Search
  • Follow NativePlanet
Share
» »ತಂಬೂರು ಬಸವಣ್ಣನಿಗೊಂದು ಭೇಟಿ!

ತಂಬೂರು ಬಸವಣ್ಣನಿಗೊಂದು ಭೇಟಿ!

By Vijay

ರಾಜ್ಯ - ಕರ್ನಾಟಕ
ಜಿಲ್ಲೆ - ಧಾರವಾಡ
ತಾಲೂಕು - ಕಲಘಟಗಿ

ವಿಶೇಷತೆ : ಲಿಂಗಾಯತ ಧರ್ಮದವರು ಹೆಚ್ಚಾಗಿ ಪರಿಪಾಲಿಸುವ ತಂಬೂರು ಬಸವಣ್ಣನ ಪ್ರಾಚೀನ ದೇವಾಲಯ

ತಂಬೂರು ಪರಿಚಯ

ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿರುವ ತಂಬೂರು ಒಂದು ಪುಟ್ಟ ಹಳ್ಳಿ. ಆದರೂ ತನ್ನದೆ ಆದ ವಿಶೇಷತೆ ಹೊಂದಿರುವ ಗ್ರಾಮ. ಹಿಂದೆ ಈ ಪ್ರದೇಶದಲ್ಲಿ ತಾಮ್ರವು ಹೆಚ್ಚಾಗಿ ಲಭಿಸುತ್ತಿತ್ತು. ಆ ಕಾರಣವಾಗಿ ಇದಕ್ಕೆ ತಮ್ರೂರು ಎಂಬ ಹೆಸರು ಬಂದು ಕ್ರಮೇಣ ಉಚ್ಛಾರ ದೋಷದಿಂದ ತಂಬೂರು ಎಂಬ ಹೆಸರು ಪಡೆದುಕೊಂಡಿತು.

ಬಸವಣ್ಣನ ದೇವಾಲಯ : ಎಲ್ಲೆಡೆ, ಪ್ರಸಿದ್ಧ ದೇವಾಲಯಗಳೆಂದಾಗ ನಾವೂ ಸಾಮಾನ್ಯವಾಗಿ ಊಹಿಸುವಂತೆ ಇಲ್ಲಿ ದೇವಾಲಯವಿಲ್ಲ. ಅರ್ಥಾತ್ ದೊಡ್ಡ ದೇವಾಲಯವಿಲ್ಲ. ಬದಲಾಗಿ ಬಯಲಿನಲ್ಲೊಂದು ಚಿಕ್ಕ ಪುರಾತನ ದೇವಾಲಯವಿದ್ದು ಹನ್ನೆರಡನೇಯ ಶತಮಾನದ ಪ್ರಸಿದ್ಧ ವಚನಕಾರ ಬಸವಣ್ಣನವರಿಗೆ ಇದು ಮುಡಿಪಾಗಿದೆ.

ತಂಬೂರು ಬಸವಣ್ಣನಿಗೊಂದು ಭೇಟಿ!

ಚಿತ್ರಕೃಪೆ: Manjunath Doddamani Gajendragad

ಲಿಂಗಾಯತರಿಗೆ ಬಲು ಪ್ರಮುಖವಾದ ತೀರ್ಥ ಕೇಂದ್ರವಾಗಿ ತಂಬೂರು ಬಸವಣ್ಣ ದೇವಾಲಯ ಗುರುತಿಸಲ್ಪಡುತ್ತದೆ. ಅದರಲ್ಲೂ ವಿಶೇಷವಾಗಿ ಪಂಚಮಸಾಲಿ ಪಂಗಡದವರಿಗೆ ತಂಬೂರು ಬಲು ಮಹತ್ವದ ಕ್ಷೇತ್ರವಾಗಿದೆ. ಅಂತೆಯೆ ವರ್ಷಕ್ಕೊಮ್ಮೆ ತಂಬೂರು ಬಸವಣ್ಣ ಜಾತ್ರಾ ಮಹೋತ್ಸವವು ಬಲು ಅದ್ದೂರಿಯಿಂದ ಇಲ್ಲಿ ಜರುಗುತ್ತದೆ.

ಈ ಜಾತ್ರೆಗೆ ಉತ್ತರ ಕರ್ನಾಟಕದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ತಂಬೂರು ಬಸವಣ್ಣನ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಧಾರ್ಮಿಕ ಪ್ರವಾಸೋದ್ಯಮದಿಂದಲೂ ಇದು ಸಾಕಷ್ಟು ಪ್ರಸಿದ್ಧಿ ಪಡೆದಿರುವ ಸ್ಥಳವಾಗಿದೆ.

ತಂಬೂರು ಬಸವಣ್ಣನಿಗೊಂದು ಭೇಟಿ!

ಚಿತ್ರಕೃಪೆ: Manjunath Doddamani Gajendragad

ಇನ್ನೂ ಪ್ರಾಕೃತಿಕವಾಗಿ ತಂಬೂರು ಸಾಕಷ್ಟು ಶ್ರೀಮಂತಿಕೆಯನ್ನು ಪಡೆದಿದೆ. ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದಿಂದ ಪ್ರದೇಶವು ಸುತ್ತುವರೆದಿದೆ. ಹಾಗಾಗಿ ವಿಫುಲವಾದ ವನ್ಯಜೀವಿ ಸಮ್ಪತ್ತನ್ನು ಈ ಕ್ಶೇತ್ರದಲ್ಲಿ ಕಾಣಬಹುದು. ಆ ನಿಟ್ಟಿನಿಂದ ಈ ಕ್ಷೇತ್ರವು ಕೇವಲ ಧಾರ್ಮಿಕವಾಗಿಯೆ ಅಲ್ಲದೆ ನಿಸರ್ಗ ಪ್ರೀಯರಿಗೂ ಇಷ್ಟವಾಗಬಹುದಾದ ಸ್ಥಳ.

ತಂಬೂರು ಸಮೀಪ ಅನೇಕ ಇತರೆ ಪ್ರವಾಸಿ ಆಕರ್ಷಣೆಗಳಿದ್ದು ಒಮ್ಮೆ ತಂಬೂರಿಗೆ ಭೇಟಿ ನೀಡಿದರೆ ಆ ಆಕರ್ಷಣೆಗಳಿಗೂ ಸಹ ಭೇಟಿ ನೀಡಿ ನಿಮ್ಮ ಪ್ರವಾಸವನ್ನು ಅವಿಸ್ಮರಣೀಯವಾಗಿ ಮಾಡಿಕೊಳ್ಳಬಹುದು. ತಂಬೂರು ಕೆರೆ, ಕಾಳಿ ನದಿ, ಅಣಶಿ ರಾಷ್ಟ್ರೀಯ ಉದ್ಯಾನ, ಸೂಪಾ ಆಣೆಕಟ್ಟು ಅವುಗಳಲ್ಲಿ ಕೆಲವು ಪ್ರಮುಖವಾದವುಗಳು.

ತಲುಪುವ ಬಗೆ

ತಂಬೂರು ಕಲಘಟಗಿಯಿಂದ ಹತ್ತು ಕಿ.ಮೀ ಗಳಷ್ಟು ದೂರವಿದೆ. ಹುಬ್ಬಳ್ಳಿ, ಧಾರವಾಡ ಹಾಗೂ ಕಲಘಟಗಿಯಿಂದ ನಿತ್ಯ ನಿಯಮಿತ ಸಂಖ್ಯೆಯಲ್ಲಿ ಬಸ್ಸುಗಳು ತಂಬೂರಿಗೆ ದೊರೆಯುತ್ತವೆ. ಅಲ್ಲದೆ ಬಾಡಿಗೆ ಟೆಂಪೋಅಳೂ ಸಹ ದೊರೆಯುತ್ತವೆ. ನಿಮ್ಮ ಸ್ವಂತ ವಾಹನವಿದ್ದಲ್ಲಿ ಇಲ್ಲಿಗೆ ಭೇಟಿ ನೀಡುವುದು ಇನ್ನೂ ಉತ್ತಮ.

ಹುಬ್ಬಳ್ಳಿಯಿಂದ ಈ ರೀತಿ ಒಂದು ಪ್ರವಾಸ ಮಾಡಿ!

ಇಲ್ಲಿ ತಂಗಲು ಯಾವುದೆ ವಸತಿಗೃಹವಾಗಲಿ ಅಥವಾ ಹೋಟೆಲ್ ಗಳಾಗಲಿ ಇಲ್ಲದೆ ಇರುವುದರಿಂದ ಹತ್ತಿರವಿರುವ ಧಾರವಾಡ ಅಥವಾ ಹುಬ್ಬಳ್ಳಿ ನಗರಗಳು ಉತ್ತಮ ಆಯ್ಕೆಯಾಗಿದ್ದು ಅಲ್ಲಿ ಸಾಕಷ್ಟು ಹೋಟೆಲುಗಳು ಲಭ್ಯವಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more