Search
  • Follow NativePlanet
Share
» »ಭಾರತ ಮಾತ್ರವಲ್ಲದೆ ಈ ಸ್ಥಳಗಳಲ್ಲಿಯೂ ಶಿವ ದೇವಾಲಯಗಳಿವೆ!

ಭಾರತ ಮಾತ್ರವಲ್ಲದೆ ಈ ಸ್ಥಳಗಳಲ್ಲಿಯೂ ಶಿವ ದೇವಾಲಯಗಳಿವೆ!

ಭಾರತದ ಹೊರತಾಗಿ ಹೊರಗಿನ ರಾಷ್ಟ್ರಗಳಲ್ಲಿರುವ ಶಿವ ದೇವಾಲಯಗಳು

ಶಿವನನ್ನು ಅನೇಕ ರೂಪಗಳಲ್ಲಿ ಮತ್ತು ಅನೇಕ ಸ್ಥಳಗಳಲ್ಲಿ ಪೂಜಿಸಲಾಗುತ್ತದೆ. ಅವರನ್ನು ಭಾರತ ಮತ್ತು ನೇಪಾಳದ ಜನರು ಪ್ರಾಥಮಿಕ ದೇವತೆಯಾಗಿ ಪೂಜಿಸುತ್ತಾರೆ, ಅವರನ್ನು ಹಿಂದೂ ಧರ್ಮದ ಪ್ರಮುಖ ಅಂಶವಾಗಿಯೂ ಪೂಜಿಸಲಾಗುತ್ತದೆ ಅಷ್ಟೇ ಅಲ್ಲದೆ ಶಿವನನ್ನು ಹಿಂದೂ ಧರ್ಮದ ಸರ್ವೋಚ್ಚ ದೇವರೆಂದು ಎಂದು ಪರಿಗಣಿಸಲಾಗಿದೆ.

ಇಲ್ಲಿರುವ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಭಾರತದಲ್ಲಿನ ಶಿವ ದೇವಾಲಯಗಳ ಹೊರತಾಗಿ ನಿಮಗೆ ತಿಳಿದಿದೆಯೇ, ಭಾರತದಿಂದ ಹೊರಗೆ ಹಲವಾರು ರಾಷ್ಟ್ರಗಳಲ್ಲಿ ಶಿವ ದೇವಾಲಯಗಳಿವೆ, ಎನ್ನುವ ವಿಷಯ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ.

ಭಾರತದಿಂದ ಹೊರ ದೇಶಗಳಲ್ಲಿರುವ ಶಿವ ದೇವಾಲಯಗಳು

ಇಂಡೋನೇಷ್ಯಾದ ಜಾವಾದಲ್ಲಿರುವ ಪ್ರಂಬನನ್ ದೇವಾಲಯ

ಇಂಡೋನೇಷ್ಯಾದ ಜಾವಾದಲ್ಲಿರುವ ಪ್ರಂಬನನ್ ದೇವಾಲಯ

ಪ್ರಂಬನನ್ ದೇವಾಲಯವು ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯದ ಸಂಕೀರ್ಣವಾಗಿದ್ದು ಇದು ಮತ್ತು 47 ಮೀ ಎತ್ತರದಲ್ಲಿದ್ದು ಆಗ್ನೇಯ ಏಷ್ಯಾದ ಅತಿ ದೊಡ್ಡ ದೇವಾಲಯವೆನಿಸಿದೆ. 1991ರಿಂದ ಇದನ್ನು ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲ್ಪಟ್ಟಿತು. ಈ ರಚನೆಗಳಲ್ಲಿ ಹೆಚ್ಚಿನವು ಕ್ರಿ.ಶ 10 ನೇ ಶತಮಾನದಿಂದ ಬಂದಿದ್ದು, ಕೆಲವು ಹಿಂದಿನ ಕಾಲದಿಂದ ಬಂದ ಕೆಲವು ಇನ್ನೂ ಉಳಿದುಕೊಂಡಿವೆ. ಈ ತಾಣದ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿ ಹಲವಾರು ಸಂಖ್ಯೆಯಲ್ಲಿ ಹಿಂದೂ ದೇವಾಲಯಗಳಿದ್ದು ಇವು ವಿಸ್ತಾರವಾದ ತೆರೆದ

ಪ್ರದೇಶಗಳಲ್ಲಿ ಜೋಡಿಸಲ್ಪಟ್ಟಿವೆ. ಇಲ್ಲಿ ಶಿವ ದೇವಾಲಯದ ಜೊತೆಗೆ ಅದರ ಸಂಕೀರ್ಣದಲ್ಲಿ ಬ್ರಹ್ಮ ಮತ್ತು ವಿಷ್ಣು ದೇವರಿಗೆ ಅರ್ಪಿತವಾದ ದೇವಾಲಯಗಳನ್ನೂ ಕಾಣಬಹುದಾಗಿದೆ. ಪ್ರಂಬನನ್ ದೇವಾಲಯ ಆವರಣದ ಒಳಗಡೆ 240 ದೇವಾಲಯಗಳನ್ನು ಹೊಂದಿದ್ದು, ಇದನ್ನು ಅಂದಾಜು 8ನೇ ಶತಮಾನಗಳಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿರುವ ಹಿಂದೂ ದೇವಾಲಯವು ರಾಮಾಯಣದ ಇಂಡೋನೇಷಿಯನ್ ಆವೃತ್ತಿಯ ವಿವರಣೆಯನ್ನು ಪ್ರದರ್ಶಿಸುತ್ತದೆ.

ಸ್ಥಳ: ರಾಯ ಸೋಲೋ - ಯೋಗ್ಯಕರ್ತಾ ನಂ.16, ಕ್ರಾಂಗನ್, ಬೊಕೊಹಾರ್ಜೊ, ಕೆಕ್., ಪ್ರಾಂಬನನ್ ಕಬುಪತೆನ್ ಸ್ಲೆಮನ್, ಡೇರಾ ಇಸ್ತೀಮೇವಾ, ಯೋಗ್ಯಕರ್ತ 55571, ಇಂಡೋನೇಷ್ಯಾ.

 ನೇಪಾಳದ ಕಠ್ಮಂಡುವಿನ ಪಶುಪತಿನಾಥ ದೇವಾಲಯ

ನೇಪಾಳದ ಕಠ್ಮಂಡುವಿನ ಪಶುಪತಿನಾಥ ದೇವಾಲಯ

ಪಶುಪತಿನಾಥ ದೇವಾಲಯವು ಕಠ್ಮಂಡು ನೇಪಾಳದ ಭಾಗ್ಮತಿ ನದಿಯ ದಡದಲ್ಲಿದೆ. ಈ ದೇವಾಲಯವು ನೇಪಾಳದಲ್ಲಿಯ ಅತ್ಯಂತ ಹೆಚ್ಚಾಗಿ ಭೇಟಿ ನೀಡಲ್ಪಡುವ ದೇವಾಲಯಗಳಲ್ಲೊಂದಾಗಿದ್ದು ಅತೀ ಹೆಸರುವಾಸಿಯಾಗಿದೆ. ಹಾಗೂ 1979 ರಲ್ಲಿ ಈ ದೇವಾಲಯವನ್ನು ಯುನೆಸ್ಸ್ಕೊ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಯಿತು. ದೇವಾಲಯದ ಸಂಕೀರ್ಣವು ಎರಡು ಮುಖ್ಯ ರಚನೆಗಳನ್ನು ಹೊಂದಿದೆ: ಗರ್ಭಗೃಹಗಳು (ಗರ್ಭಗೃಹ).

ಈ ದೇವಾಲಯದ ವಿಶಿಷ್ಟತೆಯೆಂದರೆ ನೇಪಾಳದ ಪಗೋಡಾ ಶೈಲಿಯ ಈ ದೇವಾಲಯವು ಚಿನ್ನದ ಹೊದಿಕೆಯೊಂದಿಗೆ ತಾಮ್ರದ ಛಾವಣಿಯನ್ನು ಹೊಂದಿದೆ ಮತ್ತು ಮುಖ್ಯ ಬಾಗಿಲುಗಳು ಬೆಳ್ಳಿಯ ಲೇಪನವನ್ನು ಹೊಂದಿವೆ.

ಸ್ಥಳ: ಗೌಶಾಲಾ ರಸ್ತೆ, ಕಠ್ಮಂಡು 44600, ನೇಪಾಳ.

ಪಾಕಿಸ್ತಾನದ ಚಕ್ವಾಲ್‌ನಲ್ಲಿರುವ ಕಟಾಸ್ರಾಜ್ ದೇವಾಲಯ

ಪಾಕಿಸ್ತಾನದ ಚಕ್ವಾಲ್‌ನಲ್ಲಿರುವ ಕಟಾಸ್ರಾಜ್ ದೇವಾಲಯ

ಪಾಕಿಸ್ತಾನದ ಚಕ್ವಾಲ್ ನಲ್ಲಿರುವ ಕಟಾಸ್ರಾಜ್ ದೇವಾಲಯವು ಅತ್ಯಂತ ಪ್ರಸಿದ್ದ ಹಿಂದೂ ದೇವಾಲಯವಾಗಿದೆ. ಇದು ಶಿವದೇವರಿಗರ್ಪಿತವಾಗಿದ್ದು, ಪಂಜಾಬ್ ನಲ್ಲಿಯ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲಿ ಒಂದೆನಿಸಿದೆ. ಈ ದೇವಾಲಯವು ಕೊಳದಿಂದ ಸುತ್ತುವರೆದಿದ್ದು, ಶಿವನ ಮಡದಿಯಾದ ಸತಿ ದೇವಿಯು ಮರಣ ಹೊಂದಿದ್ದಕ್ಕಾಗಿ ಕಣ್ಣೀರಿಟ್ಟ ಶಿವನ ಕಣ್ಣೀರಿನಿಂದಾಗಿ ಈ ಕೊಳವು ನಿರ್ಮಿತವಾಗಿದೆ ಎಂದು ನಂಬಲಾಗುತ್ತದೆ.

ಈ ದೇವಾಲಯದ ಅಸ್ತಿತ್ವವು ಮಹಾಭಾರತದ ಕಾಲದಿಂದಲೂ ಇದ್ದು, ಪಾಂಡವರು ಗಡಿಪಾರಾದ ಸಂದರ್ಭದಲ್ಲಿ ಇಲ್ಲಿ ಆಶ್ರಯ ಪಡೆದಿದ್ದರೆನ್ನಲಾಗುತ್ತದೆ.

ಸ್ಥಳ: ಕಲಾರ್ ಕಹಾರ್ ರಸ್ತೆ, ಕಟಾಸ್, ಚಕ್ವಾಲ್, ಪಂಜಾಬ್, ಪಾಕಿಸ್ತಾನ.

ಕಟಾಸ್ರಾಜ್ ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯ: ಮೇ ನಿಂದ ಅಕ್ಟೋಬರ್.

ಶ್ರೀಲಂಕಾದ ಮುನ್ನೇಶ್ವರಮ್ ನ ಮುನ್ನೇಶ್ವರ ದೇವಾಲಯ

ಶ್ರೀಲಂಕಾದ ಮುನ್ನೇಶ್ವರಮ್ ನ ಮುನ್ನೇಶ್ವರ ದೇವಾಲಯ

ಶ್ರೀಲಂಕಾದ ಮುನ್ನೇಶ್ವರಮ್ ನಲ್ಲಿರುವ ಮುನ್ನೆಶ್ವರಮ್ ದೇವಾಲಯವು ಹಿಂದೂ ದೇವರಾದ ಶಿವನಿಗರ್ಪಿತವಾದುದಾಗಿದ್ದು, ಈ ದೇವಾಲಯದ ಸಂಕೀರ್ಣವು ಬೌದ್ದ ಧರ್ಮದ ದೇವಾಲಯದ ಜೊತೆಗೆ 5 ದೇವಾಲಯಗಳನ್ನು ಹೊಂದಿದೆ. ಈ ದೇವಾಲಯವು ಕ್ರಿ.ಶ 1000 ರಿಂದ ಅಸ್ತಿತ್ವದಲ್ಲಿದೆ ಮತ್ತು ರಾಮಾಯಣದೊಂದಿಗೆ ಸಂಬಂಧವಿದೆ ಎಂದು ನಂಬಲಾಗಿದೆ. ಮುನ್ನೇಶ್ವರಂ ದೇವಾಲಯವು ನವರಾತ್ರಿ ಮತ್ತು ಶಿವರಾತ್ರಿಯ ಆಚರಣೆಗೆ ಹೆಸರುವಾಸಿಯಾಗಿದೆ.

ಸ್ಥಳ: ಮಹಾ ದೇವಾಲಯ, ವಾರಿಯಾಪೋಲ ರಸ್ತೆ, ಚಿಲಾವ್ 61000, ಶ್ರೀಲಂಕಾ.

ಮುನ್ನೇಶ್ವರಂ ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ಸಮಯ: ಮಾರ್ಚ್ ಮತ್ತು ಅಕ್ಟೋಬರ್.

ಮಲೇಶ್ಯಾದ ಜೋಹೊರ್ ಬಾರುವಿನಲ್ಲಿಯ ಅರುಲ್ಮಿಗು ಶ್ರೀ ರಾಜಾ ಕಾಳಿಯಮ್ಮನ್ ದೇವಾಲಯ

ಮಲೇಶ್ಯಾದ ಜೋಹೊರ್ ಬಾರುವಿನಲ್ಲಿಯ ಅರುಲ್ಮಿಗು ಶ್ರೀ ರಾಜಾ ಕಾಳಿಯಮ್ಮನ್ ದೇವಾಲಯ

1922 ರಲ್ಲಿ ನಿರ್ಮಿಸಲಾದ ಅರುಲ್ಮಿಗು ಶ್ರೀ ರಾಜಾ ಕಾಳಿಯಮ್ಮನ್ ದೇವಾಲಯವು ಜೋಹರ್ ಬಾರುವಿನ ಅತ್ಯಂತ ಜನಪ್ರಿಯ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಪ್ರತಿದಿನ ಹೆಚ್ಚಿನ ಸಂಖ್ಯೆಯ ಭಕ್ತರು ಮತ್ತು ಸಂದರ್ಶಕರನ್ನು ಹೊಂದಿದೆ ಹಾಗೂ ಇದು ಜೋಹರ್ ಬಾರುಗೆ ಭೇಟಿ ನೀಡುವ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಶಿವ ದೇವರಿರುವ ಗೋಡೆಯ ಮೇಲೆ 3,00,000 ರುದ್ರಾಕ್ಷ ಮಣಿಗಳನ್ನು ಕೆತ್ತಲಾಗಿದೆ, ಇದು ಅತ್ಯಂತ ವಿಶಿಷ್ಟವಾಗಿದ್ದು ಎಲ್ಲರ ಗಮನ ಸೆಳೆಯುವಂತೆ ಮಾಡುತ್ತದೆ.

ಸ್ಥಳ: ಜಲನ್ ತುನ್ ಅಬ್ದುಲ್ ರಜಾಕ್ 1/1, ವಾಡಿ ಹನಾ, 80300 ಜೋಹರ್ ಬಹ್ರು, ಜೋಹೋರ್, ಮಲೇಷ್ಯಾ.

ಈ ದೇವಾಲಯವನ್ನು ಭೇಟಿ ಕೊಡಲು ಉತ್ತಮ ಸಮಯವೆಂದರೆ ಡಿಸೆಂಬರ್ ನಿಂದ ಎಪ್ರಿಲ್ ವರೆಗೆ

ಮಸ್ಕತ್, ಓಮನ್‌ನಲ್ಲಿರುವ ಶಿವ ದೇವಾಲಯ, ಮಾರಿಷಸ್‌ನ ಸಾಗರ್ ಶಿವ ದೇವಾಲಯ, ಮಾಸ್ಕೋ, ರಷ್ಯಾದಲ್ಲಿ ಶಿವ ಶಕ್ತಿ ದೇವಾಲಯ ಸೇರಿದಂತೆ ಏಷ್ಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿವ ದೇವಾಲಯಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X