Search
  • Follow NativePlanet
Share
» » ಸಿರಿಚೆಲ್ಮದಲ್ಲಿ ಮಣ್ಣು ಹೊತ್ತ ಶಿವನ ವಿಶೇಷತೆ ಏನು ಗೊತ್ತಾ?

ಸಿರಿಚೆಲ್ಮದಲ್ಲಿ ಮಣ್ಣು ಹೊತ್ತ ಶಿವನ ವಿಶೇಷತೆ ಏನು ಗೊತ್ತಾ?

ಲೋಕ ಕಲ್ಯಾಣಕ್ಕಾಗಿ ಶಿವನು ಎಷ್ಟೆಲ್ಲಾ ಕೆಲಸಗಳನ್ನು ಮಾಡಿದ್ದಾನೆ ಎನ್ನುವುದು ನಮಗೆಲ್ಲಾ ತಿಳಿದೇ ಇದೆ. ಪುರಾಣಗಳಲ್ಲಿ ನೀವು ಈ ಬಗ್ಗೆ ಕೇಳಿರಬಹುದು. ಆದರೆ ಶಿವನು ಲೋಕ ಕಲ್ಯಾಣಕ್ಕಾಗಿ ಮಾಡಿದಂತಹ ಕೆಲಸವೊಂದು ತೆಲಂಗಾಣ ರಾಜ್ಯದಲ್ಲಿನ ಆದಿಲಾಬಾದ್ ಜಿಲ್ಲೆಯಲ್ಲಿನ ಸಿರಿಚೆಲ್ಮ ಎನ್ನುವ ಚಿಕ್ಕದಾದ ಗ್ರಾಮದಲ್ಲಿದೆ.

ಪಾರ್ವತಿ ಸಮೇತನಾಗಿ ಭೇಟಿ

ಪಾರ್ವತಿ ಸಮೇತನಾಗಿ ಭೇಟಿ

PC: youtube

ಸ್ವಯಂ ಆ ಗಂಗಾಧರನೇ ಒಂದು ಕೊಳವನ್ನು ತೆಗೆದನು. ಮಣ್ಣಿನ ತಟ್ಟೆಗಳನ್ನು ಕೂಡ ಹೊತ್ತುಕೊಂಡನು. ಪ್ರಸ್ತುತ ಈ ಕ್ಷೇತ್ರವು ಪ್ರಮುಖ ಪುಣ್ಯಕ್ಷೇತ್ರವಾಗಿ ಮಾರ್ಪಟಾಗಿದೆ. ಇನ್ನು ಪ್ರತಿ ಶಿವರಾತ್ರಿಯಂದು ಅಲ್ಲಿ ಪ್ರತ್ಯೇಕವಾದ ಪೂಜೆಗಳು ಕೂಡ ನಡೆಯುತ್ತವೆ. ಆ ಸಮಯದಲ್ಲಿ ಸ್ವಯಂ ಆ ನೀಲಕಂಠನೇ ಇಲ್ಲಿಗೆ ಪಾರ್ವತಿ ಸಮೇತನಾಗಿ ಭೇಟಿ ನೀಡುತ್ತಾನೆ ಎಂಬುದು ಪ್ರತೀತಿ. ನಾವು ಕೂಡ ಆ ಪುಣ್ಯಕ್ಷೇತ್ರ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳೊಣ.

ಇಲ್ಲಿ ಕಾಗೆಗಳು ತಿಂದ ಆಹಾರವೇ ಭಕ್ತರಿಗೆ ಪ್ರಸಾದ!

ಇತಿಹಾಸ

ಇತಿಹಾಸ

PC: youtube

ಅನೇಕ ಕಾಲದ ಹಿಂದೆ ಪ್ರಸ್ತುತ ಆದಿಲಾಬಾದ್ ಜಿಲ್ಲೆಯಲ್ಲಿನ ಸಿರಿಚೆಲ್ಮ ಗ್ರಾಮದಲ್ಲಿ ಪಿಟ್ಟಯ್ಯ ನುಮ್ಮವ್ವ ಎಂಬ ಇಬ್ಬರು ದಂಪತಿಗಳು ಇದ್ದರು. ಅವರಿಗೆ ಸಂತಾನವಿರಲಿಲ್ಲ. ಈ ಕ್ರಮದಲ್ಲಿ ಅವರ ಗ್ರಾಮಕ್ಕೆ ಒಂದು ದಿನ ಒಬ್ಬ ಬಾಲಕನು ಪಶುಗಳನ್ನು ಕಾವಲು ಕಾಯುತ್ತಾ ಬಂದನು. ಆ ಬಾಲಕನು ಆನಾಥ ಎಂದು ಪಿಟ್ಟಯ್ಯ ದಂಪತಿಗಳು ತಿಳಿದುಕೊಳ್ಳುತ್ತಾರೆ. ಆತನಿಗೆ ಮಲ್ಲನ್ನ ಎಂದು ಹೆಸರನ್ನು ಇಟ್ಟು ಬೆಳೆಸುತ್ತಿದ್ದರು. ಬಾಲಕನು ಆಪತ್ತಿನಲ್ಲಿ ಇದ್ದವರಿಗೆ ಸಹಾಯವನ್ನು ಮಾಡುತ್ತಾ ಹೆಸರುವಾಸಿಯಾದನು.

ಎದೆ ಮಟ್ಟದ ನೀರಿನಲ್ಲಿ ನಡೆದು ಹೋದ್ರೆ ಸಿಗುತ್ತೆ ಬೀದರ್‌ನಲ್ಲಿರುವ ಝರಣೀ ನರಸಿಂಹ ಕ್ಷೇತ್ರ

ಕೊಳದ ನಿರ್ಮಾಣ

ಕೊಳದ ನಿರ್ಮಾಣ

PC: youtube

ಒಮ್ಮೆ ಆ ಗ್ರಾಮದಲ್ಲಿ ತೀವ್ರವಾಗಿ ಮಳೆಯ ಅಭಾವ ಉಂಟಾಯಿತು. ಇದರಿಂದಾಗಿ ಕುಡಿಯಲು ನೀರಿಗಾಗಿಯೂ ಗ್ರಾಮದ ಪ್ರಜೆಗಳು ತೀವ್ರವಾದ ಸಮಸ್ಯೆಗೆ ಬೀಳಬೇಕಾಯಿತು. ಪರಿಸ್ಥಿತಿಯನ್ನು ಕಂಡ ಮಲ್ಲನ್ನ ತಾನು ಒಂದು ದಿನ ಒಳಗೆ ಕೊಳವನ್ನು ನಿರ್ಮಾಣ ಮಾಡಿ ಗ್ರಾಮದ ದಾಹವನ್ನು ತೀರಿಸುತ್ತೇನೆ ಎಂದು ಹೇಳುತ್ತಾನೆ.

ಇಲ್ಲಿಗೆ ಹೋದರೆ ಖಂಡಿತಾ ನಿಮ್ಮ ಗುರುಬಲ ಬದಲಾಗುತ್ತಂತೆ !

ಒಂದೇ ರಾತ್ರಿಯಲ್ಲಿ ಕೊಳದ ನಿರ್ಮಾಣ

ಒಂದೇ ರಾತ್ರಿಯಲ್ಲಿ ಕೊಳದ ನಿರ್ಮಾಣ

PC: youtube

ಅಂದಹಾಗೆಯೇ ಕೊಳವನ್ನು ಅಗೆಯಲು ಪ್ರಾರಂಭಿಸುತ್ತಾನೆ. ಈ ಕ್ರಮದಲ್ಲಿ ಒಂದು ದಿನ ಕೊಳವನ್ನು ಅಗೆಯುವುದು ಅಸಾಧ್ಯವೆಂದು ಪ್ರಜೆಗಳು ಯಾರು ಕೂಡ ಸಹಾಯವನ್ನು ಮಾಡಲು ಮುಂದೆ ಬರುವುದಿಲ್ಲ. ಆತನು ಮಾತ್ರ ಬೆಳಗ್ಗೆಯಿಂದ ರಾತ್ರಿಯವರೆವಿಗೂ ಅಗೆಯುತ್ತಾ ಮಣ್ಣನ್ನು ದೂರದಲ್ಲಿ ಎಸೆಯುತ್ತಿದ್ದನು. ರಾತ್ರಿ ಎಲ್ಲಾ ಈ ಪ್ರಕ್ರಿಯೇ ಮುಂದುವರೆಸುತ್ತಿರುತ್ತಾನೆ.

ಕೊಳದ ಮಧ್ಯೆ ಶಿವಲಿಂಗ

ಕೊಳದ ಮಧ್ಯೆ ಶಿವಲಿಂಗ

PC: youtube

ಬೆಳಗ್ಗೆ ಗ್ರಾಮ ಪ್ರಜೆಗಳು ಎದ್ದು ನೋಡಿದರೆ ಸಮಯಕ್ಕೆ ಸರಿಯಾಗಿ ಕೊಳದ ಕೆಲಸ ಪೂರ್ತಿಯಾಗಿದ್ದರು ಕೂಡ ಆ ಬಾಲಕನು ಮಾತ್ರ ಕಾಣಿಸುವುದಿಲ್ಲ. ಅದೇ ಸಮಯದಲ್ಲಿ ಕೊಳದ ಮಧ್ಯ ಭಾಗದಲ್ಲಿ ಒಂದು ಲಿಂಗವು ಕಾಣಿಸುತ್ತದೆ.

ನೀವು ಇಷ್ಟಪಟ್ಟವರನ್ನೇ ಬಾಳ ಸಂಗಾತಿಯನ್ನಾಗಿ ಕರುಣಿಸುವ ದೇವಾಲಯ ಇದು !

ಪರಮೇಶ್ವರನ ರೂಪ

ಪರಮೇಶ್ವರನ ರೂಪ

PC: youtube

ಲಿಂಗದ ಮೇಲಿನ ಭಾಗದಲ್ಲಿ ಸ್ವಲ್ಪ ಭಾಗವು ಒಳಗೆ ಹೋದದಂತೆ ಕಾಣಿಸಿತು. ರಾತ್ರಿಯೆಲ್ಲಾ ಮಣ್ಣಿನ ತಟ್ಟೆಗಳು ಹೊತ್ತಿದ್ದರಿಂದ ಹೀಗೆ ಏರ್ಪಟ್ಟಿತ್ತು ಎಂದು ಪ್ರಜೆಗಳು ಭಾವಿಸಿದರು. ಇದರಿಂದಾಗಿ ಪ್ರಜೆಗಳು ಆ ಬಾಲಕನೇ ಪರಮೇಶ್ವರನ ರೂಪವೆಂದು ಭಾವಿಸಿ ಪೂಜೆಗಳನ್ನು ಮಾಡುವುದು ಪ್ರಾರಂಭಿಸಿದರು.

ಮಲ್ಲಿಕಾರ್ಜುನ ದೇವಾಲಯ

ಮಲ್ಲಿಕಾರ್ಜುನ ದೇವಾಲಯ

PC: youtube

ಅದೇ ದಿನ ಕನಸ್ಸಿನಲ್ಲಿ ಪಿಟ್ಟಯ್ಯ ದಂಪತಿಗಳಿಗೆ ಮಲ್ಲನ್ನ ಕನಸ್ಸಿನಲ್ಲಿ ಕಾಣಿಸಿ ತನಗೆ ಒಂದು ದೇವಾಲಯವನ್ನು ನಿರ್ಮಾಣ ಮಾಡಿ ಎಂದು ತಿಳಿಸಿದನು. ಇದರಿಂದಾಗಿ ಅಲ್ಲಿ ದೇವಾಲಯವು ನೆಲೆಸಿತು. ಇದೇ ಮಲ್ಲಿಕಾರ್ಜುನ ದೇವಾಲಯವಾಗಿ ಪ್ರಸಿದ್ಧಿ ಹೊಂದಿತು.

ಪಿತೃಪಕ್ಷದಂದು ಇಲ್ಲಿ ಪಿಂಡದಾನ ಮಾಡಿದ್ರೆ ಆತ್ಮಕ್ಕೆ ಶಾಂತಿ ಸಿಗುತ್ತಂತೆ

 2 ನಂದಿಗಳು

2 ನಂದಿಗಳು

PC: youtube

ಈ ಪುಣ್ಯಕ್ಷೇತ್ರದಲ್ಲಿ 2 ನಂದಿಗಳು ಇವೆ. ಒಂದು ಗರ್ಭಗುಡಿಯಲ್ಲಿ ಇದ್ದರೆ ಮತ್ತೊಂದು ದೇವಾಲಯಕ್ಕೆ 25 ಅಡಿ ದೂರದಲ್ಲಿದೆ. ಸೂರ್ಯ ಕಿರಣಗಳು ಈ ವಿಗ್ರಹದ ಮೇಲೆ ಬಿದ್ದು ಗರ್ಭಗುಡಿಯಲ್ಲಿನ ಲಿಂಗದ ಮೇಲೆ ಪ್ರಸರಿಸುತ್ತದೆ. ಈ ಸುಂದರವಾದ ದೃಶ್ಯವನ್ನು ಕಣ್ಣಾರೆ ನೋಡಬೇಕೆ ವಿನಃ, ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ ಈ ದೃಶ್ಯವು ಕೇವಲ ಸಂಕ್ರಾತಿ ಸಮಯದಲ್ಲಿ ಹೆಚ್ಚು ಕಾಣಿಸುತ್ತದೆ.

ವಿಶೇಷ ಪೂಜೆಗಳು

ವಿಶೇಷ ಪೂಜೆಗಳು

PC: youtube

ಇನ್ನು ಪ್ರತಿ ಶಿವರಾತ್ರಿ ಅಲ್ಲಿ ಪ್ರತ್ಯೇಕವಾದ ಪೂಜೆಗಳು ಕೂಡ ನಡೆಯುತ್ತವೆ. ಆ ಸಮಯದಲ್ಲಿ ಸ್ವಯಂ ಆ ನೀಲಕಂಠನೇ ಇಲ್ಲಿಗೆ ಪಾರ್ವತಿ ಸಮೇತನಾಗಿ ಭೇಟಿ ನೀಡುತ್ತಾನೆ ಎಂಬುದು ಪ್ರತೀತಿ. ಇದರಿಂದಾಗಿ ಸ್ಥಳೀಯವಾಗಿಯೇ ಅಲ್ಲದೇ ಸುತ್ತಮುತ್ತಲ ಗ್ರಾಮದಿಂದಲೂ ಕೂಡ ಅನೇಕ ಮಂದಿ ಭಕ್ತರು ಇಲ್ಲಿಗೆ ಬಂದು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ಬೆಂಗಳೂರಿನ ಈ ಮಿಲಿಟರಿ ಹೋಟೆಲ್‌ಗಳಲ್ಲಿ ತಲೆಮಾಂಸ, ಖೀಮಾ ಸವಿಯಲೇ ಬೇಕು

ಅದ್ಭುತ ಶಿಲ್ಪಗಳು

ಅದ್ಭುತ ಶಿಲ್ಪಗಳು

PC: youtube

ಈ ದೇವಾಲಯದಲ್ಲಿ ಅದ್ಭುತ ಶಿಲ್ಪ ಸಂಪತ್ತನ್ನು ಕಾಣಬಹುದು. ಇಲ್ಲಿ ರಾಮಾಯಣ, ಮಹಾಭಾರತ ಕಥೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಕೂಡ ಕಾಣಬಹುದು. ಜೈನ, ಬೌದ್ಧ ಶಿಲ್ಪಗಳನ್ನು ಕೂಡ ನಾವು ಇಲ್ಲಿ ನೋಡಬಹುದು. ಇದರಿಂದಾಗಿ ಅನೇಕ ರಾಜರು ಕೂಡ ಈ ಕ್ಷೇತ್ರದ ಅಭಿವೃದ್ಧಿಗೆ ಕೈಹಾಕಿದ್ದಾರೆ ಎಂದು ಚರಿತ್ರೆಕಾರರು ಹೇಳುತ್ತಾರೆ.

ಕುಂಟಾಲ ಜಲಪಾತ

ಕುಂಟಾಲ ಜಲಪಾತ

PC: youtube

ಈ ಕ್ಷೇತ್ರಕ್ಕೆ ಸಮೀಪದಲ್ಲಿ ಅನೇಕ ಜಲಪಾತಗಳು ಇವೆ. ಕುಂಟಾಲ ಜಲಪಾತವು ಇಲ್ಲಿಗೆ ಸುಮಾರು 38 ಕಿ.ಮೀ ದೂರದಲ್ಲಿದೆ. ಅತ್ತ ಗಾಯತ್ರಿ ಜಲಪಾತ ಕೂಡ ಸಮೀಪವೇ. ನಿಡೋಡದಿಂದ ಪೊಚೆರಾ ಜಲಪಾತಕ್ಕೆ ಸುಮಾರು 19 ಕಿ.ಮೀ ದೂರದಲ್ಲಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube

ಹೈದ್ರಾಬಾದ್‍ನಿಂದ ಆದಿಲಾಬಾದ್‍ಗೆ ಅನೇಕ ಬಸ್ಸುಗಳು ಇವೆ. ಆದಿಲಾಬಾದ್‍ನಿಂದ ಇಚ್ಚೊಡಗೆ ಸುಮಾರು 32 ಕಿ.ಮೀ ದೂರದಲ್ಲಿದೆ. ಇನ್ನು ಇಚ್ಚೊಡದಿಂದ 15 ಕಿ.ಮೀ ದೂರದಲ್ಲಿಯೇ ಸಿರಿಚೆಲ್ಮ ಇದೆ. ಇನ್ನು ನಿರ್ಮಲ್‍ನಿಂದ ಸಿರಿಚೆಲ್ಮಗೆ ಸುಮಾರು 48 ಕಿ.ಮೀ ದೂರದಲ್ಲಿದೆ.

ಪ್ರವಾಸಿ ತಾಣಗಳು

ಪ್ರವಾಸಿ ತಾಣಗಳು

PC: youtube

ಆದಿಲಾಬಾದ್ ಜಿಲ್ಲೆಯಲ್ಲಿ ಸುಮಾರು 15 ಪ್ರವಾಸಿ ಪ್ರದೇಶಗಳು ಇವೆ. ಕಡಲೆ ಪಾಪಹರೇಶ್ವರ ದೇವಾಲಯ, ಕಾಲ್ವಾಲ್ ಅಭಯಾರಣ್ಯ, ಪೋಚಾರಂ ವಾಟರ್ ಫಾಲ್ಸ್, ಶಿವರಾಮ್ ಅಭಯಾರಣ್ಯ, ಜೈನಾತ್ ಟೆಂಪಲ್, ಬಾಸರ, ಪ್ರಾಣಹಿತ ಅಭಯಾರಣ್ಯ, ಸೆಯೆಂಟ್ ಜೋಫರ್ ಚರ್ಚ್ ತದಿತರ ಪ್ರದೇಶಗಳು ಅತಿ ಮುಖ್ಯವಾದುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more