Search
  • Follow NativePlanet
Share
» »ಈ ದೇವಾಲಯದ ಪ್ರಾಂಗಣದಲ್ಲಿ ನಿದ್ರಿಸಿದರೆ ಸಾಕು ಮಕ್ಕಳ ಭಾಗ್ಯ ಲಭಿಸುತ್ತದೆ ಎಂತೆ...

ಈ ದೇವಾಲಯದ ಪ್ರಾಂಗಣದಲ್ಲಿ ನಿದ್ರಿಸಿದರೆ ಸಾಕು ಮಕ್ಕಳ ಭಾಗ್ಯ ಲಭಿಸುತ್ತದೆ ಎಂತೆ...

ನಮ್ಮ ಭಾರತ ದೇಶದಲ್ಲಿ ಆನೇಕ ಮಹಿಮಾನ್ವಿತವಾದ ದೇವಾಲಯಗಳು ಇವೆ. ಆಶ್ಚರ್ಯ ಏನಪ್ಪ ಎಂದರೆ ಒಂದೊಂದು ದೇವಾಲಯಕ್ಕೂ ಅದರದೇ ಆದ ಮಹತ್ವವಿರುತ್ತದೆ. ಒಂದು ಹೆಣ್ಣು ತಾಯಿಯಾದಾಗಲೇ ಅವಳ ಜನ್ಮ ಪಾವನವಾಗುತ್ತದೆ. ವಿವಾಹವಾದ ನಂತರ ದಂಪತಿಗಳು ಒಂದು ಪುಟ್ಟ ಅ

ನಮ್ಮ ಭಾರತ ದೇಶದಲ್ಲಿ ಆನೇಕ ಮಹಿಮಾನ್ವಿತವಾದ ದೇವಾಲಯಗಳು ಇವೆ. ಆಶ್ಚರ್ಯ ಏನಪ್ಪ ಎಂದರೆ ಒಂದೊಂದು ದೇವಾಲಯಕ್ಕೂ ಅದರದೇ ಆದ ಮಹತ್ವವಿರುತ್ತದೆ. ಒಂದು ಹೆಣ್ಣು ತಾಯಿಯಾದಾಗಲೇ ಅವಳ ಜನ್ಮ ಪಾವನವಾಗುತ್ತದೆ. ವಿವಾಹವಾದ ನಂತರ ದಂಪತಿಗಳು ಒಂದು ಪುಟ್ಟ ಅತಿಥಿಗಾಗಿ ಕಾತುರರಾಗಿರುತ್ತದೆ. ಒಮ್ಮೊಮ್ಮೆ ಆ ಅತಿಥಿಯು ಬಾರದೇ ದಂಪತಿಗಳಿಗೆ ನಿರಾಶೆ ಮೂಡಿಸುವುದು ಸಹಜವಾದುದು. ಮಕ್ಕಳ ಭಾಗ್ಯವು ದೇವರಲ್ಲಿ ಕೇಳಿಕೊಂಡು ಬಂದಿರಬೇಕು ಎಂದು ಹೇಳುವುದು ಸುಳ್ಳು ಮಾತಾಲ್ಲ.

ಹಾಗಾದರೆ ನಮ್ಮ ದೇಶದಲ್ಲಿ ಮಕ್ಕಳ ಭಾಗ್ಯಕ್ಕೆ ಪ್ರತ್ಯೇಕವಾದ ಒಂದು ಶಕ್ತಿಯುತ ದೇವಾಲಯವಿದೆ. ಈ ದೇವಾಲಯದಲ್ಲಿ ಆ ದೇವಿಯು ಅತ್ಯಂತ ಮಹಿಮಾನ್ವಿತವಾಗಿದ್ದು, ಹಲವಾರು ಭಕ್ತರು ಮಕ್ಕಳನ್ನು ಪಡೆದುಕೊಂಡಿರುವ ಸಾಕ್ಷಿಗಳು ಇವೆ. ಹಾಗಾದರೆ ಆ ದೇವಾಲಯ ಎಲ್ಲಿದೆ? ಆ ದೇವಾಲಯದ ಶಕ್ತಿ ಏನು? ಮಕ್ಕಳಾಗಬೇಕಾದರೆ ಆ ದೇವಿಯನ್ನು ಹೇಗೆ ಪೂಜೆ ಮಾಡಬೇಕು ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯಿರಿ.

ಮಕ್ಕಳ ಭಾಗ್ಯ

ಮಕ್ಕಳ ಭಾಗ್ಯ

ಈ ದಿನಗಳಲ್ಲಿಯೂ ಕೂಡ ಆನೇಕ ಮಂದಿ ಪ್ರಜೆಗಳು ಇದನ್ನು ಮೂಢನಂಬಿಕೆ ಎಂದು ತಿಳಿಯುವುದು ಸಹಜವಾದುದು. ಆದರೆ ಯಾವುದಕ್ಕೂ ನಂಬಿಕೆ ಇಲ್ಲದೇ ಹೋದರೆ ಮಾಡಿಯೂ ಪ್ರಯೋಜನವಿರುವುದಿಲ್ಲ. ಒಂದು ಹುಲ್ಲು ಕದಲಲು ಕೂಡ ಆ ಭಗವಂತನ ಕೃಪೆ ಬೇಕಾಗಿರುವಾಗ ಮಕ್ಕಳ ಭಾಗ್ಯವನ್ನು ಆತನಲ್ಲಿ ಕೇಳಿದಾಗ ಇಲ್ಲ ಎಂದು ಹೇಳುತ್ತಾನೆಯೇ? ಒಂದು ಮಹಿಳೆ ಗರ್ಭವತಿ ಆಗುವುದಕ್ಕೆ ವಿವಿಧ ಮಾರ್ಗಗಳು ಪ್ರಯತ್ನಿಸಿ ವಿಫಲವಾದ ನಂತರವೇ ಆಕೆಯು ದೇವರ ಬಳಿ ಹೋಗುವ ಎಲ್ಲಾ ಅವಕಾಶಗಳು ಇರುತ್ತವೆ.

ಮಕ್ಕಳ ಭಾಗ್ಯ

ಮಕ್ಕಳ ಭಾಗ್ಯ

ಕೆಲವು ಬಾರಿ ಮಹಿಳೆಯರು ತಾವು ಗರ್ಭವತಿಯಾಗುವುದಕ್ಕೆ ಮಾಡುವಂತಹ ಕೆಲಸಗಳು ಮೋಸಪೂರಿತವಾಗಿರುತ್ತದೆ. ಈ ದೇವಾಲಯದ ನೆಲದ ಮೇಲೆ ಒಂದು ರಾತ್ರಿ ನಿದ್ರಿಸಿದರೆ ಗರ್ಭವತಿಯಾಗುತ್ತಾರೆ ಎಂದು ನಂಬಲಾಗುತ್ತದೆ. ಇದರ ಕುರಿತು ಮತ್ತಷ್ಟು ವಿವರಗಳನ್ನು ಸಂಕ್ಷೀಪ್ತವಾಗಿ ತಿಳಿಯೋಣ ಬನ್ನಿ.

ಎಲ್ಲಿದೆ?

ಎಲ್ಲಿದೆ?

ಈ ಪ್ರತ್ಯೇಕವಾದ ದೇವಾಲಯವು ಹಿಮಾಚಲ ಪ್ರದೇಶದಲ್ಲಿನ ಮಂಡಿ ಜಿಲ್ಲೆಯಲ್ಲಿನ ಲಡ ಭರೋಲ್ ಸಮೀಪದಲ್ಲಿ ಸಿಮಾಸ್ ಎಂಬ ಗ್ರಾಮದಲ್ಲಿದೆ. ಈ ದೇವಾಲಯದಲ್ಲಿನ ಮುಖ್ಯವಾದ ದೇವತೆ ಎಂದರೆ ಅದು ಸಿಮ್ಸಾ. ಸಿಮ್ಸಾ ದೇವಿಯನ್ನು "ಸಾನ್ಟಾನ್-ಧಾತ್ರಿ" ಎಂದೂ ಕೂಡ ಕರೆಯುತ್ತಾರೆ.

ನವರಾತ್ರಿ

ನವರಾತ್ರಿ

ಹಿಮಾಚಲ ಪ್ರದೇಶದಲ್ಲಿಯೇ ಅಲ್ಲದೇ ಸಮೀಪ ರಾಜ್ಯದಲ್ಲಿಯೂ ಕೂಡ ಈ ದೇವಾಲಯವು ಪ್ರಸಿದ್ಧಿ ಹೊಂದಿದೆ. ಮುಖ್ಯವಾಗಿ ನವರಾತ್ರಿ ಸಮಯದಲ್ಲಿ ಪಂಜಾಬ್, ಹರಿಯಾಣ ಮತ್ತು ಛಂಡಿಗಡ್ ನಂತಹ ಸಮೀಪದ ರಾಜ್ಯಗಳಿಂದಲೂ ಕೂಡ ಮಕ್ಕಳು ಆಗದೇ ಇರುವ ಆನೇಕ ಮಹಿಳೆಯರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ನವರಾತ್ರಿ

ನವರಾತ್ರಿ

ಈ ದೇವಾಲಯಕ್ಕೆ ಪ್ರತಿ ವರ್ಷವು ಮಕ್ಕಳು ಹುಟ್ಟದೇ ಇರುವ ದಂಪತಿಗಳು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ನವರಾತ್ರಿ ಹಬ್ಬದ ಸಮಯದಲ್ಲಿ "ಸಾಲಿಂದ್ರ" ಎಂಬ ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತಾರೆ. ನವರಾತ್ರಿಯ ಸಮಯದಲ್ಲಿ ಮಕ್ಕಳು ಇಲ್ಲದೇ ಇರುವ ಸ್ತ್ರೀಯರು ಈ ದೇವಾಲಯದ ನೆಲದ ಮೇಲೆ ಒಂದು ರಾತ್ರಿ ನಿದ್ರಿಸುತ್ತಾರೆ.

ಸಿಮ್ಸಾ ದೇವತೆ ಕನಸ್ಸಿನಲ್ಲಿ ಕಾಣಿಸುತ್ತಾಳೆ

ಸಿಮ್ಸಾ ದೇವತೆ ಕನಸ್ಸಿನಲ್ಲಿ ಕಾಣಿಸುತ್ತಾಳೆ

ದೇವತೆಯ ಮೇಲೆ ಭಕ್ತಿ ಹಾಗು ನಂಬಿಕೆ ಇರುವವರು ಈ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರಿಗೆ ಇಲ್ಲಿನ ಮಹಿಮಾನ್ವಿತವಾದ ಸಿಮ್ಸಾ ದೇವತೆಯು ಕನಸ್ಸಿನಲ್ಲಿ ಕಾಣಿಸಿಕೊಳ್ಳುತ್ತಾಳಂತೆ. ದೇವತೆಯು ಮಾನವ ರೂಪದಲ್ಲಿ ಕಾಣಿಸಿ ಮಕ್ಕಳ ಭಾಗ್ಯವನ್ನು ಕರುಣಿಸಿ ಆರ್ಶಿವಾದ ನೀಡುತ್ತಾಳೆ. ಕನಸ್ಸಿನಲ್ಲಿ ಹೂವು ಅಥವಾ ಹಣ್ಣು ಸ್ವೀಕಾರ ಮಾಡುತ್ತಿದ್ದರೆ ಆಕೆಗೆ ಶೀಘ್ರವಾಗಿಯೇ ಮಕ್ಕಳು ಆಗುತ್ತದೆ ಎಂದೇ ನಂಬಲಾಗುತ್ತದೆ.

ಗರ್ಭವತಿ

ಗರ್ಭವತಿ

ಗರ್ಭವತಿಯಾದ ನಂತರ ಪ್ರತಿಯೊಂದು ತಾಯಿಯು ಗಂಡು ಅಥವಾ ಹೆಣ್ಣು ಮಗುವಿದೆಯೇ ಎಂಬ ಕುತೂಹಲವಿರುವುದು ಸಾಮಾನ್ಯವಾದುದೇ. ನಿಮಗೆ ಗೊತ್ತೆ ಗರ್ಭದಲ್ಲಿರುವ ಮಗುವು ಗಂಡು ಮಗುವೇ ಅಥವಾ ಹೆಣ್ಣು ಮಗುವೇ ಎಂಬ ವಿಷಯ ಕೂಡ ತಿಳಿಯುತ್ತದೆ ಎಂತೆ. ಸ್ರೀ ಕನಸ್ಸಿನಲ್ಲಿ ಚೇಪೆಕಾಯಿ ಕಾಣಿಸಿದರೆ ಗಂಡು ಮಗು ಎಂದು, ಅದೇ ಬೆಂಡೆಕಾಯಿ ಕಾಣಿಸಿದರೆ ಹೆಣ್ಣು ಮಗು ಹುಟ್ಟುತ್ತದೆ ಎಂದು ನಂಬಬೇಕು.

ಅಪಾಯಕಾರಿ ಮಚ್ಚೆಗಳು

ಅಪಾಯಕಾರಿ ಮಚ್ಚೆಗಳು

ಸ್ತ್ರೀಯ ಕನಸ್ಸಿನಲ್ಲಿ ಕಲ್ಲು ಅಲ್ಲದೇ ಮರ ಅಥವಾ ಮೆಟಲ್ ಕಾಣಿಸಿದರೆ ಮಕ್ಕಳು ಹುಟ್ಟುತ್ತಾರೆ ಎಂದು ಕೂಡ ನಂಬಲಾಗುತ್ತದೆ. ಆಕೆಯು ಮಕ್ಕಳು ಹುಟ್ಟತ್ತಾರೆ ಎಂದು ಕನಸ್ಸು ಬಿದ್ದ ತಕ್ಷಣವೇ ಆಕೆಯು ದೇವಾಲಯದ ಪ್ರಾಂಗಣ ಬಿಟ್ಟು ತೆರಳಬೇಕು. ಒಂದು ವೇಳೆ ಹಾಗೆಯೇ ದೇವಾಲಯದಲ್ಲಿ ಇದ್ದರೆ ಆಕೆಯ ಶರೀರದ ಮೇಲೆ ಹಲವಾರು ಅಪಾಯಕಾರಿ ಮಚ್ಚೆಗಳು ಕಾಣಿಸಿಕೊಳ್ಳುತ್ತದೆ ಎಂತೆ.

ದೇವಾಲಯದ ಸಮೀಪದಲ್ಲಿ ದೊಡ್ಡ ಕಲ್ಲು

ದೇವಾಲಯದ ಸಮೀಪದಲ್ಲಿ ದೊಡ್ಡ ಕಲ್ಲು

ಕೆಲವು ಆಧಾರದ ಪ್ರಕಾರ, ಸಿಮ್ಸಾ ದೇವಾಲಯಕ್ಕೆ ಸಮೀಪದಲ್ಲಿ ಒಂದು ದೊಡ್ಡ ಕಲ್ಲು ಇದೆ. ಇದು ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಈ ಕಲ್ಲಿನ ವಿಶೇಷತೆ ಮತ್ತು ವಿಚಿತ್ರ ಏನೆಂದರೆ ಈ ಕಲ್ಲುನ್ನು ನೀವು ಎಷ್ಟೇ ಬಲ ಪ್ರಯೋಗ ಮಾಡಿದರೂ ಕೂಡ ಕದಲುವುದಿಲ್ಲ. ಆದರೆ ನೀವು ಒಂದು ಮಗುವಿನ ಕೈ ಸಹಾಯದಿಂದ ಕದಲಿಸಿದರೆ ಸುಲಭವಾಗಿ ಕದಲುತ್ತದೆ.

ವಿವಿಧ ದೇವಾಲಯಗಳು

ವಿವಿಧ ದೇವಾಲಯಗಳು

ದೇವತೆಗಳ ನಿವಾಸ ಎಂದು ಹೇಳಿಕೊಳ್ಳುವ ಈ ರಾಜ್ಯದಲ್ಲಿ ಆನೇಕ ಹಿಂದೂ ದೇವಾಲಯಗಳು ಕೂಡ ಇವೆ. ಅವು ಯಾವುವೆಂದರೆ ಜ್ವಾಲಾಮುಖಿ ದೇವಾಲಯ, ಚಾಮುಂಡಾ ದೇವಾಲಯ, ವಜ್ರೇಶ್ವರಿ ದೇವಾಲಯ, ವೈದ್ಯನಾಥ ದೇವಾಲಯ, ಲಕ್ಷ್ಮೀ ನಾರಾಯಣ ದೇವಾಲಯ, ಚೌರಾಸಿ ದೇವಾಲಯ ಇನ್ನು ಹಲವಾರು.

ಸತ್ತವರನ್ನು ಬದುಕಿಸುವ ಪವಿತ್ರವಾದ ಸ್ಥಳವಿದು...ಸತ್ತವರನ್ನು ಬದುಕಿಸುವ ಪವಿತ್ರವಾದ ಸ್ಥಳವಿದು...

<strong></strong>ಇದು ಭೀಮ ನಳಪಾಕ ಮಾಡುತ್ತಿದ್ದ ಗುಹೆ!ಇದು ಭೀಮ ನಳಪಾಕ ಮಾಡುತ್ತಿದ್ದ ಗುಹೆ!

ದೇವರು ಇದ್ದಾನೆ ಎಂಬುದಕ್ಕೆ ಇದೊಂದು ಉತ್ತಮವಾದ ನಿದರ್ಶನ.....ದೇವರು ಇದ್ದಾನೆ ಎಂಬುದಕ್ಕೆ ಇದೊಂದು ಉತ್ತಮವಾದ ನಿದರ್ಶನ.....

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X