Search
  • Follow NativePlanet
Share
» »ಅದ್ಭುತ ನಗರದ 7 ಅದ್ಭುತಗಳು

ಅದ್ಭುತ ನಗರದ 7 ಅದ್ಭುತಗಳು

ಬೆಂಗಳೂರು ಯಾರಿಗೆ ಪರಿಚಯವಿಲ್ಲ ಹೇಳಿ? ಉತ್ತಮ ವಾತಾವರಣ, ಉದ್ಯೋಗಾವಕಾಶ, ಪೂರಕವಾದ ಶಿಕ್ಷಣವ್ಯವಸ್ಥೆ, ಹೊಸ ಬಗೆಯ ತಿನಿಸು, ಆಕರ್ಷಕ ಗಾರ್ಡನ್, ಗಗನಕ್ಕೆ ಚುಂಬಿಸುವ ಕಟ್ಟಡಗಳು ಒಂದೇ ಎರಡೇ? ಹೇಳಲು ಹೊರಟರೆ ವಿಷಯದ ಪಟ್ಟಿ ಮುಗಿಯುವುದೇ ಇಲ್ಲ.

By Divya Pandit

ಬೆಂಗಳೂರು ಎಂದರೆ ಯಾರಿಗೆ ಪರಿಚಯವಿಲ್ಲ ಹೇಳಿ? ಉತ್ತಮ ವಾತಾವರಣ, ಉದ್ಯೋಗಾವಕಾಶ, ಪೂರಕವಾದ ಶಿಕ್ಷಣವ್ಯವಸ್ಥೆ, ಹೊಸ ಹೊಸ ಬಗೆಯ ರುಚಿಕರ ತಿನಿಸು, ಆಕರ್ಷಕ ಗಾರ್ಡನ್, ಗಗನಕ್ಕೆ ಚುಂಬಿಸುವಂತೆ ನಿರ್ಮಿಸಲಾದ ಕಟ್ಟಡಗಳು ಒಂದೇ ಎರಡೇ? ಹೇಳಲು ಹೊರಟರೆ ವಿಷಯದ ಪಟ್ಟಿ ಮುಗಿಯುವುದೇ ಇಲ್ಲ. ಹೆಚ್ಚು ಕಡಿಮೆ ಭಾರತದಲ್ಲಿರುವ ಎಲ್ಲಾ ರಾಜ್ಯ ಹಾಗೂ ಧರ್ಮದ ಜನರು ಈ ನಗರದಲ್ಲಿ ಸಿಗುತ್ತಾರೆ. ಹಾಗಾಗಿ ಇದನ್ನು ಅದ್ಭುತ ನಗರ ಎಂದರೆ ತಪ್ಪಾಗಲಾರದು.

ಪ್ರವಾಸಿಗರ ಕಣ್ಮನ ಸೆಳೆಯುವ ಈ ಮಹಾ ನಗರದಲ್ಲಿ ವಿಶೇಷ ಸ್ಥಳಗಳಿವೆ. ಇಲ್ಲಿಯೇ ಇರುವವರಿಗೆ ವಾರದ ರಜೆ ಕಳೆಯಲು ಬೇಕಾದಂತಹ ಸ್ಥಳಗಳೂ ಇವೆ. ಈ ಎಲ್ಲಾ ತಾಣಗಳನ್ನು ಗಣನೆಗೆ ತೆಗೆದುಕೊಂಡು ಕೆಲವನ್ನು ಅದ್ಭುತ ಎಂದು ಪರಿಗಣಿಸಲಾಗಿದೆ. ನಿಜ, ಬೆಂಗಳೂರು ನಗರದಲ್ಲಿ ನೋಡಲು ಹಲವಾರು ಸ್ಥಳಗಳಿವೆ. ಅವುಗಳಲ್ಲಿ ಅದ್ಭುತ ಸ್ಥಳ ಯಾವುದು ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಗಾದರೆ ಇನ್ನೇಕೆ ತಡ? ತಿಳಿದುಕೊಳ್ಳೂಣ ಬನ್ನಿ...

ವಿಧಾನ ಸೌಧ

ವಿಧಾನ ಸೌಧ

ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಆಡಳಿತದ ಅವಧಿಯಲ್ಲಿ ನಿರ್ಮಾಣಗೊಂಡ ವಿಧಾನ ಸೌಧವನ್ನು ಆಗಿನ ಪ್ರಧಾನಿ ನೆಹರು ಅವರು ಶಂಕುಸ್ಥಾಪನೆ ಮಾಡಿದ್ದರು. ಇದರ ವಾಸ್ತುಶಿಲ್ಪವು ದ್ರಾವಿಡ ಶೈಲಿಯಲ್ಲಿದೆ. ಕಟ್ಟಡದ ಮೇಲ್ಭಾಗದಲ್ಲಿರುವ ಗೋಪುರಗಳು ಕಣ್ಮನ ಸೆಳೆಯುತ್ತವೆ. 60 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಈ ಸೌಧಕ್ಕೆ ಆಕಾಲದಲ್ಲಿ 1.75 ಕೋಟಿ ವೆಚ್ಚವಾಗಿತ್ತು ಎನ್ನಲಾಗುತ್ತದೆ.ಬೆಂಗಳೂರು- ಭಾರತದ ಒಂದು ಹೊಸ ಮುಖ

PC: wikipedia.org

ಪಿರಾಮಿಡ್ ವ್ಯಾಲಿ

ಪಿರಾಮಿಡ್ ವ್ಯಾಲಿ

ಇದೊಂದು ಭೂಮಿಯ ಮೇಲೆ ಇರುವ ಸ್ವರ್ಗದ ತುಂಡು ಎನ್ನುತ್ತಾರೆ. ಜಿಝಾ ಸಿದ್ಧಾಂತದ ಅಡಿಯಲ್ಲಿ ನಿರ್ಮಾಣಗೊಂಡ ಈ ಮಂದಿರ ಏಷ್ಯಾದಲ್ಲೇ ಅತಿ ವಿಶಾಲವಾದ ಪಿರಾಮಿಡ್ ವ್ಯಾಲಿ ಎನ್ನುವ ಖ್ಯಾತಿಗೆ ಒಳಗಾಗಿದೆ. ನಿಖರವಾದ ಅಳತೆಯಲ್ಲಿ ಭಿತ್ತಿಚಿತ್ರಗಳನ್ನು ಒಳಗೊಂಡಿರುವುದು ಇದರ ಇನ್ನೊಂದು ವಿಶೇಷ. ಸೂಕ್ತವಾದ ಕಟ್ಟಡದ ವಿನ್ಯಾಸ ಧ್ಯಾನ ಮಾಡಲು ಪೂರಕ ಶಕ್ತಿಯನ್ನು ನೀಡುತ್ತದೆ.

ಬಸವನಗುಡಿ ದೇಗುಲ

ಬಸವನಗುಡಿ ದೇಗುಲ

ಈ ದೇಗುಲವನ್ನು ಕೆಂಪೇ ಗೌಡರು ದ್ರಾವಿಡ ಶೈಲಿಯಲ್ಲಿ ನಿರ್ಮಿಸಿದ್ದಾರೆ. ಇಲ್ಲಿ ಪ್ರತಿವರ್ಷ ಕಡಲೆಕಾಯಿ ಪರಿಷೆ ನಡೆಯುತ್ತದೆ. ಕರ್ನಾಟಕ ರಜ್ಯದ ಪುರಾತನ ಬಸವ ದೇಗುಲ ಇದು. ಈ ಬಸವ ಮೂರ್ತಿಯು ಕೇವಲ ಒಂದೇ ಒಂದು ಗ್ರ್ಯಾನೆಟ್ ಕಲ್ಲಿನಿಂದ ಕೆತ್ತಲಾಗಿದೆ. ಪ್ರತಿದಿನ ಕಡಿಮೆ ಎಂದರೂ ನೂರಾರು ಭಕ್ತರು ಬರುತ್ತಾರೆ. ದೇಗುಲದ ಸುತ್ತಲೂ ಐತಿಹಾಸಿಕ ಸ್ಥಳಗಳಿರುವುದು ವಿಶೇಷ.ಬುಲ್ ಟೆಂಪಲ್, ಬೆಂಗಳೂರು

ಲಾಲ್‍ಬಾಗ್

ಲಾಲ್‍ಬಾಗ್

ವಿವಿಧ ಫಲ-ಪುಷ್ಪ, ಹಣ್ಣು-ಕಾಯಿಗೆ ಪ್ರಸಿದ್ಧವಾದ ಲಾಲ್‍ಬಾಗ್ (ಕೆಂಪು ಸಸ್ಯೋದ್ಯಾನ) ಸುಮಾರು 240 ಎಕೆರೆ ಪ್ರದೇಶವನ್ನು ಒಳಗೊಂಡಿದೆ. ಇಲ್ಲಿ ಪ್ರತಿ ವರ್ಷ ಆಗಸ್ಟ್ 15 ಹಾಗೂ ಜನವರಿ 26 ರಂದು ಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತದೆ. ಈ ಸಸ್ಯೋದ್ಯಾನಕ್ಕೆ ಮೂರು ಬಾಗಿಲಿರುವುದು ಕಾಣಬಹುದು. ಇಲ್ಲಿ ಕೆಂಪೆಗೌಡ ಗೋಪುರ, ಚಿಕ್ಕ ಕೆರೆ, ಗಾಜಿನ ಮನೆಯಿದೆ. ಈ ಸಸ್ಯೋದ್ಯಾನದಲ್ಲಿ ವಿವಿಧ ಆಯುರ್ವೇದದ ಸಸ್ಯಗಳು, 200 ವರ್ಷದ ಹಳೆಯ ಮರಗಳು ಇವೆ. ಮೈಸೂರಿನ ಆಡಳಿತ ನಿರ್ವಹಿಸುತ್ತಿದ್ದ ಹೈದರಾಲಿಯು ಉದ್ಯಾನವನ ನಿರ್ಮಿಸಲು ಸೂಚಿಸಿದ್ದ ಎನ್ನಲಾಗುತ್ತದೆ.

PC:wikipedia.org

ಸಂತ ಮೇರಿ ಬೆಸಿಲಿಕಾ

ಸಂತ ಮೇರಿ ಬೆಸಿಲಿಕಾ

ಶಿವಾಜಿ ನಗರದ ಬಸ್ ನಿಲ್ದಾಣದ ಬದಿಯಲ್ಲಿರುವ ಈ ಚರ್ಚ್ ಬಹಳ ಪುರಾತನ ಕಾಲದ್ದು. ಪ್ರತಿವರ್ಷ ಸೆಪ್ಟಂಬರ್ ಮೊದಲವಾರದಲ್ಲಿ ನಡೆಸುವ ಜಾತ್ರೆಯನ್ನು ಬಹಳ ಅದ್ದೂರಿಯಿಂದ ಆಚರಿಸಲಾಗುತ್ತದೆ. ಇದಕ್ಕೆ ಜನಸಾಗರದ ಹರಿವು ಅಷ್ಟೇ ಜೋರು. ಗೋಥಿಕ್ ಶೈಲಿಯಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದು, ಗೋಡೆಗಳ ಮೇಲೆ ವಿವಿಧ ಚಿತ್ತಾರಗಳನ್ನು ನೋಡಬಹುದು.

PC:wikipedia.org

 ಜಮಿಯಾ ಮಸಿದಿ

ಜಮಿಯಾ ಮಸಿದಿ

ಸಿಟಿ ಮಾರ್ಕೇಟ್ ಬಳಿ ಇರುವ ಈ ಮಸಿದಿಯ ಗೋಡೆಯ ಮೇಲೆ ಬುಬ್ರಿ ಚಿತ್ರಕಲೆಯನ್ನು ಮಾಡಲಾಗಿದೆ. ಅಲ್ಲಲ್ಲಿ ಬಹಳ ಎತ್ತರವಾದ ಕಂಬಗಳ ಗೋಪುರ ಇರುವುದು ಕಾಣಬಹುದು. ಔರಂಗಜೇಬನ ಕಾಲದಲ್ಲಿ ನಿರ್ಮಾಣಗೊಂಡ ಈ ಬಸಿದಿ ವಿವಿಧ ವಿನ್ಯಾಸಗಳಿಂದ ಕೂಡಿದ್ದು, ಪ್ರವಾಸಿಗರಿಗೊಂದು ಆಕರ್ಷಣಾ ಕೇಂದ್ರ.

PC:Nvvchar

ಬೆಂಗಳೂರು ಅರಮನೆ

ಬೆಂಗಳೂರು ಅರಮನೆ

ಇದನ್ನು ಚಾಮರಾಜ ಒಡೆಯರು ನಿರ್ಮಿಸಿದ್ದರು. ಬೆಂಗಳೂರಿನ ಸದಾಶಿವನಗರ ಮತ್ತು ಜಯಮಹಲ್ ಮಧ್ಯ ಭಾಗದಲ್ಲಿದೆ. 454 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಈ ಅರಮನೆ ನೋಡುಗರ ಕಣ್ಮನ ಸೆಳೆಯುತ್ತದೆ. ಕೋಟೆ ಹಾಗೂ ಗೋಪುರಗಳ ಶೈಲಿಯಲ್ಲಿರುವ ಈ ಕಟ್ಟಡ ಟ್ಯೂಡರ್ ಶೈಲಿಯಲ್ಲಿದೆ. ಒಳಾಂಗಣದ ವಿನ್ಯಾಸಕ್ಕೆ ಮರದಲ್ಲಿ ಕೆತ್ತಲಾದ ಕೆತ್ತನೆ, ಹೂವಿನ ಅಲಂಕಾರ, ಸುಂದರವಾದ ಕಮಾನುಗಳು ಹಾಗೂ ವರ್ಣರಂಜಿತ ಚಿತ್ರಗಳೂ ಇವೆ. ಇಲ್ಲಿ ಸುಮಾರು 35 ಕೊಠಡಿಗಳಿವೆ.

PC:wikipedia.org

Read more about: bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X