» »ಸವಣೂರಿನ ವಿಚಿತ್ರ ಹಾಗೂ ರಹಸ್ಯ ಮರಗಳು!

ಸವಣೂರಿನ ವಿಚಿತ್ರ ಹಾಗೂ ರಹಸ್ಯ ಮರಗಳು!

Written By:

ಈ ವೃಕ್ಷಗಳನ್ನು ನೋಡಿದಾಗ ಒಂದು ಕ್ಷಣ ತಬ್ಬಿಬ್ಬಾಗದೆ ಇರಲಾಗಲ್ಲ. ಏಕೆಂದರೆ ಇದರ ಆಕಾರ ಹಾಗೂ ಗಾತ್ರಗಳೆ ಆ ರೀತಿಯಾಗಿವೆ. ಇವುಗಳನ್ನು ಸವಣೂರು ಬವೋಬಾಬುಗಳು ಎಂದು ಕರೆಯುತ್ತಾರೆ. ದೊಡ್ಡ ಹುಣಸೆ ಮರ ಎಂತಲೂ ಕರೆಯಲ್ಪಡುವ ಈ ವೃಕ್ಷಗಳು ಬಲು ಅಪರೂಪ.

ಚಕಿತಗೊಳಿಸುವ ಶಿರ್ವೆ ಗುಡ್ಡದ ರಹಸ್ಯ

ಈ ರೀತಿಯ ವೃಕ್ಷಗಳು ಮೂರು ಸಂಖ್ಯೆಯಲ್ಲಿ ಇಲ್ಲಿದ್ದು ಕರ್ನಾಟಕ ಮಾತ್ರವಲ್ಲ ಸಂಪೂರ್ಣ ಭಾರತದಲ್ಲಿ ಎಲ್ಲಿ ಹುಡುಕಿದರೂ ಈ ರೀತಿಯ ಮರಗಳನ್ನು ಕಾಣಲು ಸಾಧ್ಯವಿಲ್ಲ. ಇವುಗಳನ್ನು "ಬಾವೋಬಾಬ್" ವೃಕ್ಷಗಳೆಂದು ಕರೆಯುತ್ತಾರೆ. ಇವೂ ಮೂಲತಃ ಆಫ್ರಿಕಾ ಖಂಡದ ಕೆಲವು ಪ್ರದೇಶಗಳಲ್ಲಿ ಮಾತ್ರವೆ ಕಂಡುಬರುತ್ತದೆ.

ಸಾಮಾನ್ಯವಾಗಿ ಇದರ ಬುಡವು 12 ರಿಂದ 15 ಮೀ. ಗಳಷ್ಟು ವ್ಯಾಸವನ್ನು ಹೊಂದಿರುತ್ತವೆ. ಅಂದರೆ ಇಪ್ಪತ್ತೈದರಿಂದ ಐವತ್ತು ಅಡಿಗಳಷ್ಟು ಕೇವಲ ಬುಡದ ವ್ಯಾಸ. ಎತ್ತರ ಸುಮಾರು 50 ರಿಂದ 80 ಅಡಿಗಳಷ್ಟು. ವಿಶೇಷವೆಂದರೆ ಇದರ ಕಾಂಡವು ಬುಡದಲ್ಲಿ ಅಗಲ ಹೊಂದಿದ್ದು ಮೇಲೆರುತ್ತ ಅನಿಯಮಿತವಾಗಿ ಮೊನಚಾಗಿರುತ್ತದೆ. ಇದರಿಂದ ಈ ವೃಕ್ಷ ಬಾಟಲ್ ಆಕಾರ ಹೊಂದಿರುತ್ತದೆ.

ಸವಣೂರಿನ ವಿಚಿತ್ರ ಹಾಗೂ ರಹಸ್ಯ ಮರಗಳು!

ಚಿತ್ರಕೃಪೆ: Dvrkumar

ಬಾಂಬುಕೇಶಯ ಎಂಬ ಕುಟುಂಬ ವರ್ಗಕ್ಕೆ ಸೇರಿದ ಈ ವೃಕ್ಷ ಆಫ್ರಿಕಾ ಖಂಡದಲ್ಲಿ ಅದರಲ್ಲೂ ಕೆಲವು ಸ್ಥಳಗಳಲ್ಲಿ ಮಾತ್ರವೆ ಕಂಡುಬರುತ್ತವೆ. ಇನ್ನೊಂದು ವಿಶೇಷ ಎಂದರೆ ಈ ವೃಕ್ಷದಲ್ಲಿರುವ ಔಷಧೀಯ ಗುಣಗಳು. ಹೌದು ಇಂದು ವಿಶ್ವದಲ್ಲಿ ಈ ವೃಕ್ಷವು ತನ್ನ ಔಷಧೀಯ ಗುಣಗಳಿಗಾಗಿ ಹೆಚ್ಚು ಹೆಸರುವಾಸಿಯಾಗಿದೆ.

ಸವಣೂರಿನ ವಿಚಿತ್ರ ಹಾಗೂ ರಹಸ್ಯ ಮರಗಳು!

ಚಿತ್ರಕೃಪೆ: Dvrkumar

ಸವಣೂರಿನ ಈ ವೃಕ್ಷಗಲೂ ಸಹ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ ಎನ್ನಲಾಗಿದೆ. ಇದರ ಬುಡದಲ್ಲಿ ಆಹಾರ ಇಟ್ಟರೆ ಬಹು ಸಮಯದವರೆಗೆ ಅದು ಹಳಸುವುದಿಲ್ಲವಂತೆ. ಈ ವೃಕ್ಷಗಳು ಸವಣೂರಿನ ವಿಶೇಷ ಆಕರ್ಷಣೆಗಳಾಗಿದ್ದು ಇದರ ಕುರಿತು ಮಾಹಿತಿ ತಿಳಿದ ಪ್ರವಾಸಿಗರು ಭೇಟಿ ನೀಡುತ್ತಾರೆ.

ಸವಣೂರಿನ ವಿಚಿತ್ರ ಹಾಗೂ ರಹಸ್ಯ ಮರಗಳು!

ಚಿತ್ರಕೃಪೆ: Dvrkumar

ಪೌರಾಣಿಕವಾಗಿಯೂ ಈ ವೃಕ್ಷದ ಕುರಿತು ಉಲ್ಲೇಖವಿದೆ ಎನ್ನಲಾಗಿದೆ. ಒಂದೊಮ್ಮೆ ಶ್ರೀ ಕೃಷ್ಣನು ಆಫ್ರಿಕಾ ಖಂಡಕ್ಕೆ ಹೋಗಿ ಕೆಲವು ಮರದ ಬೀಜಗಳನ್ನು ತಂದು ಇಲ್ಲಿ ನೆಟ್ಟಿದ ಎಂದು ಹೇಳಲಾಗುತ್ತದೆ. ಕೃಷ್ಣನು ತಂದ ಆ ಮರಗಳೆ ಇಂದಿನ ಸವಣೂರಿನಲ್ಲಿರುವ ಬಾವೋಬಾಬ್ ಮರಗಳಾಗಿವೆ ಎಂದು ಹೇಳಲಾಗುತ್ತದೆ.

ಗುಳಿ ಗುಳಿ ಶಂಕರ, ಇದು ಮಾಯಾ ಹೊಂಡ!

ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿರುವ ಸವಣೂರು ಪಟ್ಟಣವು ಹಾವೇರಿ ನಗರಕೇಂದ್ರದಿಂದ 32 ಕಿ.ಮೀ ಹಾಗೂ ಹುಬ್ಬಳ್ಳಿ ನಗರದಿಂದ 65 ಕಿ.ಮೀ ಗಳಷ್ಟು ದುರದಲ್ಲಿದೆ. ತೆರಲಲು ಬಸ್ಸುಗಳು ದೊರೆಯುತ್ತವೆ. ಇನ್ನೂ ಸವಣೂರಿನಲ್ಲಿರುವ ದೊಡ್ಡ ಹುಣಸೆ ಮಠದ ಆವರಣದಲ್ಲಿ ಈ ವೃಕ್ಷಗಳಿರುವುದನ್ನು ಕಾಣಬಹುದು.

Please Wait while comments are loading...