Search
  • Follow NativePlanet
Share
» »ಅಗಸ್ತ್ಯ ಋಷಿಗಳು ಇಲ್ಲಿದ್ದುಕೊಂಡೆ ಶಿವನ ಮದುವೆ ನೋಡಿದರಂತೆ!

ಅಗಸ್ತ್ಯ ಋಷಿಗಳು ಇಲ್ಲಿದ್ದುಕೊಂಡೆ ಶಿವನ ಮದುವೆ ನೋಡಿದರಂತೆ!

By Vijay

ಹೌದು, ನೀವು ಕೇಳುತ್ತಿರುವುದು ನಿಜ. ಈ ಸ್ಥಳ ಅಪಾರ ಮಹಿಮೆಯುಳ್ಳ ಸ್ಥಳವಾಗಿದೆ. ಕೆಲವು ಮೂಲಗಳ ಪ್ರಕಾರ, ಕಾಶಿಗೆ ಭೇಟಿ ನೀಡಿದಾಗ ಲಭಿಸುವ ಪುಣ್ಯಕ್ಕಿಂತಲೂ ಹೆಚ್ಚಿನ ಪುಣ್ಯ ಈ ಕ್ಷೇತ್ರ ಹಾಗೂ ಇಲ್ಲಿ ನೆಲೆಸಿರುವ ಶಿವನನ್ನು ದರ್ಶಿಸಿದರೆ ಲಭಿಸುತ್ತದಂತೆ! ಅಷ್ಟೆ ಏಕೆ, ಭೂಮಿಯ ಸಮತೋಲನವೂ ಸಹ ಈ ಸ್ಥಳದೊಂದಿಗೆ ನಂಟು ಹಾಕಿಕೊಂಡಿದೆಯಂತೆ.

ಕಾಶಿಯಲ್ಲಿರುವ ಈ ದೇವಾಲಯಗಳು ನಿಮಗೆ ಗೊತ್ತೆ?

ಈ ಪರಮ ಪಾವನ ಕ್ಷೇತ್ರ ಮತ್ಯಾವುದೂ ಅಲ್ಲ, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ನಗರದ ನೈರುತ್ಯಕ್ಕೆ ಸುಮಾರು 92 ಕಿ.ಮೀ ಗಳಷ್ಟು ದೂರದಲ್ಲಿರುವ ಶಿವನು ಕಳಸೇಶ್ವರನಾಗಿ ನೆಲೆಸಿರುವ ಕಳಸ. ಭದ್ರಾ ನದಿಯ ತಟದಲ್ಲಿರುವ ಈ ಕ್ಷೇತ್ರವು ಧಾರ್ಮಿಕ ಮಹತ್ವ ಪಡೆದಿದ್ದು ಸಾಕಷ್ಟು ಜನರಿಂದ ಭೇಟಿ ನೀಡಲ್ಪಡುತ್ತದೆ.

ಅಗಸ್ತ್ಯ ಋಷಿಗಳು ಇಲ್ಲಿದ್ದುಕೊಂಡೆ ಶಿವನ ಮದುವೆ ನೋಡಿದರಂತೆ!

ಚಿತ್ರಕೃಪೆ: Wind4wings

ಇದರ ಕುರಿತ ಮಾಹಿತಿಯು ಪೌರಾಣಿಕ ಗ್ರಂಥಗಳಿಂದ ತಿಳಿದುಬರುತ್ತದೆ. ಅದರಲ್ಲೂ ವಿಶೇಷವಾಗಿ ಸ್ಕಂದ ಪುರಾಣದಲ್ಲಿ ಇದರ ಉಲ್ಲೇಖವಿದೆ. ಆ ಒಂದು ಕಥೆಯ ಪ್ರಕಾರ ಕೈಲಾಸದಲ್ಲಿ ಶಿವ-ಪಾರ್ವತಿಯರ ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಕಲ ದೇವಾಧಿದೇವತೆಗಳು ಇದರಲ್ಲಿ ಭಾಗವಹಿಸಿದ್ದರು.

ಶಿವ-ಪಾರ್ವತಿಯರ ಮದುವೆ ನಡೆದ ಸ್ಥಳವಿದು!

ಹೀಗೆ ಸರ್ವ ದೇವತೆಗಳು ಈ ಶುಭ ಕಾರ್ಯದಲ್ಲಿ ಏಕ ಸಮಯದಲ್ಲಿ ಹಾಗೂ ಏಕ ಸ್ಥಳದಲ್ಲಿ ಭಾಗವಹಿಸಿದ್ದರಿಂದ ಭೂಮಿಯ ಪರಿಭ್ರಮಣೆಯಲ್ಲಿ ವ್ಯತ್ಯಾಸ ಉಂಟಾಗಿ ಸಮತೋಲನಕ್ಕೆ ಧಕ್ಕೆಯಾಗಲು ಪ್ರಾರಂಭಿಸಿತು. ಇದನ್ನರಿತ ಶಿವನು ಅಗಸ್ತ್ಯ ಮುನಿಗಳಲ್ಲಿ ದಕ್ಷಿಣ ಭಾರತಕ್ಕೆ ತೆರಳುವಂತೆ ಪ್ರಾರ್ಥಿಸಿದ.

ಅಗಸ್ತ್ಯ ಋಷಿಗಳು ಇಲ್ಲಿದ್ದುಕೊಂಡೆ ಶಿವನ ಮದುವೆ ನೋಡಿದರಂತೆ!

ಚಿತ್ರಕೃಪೆ: Bdeepu

ಆದರೆ ಅಗಸ್ತ್ಯರು ತಾವು ಮದುವೆಯನ್ನು ನೋಡಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದರಿಂದ, ಶಿವನು ಅವರಿಗೆ ದಿವ್ಯ ದೃಷ್ಟಿಯ ವರದಾನ ನೀಡಿ ಜಗತ್ತಿನ ಯಾವುದೆ ಭಾಗಗಳಿಂದ ಮದುವೆಯ ಸಮಾರಂಭವನ್ನು ನೋಡಬಹುದೆಂದು ಹೇಳಿದನು. ಇದರಿದ ಸಂತೃಪ್ತರಾದ ಅಗಸ್ತ್ಯರು ದಕ್ಷಿಣ ಭಾರತಕ್ಕೆ ಪ್ರವಾಸಿ ಮಾಡಿ ಬಂದ ಸ್ಥಳವೆ ಇಂದಿನ ಕಳಸ ಎನ್ನಲಾಗಿದೆ.

ಅಗಸ್ತ್ಯ ಋಷಿಗಳು ಇಲ್ಲಿದ್ದುಕೊಂಡೆ ಶಿವನ ಮದುವೆ ನೋಡಿದರಂತೆ!

ಚಿತ್ರಕೃಪೆ: Bdeepu

ಚಂದ್ರಮಾನ ಕ್ಯಾಲೆಂಡರಿನ ಪ್ರಕಾರ, ಪ್ರತಿ ವರ್ಷ ಕಾರ್ತಿಕ ಶುದ್ಧ ಏಕಾದಶಿಯಂದು ಕಳಸದಲ್ಲಿ ಇಂದಿಗೂ ಗಿರಿಜಾ ಕಲ್ಯಾಣ ಉತ್ಸವವನ್ನು ಶಿವ-ಪಾರ್ವತಿಯರ ಮದುವೆಯ ಸಂಕೇತವಾಗಿ ಬಲು ಸಡಗರದಿಂದ ಆಚರಿಸಲಾಗುತ್ತದೆ ಹಾಗೂ ಸ್ಥಳ ಪುರಾಣದ ಪ್ರಕಾರ, ಈ ಕ್ಷೇತ್ರದ ಭೇಟಿಯು ಕಾಶಿಗೆ ಭೇಟಿ ನೀಡಿದಾಗ ಲಭಿಸುವ ಪುಣ್ಯಕ್ಕಿಂತಲೂ ಹೆಚ್ಚು ಪುಣ್ಯ ಲಭಿಸುವಂತೆ ಮಾಡುತ್ತದೆ ಎಂದು ಹೇಳಲಾಗಿದೆ.

ಶೃಂಗೇರಿ ಹಾಗೂ ಸುತ್ತಮುತ್ತಲು

ಇನ್ನೂ ಕಳಸವು ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡುಗಳಿಗೆ ಬಲು ಹತ್ತಿರದಲ್ಲಿರುವುದರಿಂದ ಶೃಂಗೇರಿ, ಹೊರನಾಡು ಹಾಗೂ ಕಳಸದ ದರ್ಶನವನ್ನು ಒಂದೆ ದಿನದಲ್ಲಿ ಮಾಡಲು ಸೂಕ್ತವಾಗಿದೆ ಎಂದೆ ಹೇಳಬಹುದು. ಶೃಂಗೇರಿಯಿಂದ ಹೊರನಾಡು 42 ಕಿ.ಮೀ ದೂರವಿದ್ದರೆ ಹೊರನಾಡಿನಿಂದ ಕಳಸವು ಕೇವಲ ಏಳು ಕಿ.ಮೀ ಗಳಷ್ಟು ದೂರದಲ್ಲಿದೆ.

ಶೃಂಗೇರಿಗೆ ತಲುಪುವ ಬಗೆ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+