Search
  • Follow NativePlanet
Share
» »ಈ ಅರ್ಧನಾರೀಶ್ವರ ಲಿಂಗದಲ್ಲಿ ಶಿವರಾತ್ರಿಯಂದು ನಡೆಯುತ್ತೆ ಚಮತ್ಕಾರ!

ಈ ಅರ್ಧನಾರೀಶ್ವರ ಲಿಂಗದಲ್ಲಿ ಶಿವರಾತ್ರಿಯಂದು ನಡೆಯುತ್ತೆ ಚಮತ್ಕಾರ!

ಹಿಮಾಚಲಪ್ರದೇಶದಲ್ಲಿ ಅನೇಕ ಮಹತ್ವಪೂರ್ಣ ಧಾರ್ಮಿಕ ಸ್ಥಳಗಳಿವೆ. ಇಲ್ಲಿನ ಕಾಟ್‌ಗರ್ ನಲ್ಲಿ ಒಂದು ಸುಂದರವಾದ ಶಿವಲಿಂಗವಿದೆ. ಕಾಟ್‌ಗರ್ ಮಹದೇವ ಮಂದಿರದಲ್ಲಿರುವ ಈ ವಿಶೇಷವಾದ ಶಿವಲಿಂಗ ಅರ್ಧನಾರೀಶ್ವರ ರೂಪದಲ್ಲಿದೆ. ಇಲ್ಲಿ ಶಿವ ಪಾರ್ವತಿಯ ನಡುವಿನ ಅಂತರ ತನ್ನಷ್ಟಕ್ಕೇ ಹೆಚ್ಚು, ಕಡಿಮೆಯಾಗುತ್ತಾ ಇರುತ್ತದೆ.

ಈ ಊರಲ್ಲಿ ಕಾರು ಡ್ರೈವರ್ ಇಲ್ಲದೆಯೇ ಮೇಲಕ್ಕೇರುತ್ತೆ !

ಅರ್ಧನಾರೀಶ್ವರ ರೂಪ

ಅರ್ಧನಾರೀಶ್ವರ ರೂಪ

PC:Vikasjariyal

ಇಲ್ಲಿನ ಶಿವಲಿಂಗವು ಎರಡು ಭಾಗವಾಗಿದೆ. ಒಂದು ದೊಡ್ಡ ಭಾಗ ಇನ್ನೊಂದು ಸಣ್ಣ ಭಾಗ. ದೊಡ್ಡ ಭಾಗವನ್ನು ಶಿವನೆಂದು , ಸಣ್ಣ ಭಾಗವನ್ನು ಪಾರ್ವತಿಯೆಂದು ಪೂಜಿಸಲಾಗುತ್ತದೆ. ಗ್ರಹ, ನಕ್ಷತ್ರಗಳಿಗನುಗುಣವಾಗಿ ನಡುವಿನ ಅಂತರ ಬದಲಾಗುತ್ತಿರುತ್ತದೆ.

ವಿಶ್ವದ ಏಕೈಕ ಶಿವಲಿಂಗ

ವಿಶ್ವದ ಏಕೈಕ ಶಿವಲಿಂಗ

PC:Vikasjariyal

ಶಿವಲಿಂಗ ಎರಡು ಭಾಗಗಳಾಗಿರುವ ವಿಶ್ವದ ಏಕೈಕ ಶಿವಲಿಂಗ ಇದಾಗಿದೆ. ಪಾರ್ವತಿ ಹಾಗೂ ಶಿವನ ವಿಭಿನ್ನ ರೂಪದಲ್ಲಿ ಭಾಗವಾಗಿದ್ದು, ಇದರ ಮಧ್ಯದ ಆಂತರ ಗ್ರಹ ಹಾಗೂ ನಕ್ಷತ್ರಗಳಿಗನುಗುಣವಾಗಿ ಹೆಚ್ಚು,ಕಡಿಮೆ ಆಗುತ್ತಾ ಇರುತ್ತದೆ. ಗ್ರೀಷ್ಮ ಋತುವಿನಲ್ಲಿ ಎರಡು ಭಾಗಗಳಾಗಿ ಬೇರ್ಪಟ್ಟರೆ ಶೀತ ಋತುವಿನಲ್ಲಿ ಒಂದೇ ರೂಪಧಾರಣೆಯಾಗುತ್ತದೆ.

ಮಂದಿರ ನಿರ್ಮಿಸಿದ್ದು ಯಾರು?

ಮಂದಿರ ನಿರ್ಮಿಸಿದ್ದು ಯಾರು?

PC: youtube

ಇತಿಹಾಸದ ಪ್ರಕಾರ, ಮೊದಲಿಗೆ ಸಿಕಂದರ್ ಕಾಟ್‌ಗರ್ ಮಹಾದೇವ ಮಂದಿರವನ್ನು ನಿರ್ಮಿಸಿದ್ದನು. ಈ ಶಿವಲಿಂಗದಿಂದ ಪ್ರಭಾವಿತನಾಗಿ ಸಿಕಂದರ್ ಅಲ್ಲಿ ಮಂದಿರ ನಿರ್ಮಿಸುವ ಸಲುವಾಗಿ ಇಲ್ಲಿನ ಭೂಮಿಯನ್ನು ಸಮತಟ್ಟಾಗಿಸಿ ಮಂದಿರ ನಿರ್ಮಿಸಿದ್ದನು.

ಏಳು ಎಂಟು ಫೀಟ್ ಎತ್ತರದ ಲಿಂಗ

ಏಳು ಎಂಟು ಫೀಟ್ ಎತ್ತರದ ಲಿಂಗ

PC: youtube

ಗ್ರಹ ನಕ್ಷತ್ರಗಳಿಗನುಗುಣವಾಗಿ ಶಿವಲಿಂಗದ ನಡುವಿನ ಅಂತರ ಬದಲಾಗುತ್ತಿರುತ್ತದೆ. ಆದರೆ ಶಿವರಾತ್ರಿಯಂದು ಈ ಎರಡು ಲಿಂಗ ಒಂದಾಗುತ್ತದೆ. ಇಲ್ಲಿಯ ಶಿವಲಿಂಗ ಕಪ್ಪುಬಣ್ಣದ್ದಾಗಿದೆ. ಇಲ್ಲಿ ಪೂಜಿಸಲಾಗುವ ಶಿವಲಿಂಗದ ಎತ್ತರ ಸುಮಾರು 7-8 ಫೀಟ್ ಇದೆ. ಪಾರ್ವತಿಯ ರೂಪದಲ್ಲಿ ಪೂಜಿಸಲಾಗುವ ಶಿವಲಿಂಗದ ಎತ್ತರ 5-6 ಫೀಟ್ ಇದೆ.

ಶಿವರಾತ್ರಿಯಂದು ವಿಶೇಷ

ಶಿವರಾತ್ರಿಯಂದು ವಿಶೇಷ

PC: youtube

ಶಿವರಾತ್ರಿಯಂದು ಮೂರು ದಿನಗಳ ಮೇಳ ಇರುತ್ತದೆ. ಶಿವ ಹಾಗೂ ಶಕ್ತಿ ಅರ್ಧನಾರಿಶ್ವರ ರೂಪದಲ್ಲಿ ಒಂದಾಗುವ ಈ ದೃಶ್ಯವನ್ನು ಕಾಣಲು ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.

Read more about: himachal temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X