• Follow NativePlanet
Share
» »ರೂಪಿನ್-ಪಾಸ್-ಎ-ತಿರುವುಗಳನ್ನೊಳಗೊಂಡ-ಆಶ್ಚರ್ಯಕಾರಿ-ಪ್ರಯಾಣ

ರೂಪಿನ್-ಪಾಸ್-ಎ-ತಿರುವುಗಳನ್ನೊಳಗೊಂಡ-ಆಶ್ಚರ್ಯಕಾರಿ-ಪ್ರಯಾಣ

Posted By: Manjula

ಹಿಮಾಲಯದ ಅತ್ಯಂತ ಆಕರ್ಷಕ ಮತ್ತು ಸುಂದರವಾದ ಟ್ರಕ್ಕಿಂಗ್ ತಾಣಗಳಲ್ಲಿ ಒಂದಾದ ರೂಪಿನ್ ಪಾಸ್ ಚಾರಣ ಪ್ರಿಯರಿಗೆ ಖಂಡಿತವಾಗಿಯೂ ಗೊತ್ತಿರುವ ಸ್ಥಳವಾಗಿದೆ. ಈ ಟ್ರಕ್ಕಿಂಗ್ ತಾಣವು ಉತ್ತರಖಾಂಡದಿಂದ ಪ್ರಾರಂಭವಾಗಿ ಹಿಮಾಚಲ ಪ್ರದೇಶದಲ್ಲಿ ಕೊನೆಗೊಳ್ಳುತ್ತದೆ. 60ಕಿ.ಮೀ ಗಳ ವಿಸ್ತಾರ ಹೊಂದಿರುವ ಈ ಪ್ರದೇಶವನ್ನು ಪೂರ್ಣಗೊಳಿಸಲು ಸುಮಾರು 8 ದಿನಗಳು ಬೇಕಾಗುವುದು. ಈ ಪ್ರದೇಶವು ಸಮುದ್ರ ಮಟ್ಟದಿಂದ ಸುಮಾರು 15,350 ಅಡಿಗಳಷ್ಟು ಎತ್ತರದಲ್ಲಿದೆ.

ನೀವು ಅಶ್ಚರ್ಯಗಳನ್ನು ಪ್ರೀತಿಸುವವರಲ್ಲೊಬ್ಬರಾಗಿದ್ದಲ್ಲಿ ನೀವು ಖಂಡಿತವಾಗಿಯೂ ಇಲ್ಲಿಯ ಚಾರಣವನ್ನು ಪ್ರತೀ ತುಣುಕನ್ನೂ ಕೂಡ ಇಷ್ಟ ಪಡುತ್ತೀರಿ. ಇಲ್ಲಿ ಪ್ರತೀ ತಿರುವುಗಳಲ್ಲಿಯೂ ನಿಮಗೆ ಒಂದು ಅನುಭವವನ್ನು ಕೊಡುತ್ತದೆ. ಇಲ್ಲಿಯ ವ್ಯಾಪಕವಾದ ಹುಲ್ಲುಗಾವಲುಗಳು, ಅತೀ ಯಾದ ಜಲಪಾತಗಳು, ಕಡಿದಾದ ಬೆಟ್ಟಗಳು, ಸುಲಭವಾಗಿ ನಡೆಯಬಹುದಾದ ದಾರಿಗಳು, ಹಿಮದಿಂದ ಮುಚ್ಚಲ್ಪಟ್ಟಂತೆ ಕಾಣುವ ಹಳ್ಳಿಗಳು ಮತ್ತು ಪ್ರತಿ ಹೆಜ್ಜೆಯಲ್ಲೂ ನೀವು ಮೋಡಿಮಾಡುವ ಮತ್ತು ವಿಸ್ಮಯಕಾರಿಯಾದ ಭಯಂಕರವಾದ ಇನ್ನೂ ರೋಮಾಂಚಕಾರಿ ತಿರುವುಗಳು ಇವೆಲ್ಲವು ನಿಮ್ಮನ್ನು ಬೆರಗಾಗುವಂತೆ ಮಾಡುತ್ತವೆ.

ಅತ್ಯುತ್ತಮ ಸಮಯ

ಅತ್ಯುತ್ತಮ ಸಮಯ

ರೂಪಿನ್ ಪೂರ್ವ ಮಾನ್ಸೂನ್ (ಮೇ ಮತ್ತು ಜೂನ್) ಮತ್ತು ಮಾನ್ಸೂನ್ ನಂತರ (ಸೆಪ್ಟೆಂಬರ್ ಮತ್ತು ಅಕ್ಟೋಬರ್) ತಿಂಗಳುಗಳನ್ನು ಭೇಟಿ ಮಾಡಲು ಅತ್ಯುತ್ತಮ ಸಮಯ ಅಲ್ಲದೆ ಈ ಸಮಯವು ಟ್ರೆಕ್ಕಿಂಗ್ ಮಾಡಲು ಕೂಡ ಅತ್ಯುತ್ತಮವಾದುದಾಗಿದೆ.

PC: Pavan Lulla

ರೂಪಿನ್ ಪಾಸ್ ಗೆ ತಲುಪುವುದು ಹೇಗೆ?

ರೂಪಿನ್ ಪಾಸ್ ಗೆ ತಲುಪುವುದು ಹೇಗೆ?

ವಾಯು ಮಾರ್ಗದ ಮೂಲಕ

ಡೆಹರಾಡೂನ್ ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣವು ಇಲ್ಲಿಗೆ ಹತ್ತಿರದಲ್ಲಿದೆ. ಇಲ್ಲಿಂದ ಅನೇಕ ಪಟ್ಟಣಗಳಿಗೆ ಸಂಪರ್ಕವಿದೆ. ಜುಬ್ಬರ್ಹಟ್ಟಿ ವಿಮಾನ ನಿಲ್ದಾಣ ಶಿಮ್ಲಾಗೆ ಸೇವೆ ಒದಗಿಸುತ್ತದೆ; ಇದು ಮುಂಬೈ, ದೆಹಲಿ, ಚಂಡೀಗಢ ಮತ್ತು ಪುಣೆಗೆ ಸೀಮಿತ ವಿಮಾನಗಳನ್ನು ಹೊಂದಿದೆ.

ರೈಲು ಮಾರ್ಗದ ಮೂಲಕ

ದೆಹಲಿ, ಮುಂಬೈ, ವಾರಣಾಸಿ, ಮಸ್ಸೂರಿ, ಲಕ್ನೋ ಮತ್ತು ಕೊಲ್ಕತ್ತಾಗಳಂತಹ ಇತರ ಪ್ರಮುಖ ನಗರಗಳಿಗೆ ಡೆಹ್ರಾಡೂನ್ ನಿಂದ ಉತ್ತಮ ರೈಲ್ವೆ ಸಂಪರ್ಕವಿದೆ. ಕಲ್ಕಾ ಶಿಮ್ಲಾಗೆ ಸಮೀಪದ ರೈಲ್ವೆ ನಿಲ್ದಾಣವಾಗಿದ್ದು ಇದು 96 ಕಿ.ಮೀ ದೂರದಲ್ಲಿದೆ. ಶಿಮ್ಲಾದಿಂದ ನ್ಯಾರೋ ಗೇಜ್ ರೈಲು ಆಯ್ಕೆ ಮಾಡುವ ಮೂಲಕ ನೀವು ಕಲ್ಕಾವನ್ನು ಕೂಡ ತಲುಪಬಹುದು.

ರಸ್ತೆ ಮೂಲಕ

ದೇಶದ ಪ್ರಮುಖ ನಗರಗಳಿಂದ ಡೆಹ್ರಾಡೂನ್ ಸುಲಭವಾಗಿ ತಲುಪಬಹುದು. ರಾ.ಹೆ 72, ರಾ.ಹೆ 72A, ರಾ. ಹೆ 58 ಈ ಕೆಲವು ರಾಷ್ಟ್ರೀಯ ಹೆದ್ದಾರಿಗಳು ಡೆಹರಾಡೂನ್ ನ್ನು ಸಂಪರ್ಕಿಸುತ್ತವೆ. ಶಿಮ್ಲಾ ಕೂಡ ದೇಶಾದ್ಯಂತ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ.

PC: Nikitaparwani


ಟ್ರಕ್ಕಿಂಗ್ ದಾರಿಯಲ್ಲಿರುವ ಕೆಲವು ಪ್ರಮುಖ ಆಕರ್ಷಣೆಗಳು

ಟ್ರಕ್ಕಿಂಗ್ ದಾರಿಯಲ್ಲಿರುವ ಕೆಲವು ಪ್ರಮುಖ ಆಕರ್ಷಣೆಗಳು

ಪ್ರಕೃತಿ ಯ ಸೌಂದರ್ಯತೆಯನ್ನು ವೀಕ್ಷಿಸಲು ಸಿದ್ದರಾಗಿ. ಡೆಹ್ರಾಡೂನ್ ನಿಂದ ದೌಲಾವರೆಗಿನ ಪ್ರಯಾಣವು ಒಂದು ಸೆಕೆಂಡಿಗೂ ನಿಮ್ಮ ಕ್ಯಾಮರಾವನ್ನು ಮುಚ್ಚಲು ಬಿಡುವುದಿಲ್ಲ . ಇಲ್ಲಿನ ಟ್ರಕ್ಕಿಂಗ್ ಸಂಸ್ಥೆಗಳು ನಿಮಗೆ ಕ್ಯಾಬ್ ನ ವ್ಯವಸ್ಥೆ ಯನ್ನು ಡೆಹ್ರಾಡೂನ್ ರೈಲು ನಿಲ್ದಾಣದಿಂದ ದೌಲಾಗೆ ಕಲ್ಪಿಸಿಕೊಡುತ್ತವೆ. ಒಬ್ಬ ವ್ಯಕ್ತಿಗೆ ಸುಮೂರು 1,000 ರೂಪಾಯಿಗಳಷ್ಟು ಆಗಬಹುದು.

ನಿಮ್ಮ ರಸ್ತೆ ಪ್ರಯಾಣದ ಸಮಯದಲ್ಲಿ ನೀವು ಪಟಿಯಾಲ ಮತ್ತು ಬಟಿಂಡಾದಲ್ಲಿ ಕೆಲವು ಭಕ್ಷ್ಯಗಳನ್ನು ಸವಿಯಲು ನಿಲ್ಲಬಹುದು . ಆಳವಾದ ಕಣಿವೆಗಳು, ಉದ್ದಕ್ಕೂ ಹರಿಯುವ ಯಮುನಾನದಿ ಮತ್ತು ದಟ್ಟವಾದ ಕಾಡುಗಳು ನಿಮ್ಮನ್ನು ಸ್ವಾಗತಿಸುತ್ತವೆ. 8-10 ಗಂಟೆಗಳ ಪ್ರಯಾಣದ ನಂತರ ಒಂದು ಚಿಕ್ಕ ಹಳ್ಳಿಯನ್ನು ತಲುಪುವಿರಿ ಅದೇ ದೌಲಾ ಅದು ಉತ್ತರಾಖಾಂಡ್ ಗೆ ಹೋಗುವ ರಸ್ತೆಯ ಕೊನೆಯಲ್ಲಿ ಸಿಗುತ್ತದೆ.

PC: Nick Irvine-Fortescue

ದೌಲಾದಿಂದ ಸೇವಾಗೆ

ದೌಲಾದಿಂದ ಸೇವಾಗೆ

ದೌಲಾದಲ್ಲಿ 5,100 ಅಡಿ ಎತ್ತರದಲ್ಲಿದ್ದರೆ, ಸೇವಾವು 6,300 ಅಡಿ ಎತ್ತರದಲ್ಲಿದೆ . ದೌಲಾದ ಕುತೂಹಲಕಾರಿ ಹಳ್ಳಿಯ ನಂತರ ನೀವು ಒಂದು ದನಗಳ ಆಶ್ರಯವನ್ನು ಕಾಣುವಿರಿ. ಇಲ್ಲಿಂದ ನಿಮ್ಮ ಆರೋಹಣವು ಪ್ರಾರಂಭವಾಗುತ್ತದೆ. ಇಲ್ಲಿ ನಿಮ್ಮ ಸಾಕ್ಸ್ ಗಳನ್ನು ಮೇಲೆ ಎಳೆದುಕೊಳ್ಳಲು ಜ್ಞಾಪನೆ ಮಾಡಲಾಗುವುದು ಈ ಆರೋಹಣವು ಸುಮಾರು 20 ನಿಮಿಷದಲ್ಲಿ ಪೂರ್ಣಗೊಳ್ಳುತ್ತದೆ, ನಂತರ ಹರಿಯುವ ರೂಪಿನ್ ನದಿಯ ಒಂದು ಸುಂದರವಾದ ನೋಟವನ್ನು ನೋಡಬಹುದು

ಸೇಬು ಮತ್ತು ಚಹಾ ಗಿಡಗಳ ಮಧ್ಯೆ ಮತ್ತೊಂದು ದಾರಿ ಹಾದುಹೋಗುತ್ತದೆ ಈಗ ನೀವು ಸೇವಾ ಗ್ರಾಮಕ್ಕೆ ಆಗಮಿಸುತ್ತಿದ್ದೀರಿ ಎಂದು ಅರ್ಥ. ಇಲ್ಲಿ ಪ್ರಸಿದ್ದವಾದ ಕಿನ್ನೌರ್ ದೇವಾಲಯ ವನ್ನು ಕಾಣುವಿರಿ. ಇಲ್ಲಿ ಗ್ರಾಮಸ್ಥರು ಸಾಧಿಸಿದ ಪದಕಗಳು ಮತ್ತು ಟ್ರೋಫಿಗಳು ದೇವಾಲಯದ ಹೊರಭಾಗದಲ್ಲಿ ನೇತುಹಾಕಿರುವುದನ್ನು ಕಾಣುವಿರಿ.

PC: Nick Irvine-Fortescue


ಸೇವಾದಿಂದ ಜಿಕ್ಸುನ್

ಸೇವಾದಿಂದ ಜಿಕ್ಸುನ್

ಸೇವಾದಿಂದ ಬರುವ ಮಾರ್ಗವು ಭೂಕುಸಿತಗಳಿಗೆ ಗುರಿಯಾಗುತ್ತದೆ. ಸೇವಾದಿಂದ ಹೊರಟಾಗ ನಿಮಗೆ ದೊಡ್ಡ ದೊಡ್ಡ ಆಲೂಗಡ್ಡೆ ಮತ್ತು ಬಾರ್ಲಿಯನ್ನು ಬೆಳೆಯುವ ಗದ್ದೆಗಳು ಕಾಣುತ್ತವೆ. ರೂಪಿನ್ ಇಳಿಯುವ ಮೊದಲು ನೀವು ದಟ್ಟವಾದ ಕಾಡುಗಳನ್ನು ದಾಟಿ ಹೋಗಬೇಕಾಗುವುದು. ಕಿರಿದಾದ ಸೇತುವೆಯನ್ನು ತಲುಪಲು ನೀವು ನಿಮ್ಮ ಎಡಭಾಗಕ್ಕೆ ತಿರುಗಿ ಈ ಪ್ರದೇಶವು ಉತ್ತರಕಾಂಡ ರಾಜ್ಯಕ್ಕೆ ಅಥವಾ ಹಿಮಾಚಲ ಪ್ರದೇಶಕ್ಕೆ ಸೇರಿರುವುದಲ್ಲ ಆದುದರಿಂದ ಇದನ್ನು ನಿರ್ಜನ ಪ್ರದೇಶ ಎಂದು ಕರೆಯಲಾಗುತ್ತದೆ

ಕ್ವಾರ್ ಕಡೆಗೆ ನಿಮ್ಮ ಪ್ರಯಾಣ ಬೆಳೆಸಿ ಇದು ನಿಮ್ಮನ್ನು ಜಿಕ್ಸುನ್ ಹಳ್ಳಿಗೆ ಕರೆದೊಯ್ಯುತ್ತದೆ. ನೀವು ಜಿಕ್ಸುನ್ ಹಳ್ಳಿಗೆ (7,700 ಫೀಟ್ ಎತ್ತರ) ತಲುಪಿದಾಗ ನಿಮ್ಮನ್ನು ಭಾರೀ ಪ್ರಮಾಣದ ಜಲಪಾತ ಕಾಸ್ಕೇಡ್ ಗಳಿಂದ ಸ್ವಾಗತಿಸಲ್ಪಡುವಿರಿ.

PC: Sharada Prasad CS

ಜಿಕ್ಸುನ್ ನಿಂದ ಬರ್ಹಾಸ್ ಖಾದಿ

ಜಿಕ್ಸುನ್ ನಿಂದ ಬರ್ಹಾಸ್ ಖಾದಿ

ಝಾಕಾಕ್ಕೆ 3.5 ಕಿಮೀ ಮಾರ್ಗವು ರೂಪಿನ್ ಪಾಸ್ ನ ಅತ್ಯಂತ ಸುಂದರವಾದ ಶ್ರೇಣಿ ಎಂದು ಪರಿಗಣಿಸಲಾಗಿದೆ. ಇದು ದೇವದಾರು ಮತ್ತು ವಾಲ್ನಟ್ನ ಮರಗಳಿಂದ ಕೂಡಿದ ಕಾಡುಗಳೊಂದಿಗೆ ಸುತ್ತುವರಿಯಲ್ಪಟ್ಟಿದೆ. ಜಾಕಾವು ಚಾರಣ ಮಾಡಬಹುದಾದ ಕೊನೆಯ ಹಳ್ಳಿಯಾಗಿದೆ.

ಫರ್ ಕಾಡುಗಳ ಇಳಿಜಾರಿನಲ್ಲಿ ನೀವು ಎತ್ತರದ ಪೈನ್ ಮತ್ತು ಸೇಬು ಹಣ್ಣುಗಳ ಮರಗಳನ್ನು ನೋಡಬಹುದು. ನಂತರ ನೀವು ಮಂಜಿನ ಬಿಳಿ ಹಾಸಿಗೆಯನ್ನು ಕಾಣುವಿರಿ. ಮುಂದಕ್ಕೆ ಹೋಗುವಾಗ ಇನ್ನೊಂದು ಕಾಡನ್ನು ಕಾಣಬಹುದು ಇದು ನಿಮ್ಮ ಆತ್ಮವನ್ನು ಸಂಪೂರ್ಣವಾಗಿ ತುಂಬಿಕೊಳ್ಳಬಹುದಾದ ಒಂದು ಆಕರ್ಷಕ ನೋಟವನ್ನು ನೀಡುತ್ತದೆ - ಇದು ವಿವಿಧ ಬಣ್ಣಗಳ ರೋಡೋಡೆನ್ಡ್ರನ್ ಮರಗಳಿಂದ ತುಂಬಿದ ಅರಣ್ಯಪ್ರದೇಶವಾಗಿದೆ. ಕ್ಯಾಂಪ್-ಬರ್ಹನ್ಸ್ ಕಂಡಿಗ (10,100 ಅಡಿ) ಮುಂದಿನ ನಿಲ್ದಾಣವಾಗಿದೆ. ಇದು ಅತ್ಯುತ್ತಮ ಸ್ಥಳವಾಗಿದ್ದು ಇಲ್ಲಿಯ ಹುಲ್ಲುಗಾವಲುಗಳಲ್ಲಿ ಹಸುಗಳು ಮೇಯುವುದನ್ನು ನೋಡುವ ಒಂದು ಅತ್ಯುತ್ತಮವಾದ ದೃಶ್ಯವಾಗಿದೆ!

PC: Unknown

ಉದಕ್ನಾಲ್ ನಿಂದ ಧಂದೇರಸ್ ತಾಚ್ (ಲೋವರ್ ವಾಟರ್ ಫಾಲ್ ಕ್ಯಾಂಪ್)

ಉದಕ್ನಾಲ್ ನಿಂದ ಧಂದೇರಸ್ ತಾಚ್ (ಲೋವರ್ ವಾಟರ್ ಫಾಲ್ ಕ್ಯಾಂಪ್)

ರೂಪಿನ್ ಪಾಸ್ ಟ್ರಕ್ಕಿಂಗ್ ಅನ್ವೇಷಣೆಯ ಎಲ್ಲಕ್ಕಿಂತ ಒಂದು ಉತ್ತಮವಾದ ಟ್ರಕ್ಕಿಂಗ್ ಜಾಗ ಇದಾಗಿದೆ. ನೀವು ಅಲಂಕೃತವಾದ ರೊಡೊಡೆಂಡ್ರನ್ ನಿಂದ ಹಾದು ಹೋಗುವ ದಾರಿಯಲ್ಲಿ ಸರುವಾಸ್ ತಾಚ್ ಪ್ರಾರಂಭವಾಗುತ್ತದೆ. ಇದು ಶಾಶ್ವತವಾಗಿ ನಿಮ್ಮ ಹೃದಯದಲ್ಲಿ ಉಳಿಯುವಂತಹ ದೃಶ್ಯವಾಗಿದೆ. ರೂಪಿನ್ ಒಂದು ಗಲ್ಲಿಯ ಮೂಲಕ ಹೊರ ಹೊಮ್ಮುತ್ತದೆ ಮತ್ತು ಈ ಪ್ರದೇಶದಲ್ಲಿ ನದಿಯೊಂದಿಗೆ ವಿಲೀನಗೊಳ್ಳುತ್ತದೆ.

ಇಲ್ಲಿ ಮಹಾಗ್ರಂಥವಾದ ರಾಮಾಯಣವನ್ನು ಬರೆಯಲು ಉಪಯೋಗಿಸಲಾದ ಭೋಜ್ ಎಲೆಗಳನ್ನು ಕಾಣಬಹುದು. ಕಿರಿದಾದ ಹಿಮ ಸೇತುವೆಯ ಮೂಲಕ ನೀವು ಪ್ರಯಾಣಿಸಿದ ನಂತರ, ಎದ್ದುಕಾಣುವ ಬಹುವರ್ಣದ ಹೂವುಗಳ ರಾಶಿಯೊಂದಿಗೆ ಹುಲ್ಲುಗಾವಲಿನ ಪ್ರದೇಶವು ಕಂಡುಬರುತ್ತದೆ. ಎಲ್ಲಕ್ಕಿಂತ ದೊಡ್ಡದಾದ ಹಿಮ ಸೇತುವೆಯನ್ನು ಹತ್ತಿದ ನಂತರ ಬರುವುದೇ ದಂದೇರಸ್ ಥಾಚ್ (11,700 ಫೀಟ್).

PC: Ssteaj

ದಂದೇರಸ್ ಥಾದ್ ನಿಂದ ಮೇಲ್ ಜಲಪಾತಕ್ಕೆ

ದಂದೇರಸ್ ಥಾದ್ ನಿಂದ ಮೇಲ್ ಜಲಪಾತಕ್ಕೆ

ಮುಂದಕ್ಕೆ ಹೋಗುತ್ತಿದ್ದಂತೆ ಕೆಲವು ದೃಶ್ಯಗಳನ್ನು ಕಾಣುವಿರಿ. ಇಲ್ಲಿ ನಿಮ್ಮ ಸಮಯವನ್ನು ಹುಲ್ಲುಗಾವಲು ಮತ್ತು ಹಳದಿ ಬಣ್ಣದಿಂದ ಮ್ಯಾರಿಗೋಲ್ಡ್ ಹೂವಿನ ಪ್ರದೇಶವನ್ನು ನೋಡಲು ಕಳೆಯಬಹುದು. ನಿಮ್ಮ ವಾಕಿಂಗ್ ಹಿಮ ಸೇತುವೆಯನ್ನು ತಲುಪುವವರೆಗೆ ಮುಂದುವರೆಯುತ್ತದೆ ಇಲ್ಲಿಂದ ನೀವು ಜಲಪಾತಗಳು ಆಕಾಶದಿಂದ ಬೀಳುತ್ತಿವೆಯೋ ಎಂಬಂತೆ ಅಷ್ಟು ಎತ್ತರದಿಂದ ಬೀಳುವುದನ್ನು ಕಾಣಬಹುದು. ಮತ್ತು ಕೆಳಗೆ ಬೀಳುತ್ತ ಎಲ್ಲೋ ಸೇತುವೆಯ ಅಡಿಯಿಂದ ಮಾಯವಾಗುತ್ತವೆ. ರೂಪಿನ್ ಇನ್ನೊಂದು ಬದಿಯಲ್ಲಿ ಕಡಿದಾದ ಇಳಿಜಾರು ನಂತರ, ನೀವು ಅಪ್ಪರ್ ಜಲಪಾತದ 13,100 ಅಡಿಗಳಷ್ಟು ಎತ್ತರದ ಕ್ಯಾಂಪ್ಸೈಟ್ ಅನ್ನು ತಲುಪುತ್ತೀರಿ.

PC: Boykat

ಮೇಲ್ ಜಲಪಾತ- ರತಿಫೇರಿ -ರುಪಿನ್ ಪಾಸ್- ರೋಂತಿ ಗಡ್

ಮೇಲ್ ಜಲಪಾತ- ರತಿಫೇರಿ -ರುಪಿನ್ ಪಾಸ್- ರೋಂತಿ ಗಡ್

ನಿಕಿಟಾಪಾರ್ವಾನಿ ರುಪಿನ್ ಪಾಸ್ನ ಹಾದಿಯಲ್ಲಿದ್ದು ಅನಿರೀಕ್ಷಿತವಾಗಿ ಮೇಲಿನಿಂದ ಬೀಳುವ ಸಡಿಲವಾದ ಕಲ್ಲುಗಳ ಅಪಾಯವನ್ನು ಒಳಗೊಂಡಿದೆ. ರೂಪಿನ್ ಪಾಸ್ ಬೆಟ್ಟದ ಕೆಳಭಾಗದಲ್ಲಿದ್ದು ಇಲ್ಲಿಂದ ದೌಲಾಧರ್ ಶ್ರೇಣಿಯು ಪ್ರಾರಂಭವಾಗುತ್ತದೆ ಮತ್ತು ಸಾಂಗ್ಲಾ ಕಂಡಾ ಮೊದಲ ಬಾರಿಗೆ ಇಲ್ಲಿ ಕಾಣುತ್ತದೆ.

ಈಗ ನೀವು 15,350 ಫೀಟ್ ನಷ್ಟು ಎತ್ತರದ ಶೃಂಗವನ್ನು ತಲುಪಿದ್ದೀರಿ. ಹಿಮದಿಂದ ಸ್ವಲ್ಪ ಕೆಳಗೆ ಇಳಿದರೆ ರುಕ್ತಿಗಡ್ ಅನ್ನು ತಲುಪಿವಿರಿ. ತೀಕ್ಷ್ಣ ವಾದ ಮತ್ತು ಶಿಸ್ತಿನ ಪ್ರದೇಶವೇ ರೊಂತಿ ಗಡ್. ಇಲ್ಲಿನ ಹಿಮದಿಂದ ಆವೃತವಾದ ಪ್ರದೇಶದಲ್ಲಿ ನಿಮ್ಮ ಕೊನೆಯ ಕ್ಯಾಂಪ್ಸೈಟ್ ಆಗಿರುವುದರಿಂದ ಇಲ್ಲಿ ನಿಮ್ಮ ಕ್ಯಾಂಪ್ ಹೂಡಿ.


PC: Nikitaparwani


ರೊಂತಿ ಗಡ್ ನಿಂದ ಸಾಂಗ್ಲಾ ಅಲ್ಲಿಂದ ಸಾಂಗ್ಲಾ ಕಾಂಡ

ರೊಂತಿ ಗಡ್ ನಿಂದ ಸಾಂಗ್ಲಾ ಅಲ್ಲಿಂದ ಸಾಂಗ್ಲಾ ಕಾಂಡ

ಸಾಂಗ್ಲಾ ಕಂಡಾ ಕಡೆಗೆ ಇಳಿಯುವಾಗ ಎತ್ತರವು ತೀವ್ರವಾಗಿ ಇಳಿಯುತ್ತದೆ. ಈ ಜಾಡು ಒಂದು ಸೌಮ್ಯವಾದ ಆರೋಹಣದಿಂದ ಪ್ರಾರಂಭವಾಗುತ್ತದೆ. ಮತ್ತು ಹೋಗುತ್ತಿದ್ದಂದತೆಯೇ ನಿಮ್ಮ ಹೆಜ್ಜೆಯನ್ನು ರೋಂತಿ ಗಡ್ ನ ಕಣಿವೆಗಳಲ್ಲಿ ಇಡುತ್ತೀರಿ.1,500 ಫೀಟ್ ಎತ್ತರದಿಂದ ಕೆಳಗೆ ಹಾದು ಹೋಗುತ್ತಿದ್ದಂತೆ ರುಪಿನ್ ಪಾಸ್ ನಿಮ್ಮಿಂದ ಕಣ್ಮರೆಯಾಗುತ್ತಾ ಹೋಗುತ್ತದೆ. ಮೌಂಟ್ ಕಿನ್ನರ್ ಕೈಲಾಶ್ ನ ಪ್ರಶಾಂತವಾದ ನೋಟವು ನಿಮ್ಮನ್ನು ಸ್ವಾಗತಿಸುತ್ತದೆ.

ಈ ಹಂತದಿಂದ, ನಿಮ್ಮ ಮುಂದಿನ ನಿಲುಗಡೆಯನ್ನು ನೋಡಬಹುದು, ಅಂದರೆ, ಸಾಂಗ್ಲಾ ಕಂಡದ ಸರೋವರ. ಇಲ್ಲಿನ ಹಳ್ಳಿಗರು ಮತ್ತು ಸರೋವರಗಳ ಗಮನಾರ್ಹ ನೋಟವನ್ನು ಕಾಣಲು ನಿಮ್ಮ ಹೆಜ್ಜೆಯನ್ನು ಸ್ವಲ್ಪ ಇಲ್ಲಿ ನಿಧಾನಗೊಳಿಸಿ . ಸಾಂಗ್ಲಾವನ್ನು ತಲುಪಲು ಇಲ್ಲಿ ಅನೇಕ ದಾರಿಗಳಿವೆ. ಅವುಗಳಲ್ಲಿ ನೀಲಿ ಪೈನ್ ಕಾಡುಗಳಿಂದ ಹಾದು ಹೋಗುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಿ. ಒಮ್ಮೆ ಸಾಂಗ್ಲಾವನ್ನು ತಲುಪಿದ ನಂತರ , ವಾಹನಗಳು ಅಥವಾ ಬಸ್ ಮಾಡುವ ಮೂಲಕ ಶಿಮ್ಲಾ ಕಡೆಗೆ ಹೋಗಿ.

PC: Sushanthunt

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ