಿಯ ಶೈಲಿಗಳ ಪಟ್ಟಿಯ ಹೊರತಾಗಿಯೂ ಇಲ್ಲಿಯ ಮಸಾಲೆಭರಿತ ಚಿಕನ್ ಕೂಡ ಅತ್ಯಂತ ಜನಪ್ರಿಯ ಆಹಾರಗಳಲ್ಲೊಂದಾಗಿದೆ. ನೀವು ಭಾರತೀಯ ರಾಜ್ಯಗಳಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಮಸಾಲೆಯ ರುಚಿ ಹೇಗೆ ಬದಲಾಗುತ್ತದೆ ಎಂಬುದನ್ನು ನೋಡಬಹುದು ಮತ್ತು ಕೇರಳದ ಪಾಕಪದ್ದತಿಯು ಅದರ ಆಹಾರಕ್ಕೆ ಒಂದು ವಿಭಿನ್ನ ರೀತಿಯ ಸುವಾಸನೆಯನ್ನು ಮತ್ತು ರುಚಿಯನ್ನು ಕೊಡುತ್ತದೆ.

ಇಲ್ಲಿ ತಿನ್ನಲೇ ಬೇಕಾದ ಆಹಾರವೆಂದರೆ : ಕೇರಳದ ಚಿಕನ್ ಕರಿ, ಮಟನ್ ಕರಿ, ಮಸಾಲೆಭರಿತ ಚಿಕನ್ ಫ್ರೈ ಮತ್ತು ಫ್ರಾನ್ ಕರಿ.

ಆಂಧ್ರ ಪ್ರದೇಶ

ಆಂಧ್ರ ಪ್ರದೇಶ

Mdsmds0

ನಮ್ಮ ಪಟ್ಟಿಯಲ್ಲಿಯ ಕೊನೆಯಲ್ಲಿ ಎರಡನೇ ಸ್ಥಾನದಲ್ಲಿರುವುದು ಆಂಧ್ರಪ್ರದೇಶ. ಈ ರಾಜ್ಯವು ಗುಂಟೂರು ಮೆಣಸಿನ ಕಾಯಿಯ ಬೆಳೆಗೆ ಪ್ರಸಿದ್ದವಾಗಿದೆ. ಇದು ಜಗತ್ತಿನ ಅತ್ಯಂತ ಖಾರವಾದ ಮೆಣಸಿನಕಾಯಿಗಳಲ್ಲಿ ಒಂದಾಗಿದೆ. ಮುಖ್ಯವಾಗಿ ಮಾಂಸಾಹಾರಕ್ಕೆ ಪ್ರಸಿದ್ದವಾಗಿರುವ ಆಂಧ್ರದ ಪಾಕಪದ್ದತಿಯು ಕರಿಗಳು ಮತ್ತು ಫ್ರೈಗಳ ಸಮ್ಮಿಶ್ರಣವಾಗಿದೆ.

ಗುಂಟೂರು ಮೆಣಸಿನಕಾಯಿ ವಡೆಗಳಿಂದ ಪ್ರಾರಂಭವಾಗಿ ಮಟನ್ ಕರಿಗಳವರೆಗೂ ಆಂಧ್ರವು ಆಹಾರ ಸವಿಯುವವರಿಗೆ ಒಂದಲ್ಲ ಒಂದು ರೀತಿಯ ವಿಶೇಷತೆಯನ್ನು ಒದಗಿಸಿಕೊಡುತ್ತದೆ. ಇಲ್ಲಿಯ ಖಾರ ಮಸಾಲೆಯ ಮಟ್ಟದಿಂದಾಗಿ ಆಂಧ್ರವನ್ನು ಭಾರತದ ಮೆಕ್ಸಿಕೋ ಗೆ ಹೋಲಿಸಲಾಗುತ್ತದೆ. ಇಲ್ಲಿಯ ಅಕ್ಕಿಯ ಊಟವೂ ಕೂಡಾ ಮಸಾಲೆಭರಿತವಾದುದಾಗಿರುತ್ತದೆ. ಈ ಭವ್ಯವಾದ ಆಹಾರದ ಮೂಲಕ್ಕೆ ನಾವು ನಿಜವಾಗಿಯೂ ಧನ್ಯವಾದ ಹೇಳಬೇಕು. ಇಲ್ಲಿಯ ಕೆಂಪು -ಬಿಸಿ ಊಟಕ್ಕೆ ನವಾಬರ ಸಂಪ್ರದಾಯವು ಕೂಡ ಇಲ್ಲಿಯ ಪಾಕಪದ್ದತಿಗೆ ಸಹಾಯವಾಗಿದೆ ಎಂದು ಹೇಳಬಹುದು .

ಇಲ್ಲಿ ರುಚಿ ನೋಡಲೇ ಬೇಕಾದ ಆಹಾರ

ಇಲ್ಲಿ ರುಚಿ ನೋಡಲೇ ಬೇಕಾದ ಆಹಾರ

ಆಂಧ್ರದ ಜನರು ಮಸಾಲೆಯ ಸ್ಪರ್ಶವಿರುವ ಆಹಾರವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಮತ್ತು ನೀವೇನಾದರು ಸಾಹಸಿಗಳಾಗಿದ್ದು ಆಹಾರದಲ್ಲಿ ಶೋಧನೆ ಮಾಡಬೇಕೆಂದಿರುವಲ್ಲಿ ಬೇರೆ ಎಲ್ಲೂ ನೋಡಬೇಡಿ ಮಸಾಲೆ ಆಹಾರಪ್ರಿಯರ ಸ್ವರ್ಗವಾಗಿರುವ ಆಂಧ್ರಪ್ರದೇಶಕ್ಕೆ ಭೇಟಿ ನೀಡಿ.

ಇಲ್ಲಿ ಪ್ರಯತ್ನಿಸಬೇಕಾದ ಆಹಾರಗಳು : ಪುಳಿಹೋರಾ, ಚೇಪಾಪುಲುಸು, ಗೊಂಗೂರ ಉಪ್ಪಿನಕಾಯಿ ಮತ್ತು ಆಂಧ್ರದ ಚಿಕನ್ ಬಿರಿಯಾನಿ.

ನಾಗಾಲ್ಯಾಂಡ್

ನಾಗಾಲ್ಯಾಂಡ್

Rwf-art

ನಾಗಾಲ್ಯಾಂಡಿನ ಮಸಾಲೆ ಮಟ್ಟವು ಅಗ್ರಸ್ಥಾನದಲ್ಲಿದೆ ಏಕೆಂದರೆ ನಾಗಾಲ್ಯಾಂಡಿನ ಜನರು ತಮ್ಮ ರಾಜ ಮಿರ್ಚ ವನ್ನು ಪ್ರೀತಿಸುತ್ತಾರೆ. ಸುಂದರವಾದ ನಾಗಾಲ್ಯಾಂಡ್ ಶ್ರೀಮಂತ ಮತ್ತು ವೈವಿಧ್ಯಮಯ ಸಂಪ್ರದಾಯವನ್ನು ಹೊಂದಿದೆ. ಇಲ್ಲಿಯ ಭೂದೃಶ್ಯ, ನೋಟ ಮತ್ತು ಆಹಾರವು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನೇಕ ವೈವಿಧ್ಯತೆಯನ್ನು ಒದಗಿಸುತ್ತದೆ.

ನೀವು ನಾಗಾಲ್ಯಾಂಡ್ ಗೆ ಮೊದಲ ಬಾರಿ ಹೋಗುವವರಾಗಿದ್ದಲ್ಲಿ ಇಲ್ಲಿಯ ಅತ್ಯಂತ ಮಸಾಲೆಯುಕ್ತ ಆಹಾರಗಳನ್ನು ಸವಿಯುವುದನ್ನು ಮರೆಯದಿರಿ. ಉತ್ತಮ ಆಹಾರವು ನಾಗಾಲ್ಯಾಂಡ್ ಸಂಪ್ರದಾಯದ ಒಂದು ಅವಿಭಾಜ್ಯ ಅಂಗವಾಗಿದೆ. ಮತ್ತು ನೀವು ಮಸಾಲೆಭರಿತ ಆಹಾರವನ್ನು ತಿನ್ನದೇ ಇರುವವರಾಗಿದ್ದರೂ ಕೂಡಾ ಇಲ್ಲಿಯ ಆಹಾರವು ನಿಮ್ಮನ್ನು ಮಸಾಲೆ ಭರಿತ ಆಹಾರಪ್ರಿಯರನ್ನಾಗಿಸುತ್ತದೆ.

ಇಲ್ಲಿ ರುಚಿ ನೋಡಲೇ ಬೇಕಾದ ಆಹಾರ

ಇಲ್ಲಿ ರುಚಿ ನೋಡಲೇ ಬೇಕಾದ ಆಹಾರ

ಈ ರಾಜ್ಯವು ಮಾಂಸಾಹಾರಿ ಆಹಾರಕ್ಕೆ ಪ್ರಸಿದ್ದವಗಿದ್ದರೂ ಕೂಡಾ ಇಲ್ಲಿ ಕೆಲವು ರುಚಿಕರ ಮತ್ತು ಮಸಾಲೆಯುಕ್ತ ಶಾಖಾಹಾರಿ ಆಹಾರಗಳೂ ಕೂಡಾ ಪ್ರಸಿದ್ದವಾಗಿದೆ. ನಾಗಾಲ್ಯಾಂಡ್ ನ ರುಚಿಯು ಇಲ್ಲಿಯ ಪ್ರತಿ ಭಾಗಗಳಲ್ಲಿಯೂ ಹೇಗೆ ಬದಲಾಗುತ್ತಿರುತ್ತದೆ ಎಂಬುದೇ ಒಂದು ಆಸಕ್ತಿದಾಯಕ ವಿಷಯವಾಗಿದೆ.

ಇಲ್ಲಿ ರುಚಿ ನೋಡಲೇ ಬೇಕಾದ ಆಹಾರವೆಂದರೆ : ಅಕ್ವಿನಿಯಲ್ಲಿ ಹುರಿದ ಒಣಗಿದ ಹಂದಿಮಾಂಸ ಮತ್ತು ಹಬೆಯಲ್ಲಿ ಬೇಯಿಸಿದ ಹಂದಿ ಮಾಂಸ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X