Search
  • Follow NativePlanet
Share
» »ನಿತ್ಯಹರಿದ್ವರ್ಣದ ಸಾವಂತವಾಡಿಗೊಂದು ಭೇಟಿ!

ನಿತ್ಯಹರಿದ್ವರ್ಣದ ಸಾವಂತವಾಡಿಗೊಂದು ಭೇಟಿ!

By Vijay

ನಿತ್ಯ ಹರಿದ್ವರ್ಣ ಕಾಡುಗಳು, ಸುಂದರ ಸರೋವರಗಳು ಹಾಗೂ ಎತ್ತರದ ಬೆಟ್ಟಗಳ ಸಾಲುಗಳು, ಇವೆಲ್ಲವುಗಳೊಂದಿಗೆ ಬೆಸೆದುಕೊಂಡಂತಿರುವ ಕೊಂಕಣ ಪ್ರದೇಶದ ಪಾರಂಪರಿಕ ವಿಭಿನ್ನ ಸಂಸ್ಕೃತಿಯ ಸೊಬಗು, ಇವೆಲ್ಲವನ್ನು ನೋಡಿದರೆ ಇದು ಪ್ರಕೃತಿಯ ಮಾತೆ ಆಶೀರ್ವದಿಸಿ ನೀಡಿದ ವರವೆಂದು ಭಾಸವಾಗುತ್ತದೆ. ಅದೆ ಸಾವಂತವಾಡಿ.

ಮಹರಾಷ್ಟ್ರದ ಆಗ್ನೇಯ ದಿಕ್ಕಿನಲ್ಲಿರುವ ಸಿಂಧುದುರ್ಗ ಜಿಲ್ಲೆಯಲ್ಲಿ ಸಾವಂತವಾಡಿಯು ನೆಲೆಸಿದೆ. ಮೊದಲಿಗೆ ಇದು ಸುಂದುರ್ವಾಡಿ ಎಂದೆ ಕರೆಯಲ್ಪಡುತ್ತಿತ್ತು. ಆದರೆ ಈ ಪ್ರದೇಶವನ್ನು ಆಳುತ್ತಿದ್ದ ಸಾವಂತ ವಂಶಜರಿಂದ ಇದಕ್ಕೆ ಕ್ರಮೇಣವಾಗಿ ಸಾವಂತವಾಡಿ ಎಂಬ ಹೆಸರು ಬಂದಿತು.

ನಿತ್ಯಹರಿದ್ವರ್ಣದ ಸಾವಂತವಾಡಿಗೊಂದು ಭೇಟಿ!

ಚಿತ್ರಕೃಪೆ: Ishan Manjrekar

ಪೂರ್ವದಲ್ಲಿ ಸಹ್ಯಾದ್ರಿ ಅಥವಾ ಪಶ್ಚಿಮ ಘಟ್ಟಗಳ ಸಾಲು ಹಾಗೂ ಪಶ್ಚಿಮದಲ್ಲಿ ಅರಬ್ಬಿ ಸಮುದ್ರದವರೆಗೂ ಸಾವಂತವಾಡಿ ವಿಸ್ತಾರವಾಗಿ ಹರಡಿಕೊಂಡಿದೆ. ಇದೊಂದು ಪ್ರಶಾಂತವಾದ ಸ್ಥಳ. ಸಾಹಿತಿಗಳು, ಕವಿಗಳಿಗೆ ಉತ್ತಮ ಸ್ಪೂರ್ತಿದಾಯಕವಾದ ಪ್ರದೇಶವಾಗಿರುವುದಲ್ಲದೆ ಬದುಕಿನ ಜಂಜಾಟದಿಂದ ಸ್ವಲ್ಪ ಕಾಲ ದೂರವಿರಬೇಕೆಂದು ಬಯಸುವವರಿಗೆ ಸೂಕ್ತ ಪ್ರದೇಶವೂ ಹೌದು.

ಜನರು ಮತ್ತು ಆಹಾರಶೈಲಿ

ಸಾವಂತವಾಡಿ ಅನೇಕ ವರ್ಷಗಳ ಕಾಲ ಮರಾಠರ ವಶದಲ್ಲಿದ್ದ ಪ್ರದೇಶವಾಗಿತ್ತು. ನಂತರ ಈ ಪ್ರದೇಶದಲ್ಲಿ ವಾಸಿಸುವ ಮಾಲ್ವಾನಿ ಜನರು ತಮ್ಮದೆ ಆದ ಸ್ವಂತ ಸಂಸ್ಕೃತಿಗಳನ್ನು ಬೆಳೆಸಿಕೊಂಡರಲ್ಲದೆ ವಿಭಿನ್ನವಾದ ಕಲೆ-ಸಂಸ್ಕೃತಿಯನ್ನು ಈಗಲೂ ಅಳವಡಿಸಿಕೊಂಡಿದ್ದು ತಮ್ಮದೆ ಆದ ಪ್ರತ್ಯೇಕ ಬದುಕನ್ನು ರೂಪಿಸಿಕೊಂಡಿದ್ದಾರೆ. ಇಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಮಾತನಾಡಲಾಗುವ ಭಾಷೆ ಮರಾಠಿ ಹಾಗೂ ಕೊಂಕಣಿ.

ನಿತ್ಯಹರಿದ್ವರ್ಣದ ಸಾವಂತವಾಡಿಗೊಂದು ಭೇಟಿ!

ಚಿತ್ರಕೃಪೆ: Durvankur Patil

ಭಲೇರಾವ್ ಖಾನಾವಳಿ ಇಲ್ಲಿನ ಅತ್ಯಂತ ಹೆಸರು ವಾಸಿಯಾದ ಫುಡ್ ಜಾಯಿಂಟ್ ಎಂದೆ ಹೇಳಬಹುದು. ಸಾವಂತವಾಡಿಗೆ ಭೇಟಿ ನೀಡಿದವರು ಯಾರೂ ಇಲ್ಲಿಗೆ ಬರದೆ ಹೋಗುವುದೆ ಇಲ್ಲ. ಇಲ್ಲಿ ಪಕ್ಕಾ ಕೊಂಕಣಿ ಮಾದರಿಯ ಊಟೋಪಚಾರ, ಎಲ್ಲಾ ಅಡಿಗೆಗೂ ರುಚಿಯಾದ ಮಸಾಲೆ ಜೊತೆಗೆ ಕೊಬ್ಬರಿ ಎಣ್ಣೆಯನ್ನೆ ಬಳಸಲಾಗುತ್ತದೆ. ಇಲ್ಲಿನ ಮಾಲ್ವಾನಿ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ.

ವಾಣಿಜ್ಯ-ಸಂಸ್ಕೃತಿ

ಪ್ರವಾಸಿಗರು ಎಂಜಾಯ್ ಮಾಡುವುದಕ್ಕೆ ಇಲ್ಲಿ ಅನೇಕ ಸ್ಥಳಗಳಿದ್ದು ಉತ್ತಮ ಆರ್ಟ್ ಮತ್ತು ಕ್ರಾಫ್ಟ್ ಐಟಂಗಳನ್ನು ಇಲ್ಲಿ ಖರೀದಿಸಬಹುದು. ಸಾವಂತವಾಡಿ ಬೊಂಬೆಗಳಿಗೆ ಬಲು ಹೆಸರುವಾಸಿ. ಇವೆಲ್ಲ ಕರ್ನಾಟಕದ ಚನ್ನಪಟ್ಟಣದ ಹಾಗೆ ಸಣ್ಣ ಕೈಗಾರಿಕೆ, ಗುಡಿ ಕೈಗಾರಿಗಳಲ್ಲಿ ತಯಾರಾಗುವ ಕಲಾಕೃತಿಗಳು, ಬಿದಿರು, ಕಟ್ಟಿಗೆಗಳಿಂದ ಮಾಡಿದ ಉತ್ಪನ್ನಗಳಾಗಿವೆ.

ನಿತ್ಯಹರಿದ್ವರ್ಣದ ಸಾವಂತವಾಡಿಗೊಂದು ಭೇಟಿ!

ಚಿತ್ರಕೃಪೆ: Nilesh2 str

ಸಾವಂತಾಡಿಯಲ್ಲಿ ಜನರು ಕೊಂಕಣಿ, ಮರಾಠಿ, ಉರ್ದು ಮತ್ತು ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ. ಇಲ್ಲಿನ ಕಾಡಿನಲ್ಲಿ ಒಂದು ಸುತ್ತು ಹೋಗಲು ಬಯಸುವವರಿಗೆ ಕಾಡೆಮ್ಮೆ, ಚಿರತೆ, ಕಾಡು ಹಂದಿ, ಕೆಲವೊಮ್ಮೆ ಹುಲಿ ಮುಂತಾದ ಪ್ರಾಣಿಗಳ ದರ್ಶನವಾದರೂ ಅಚ್ಚರಿ ಪಡಬೆಕಾಗಿಲ್ಲ.

ನಿತ್ಯಹರಿದ್ವರ್ಣದ ಸಾವಂತವಾಡಿಗೊಂದು ಭೇಟಿ!

ಅಂಬೋಲಿ ಜಲಾಪತ, ಚಿತ್ರಕೃಪೆ: Ishan Manjrekar

ಪ್ರಕೃತಿ ಪ್ರೀಯರಿಗೆ ಸುಂದರವಾದ ತಾಣಗಳಲ್ಲಿ ಔಷಧಿಯುಕ್ತ ಸಸ್ಯಗಳು ಹಾಗೂ ಮರಗಳೂ ಕಾಣಸಿಗುತ್ತವೆ. ಸಾವಂತವಾಡಿಯಲ್ಲಿರುವ ಪ್ರದೇಶಗಳು ಪಕ್ಕಾ ಗ್ರಾಮಾಂತರ ಸೊಗಡನ್ನು ಹೊಂದಿರುವುದರಿಂದ ಗ್ರಾಮಶೈಲಿಯ ಬದುಕನ್ನೂ ಸಹ ಇಲ್ಲಿ ಕಾಣಬಹುದಾಗಿದೆ. ಸುಂದರವಾದ ಪ್ರಕೃತಿಯ ತಾಣವೂ ಆಗಿರುವ ಸಾವಂತವಾಡಿಗೆ ವರ್ಷಪೂರ್ತಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಅಂಬೋಲಿ ಎಂಬ ಮಾಯಾ ಸಂಕೋಲೆ!

ಕರ್ನಾಟಕದ ಬೆಳಗಾವಿ ನಗರದಿಂದ ಸುಮಾರು ನೂರು ಕಿ.ಮೀ ಗಳಷ್ಟು ದೂರದಲ್ಲಿ ಸ್ಥಿತವಿರುವ ಸಾವಂತವಾಡಿಗೆ ಸುಲಭವಾಗಿ ತಲುಪಬಹುದು. ಅದರಲ್ಲೂ ವಿಶೇಷವಾಗಿ ಅಂಬೋಲಿ ಘಾಟ್ ಮುಖಾಂತರ ಪ್ರಯಣಿಸುವಾಗ ಎಲ್ಲಿಲ್ಲದ ರೋಮಾಂಚನವನ್ನು ಮಳೆಗಾಲದಲ್ಲಿ ಅಂಬೋಲಿ ನೀಡುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more