• Follow NativePlanet
Share
Menu
» »ಈ ಅತ್ತೆ-ಸೊಸೆ ದೇವಾಲಯದಲ್ಲಿ ಅದ್ಭುತ ಕಾಮದಾಟದ ಶಿಲ್ಪಕಲೆಗಳು

ಈ ಅತ್ತೆ-ಸೊಸೆ ದೇವಾಲಯದಲ್ಲಿ ಅದ್ಭುತ ಕಾಮದಾಟದ ಶಿಲ್ಪಕಲೆಗಳು

Written By:

ನಮ್ಮ ದೇಶದಲ್ಲಿ ಹಲವಾರು ವಿಭಿನ್ನವಾದ ದೇವಾಲಯಗಳ ಬಗ್ಗೆ ತಿಳಿಯುತ್ತಲೇ ಬಂದಿದ್ದೇವೆ. ಒಂದೊಂದು ದೇವಾಲಯ ಒಂದೊಂದು ರೀತಿಯ ವೈಶಿಷ್ಟತೆಯನ್ನು ಹೊಂದಿದೆ. ವಿಚಿತ್ರ ಏನೆಂದರೆ ಈ ದೇವಾಲಯದ ಹೆಸರೇ ಅತ್ತೆ-ಸೊಸೆ ದೇವಾಲಯ. ಏನು? ಅತ್ತೆ-ಸೊಸೆ ದೇವಾಲಯವೇ ಎಂದು ನಗಬೇಡಿ. ನಿಜವಾಗಿಯೂ ಇದೊಂದು ಅದ್ಭುತವಾದ ದೇವಾಲಯವಾಗಿದೆ.

ಈ ದೇವಾಲಯದಲ್ಲಿ ಶೃಂಗಾರ ರಸವನ್ನು ಹೋಲುವ ಹಲವಾರು ಕಾಮದಾಟದ ಶಿಲ್ಪಕಲೆಗಳನ್ನು ಕಾಣಬಹುದಾಗಿದೆ. ನಮ್ಮ ಕರ್ನಾಟಕದಲ್ಲಿಯೂ ಇಂತಹ ಸುಂದರವಾದ ಶಿಲ್ಪಕಲೆಗಳನ್ನು ಕಾಣಬಹುದಾಗಿದೆ. ಈ ಐತಿಹಾಸಿಕವಾದ ತಾಣವು ಪ್ರಪಂಚದಾದ್ಯಂತ ಆಕರ್ಷಿಸುತ್ತದೆ.

ಭಾರತದಲ್ಲಿ ಚಿತ್ರ-ವಿಚಿತ್ರ ಹೆಸರುಗಳನ್ನು ಹೊಂದಿರುವ ಅದೆಷ್ಟೊ ದೇವಾಲಯಗಳು ಇವೆ. ಅವುಗಳಲ್ಲಿ ಈ ದೇವಾಲಯವು ಒಂದಾಗಿದೆ. ಈ ದೇವಾಲಯದ ಶಿಲ್ಪಕಲೆಗಳು ಅತ್ಯಂತ ರಮಣೀಯವಾಗಿದ್ದು ನಮ್ಮ ಪುರಾತನವಾದ ಶಿಲ್ಪ ಕಲಾ ನೈಪುಣ್ಯವನ್ನು ಸಾರುತ್ತದೆ.

ಅತ್ತೆ-ಸೊಸೆ ದೇವಾಲಯ

ಅತ್ತೆ-ಸೊಸೆ ದೇವಾಲಯ

ಈ ವಿಚಿತ್ರವಾದ ದೇವಾಲಯವಿರುವುದು ನಗ್ಡಾ ಅಂದರೆ ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿರುವ ಒಂದು ಸಣ್ಣದಾದ ಗ್ರಾಮದಲ್ಲಿ. ಈ ದೇವಾಲಯವನ್ನು ಮೇವಾರ ಸಾಮ್ರಾಜ್ಯದ 4ನೇ ರಾಜನಾದ ನಗರಾದಿತ್ಯನಿಂದ ನಗ್ಡಾ 6 ನೇ ಶತಮಾನದಲ್ಲಿ ನಿರ್ಮಾಣ ಮಾಡಿದನು.

PC:Dennis Jarvis

ಅತ್ತೆ-ಸೊಸೆ ದೇವಾಲಯ

ಅತ್ತೆ-ಸೊಸೆ ದೇವಾಲಯ

ಒಂದು ಕಾಲದಲ್ಲಿ ನಗ್ಡಾ ಮೇವಾರದ ರಾಜಧಾನಿಯಾಗಿ ಬಾಳಿದ್ದ ಪ್ರದೇಶ ಇದಾಗಿತ್ತು. ಹಾಗಾಗಿಯೇ ಇಲ್ಲಿ ಹಲವಾರು ಸುಂದರವಾದ ದೇವಾಲಯಗಳನ್ನು ಕಾಣಬಹುದಾಗಿದೆ. ಈ ಎಲ್ಲಾ ದೇವಾಲಯಗಳು ತನ್ನದೇ ಆದ ಅದ್ಭುತವಾದ ಶಿಲ್ಪಕಲೆಯಿಂದ ಕಂಗೊಳಿಸುತ್ತಿದೆ.

PC:Dennis Jarvis

ಅತ್ತೆ-ಸೊಸೆ ದೇವಾಲಯ

ಅತ್ತೆ-ಸೊಸೆ ದೇವಾಲಯ

ಇಲ್ಲಿನ ಹಲವಾರು ದೇವಾಲಯಗಳಲ್ಲಿ ವಿಶಿಷ್ಟವಾದ ದೇವಾಲಯವೆಂದರೆ ಅದು ನಗ್ಡಾದ ಅತ್ತೆ-ಸೊಸೆ ದೇವಾಲಯ. ಈ ದೇವಾಲಯದ ಹೆಸರು ಸ್ವಲ್ಪ ವಿಭಿನ್ನವಾಗಿದ್ದರು ಕೂಡ ದೇವಾಲಯವನ್ನು ನೋಡಿದವರು ಮಾತ್ರ ಮಂತ್ರಮುಗ್ಧರಾನ್ನಾಗಿಸದೇ ಬಿಡದು.

PC:Dennis Jarvis

ಅತ್ತೆ-ಸೊಸೆ ದೇವಾಲಯ

ಅತ್ತೆ-ಸೊಸೆ ದೇವಾಲಯ

ಈ ದೇವಾಲಯ ಸುತ್ತಮುತ್ತಲೂ ಮನೋಹರವಾದ ವಾತಾವರಣದಿಂದ ಕಂಗೊಳಿಸುತ್ತಿದ್ದು, ಭೇಟಿ ನೀಡುವ ಪ್ರವಾಸಿಗರಿಗೆ ಕೈಬೀಸಿ ಮತ್ತೊಮ್ಮೆ ಕರೆಯುವ ಸೊಬಗು ಹೊಂದಿದೆ. ಇಂಥಹ ಅದ್ಭುತವಾದ ನೋಟವನ್ನು ತಮ್ಮಲ್ಲಿ ಸೊರೆ ಮಾಡಿಕೊಳ್ಳಲು ಹಲವಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

PC:Dennis Jarvis

ಅತ್ತೆ-ಸೊಸೆ ದೇವಾಲಯ

ಅತ್ತೆ-ಸೊಸೆ ದೇವಾಲಯ

ಅತ್ತೆ- ಸೊಸೆ ದೇವಾಲಯ ಎಂಬ ಹೆಸರು ಹೇಗೆ ಬಂದಿತು ಎಂದು ಯೋಚಿಸುತ್ತಿದ್ದೀರಾ? ಆ ಹೆಸರು ಹೇಗೆ ಬಂದಿತು ಎಂದು ಹೇಳುತ್ತೇನೆ ಕೇಳಿ. ಅದೆನೆಂದರೆ ಸ್ಥಳೀಯ ಪುರಾಣದ ಕಥೆಯ ಪ್ರಕಾರ ಒಂದು ದೇವಾಲಯವನ್ನು ಅತ್ತೆ ನಿರ್ಮಾಣ ಮಾಡಿದರೆ ಮತ್ತೊಂದು ದೇವಾಲಯವನ್ನು ಸೊಸೆ ನಿರ್ಮಾಣ ಮಾಡಿದಳಂತೆ.

PC:TeshTesh

ಅತ್ತೆ-ಸೊಸೆ ದೇವಾಲಯ

ಅತ್ತೆ-ಸೊಸೆ ದೇವಾಲಯ

ಈ ದೇವಾಲಯಗಳು ಒಂದೇ ಹಾಸಿನ ಮೇಲೆ ಎರಡು ದೇವಾಲಯಗಳಿದ್ದರೂ ಕೂಡ ಅತ್ತೆ ದೇವಾಲಯವು ಸ್ವಲ್ಪ ದೊಡ್ಡದಾಗಿದ್ದು, ಸೊಸೆಯ ದೇವಾಲಯವು ಸ್ವಲ್ಪ ಚಿಕ್ಕದಾಗಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಶ್ರೀ ಮಹಾ ವಿಷ್ಣುವು ನೆಲೆಸಿದ್ದಾನೆ.


PC:Dennis Jarvis

ಅತ್ತೆ-ಸೊಸೆ ದೇವಾಲಯ

ಅತ್ತೆ-ಸೊಸೆ ದೇವಾಲಯ

ಈ ದೇವಾಲಯವು ಕಾಮಸೂತ್ರದಂತಹ ಹಲವಾರು ಭಂಗಿಗಳ ಅದ್ಭುತವಾದ ಕೆತ್ತನೆಗಳ ಶಿಲ್ಪಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಕೆತ್ತನೆಗಳೆಲ್ಲವೂ ಸೂಕ್ಷ್ಮವಾದ ಕೆತ್ತನೆಗಳಾಗಿದ್ದು, ಅದ್ಭುತವಾಗಿವೆ. ಹಾಗಾಗಿಯೇ ಈ ದೇವಾಲಯಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ.


PC:Paul Asman and Jill Lenoble


ಅತ್ತೆ-ಸೊಸೆ ದೇವಾಲಯ

ಅತ್ತೆ-ಸೊಸೆ ದೇವಾಲಯ

ನಗ್ಡಾ ಪಟ್ಟಣವು ರಾಜಸ್ಥಾನದ ಉದಯಪುರದಿಂದ ಸುಮಾರು 23 ಕಿ.ಮೀ ದೂರದಲ್ಲಿದೆ. ಉದಯಪುರದಿಂದ ಈ ದೇವಾಲಯಕ್ಕೆ ತೆರಳಲು ಹಲವಾರು ಖಾಸಗಿ ಹಾಗು ಸರ್ಕಾರಿ ಬಸ್ಸುಗಳು ದೊರೆಯುತ್ತವೆ.


PC:ArnoldBetten

ಅತ್ತೆ-ಸೊಸೆ ದೇವಾಲಯ

ಅತ್ತೆ-ಸೊಸೆ ದೇವಾಲಯ

ಒಂದೇ ಕಲ್ಲಿನ ಮೇಲೆ ಪ್ರತ್ಯೇಕವಾಗಿ ನಿರ್ಮಾಣವಾಗಿರುವ ಅತ್ತೆ-ಸೊಸೆ ದೇವಾಲಯಗಳು. ಇಲ್ಲಿನ ಮನೋಹರವಾದ ಸ್ತಂಭಗಳು, ದೊಡ್ಡ ದೊಡ್ಡ ಮಂಟಪಗಳು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸದೇ ಬಿಡದು.


PC: Cosimo Roams

ಅತ್ತೆ-ಸೊಸೆ ದೇವಾಲಯ

ಅತ್ತೆ-ಸೊಸೆ ದೇವಾಲಯ

ಈ ನಗ್ಡಾದ ಅತ್ತೆ-ಸೊಸೆ ದೇವಾಲಯದ ಸಮೀಪದಲ್ಲಿ ಬಗೇಲಾ ಎಂಬ ಸುಂದರವಾದ ಕೆರೆ ಇದೆ. ಈ ಕೆರೆಯು ತನ್ನ ಪ್ರಶಾಂತವಾದ ವಾತಾವರಣದಿಂದ ಕಂಗೊಳಿಸುತ್ತಿದೆ.

PC:Cosimo Roams


ಅತ್ತೆ-ಸೊಸೆ ದೇವಾಲಯ

ಅತ್ತೆ-ಸೊಸೆ ದೇವಾಲಯ

ಶೃಗಾಂರ ರಸವನ್ನು ಉದ್ರೇಕಿಸುವಂತಹ ಅದ್ಭುತವಾದ ಹಲವಾರು ಮಿಥುನ ಶಿಲ್ಪಕಲೆಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿನ ಸುಂದರವಾದ ಶಿಲ್ಪಗಳು ಕಣ್ಣಿಗೆ ಹಬ್ಬದಂತೆ ಇರುತ್ತದೆ. ಈ ದೇವಾಲಯದಲ್ಲಿನ ವಿಶೇಷವೇ ಈ ಶಿಲ್ಪಗಳು.

PC:Nagarjun Kandukuru

ಅತ್ತೆ-ಸೊಸೆ ದೇವಾಲಯ

ಅತ್ತೆ-ಸೊಸೆ ದೇವಾಲಯ

ಇಂತಹ ಅದ್ಭುತವಾದ ಮತ್ತು ಐತಿಹಾಸಿಕವಾದ ದೇವಾಲಯಕ್ಕೆ ಸ್ವಾಗತಕೋರುವ ಸ್ವಾಗತ ದ್ವಾರವನ್ನು ಕೂಡ ಕಂಡು ಆನಂದಿಸಬಹುದಾಗಿದೆ. ಈ ಸ್ವಾಗತ ದ್ವಾರವು 4 ಸ್ತಂಭಗಳನ್ನು ಒಳಗೊಂಡಿದೆ. ಇದೊಂದು ಅದ್ಭುತವಾದ ರಚನೆಯನ್ನು ಹೊಂದಿದೆ ಎಂದೇ ಹೇಳಬಹುದಾಗಿದೆ.


PC:Nagarjun Kandukuru

ಅತ್ತೆ-ಸೊಸೆ ದೇವಾಲಯ

ಅತ್ತೆ-ಸೊಸೆ ದೇವಾಲಯ

ದೇವಾಲಯದ ಶಿಲ್ಪಗಳೇ ಅಲ್ಲದೇ ದೇವಾಲಯದ ಸುತ್ತ ಮುತ್ತ ಪ್ರಾಕೃತಿಕ ಸೌಂದರ್ಯವನ್ನು ನೋಡಿಯೇ ಕಣ್ಣು ತುಂಬಿಕೊಳ್ಳಬೇಕು. ಹಚ್ಚ ಹಸಿರಿನ ಸಂಪತ್ತನ್ನು ಹೊಂದಿರುವ ಈ ಸ್ಥಳವು ಪ್ರವಾಸಿಗರು ತಮ್ಮ ಜೀವನದಲ್ಲಿ ಎಂದೂ ಮರೆಯಲಾಗದಂತಹ ಅನುಭೂತಿಯನ್ನು ನೀಡುವುದಂತು ನಿಜ.


PC:Nagarjun Kandukuru

ಅತ್ತೆ-ಸೊಸೆ ದೇವಾಲಯ

ಅತ್ತೆ-ಸೊಸೆ ದೇವಾಲಯ

ದೇವಾಲಯದ ಒಳಭಾಗದಲ್ಲಿ ಮನ ಸೆಳೆಯುವ ಅದ್ಭುತವಾದ ಶಿಲ್ಪಕಲಾ ಸಂಪತ್ತು ಹೊಂದಿದೆ. ಅದೇನೆ ಇರಲಿ ಅತ್ತೆ-ಸೊಸೆ ಎಂಬ ದೇವಾಲಯ ಕೂಡ ನಮ್ಮ ದೇಶದಲ್ಲಿ ಇದೆ ಎಂದು ಕೆಲವರು ಊಹಿಸಿರಲಿಕ್ಕಿಲ್ಲ ಅಲ್ಲವೇ? ಒಮ್ಮೆ ರಾಜಸ್ಥಾನಕ್ಕೆ ಭೇಟಿ ನೀಡಿದಾಗ ತಪ್ಪದೇ ಈ ಸ್ಥಳಕ್ಕೆ ಭೇಟಿ ನೀಡಿಬನ್ನಿ..


PC:Zen Skillicorn

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ