Search
  • Follow NativePlanet
Share
» »ತಿರುನಲ್ಲಾರ್‍ನ ಶನೇಶ್ವರ ದೇವಾಲಯ: ಸೈನ್ಸ್‍ಗೆ ಸವಾಲ್!!

ತಿರುನಲ್ಲಾರ್‍ನ ಶನೇಶ್ವರ ದೇವಾಲಯ: ಸೈನ್ಸ್‍ಗೆ ಸವಾಲ್!!

Written By:

ನಾಸಾ ಕಳುಹಿಸಿದ ಸಾಟಿಲೈಟ್ ಎಂಬುದು ಭೂಮಿ ಪರಿಭ್ರಮಣ ಸಮಯದಲ್ಲಿ ತಿರುನಲಲ್ಲಾರ್‍ನಲ್ಲಿನ ಶನೇಶ್ವರ ದೇವಾಲಯ ಪರೀದಿಗೆ ಬಂದ ತಕ್ಷಣವೇ ಸಾಟಿಲೈಟ್ ಎಂಬುದು 2 ರಿಂದ 3 ನಿಮಿಷಗಳು ನಿಧಾನವಾಗಿ ಚಲಿಸುತ್ತದೆ ಎಂತೆ. ಈ ಪರಿಣಾಮದ ಬಗ್ಗೆ ನಾಸಾ ಸಂಶೋಧನೆ ನಡೆಸಲು ಕೆಲವರನ್ನು ಕಳುಹಿಸಿದರಂತೆ.

ಆದರೆ ಅವರಿಗೆ ಖಚಿತವಾದ ವೈಜ್ಞಾನಿಕ ಆಧಾರಗಳು ಲಭಿಸಲಿಲ್ಲ. ನಾಸಾ ಸಂಸ್ಥೆಯವರು ಕೂಡ ಇದೊಂದು ಅದ್ಭುತ ಎಂದು ಭಾವಿಸಿದರಂತೆ. ಅಷ್ಟೇ ಅಲ್ಲದೆ ಈ ದೇವಾಲಯವನ್ನು ಪೂರ್ವಕಾಲದಲ್ಲಿ ವೈಜ್ಞಾನಿಕ ವಿಧಾನದಲ್ಲಿ ನಿರ್ಮಾಣ ಮಾಡಿರುವುದು ಮತ್ತಷ್ಟು ಆಶ್ಚರ್ಯ ಮೂಡಿಸುತ್ತದೆ. ಪೂರ್ವಿಕರು ಎಲ್ಲಿ ಯು.ವಿ ಕಿರಣಗಳು ಹೆಚ್ಚಾಗಿ ಬೀಳುತ್ತವೆಯೊ ಆ ಪ್ರದೇಶದಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ.

30 ತಿಂಗಳಿಗೆ ಒಮ್ಮೆ ನಡೆಯುವ ಶನಿ ತ್ರಯೋದಶಿಯಂದು ಗ್ರಹಗಳು ಒಂದು ಕಕ್ಷ್ಯದಿಂದ ಮತ್ತೊಂದು ಕಕ್ಷ್ಯಕ್ಕೆ ಸ್ಥಾನ ಪಲ್ಲಟ ಮಡಿದ ನಂತರ ಅಲ್ಟ್ರಾವೈಲೆಟ್ ರೇಸ್ ಎಂಬುದು ಈ ದೇವಾಲಯ ಮೇಲೆ ತೀವ್ರವಾಗಿ ಬೀಳುವುದರಿಂದ ಆ ಸಮಯದಲ್ಲಿ ನಾಸಾ ಸಂಸ್ಥೆಯ ಸಾಟಿಲೈಟ್ ನಿಧಾನವಾಗುತ್ತದೆ ಎಂದು ವರದಿ ನೀಡಿದ್ದಾರೆ.

ಆದರೆ ಇದನ್ನು ನಾಸಾ ಸಂಸ್ಥೆಯವರು ಪ್ರಜೆಗಳ ಮೂಢನಂಬಿಕೆಯನ್ನು ತೊಲಗಿಸಲು ಹೇಳಿದ್ದೇ ವಿನಃ. ಖಚಿತವಾದ ಮತ್ತು ವೈಜ್ಞಾನಿಕವಾದ ಆಧಾರಗಳ ಮೂಲಕ ಹೇಳಲಾಗಲಿಲ್ಲ.

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ವೈಜ್ಞಾನಿಕವಾಗಿ ಹೊರತು ಪಡಿಸಿದರೆ ನಮ್ಮ ಹಿಂದೂಗಳು ಮಾತ್ರ ಅದರಲ್ಲೂ ಜಾತಕವನ್ನು ಗಾಢವಾಗಿ ನಂಬಿಕೆ ಹೊಂದಿರುವವರು ಮಾತ್ರ ಶನೇಶ್ವರ ಸ್ವಾಮಿ ಎಂದರೆ ಸ್ವಲ್ಪ ಭಯ-ಭಕ್ತಿ ಇದೆ. ಏಕೆಂದರೆ ಶನೇಶ್ವರ ಸ್ವಾಮಿಯು ನಮಗೆ ಜೀವನದ ಸತ್ಯವನ್ನು ತಿಳಿಸಿ ಹೇಳುವ ಮಾಹಿಮಾನ್ವಿತ ಶಕ್ತಿ ದೇವತೆಯಾಗಿದ್ದಾನೆ.

PC::Suresh S

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ಐಹಿಕಪರವಾದ ಸುಖಗಳು, ಭ್ರಮೆಗಳಿಂದ ನಮ್ಮ ಕಣ್ಣನ್ನು ತೆರೆಸುವ ಏಕೈಕ ಭಗವಂತನೆಂದರೆ ಅದು ಶನಿದೇವನು. ಮುಖ್ಯವಾಗಿ ಶನಿ ದಶೆಯಲ್ಲಿ ಅಥವಾ ಅಷ್ಟಮಾ ಶನಿಯಲ್ಲಿ ಗ್ರಹ ದೋಷಗಳಿಂದ ಕಷ್ಟ ಪಡಬೇಕೆ ಹೊರತು ಕೆಲಸಗಳು ಮಾತ್ರ ಸಾಗವು. ಧೀಕ್ಷೆಯಿಂದ, ದೃಢಸಂಕಲ್ಪದಿಂದ, ಉತ್ತಮವಾದ ಮಾರ್ಗದಲ್ಲಿ ಇದ್ದರೆ ಮಾತ್ರ ಕೆಲಸಗಳು ಸಾಗುತ್ತವೆ.

PC:mohan ram

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ಆದರೆ ಶನಿದೋಷ ನಿವಾರಣೆಗಾಗಿ ನಾವು ಹಲವಾರು ಪೂಜೆಗಳು, ದಾನಗಳನ್ನು ಮಾಡುತ್ತಿರುತ್ತೇವೆ. ತಿರುನಲ್ಲಾರ್‍ನ ನಿರ್ಮಾಣ ಮಾಡಿದ ದೇವಾಲಯ ಚರಿತ್ರೆಯ ಪ್ರಕಾರ ಅಡುಗೆಗೆ ಪ್ರಸಿದ್ಧಿ ಹೊಂದಿದ್ದ ನಳ ಮಹಾರಾಜ ಕೂಡ ಶನಿಗ್ರಹ ಪ್ರಭಾವದಿಂದಾಗಿ ಎಷ್ಟೋ ಕಷ್ಟಗಳನ್ನು ಪಡುತ್ತಾನೆ.


PC::Manfred Sommer

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ಇಲ್ಲಿ ತಿರುನಲ್ಲಾರ್‍ನಲ್ಲಿ ಪುಷ್ಕರಣಿಯಲ್ಲಿ ಪುಣ್ಯ ಸ್ನಾನವನ್ನು ಮಾಡಿ ಶನೇಶ್ವರ ಸ್ವಾಮಿಯನ್ನು ದರ್ಶನ ಮಾಡಿಕೊಂಡರೆ ಶನಿ ದೋಷನಿಂದ ವಿಮುಕ್ತಿ ಲಭಿಸುತ್ತದೆ ಎಂದು ಹೇಳುತ್ತಾರೆ.

PC::Vijaya Raghavan Damodaran

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ಹಾಗಾಗಿಯೇ ಇದನ್ನು "ನಳತೀರ್ಥ" ಎಂದು ಕರೆಯುತ್ತಾರೆ. ತಿರುನಲ್ಲಾರ್ ಶನೇಶ್ವರ ದೇವಾಲಯವು ಕಾರ್ತಕಾಲ್ ಎಂಬ ಪಟ್ಟಣದಲ್ಲಿ ತಮಿಳುನಾಡಿನಲ್ಲಿ ಇದೆ.

PC:commons.wikimedia.org

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ಇಲ್ಲಿನ ಮತ್ತೊಂದು ವಿಶೇಷವೆನೆಂದರೆ ಗರಿಕೆಯಲ್ಲಿ ಒಂದು ಮಾಹಮಾನ್ವಿತವಾದ ಶಿವಲಿಂಗ ಇರುವ ದೇವಾಲಯ ಕೂಡ ಇದೆ. ಇಲ್ಲಿ ಬ್ರಹ್ಮ ತೀರ್ಥದಲ್ಲಿ ಸ್ನಾನವನ್ನು ಮಾಡಿ ಶಿವನ್ನು ದರ್ಶನ ಮಾಡಿದರೆ ಸರ್ವ ಗ್ರಹ ದೋಷಗಳು ನಿವಾರಣೆಯಾಗುತ್ತದೆ.


PC::Aravind Sivaraj

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ಈ ದೇವಾಲಯದಲ್ಲಿ ಸುಮಾರು 7 ನೇ ಶತಮಾನದಲ್ಲಿ ನಿರ್ಮಾಣ ಮಾಡಿರಬಹುದು ಎಂದು ಊಹಿಸಲಾಗಿದೆ. ಮೊದಲು ಶನೇಶ್ವರನಿಗೆ ದರ್ಶನ ಮಾಡಿದ ನಂತರವೇ ಶಿವಲಿಂಗವನ್ನು ದರ್ಶನ ಮಾಡುತ್ತಾರೆ.


PC::VasuVR

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ಈ ದೇವಾಲಯದಲ್ಲಿ ಬಂಗಾರ ಲೇಪನ ಮಾಡಿರುವ ಕಾಗೆಯನ್ನು ಶನೇಶ್ವರ ದೇವಾಲಯದಲ್ಲಿ ಕಾಣಬಹುದಾಗಿದೆ.


PC::Yesmkr

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ಇಲ್ಲಿ ಶನೇಶ್ವರ ಅನುಗ್ರಹ ಮೂರ್ತಿಯಾಗಿ ಇದ್ದು, ಕಷ್ಟಗಳಿಂದ ಕಾಪಾಡುವ ಬಲಗೈ ಅಭಯ ಹಸ್ತದಿಂದ ಆರ್ಶಿವದಿಸುತ್ತಾನೆ.


PC::Jonas Buchholz

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಮಿಳರ ವರ್ಷಾರಂಭವಾಗುವ ಸಮಯದಲ್ಲಿ ನಳತೀರ್ಥದಲ್ಲಿ ಸ್ನಾನ ಮಾಡಿದರೆ ಪರಮಶಿವನ ಅನುಗ್ರಹವನ್ನು ಪಡೆಯುತ್ತಾರೆ ಎಂಬುದು ಅಲ್ಲಿನ ಪ್ರಜೆಗಳ ನಂಬಿಕೆಯಾಗಿದೆ.

PC::rajaraman sundaram

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ಸಾಧಾರಣವಾಗಿ ಶನಿ ದೇವನ ಹೆಸರು ಕೇಳಿದರೆ ಅಥವಾ ಸ್ಮರಿಸಿದರೆ ನಲದಮಯಂತಿ ಎಂಬ ಹೆಸರು ನೆನಸಿಕೊಂಡರೆ ಮನಸ್ಸಿಗೆ ನೆಮ್ಮದಿಯಾಗಿರುತ್ತದೆ ಎಂಬುದು ನಂಬಿಕೆಯಾಗಿದೆ.

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ಇದಕ್ಕೆ ಒಂದು ಪುರಣ ಕಥೆ ಇದೆ. ನಳ ಚಕ್ರವರ್ತಿಯ ಸಹೋದರ ಕಲಿ ಎಂಬುದು ಆಹ್ವಾನೆಯಾಗುತ್ತದೆ. ಕವಡೆಯನ್ನು ಆಡಿ ನಳ ಮಹಾರಾಜನನ್ನು ಓಡಿಸುತ್ತಾನೆ. ಆಗ ನಳಮಹಾರಾಜನು ರಾಜ್ಯವನ್ನು ಕಳೆದುಕೊಂಡು ಕಾಡಿಗೆ ತೆರಳುತ್ತಾನೆ.

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ಆ ನಂತರ ನಳ ಮಹಾರಾಜ ಅಡುಗೆಯಾವನಾಗುತ್ತಾನೆ. ಹೀಗೆ ರಾಜ್ಯವನ್ನು ಆಳುತ್ತಾ ವೈಭವದ ಬದುಕು ಬಾಳುವವನು ಎಷ್ಟೋ ಕಷ್ಟಗಳನ್ನು ಅನುಭವಿಸುತ್ತಾನೆ.

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ತಿರುನಲ್ಲಾರ್‍ನ ಶನೇಶ್ವರ ದೇವಾಲಯ

ಶನಿಗ್ರಹ ಪ್ರಭಾವದಿಂದ ಭಾರದ್ವಾಜನಿಗೆ ಒಂದು ಸೂಚನೆಯ ಮೇರೆಗೆ ಈ ದೇವಾಲಯದ ಸಮೀಪದಲ್ಲಿರುವ ಪುಷ್ಕರಣಿಯಲ್ಲಿ ನಳ ಮಹಾರಾಜ ಸ್ನಾನ ಮಾಡಿ ಆ ಶನೇಶ್ವರ ದೇವನ ದರ್ಶನ ಭಾಗ್ಯ ಪಡೆದ ನಂತರ ಶನಿ ದೋಷದಿಂದ ವಿಮುಕ್ತಿ ಪಡೆದನಂತೆ. ಮತ್ತೇ ಅವನ ರಾಜ್ಯ ಅವನಿಗೆ ತಿರುಗಿ ಬಂದಿತಂತೆ. ಅದ್ದರಿಂಲೇ ಈ ತೀರ್ಥಕ್ಕೆ ನಳತೀರ್ಥ ಎಂದು ಹೆಸರು ಬಂದಿತು.

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಈ ದೇವಾಲಯಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಟ್ರಿಚಿ ಏರ್ ಪೋರ್ಟ್ ಆಗಿದೆ. ಇಲ್ಲಿಂದ ದೇವಾಲಯಕ್ಕೆ ಸುಮಾರು 150 ಕಿ.ಮೀ ದೂರದಲ್ಲಿದೆ. ದೇಶದ ಪ್ರಧಾನ ನಗರಗಳಿಂದ ಟ್ರಿಚಿ ವಿಮಾನ ನಿಲ್ದಾಣಕ್ಕೆ ಬರುತ್ತಿರುತ್ತವೆ ಹಾಗು ಹೋಗುತ್ತಿರುತ್ತವೆ. ಚೆನ್ನೈನ ವಿಮಾನ ನಿಲ್ದಾಣವು ಕೂಡ ಸಮೀಪದ ವಿಮಾನ ನಿಲ್ದಾಣವಾಗಿದ್ದು, ಟ್ಯಾಕ್ಸಿಯ ಮೂಲಕ ತೆರಳಬಹುದಾಗಿದೆ.

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ತಿರುನಲ್ಲಾರ್‍ಗೆ ನೇರವಾದ ರೈಲ್ವೆ ನಿಲ್ದಾಣವಿಲ್ಲ. ಬದಲಾಗಿ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಮೈಲಾಡು ತುರೈ. ದೇಶದ ಹಲವಾರು ಪ್ರಾಂತ್ಯಗಳಿಂದ ಇಲ್ಲಿಗೆ ರೈಲುಗಳು ಬರುತ್ತಿರುತ್ತವೆ ಹಾಗು ಹೋಗುತ್ತಿರುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more