Search
  • Follow NativePlanet
Share
» »ರಾಹು ಕೇತು ಕ್ಷೇತ್ರದ ಶಕ್ತಿಶಾಲಿ ಶಿವ ದೇವಾಲಯ!

ರಾಹು ಕೇತು ಕ್ಷೇತ್ರದ ಶಕ್ತಿಶಾಲಿ ಶಿವ ದೇವಾಲಯ!

By Vijay

ಭಾರತದಲ್ಲಿ ಶಿವನಿಗೆ ಮುಡಿಪಾದ ಅಸಂಖ್ಯಾತ ದೇವಾಲಯಗಳಿರುವುದನ್ನು ಕಾಣಬಹುದು. ಉತ್ತರ ಭಾರತದಲ್ಲಿ ಅತಿ ಹೆಚ್ಚು ಜನಪ್ರೀಯನಾದ ಶಿವ ದೇವರಿಗೆ ಮುಡಿಪಾದ ದೇವಾಗಳಿವೆ. ಆದಾಗ್ಯೂ ದಕ್ಷಿಣ ಭಾರತದಲ್ಲಿ ಶಿವನ ದೇವಾಲಯಗಳಿಗೇನೂ ಕೊರತೆ ಇಲ್ಲ.

ಅದರಲ್ಲೂ ಕೆಲವು ಶಿವನ ದೇವಾಲಯಗಳು ತಮ್ಮ ಹಿನ್ನಿಲೆ, ದಂತಕಥೆ ಹಾಗೂ ಪ್ರಭಾವಶಾಲತೆಯಿಂದ ಸಾಕಷ್ಟು ಜನಮನ್ನಣೆಗಳಿಸಿವೆ. ಈ ದೇವಾಲಯಗಳು ಇಂದು ಪ್ರಸಿದ್ಧ ಪುಣ್ಯ ಕ್ಶೇತ್ರಗಳಾಗಿಯೂ, ಕೆಲವು ವಿವಿಧ ದೋಷಗಳನ್ನು ಪರಿಹರಿಸುವ ನಿವಾರಣಾ ಕ್ಷೇತ್ರಗಳಾಗಿಯೂ ಜನಪ್ರೀಯತೆಯ ಉತ್ತುಂಗದಲ್ಲಿ ವಿರಾಜಮಾನವಾಗಿವೆ.

ಅಂತಹ ಒಂದು ಶಿವನ ದೇವಾಲಯದ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಈ ದೇವಾಲಯಕ್ಕೆ ಅದ್ಭುತ ಹಿನ್ನಿಲೆಯಿರುವುದಲ್ಲದೆ ಪಂಚಭೂತಗಳಲ್ಲಿ ಒಂದು ಅಂಶವನ್ನು ಪ್ರತಿನಿಧಿಸುವ ಪುಣ್ಯ ಸ್ಥಳವಾಗಿಯೂ ಪ್ರಖ್ಯಾತಿಗಳಿಸಿದೆ. ಅಲ್ಲದೆ ಕೆಲವು ದೋಷಗಳನ್ನು ಪರಹರಿಸಿಕೊಳ್ಳಲೆಂದು ದೇಶದ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಹಾಗಾದರೆ ಆ ದೇವಾಲಯ ಯಾವುದು? ಅದಿರುವುದೆಲ್ಲಿ? ಅದರ ಕ್ಷೇತ್ರ ಮಹಿಮೆ ಏನು? ಎಂಬೆಲ್ಲ ಪ್ರಶ್ನೆಗಳಿಗೆ ಕೆಳಗಿನ ಸ್ಲೈಡುಗಳ ಮೂಲಕ ಉತ್ತರ ಕಂಡುಕೊಳ್ಳಿ.

ಸಮಸ್ಯೆ ಪರಿಹರಿಸುವ ದೇವಾಲಯ

ಸಮಸ್ಯೆ ಪರಿಹರಿಸುವ ದೇವಾಲಯ

ಈ ಶಿವನ ದೇವಾಲಯವು ಸಾಕಷ್ಟು ಶಕ್ತಿ ಶಾಲಿಯಾಗಿದ್ದು, ಇಲ್ಲಿ ಶಿವನು ಭಕ್ತರ ದೋಷ ಕರ್ಮಾದಿಗಳನ್ನು ಪೂರ್ಣವಾಗಿ ನಿವಾರಿಸುತ್ತಾನೆಂದು ನಂಬಲಾಗುತ್ತದೆ. ದಕ್ಷಿಣ ಭಾರತದಲ್ಲಿರುವ ಅತಿ ಪ್ರಮುಖ ಹಾಗೂ ಶಕ್ತಿಶಾಲಿ ಶಿವನ ದೇವಾಲಯಗಳಲ್ಲಿ ಇದನ್ನು ಒಂದನ್ನಾಗಿ ಪರಿಗಣಿಸಲಾಗುತ್ತದೆ.

ಚಿತ್ರಕೃಪೆ: Kalyan Kanuri

ಎಲ್ಲಿದೆ?

ಎಲ್ಲಿದೆ?

ಹೌದು, ಶಿವನ ಈ ಸನ್ನಿಧಾನ ಇರುವುದು ಶ್ರೀಕ್ಷೇತ್ರ ಶ್ರೀಕಾಳಹಸ್ತಿಯಲ್ಲಿ. ಇಲ್ಲಿ ಶಿವನು ಶ್ರೀಕಾಳಹಸ್ತೀಶ್ವರನಾಗಿ ನೆಲೆಸಿದ್ದು ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ ಹಾಗೂ ಆಶೀರ್ವದಿಸುತ್ತಿದ್ದಾನೆ. ಇದನ್ನು ರಾಹು ಕೇತು ಕ್ಷೇತ್ರ, ದಕ್ಷಿಣಕಾಶಿ ಎಂಬ ಹೆಸರುಗಳಿಂದಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Kalyan Kanuri

ದಕ್ಷಿಣ ಭಾರತದ ಪ್ರಸಿದ್ಧ ಶಿವನ ದೇಗುಲ

ದಕ್ಷಿಣ ಭಾರತದ ಪ್ರಸಿದ್ಧ ಶಿವನ ದೇಗುಲ

ಶ್ರೀಕಾಳಹಸ್ತೀಶ್ವರನ ದೇವಾಲಯವು ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿರುವ ಶ್ರೀಕಾಳಹಸ್ತಿ ಎಂಬ ಪಟ್ಟಣದಲ್ಲಿದೆ. ಇನ್ನೊಂದು ವಿಶೇಷವೆಂದರೆ ಇದು ಜಗತ್ಪ್ರಸಿದ್ಧ ತಿರುಪತಿಯಿಂದ ಕೇವಲ 36 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: Hari Ratan

ಇಲ್ಲಿಗೂ ಭೇಟಿ

ಇಲ್ಲಿಗೂ ಭೇಟಿ

ಹೀಗಾಗಿ ತಿರುಪತಿಗೆ ಭೇಟಿ ನೀಡುವ ಭಕ್ತಾದಿಗಳಲ್ಲಿ ಅನೇಕರು ವೆಂಕಟೇಶ್ವರನ ದರ್ಶನದ ನಂತರ ಶ್ರೀಕಾಳಹಸ್ತಿಗೂ ಭೇಟಿ ನೀಡುತ್ತಾರೆ. ಅಲ್ಲದೆ ತಿರುಪತಿಯಿಂದ ಕಾಳಹಸ್ತಿಗೆ ತೆರಳಲು ಬಸ್ಸುಗಳು ದೊರೆಯುತ್ತವೆ. ಹೀಗೆ ವಿಷ್ಣು ಹಾಗೂ ಶಿವನ ದರ್ಶನವನ್ನು ಒಂದೆ ಪ್ರವಾಸದಲ್ಲಿ ಪಡೆಯಬಹುದಾಗಿದೆ.

ಚಿತ್ರಕೃಪೆ: Kannan Muthuraman

ವಾಯುವನ್ನು ಪ್ರತಿನಿಧಿಸುತ್ತದೆ

ವಾಯುವನ್ನು ಪ್ರತಿನಿಧಿಸುತ್ತದೆ

ಭೂಮಿ, ನೀರು, ಅಗ್ನಿ, ವಾಯು ಹಾಗೂ ಆಕಾಶಗಳನ್ನು ಪಂಚಭೂತಗಳೆಂದು ಕರೆಯಲಾಗಿದೆ. ಪಂಚಭೂತಗಳು ನಿರಾಕಾರದ ಶಿವನನ್ನು ಪ್ರತಿನಿಧಿಸುತ್ತವೆ. ಅಂತೆಯೆ ಪ್ರತಿ ಭೂತಗಳಿಗೂ ಶಿವನ ಒಂದು ದೇವಾಲಯವು ಮುಡಿಪಾಗಿದೆ. ವಾಯುವಿಗೆ ಸಂಬಂಧಪಟ್ಟಂತೆ ವಾಯುಲಿಂಗ ಹೊಂದಿರುವ ಸ್ಥಳವೆ ಶ್ರೀಕಾಳಹಸ್ತಿಯಾಗಿದೆ.

ಚಿತ್ರಕೃಪೆ: McKay Savage

ಇಂದಿಗೂ ಆಕರ್ಷಿಸುತ್ತದೆ

ಇಂದಿಗೂ ಆಕರ್ಷಿಸುತ್ತದೆ

ಇಲ್ಲಿ ನಿರ್ಮಿಸಲಾದ ಶಿವನ ಮೂಲ ದೇವಾಲಯವು ಅತ್ಯಂತ ಪುರಾತನವಾಗಿದ್ದು ಸುಮಾರು ಐದನೇಯ ಶತಮಾನಕ್ಕೆ ಸಂಬಂಧಿಸಿದೆ. ನಂತರ ಆ ದೇವಾಲಯಕ್ಕೆ ಪೂರಕವಾಗಿ ಬಾಹ್ಯವಾಗಿ ಮತ್ತೆ ನಿರ್ಮಿಸಲಾದ ದೊಡ್ಡ ದೇವಾಲಯ ರಚನೆಯು 12 ನೇಯ ಶತಮಾನಕ್ಕೆ ಸಂಬಂಧಿಸಿದೆ.

ಚಿತ್ರಕೃಪೆ: Krishna Kumar Subramanian

ಶಕ್ತಿಶಾಲಿ ದೇಗುಲ

ಶಕ್ತಿಶಾಲಿ ದೇಗುಲ

ಪ್ರಸ್ತುತ ಹನ್ನೆರಡನೇಯ ಶತಮಾನದ ದೇವಾಲಯವು ಕಾಲದ ವಿವಿಧ ಸಮಯದಲ್ಲಿ ಆಳಿದ ಚೋಳ ಸಾಮ್ರಾಜ್ಯದ ಅರಸರು ಹಾಗೂ ನಂತರದಲ್ಲಿ ಆಳಿದ ವಿಜಯನಗರ ಅರಸರಿಂದ ಸಾಕಷ್ಟು ನವೀಕರಣಗೊಳಿಸಲ್ಪಟ್ಟಿದೆ.

ಚಿತ್ರಕೃಪೆ: Balaji101mails

ರೋಚಕ ಕಥೆ

ರೋಚಕ ಕಥೆ

ದಂತಕಥೆಯಂತೆ, ಒಮ್ಮೆ ಸೃಷ್ಟಿಯ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ವಾಯು ದೇವರು ಶಿವನನ್ನು ಕುರಿತು ತಪಸ್ಸು ಮಾಡಲು ನಿರ್ಧರಿಸಿ ಕರ್ಪೂರದ ಲಿಂಗದ ಮುಂದೆ ಕುಳಿತು, ಸಾವಿರ ವರ್ಷಗಲ ಕಾಲ ಹಾಗೆ ತಪಸ್ಸು ಮಾಡುತ್ತಾನೆ. ಇದರಿಂದ ಪ್ರಸನ್ನನಾದ ಶಿವನು ಚಲನಶೀಲನಾದ ನೀನು ಒಂದೆಡೆ ಭದ್ರವಾಗಿ ನೆಲೆ ನಿಂತು ತಪಸ್ಸು ಮಾಡಿ ನನ್ನನ್ನು ಮೆಚ್ಚಿಸಿರುವ ಕಾರಣ ವರದಾನ ಕೇಳು ಎಂದು ಹೇಳುತ್ತಾನೆ.

ಚಿತ್ರಕೃಪೆ: రవిచంద్ర

ಬೇಡಿದ ವರಗಳು

ಬೇಡಿದ ವರಗಳು

ಇದರಿಂದ ಸಂತಸಗೊಂಡ ವಾಯು ಶಿವನನ್ನು ಕುರಿತು, "ನಾನು ಸೃಷ್ಟಿಯ ಎಲ್ಲೆಡೆ ಇರಲು ಬಯಸುತ್ತೇನೆ. ನಿನ್ನದೆ ಅಂಶವಾದ ಸಕಲ ಜೀವಾತ್ಮಗಳಲ್ಲಿ ನಾನು ಅವಿಭಾಜ್ಯ ಅಂಗವಾಗಬಯಸುತ್ತೇನೆ ಹಾಗೂ ಕೊನೆಯದಾಗಿ ಈ ಕರ್ಪೂರ ಲಿಂಗವು ನನ್ನ ಹೆಸರಿನಿಂದ ಪ್ರಖ್ಯಾತವಾಗಬೇಕೆಂದು ಬಯಸುತ್ತೇನೆ" ಎಂದು ಕೇಳುತ್ತಾನೆ.

ಚಿತ್ರಕೃಪೆ: Kalyan Kumar

ಹೀಗೆ ವಾಯು....

ಹೀಗೆ ವಾಯು....

ಅದಕ್ಕೆ ಶಿವನು, ವಾಯು ಆ ಮೂರು ವರಗಳಿಗೆ ತಕ್ಕವನಾಗಿದ್ದು, ಇನ್ನೂ ಮುಂದೆ ವಾಯು ಜಗತ್ತಿನೆಲ್ಲೆಡೆ ಇರುವನಂತಾಗಿಯೂ, ಸಕಲ ಉಸಿರಾಡುವ ಜೀವಗಳಿಗೆ ಪ್ರಮುಖ ಜೀನಾಂಶವಾಗಿಯೂ ಅನಿವಾರ್ಯವಾಗುತ್ತಾನೆ ಹಾಗೂ ಈ ಕರ್ಪೂರಲಿಂಗವು ವಾಯು ಲಿಂಗವಾಗಿ ಪ್ರಸಿದ್ಧವಾಗುತ್ತದೆ. ಅಲ್ಲದೆ ಈ ವಾಯುಲಿಂಗವನ್ನು ದೇವತೆಗಳು, ದಾನವರು, ಯಕ್ಷಿಣಿಯರು, ಕಿಂಕರರು, ಗಂಧರ್ವರು, ಸಿದ್ಧರು, ಋಷಿ-ಮುನಿಗಳು ಎಲ್ಲರೂ ಪೂಜಿಸುವಂತಾದ ಮಹತ್ವ ಪಡೆಯುತ್ತದೆ ಎಂದು ವರ ನೀಡುತ್ತಾನೆ.

ಚಿತ್ರಕೃಪೆ: రవిచంద్ర

ದಾನವರಾಗಲಿ, ಮಾನವರಾಗಲಿ, ದೇವತೆಯರಾಗಲಿ

ದಾನವರಾಗಲಿ, ಮಾನವರಾಗಲಿ, ದೇವತೆಯರಾಗಲಿ

ಈ ರೀತಿಯಾಗಿ ಶ್ರೀಕಾಳಹಸ್ತಿಯು ಶಿವನು ವಾಯು ಲಿಂಗದ ಅಂಶವನ್ನು ಹೊತ್ತಿರುವ, ದೇವತೆಗಳಿಂದಲೂ ಸಹ ಆರಾಧಿಸಲ್ಪಡುವ ಪರಮ ಪಾವನ ಕ್ಷೇತ್ರವಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: రవిచంద్ర

ಅಪ್ರತಿಮ ಶಿವಭಕ್ತ

ಅಪ್ರತಿಮ ಶಿವಭಕ್ತ

ಇನ್ನೊಂದು ರೋಚಕ ಕಥೆಯಂತೆ, ನಿಮಗೆಲ್ಲರಿಗೂ ತಿಳಿದಿರುವ ಶಿವನ ಅಪ್ರತಿಮ ಭಕ್ತನಾದ ಬೇಡರ ಕಣ್ಣಪ್ಪನು ಶಿವನಿಗೆ ತನ್ನ ಕಣ್ಣನ್ನೆ ಕಿತ್ತು ಕೊಟ್ಟ, ಅದ್ಭುತ ಸ್ಥಳ ಇದೆ ಶ್ರೀಕಾಳಹಸ್ತಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more