Search
  • Follow NativePlanet
Share
» »ಇಲ್ಲಿ ಆಟಿಕೆ ವಿಮಾನ ಕೊಟ್ರೆ ವಿದೇಶಕ್ಕೆ ಹೋಗೋ ಅವಕಾಶ ಸಿಗುತ್ತಂತೆ !

ಇಲ್ಲಿ ಆಟಿಕೆ ವಿಮಾನ ಕೊಟ್ರೆ ವಿದೇಶಕ್ಕೆ ಹೋಗೋ ಅವಕಾಶ ಸಿಗುತ್ತಂತೆ !

ಪಂಜಾಬ್ ಒಂದು ಸುಂದರ ಐತಿಹಾಸಿಕ ತಾಣವಾಗಿದೆ. ಇತ್ತೀಚೆಗಂತೂ ಪಂಜಾಬ್‌ನಲ್ಲಿರುವ ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾ ರವು ಬಹಳ ಜನಪ್ರಿಯವಾಗಿದೆ. ಅದಕ್ಕೆ ಕಾರಣ ಭಕ್ತರು ಅರ್ಪಿಸುತ್ತಿರುವ ಆಟಿಕೆ ವಿಮಾನ. ಈ ಮಂದಿರಕ್ಕೆ ಆಟಿಕೆ ವಿಮಾನ ಯಾಕೆ ಅರ್ಪಿಸ್ತಾರೆ ಅದರ ಹಿಂದಿನ ಉದ್ದೇಶ ಏನು ಅನ್ನೋದನ್ನು ಕೇಳಿದ್ರೆ ತಮಾಷೆ ಅನ್ನಿಸಬಹುದು.

ಗುರುದ್ವಾರ

ಗುರುದ್ವಾರ

PC: Malikhpur

ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರ ಜಲಂಧರ್ ಎಂಬ ಸಣ್ಣ ಗ್ರಾಮದಲ್ಲಿ ನೆಲೆಗೊಂಡಿದೆ. ಇದು ತಲ್ಹಾನ್ ಎಂದು ಕರೆಯಲ್ಪಡುತ್ತದೆ ಮತ್ತು ಬಾಬಾ ನಿಹಾಲ್ ಸಿಂಗ್‌ರಿಗೆ ಅರ್ಪಿತವಾಗಿರುವ ಒಂದು ಸಣ್ಣ ದೇವಸ್ಥಾನವಾಗಿದೆ.

 ಹರ್ನಮ್ ಸಿಂಗ್ರಿಂದ

ಹರ್ನಮ್ ಸಿಂಗ್ರಿಂದ

PC: Malikhpur

ಬಾಬಾ ನಿಹಾಲ್ ಸಿಂಗ್‌ ಅವರು ನೀರಿನ ಬಾವಿಗಳಿಗೆ ಪುಲ್ಲೆಗಳನ್ನು ತಯಾರಿಸಲು ಸ್ಥಳೀಯರಿಗೆ ಸಹಾಯ ಮಾಡಿದರು ಮತ್ತು ಸಮಾಜದ ಸುಧಾರಣೆಗಾಗಿ ಕೆಲಸ ಮಾಡಿದರು. ಈ ದೇವಾಲಯವು ಹಲವಾರು ದಶಕಗಳ ಹಿಂದೆ ಬಾಬಾ ನಿಹಾಲ್ ಸಿಂಗನ ಅನುಯಾಯಿಯಾಗಿದ್ದ ಹರ್ನಮ್ ಸಿಂಗ್ರಿಂದ ಸ್ಥಾಪಿಸಲ್ಪಟ್ಟಿದೆ ಎಂದು ನಂಬಲಾಗಿದೆ.

ಇಲ್ಲಿ ವಿವಾಹಿತ ಮಹಿಳೆಯರು ಐದು ದಿನಗಳ ಕಾಲ ಬೆತ್ತಲಾಗಿರಬೇಕು ಯಾಕೆ?<br /> ಇಲ್ಲಿ ವಿವಾಹಿತ ಮಹಿಳೆಯರು ಐದು ದಿನಗಳ ಕಾಲ ಬೆತ್ತಲಾಗಿರಬೇಕು ಯಾಕೆ?

ಸಮಾಧಿ

ಸಮಾಧಿ

PC: Malikhpur
ಆಟಿಕೆ ವಿಮಾನಗಳು ನೀಡುವ ಅಭ್ಯಾಸ ಯಾವಾಗದಿಂದ ಪ್ರಾರಂಭವಾಯಿತು ಎನ್ನುವುದರ ಬಗ್ಗೆ ಯಾರಿಗೂ ತಿಳಿದಿಲ್ಲ. ಇಲ್ಲಿ ಬಾಬಾ ನಿಹಾಲ್ ಸಿಂಗ್‌ರ ಸಮಾಧಿಯ ಇದೆ. ಇದನ್ನು ಸ್ಥಳೀಯರು ಮತ್ತು ಅವರ ಭಕ್ತರು ಅತ್ಯಂತ ಪೂಜ್ಯ ಸ್ಥಳವೆಂದು ಪರಿಗಣಿಸಲಾಗಿದೆ. ಪ್ರತಿವರ್ಷ ನೂರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ಆಟಿಕೆ ವಿಮಾನ

ಆಟಿಕೆ ವಿಮಾನ

PC: Malikhpur
ಭಕ್ತರು ಇಲ್ಲಿಗೆ ಆಟಿಕೆ ತಂದು ಅರ್ಪಿಸುವುದಕ್ಕೂ ಒಂದು ಕಾರಣವಿದೆ. ಇಲ್ಲಿ ಆಟಿಕೆ ವಿಮಾನ ತಂದು ಅರ್ಪಿಸಿದರೆ ಅವರಿಗೆ ವಿದೇಶ ಪ್ರವಾಸ ಒದಗಿಬರುತ್ತದಂತೆ. ವಿದೇಶಕ್ಕೆ ಹೋಗುವ ಅವಕಾಶ ದೊರೆಯುತ್ತದಂತೆ. ಅದಕ್ಕಾಗಿ ಸಾಕಷ್ಟು ಸಂಖ್ಯೆಯ ಜನರು ಇಲ್ಲಿಗೆ ಬರುತ್ತಾರೆ.

ಬೆಂಗಳೂರು ಸಮೀಪದ ಗುಡಿಬಂಡೆಗೆ ಹೋಗಿದ್ದೀರಾ?ಬೆಂಗಳೂರು ಸಮೀಪದ ಗುಡಿಬಂಡೆಗೆ ಹೋಗಿದ್ದೀರಾ?

 ಹವಾಯಿ ಜಹಾಜ್

ಹವಾಯಿ ಜಹಾಜ್

PC:Malikhpur

ಇಲ್ಲಿ ಪ್ರತಿವಾರ ಸುಮಾರು 50ರಷ್ಟು ಆಟಿಕೆ ವಿಮಾನ ಬರುತ್ತದೆಂತೆ. ಈ ಗುರುದ್ವಾರವನ್ನು ಹವಾಯಿ ಜಹಾಜ್ ಎಂದು ಕರೆಯಲಾಗುತ್ತದೆ. ನಿಮಗೂ ಇಲ್ಲಿನ ಮಹಿಮೆಯ ಬಗ್ಗೆ ತಿಳಿಯಬೇಕಾದರೆ ನೀವು ಅಲ್ಲಿಗೆ ಭೇಟಿ ನೀಡಲೇ ಬೇಕು.

ಕಡಿಮೆ ಅನ್ವೇಷಿತ ತಾಣ

ಕಡಿಮೆ ಅನ್ವೇಷಿತ ತಾಣ

ಒಂದು ವೇಳೆ ನೀವು ಪಂಜಾಬ್‌ಗೆ ಹೋದರೆ ಈ ಸ್ಥಳವನ್ನು ಭೇಟಿ ನೀಡುವುದನ್ನು ಮಾತ್ರ ಮರೆಯಬಾರದು. ನೀವು ಕಡಿಮೆ ಅನ್ವೇಷಿತ ತಾಣಗಳ ಹುಡುಕಾಟದಲ್ಲಿದ್ದರೆ ಈ ಸ್ಥಳವು ನಿಮಗೆ ಸೂಕ್ತವಾದೂದಾಗಿದೆ, ಇದೊಂದು ಪ್ರಶಾಂತವಾದ ತಾಣವಾಗಿದೆ.

ಈ ದೇವಸ್ಥಾನದ ಒಳಗೆ ನಾಯಿಗಳಿಗಿದೆ ಪ್ರವೇಶ, ಮಾಂಸಾಹಾರವೇ ನೈವೇದ್ಯಈ ದೇವಸ್ಥಾನದ ಒಳಗೆ ನಾಯಿಗಳಿಗಿದೆ ಪ್ರವೇಶ, ಮಾಂಸಾಹಾರವೇ ನೈವೇದ್ಯ

ವಿಮಾನದ ಮೂಲಕ ತಲುಪುವುದು

ವಿಮಾನದ ಮೂಲಕ ತಲುಪುವುದು

ತಲ್ಹಾನ್‌ಗೆ ಸಮೀಪದ ವಿಮಾನ ನಿಲ್ದಾಣ ಲುಧಿಯಾನಾ. ಇಲ್ಲಿಂದ ಸುಮಾರು 70 ಕಿ.ಮೀ ದೂರದಲ್ಲಿದೆ ಈ ಗುರುದ್ವಾರ. ಲುಧಿಯಾನಾವನ್ನು ತಲುಪಿದ ಬಳಿಕ ನೀವು ನೇರ ಕ್ಯಾಬ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು ಅಥವಾ ಸಾರ್ವಜನಿಕ ಸಾರಿಗೆ ಮೂಲಕ ಅಲ್ಲಿಗೆ ತಲುಪಬಹುದು.

ರೈಲು ಮೂಲಕ ತಲುಪುವುದು ಹೇಗೆ?

ರೈಲು ಮೂಲಕ ತಲುಪುವುದು ಹೇಗೆ?

ಜಲಂಧರ್ ರೈಲ್ವೆ ಮೂಲಕ ಎಲ್ಲಾ ಇತರ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಆದ್ದರಿಂದ, ನೀವು ಜಲಂಧರ್ ರೈಲ್ವೇ ನಿಲ್ದಾಣಕ್ಕೆ ನೇರ ರೈಲು ಹಿಡಿದು ನಂತರ ಅಲ್ಲಿಂದ ಕ್ಯಾಬ್ ಅಥವಾ ಬಸ್ ಮೂಳಕ ತಲ್ಹಾನ್‌ಗೆ ತಲುಪಬಹುದು. ಇನ್ನು ಬಸ್‌ ಮೂಲಕ ಬರುವುದಾದರೆ ಇಲ್ಲಿಗೆ ಬೇಕಾದಷ್ಟು ಬಸ್‌ ವ್ಯವಸ್ಥೆಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X