Search
  • Follow NativePlanet
Share
» »ಅದೃಷ್ಟವನ್ನು ನೀಡುವ ತಾಯಿ ನಮ್ಮ ಕರ್ನಾಟಕದಲ್ಲಿ ನೆಲೆಸಿದ್ದಾಳೆ

ಅದೃಷ್ಟವನ್ನು ನೀಡುವ ತಾಯಿ ನಮ್ಮ ಕರ್ನಾಟಕದಲ್ಲಿ ನೆಲೆಸಿದ್ದಾಳೆ

ಅದೃಷ್ಟವಂತರಾಗಬೇಕು ಎಂಬುದು ಪ್ರತಿಯೊಬ್ಬರ ಸಹಜವಾದ ಬಯಕೆಯೇ ಆಗಿರುತ್ತದೆ. ಕೆಲವೊಮ್ಮೆ ಪೂರ್ವ ಜನ್ಮದ ಪಾಪಗಳಿಂದಾಗಿ ದುರಾದೃಷ್ಟವು ಹಿಂದೆಯೇ ಇದ್ದು, ಯಾವುದೇ ರೀತಿಯಲ್ಲಿಯೂ ಅದೃಷ್ಟ ಒಲಿದು ಬರಲು ತೊಡಕಾಗಬಹುದು. ಹೀಗಿರುವಾಗ ದುರಾದೃಷ್ಟವನ್ನು ದೂ

ಅದೃಷ್ಟವಂತರಾಗಬೇಕು ಎಂಬುದು ಪ್ರತಿಯೊಬ್ಬರ ಸಹಜವಾದ ಬಯಕೆಯೇ ಆಗಿರುತ್ತದೆ. ಕೆಲವೊಮ್ಮೆ ಪೂರ್ವ ಜನ್ಮದ ಪಾಪಗಳಿಂದಾಗಿ ದುರಾದೃಷ್ಟವು ಹಿಂದೆಯೇ ಇದ್ದು, ಯಾವುದೇ ರೀತಿಯಲ್ಲಿಯೂ ಅದೃಷ್ಟ ಒಲಿದು ಬರಲು ತೊಡಕಾಗಬಹುದು. ಹೀಗಿರುವಾಗ ದುರಾದೃಷ್ಟವನ್ನು ದೂರವಾಗಿಸಿಕೊಂಡು ಅದೃಷ್ಟವನ್ನು ಒಲಿಸಿಕೊಳ್ಳಬೇಕು ಎಂದುಕೊಂಡಿದ್ದರೆ ಕರ್ನಾಟಕದಲ್ಲಿಯೇ ಇರುವ ಈ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ಬನ್ನಿ.

ಕರ್ನಾಟಕದಲ್ಲಿ ಅದೃಷ್ಟ ದೇವತೆಯೊಬ್ಬಳು ನೆಲೆಸಿದ್ದಾಳೆ. ಈ ದೇವಿಯು ದಾರಿದ್ರ್ಯವನ್ನು ದೂರಮಾಡಿ ಅದೃಷ್ಟವನ್ನು ವರವಾಗಿ ಕರುಣಿಸುವ ದೇವತೆ. ಈಕೆಗೆ ಒಂದು ರೋಚಕವಾದ ಸ್ಥಳ ಪುರಾಣವು ಕೂಡ ಇದೆ. ಹಾಗಾದರೆ ಈ ದೇವಿ ಯಾರು? ಆಕೆ ಎಲ್ಲಿ ನೆಲೆಸಿದ್ದಾಳೆ ಎಂಬ ವಿವರವನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಅದೃಷ್ಟ ಒಲಿಯಬೇಕಾದರೆ ಮೊದಲು ದೇವರ ಕೃಪೆ ಇರಬೇಕು. ಆ ದೇವರ ಕೃಪೆ ಇದ್ದರೆ ಮಾತ್ರ ಸಿರಿವಂತರಾಗಲು ಸಾಧ್ಯ ಎಂದು ಜನರು ನಂಬಲಾಗಿದೆ. ಹಾಗಾದರೆ ನೀವು ಕೂಡ ಅದೃಷ್ಟವಂತರಾಗಬೇಕಾದರೆ ನೀವು ನಂಬಿದರೂ ಇಲ್ಲದೇ ಇದ್ದರೂ ಕೂಡ ಒಮ್ಮೆ ಈ ದೇವಿಯ ದರ್ಶನ ಮಾಡಿ ಬನ್ನಿ.

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಮುಖ್ಯವಾಗಿ ದೇವಾಲಯದ ಚರಿತ್ರೆ ಬಗ್ಗೆ ತಿಳಿಯೋಣ. ಕೃಷ್ಣ ದೇವರಾಯ ಕಾಲದಲ್ಲಿ ಶ್ರೀ ಕೃಷ್ಣ ದೇವರಾಯರ ಪೂರ್ವಿಕರಿಂದಲೂ ಕೂಡ ಭುವನೇಶ್ವರಿ ದೇವಿಯನ್ನು ಭಕ್ತಿ, ಶ್ರದ್ಧೆಯಿಂದ ಆರಾಧಿಸುತ್ತಿದ್ದರು. ಆ ತಾಯಿಯು ಈ ರಾಜವಂಶಿಕರನ್ನು ರಕ್ಷಿಸುತ್ತಾ ಬರುತ್ತಿದ್ದಳು.

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಹೀಗೆ ಈ ತಾಯಿಯನ್ನು ಶ್ರೀ ಕೃಷ್ಣ ದೇವರಾಯ ಕಾಲದ ರಾಜರು ಭಕ್ತಿ-ಶ್ರದ್ಧೆಯಿಂದ ಪೂಜಿಸುತ್ತಿದ್ದರು. ಆ ರಾಜರ ಕೊನೆಯ ರಾಜನಾದ ರಾಮರಾಯ ಈ ದೇವಿಯನ್ನು ನಿರ್ಲಕ್ಷಿಸಿ ಪೂಜಿಸುವುದನ್ನು ನಿಲ್ಲಿಸಿಬಿಟ್ಟಿದನಂತೆ.

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ತನ್ನನ್ನು ಪೂಜಿಸುತ್ತಿಲ್ಲವೆಂದೂ ಆಗ್ರಹಿಸಿದ ದೇವಿಯು ತುಂಗಭದ್ರ ನದಿಯಲ್ಲಿ ಬಿದ್ದು, ತುಂಗಭದ್ರ ಹಾಗು ಕೃಷ್ಣನದಿಯಲ್ಲಿ ಈಜಿಕೊಂಡು ಭೀಮಾನದಿ ಸಂಗಮಕ್ಕೆ ದೇವಿಯು ಸೇರುತ್ತಾಳೆ.

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಭೀಮಾನದಿ ಸಂಗಮದಲ್ಲಿ ಕೆಲವು ಕಾಲ ನೀರಿನಲ್ಲಿ ಇದ್ದು ಬಿಡುತ್ತಾಳೆ. ಆಗ ರಾಮರಾಯನ ರಾಜ್ಯವು ಪತನವಾಗಿ ಮುಸ್ಲಿಂ ರಾಜರ ಕೈಯಲ್ಲಿ ವಶವಾಯಿತು.

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ತದನಂತರ ಕೆಲವು ಕಾಲದ ನಂತರ ನೀರಿನಲ್ಲಿ ಇದ್ದ ದೇವಿಯನ್ನು ಒಬ್ಬ ಭಕ್ತನು ಭೀಮಾನದಿ ಸಂಗಮದಲ್ಲಿ ಈ ದೇವಿ ಯಾರು ಎಂದು ಗುರುತಿಸಿದನು.

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ದೇವಿಯು ಆತನಿಗೆ ಕಾಣಿಸಿಕೊಂಡು ಆ ನದಿಯಲ್ಲಿ ಇದ್ದೇನೆ ಎಂದೂ, ತನಗೆ ಒಂದು ದೇವಾಲಯವನ್ನು ನಿರ್ಮಾಣ ಮಾಡಿದರೆ ಗ್ರಾಮದ ಎಲ್ಲಾ ಪ್ರಜೆಗಳನ್ನು ಸಲುಹುತ್ತೇನೆ ಎಂದು ಹೇಳುತ್ತಾಳೆ.

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ನಡೆದ ವೃತ್ತಾಂತವೆಲ್ಲಾ ಆ ಭಕ್ತನು ಗ್ರಾಮಸ್ಥರಿಗೆ ಹೇಳುತ್ತಾನೆ. ಆಗ ಆ ದೇವಿಯು ಗಾಜಿನ ರೂಪದಲ್ಲಿದ್ದ ಸ್ತೂಪವನ್ನು ಈಚೆಗೆ ತೆಗೆದಾಗ, ಆ ಸ್ತೂಪವು ಕಪ್ಪು ಬಣ್ಣದ ಸ್ತೂಪವಾಗಿತ್ತು.

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಅದೇ ಸಮಯದಲ್ಲಿ ಅಲ್ಲಿಯೇ ಇದ್ದ ಒಂದು ಹಾವು ಕೂಡ ಆ ದೇವಿಗೆ ಕಾವಲು ಕಾಯುತ್ತಿತ್ತು. ಆಗ ಪ್ರಜೆಗಳಲ್ಲೆರೂ ಸೇರಿ ದೇವಾಲಯವನ್ನು ನಿರ್ಮಾಣ ಮಾಡಿದರು.

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ನಂತರ ಕಾಲದಲ್ಲಿ ಆ ಗ್ರಾಮದಲ್ಲಿನ ಜನರು ಸುಭೀಕ್ಷೆಯಿಂದ ಹಾಗು ಉತ್ತಮವಾದ ಬೆಳೆಗಳನ್ನು ಬೆಳೆದರು. ಹಾಗೆಯೇ ಎಲ್ಲರೂ ಅದೃಷ್ಟವಂತರಾದರು. ಇದೆಲ್ಲಾ ಆ ತಾಯಿಯ ಮಹಿಮೆ ಎಂದೇ ಜನರು ಆ ತಾಯಿಯನ್ನು ಕೊಂಡಾಡಿದರು. ಹಾಗಾಗಿಯೇ ಈ ದೇವಿಯನ್ನು ಶ್ರೀ ಭಾಗ್ಯವಂತಿ ದೇವಿ ಎಂದು ಕರೆದು ಆರಾಧಿಸಿದರು.

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಈ ತಾಯಿಯನ್ನು ಆರಾಧಿಸಿದರೆ ಭಾಗ್ಯವಂತರಾಗುತ್ತಾರೆ ಎಂದು ನಂಬಲಾಗಿದೆ. ಈ ಮಹಿಮಾನ್ವಿತವಾದ ದೇವಾಲಯವು ಕರ್ನಾಟಕದಲ್ಲಿನ ದತ್ತ ಕ್ಷೇತ್ರವಾದ ಗಾಣಗಾಪುರಕ್ಕೆ ಸುಮಾರು 30 ಕಿ.ಮೀ ದೂರದಲ್ಲಿ, ಗುಲ್ಬರ್ಗದಿಂದ 50 ಕಿ.ಮೀ ದೂರದಲ್ಲಿದೆ.

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಈ ದೇವಿಯನ್ನು ಭಾಗ್ಯವಂತಿ ದೇವಿಯನ್ನು ಭಾಗ್ಯಮ್ಮ, ಕಾಮಧೇನು, ಕಲ್ಪತರು, ಭಾಗಮ್ಮ ಎಂದು ಇನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಈ ದೇವಿಯನ್ನು ಆರಾಧಿಸಲು ನೂರಾರು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಧನವಂತರಾಗಬೇಕೆ? ಹಾಗಾದರೆ ಈ ದೇವಿಯನ್ನು ದರ್ಶಿಸಿ..!

ಈ ಶಕ್ತಿವಂತ ದೇವಾಲಯಕ್ಕೆ ಭೇಟಿ ನೀಡಬೇಕು ಎಂದು ಅಂದುಕೊಂಡಿರುವವರು ಅಬ್ಜಲ್‍ಪುರ ಜಿಲ್ಲೆಯ ಘಟ್ಟರಗಿ ಎಂಬ ಗ್ರಾಮದಲ್ಲಿರುವ ಭಾಗ್ಯವಂತಿ ದೇವಿಯನ್ನು ದರ್ಶಿಸುವುದರಿಂದ ಅದೃಷ್ಟವಂತರಾಗಿ ಅಥವಾ ಭಾಗ್ಯವಂತರಾಗಿ ಮಾರ್ಪಟಾಗುತ್ತಾರೆ ಎಂದು ನಂಬಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X