ರುದ್ರ ಧ್ಯಾನ ಗುಹೆ : ಕೇದಾರನಾಥ
ರುದ್ರ ಗುಹೆಯು ಇನ್ನಿತರ ಗುಹೆಗಳಂತೆ ಒಂದಾಗಿದೆ ಎಂದು ನೀವು ಭಾವಿಸುತ್ತಿರುವಿರಾದರೆ ಅಥವಾ ಗುಹೆ ಎಂದ ಕೂಡಲೇ ಸಾಮಾನ್ಯವಾಗಿ ಫಕೀರರು ಮತ್ತು ಸನ್ಯಾಸಿಗಳು ಧ್ಯಾನ ಮಾಡುವುದನ್ನು ನೀವು ಚಿತ್ರಿಸುವುದಾದಲ್ಲಿ ಅದು ನಿಮ್ಮ ತಪ್ಪು ಕಲ್ಪನೆ! ಈ ಸ್ಥಳವನ್ನು ಗರ್ವಾಲ್ ಮಂಡಲ್ ವಿಕಾಸ್ ನಿಗಮ್ (ಜಿ ಎಮ್ ವಿ ಎನ್) ಅವರು 'ಆಧುನಿಕ ಧ್ಯಾನ ಗುಹೆ' ಎಂದು ನಿರ್ವಹಿಸುತ್ತಿದ್ದು ನಡೆಸುತ್ತಿದ್ದಾರೆ. ಕೇದಾರನಾಥ ದೇವಾಲಯದಿಂದ ಕೇವಲ ಒಂದು ಕಿಲೋಮೀಟರ್. ದೂರದಲ್ಲಿರುವ ಈ ಗುಹೆಯು ಬದರಿನಾಥ್ ಮತ್ತು ಕೇದಾರನಾಥ ದೇವಾಲಯಗಳಿಗೆ ಎದುರಾಗಿ ನೆಲೆಗೊಂಡಿದೆ ಮತ್ತು ಅದರ ಪ್ರವೇಶದ್ವಾರದಲ್ಲಿ ಮರದ ಬಾಗಿಲನ್ನು ಹೊಂದಿದ್ದರೂ, ಕಲ್ಲುಗಳಿಂದ ಮಾಡಿದ ಸಂಪೂರ್ಣ ನೈಸರ್ಗಿಕ ಸ್ಥಳವಾಗಿದೆ.
ಕೇದಾರನಾಥದಿಂದ ರುದ್ರ ಗುಹೆಯನ್ನು ಸುಲಭವಾಗಿ ಒಂದು ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ ತಲುಪಬಹುದಾಗಿದೆ. ಕೇದಾರನಾಥದ ಈ ಪವಿತ್ರ ಪಟ್ಟಣವು ಉತ್ತರಭಾರತದಲ್ಲಿ ಹಲವಾರು ನಗರಗಳು ಮತ್ತು ಪಟ್ಟಣಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

ಕೇದಾರನಾಥಗೆ ಹೋಗುವುದು ಹೇಗೆ?
ವಿಮಾನದ ಮೂಲಕ : ಕೇದಾರನಾಥಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಅದು ಜೋಲಿ ಗ್ರಾಂಟ್ ವಿಮಾನ ನಿಲ್ದಾಣವಾಗಿದ್ದು ಇದು ಕೇದಾರನಾಥದಿಂದ ಸುಮಾರು 240 ಕಿ.ಮೀ ದೂರದಲ್ಲಿದೆ. ದೆಹಲಿಗೆ ದೈನಂದಿನ ವಿಮಾನಗಳು ಲಭ್ಯವಿವೆ ಆದರೆ ವಿಮಾನ ನಿಲ್ದಾಣವು ಗೌರಿಕುಂಡ್‌ಗೆ ಹೋಗುವ ಉತ್ತಮ ಮೋಟಾರು ರಸ್ತೆಯನ್ನು ಹೊಂದಿದೆ. ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಮತ್ತು ಗೌರಿಕುಂಡ್ ನಡುವೆ ಟ್ಯಾಕ್ಸಿಗಳು ಲಭ್ಯವಿದೆ.
ರೈಲಿನ ಮೂಲಕ: ರೈಲಿನ ಮೂಲಕ: ಋಷಿಕೇಶವು ರಾ. ಹೆ58 ನಲ್ಲಿ 216 ಕಿಮೀ ದೂರದಲ್ಲಿರುವ ಹತ್ತಿರದ ರೈಲು ನಿಲ್ದಾಣವಾಗಿದೆ. ಇಲ್ಲಿಂದ ಹೆಚ್ಚಿನ ಭಾರತೀಯ ಸ್ಥಳಗಳಿಗೆ ಆಗಾಗ್ಗೆ ರೈಲು ಸೇವೆಗಳು ಲಭ್ಯವಿವೆ. ಗೌರಿಕುಂಡ್ ಮತ್ತು ಋಷಿಕೇಶವು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ, ದೈನಂದಿನ ಬಸ್ಸುಗಳು ಮತ್ತು ಟ್ಯಾಕ್ಸಿ ಸೇವೆಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ.
ರಸ್ತೆಯ ಮೂಲಕ: ಗೌರಿಕುಂಡ್ ಕೇದಾರನಾಥಕ್ಕೆ ಹೋಗುವ ಮಾರ್ಗದಲ್ಲಿ ಕೊನೆಯ ವಾಹನದಲ್ಲಿ ಹೋಗಬಹುದಾದ ಸ್ಥಳವಾಗಿದೆ ನಂತರ 14 ಕಿಮೀ ಚಾರಣವನ್ನು ಕೈಗೊಳ್ಳಬೇಕಾಗಿದೆ. ಗೌರಿಕುಂಡ್ ರಾಜ್ಯದ ಹಲವಾರು ಪ್ರಮುಖ ಸ್ಥಳಗಳಿಗೆ ಮತ್ತು ಉತ್ತರದ ಇತರ ಭಾಗಗಳಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಶ್ರೀನಗರ ಮತ್ತು ಹೃಷಿಕೇಶಕ್ಕೆ ಬಸ್ ಸೇವೆಗಳು ಲಭ್ಯವಿದ್ದು, ಚಮೋಲಿ, ಉತ್ತರಕಾಶಿ, ಹರಿದ್ವಾರ ಮತ್ತು ಡೆಹ್ರಾಡೂನ್‌ನಂತಹ ಇತರ ಪ್ರಮುಖ ಸ್ಥಳಗಳಿಗೆ ಟ್ಯಾಕ್ಸಿಗಳನ್ನು ಸುಲಭವಾಗಿ ಪಡೆಯಬಹುದು.
ಕಷ್ಟಕರವಾದ ಹದಿನಾಲ್ಕು ಕಿಲೋಮೀಟರ್ ದೂರದ ಚಾರಣವನ್ನು ತಪ್ಪಿಸಬೇಕೆಂದಾದಲ್ಲಿ ಹೆಲಿಕಾಪ್ಟರ್ ಸೇವೆಯೂ ಕೇದಾರನಾಥಕ್ಕೆ ಈ ಪ್ರದೇಶದಲ್ಲಿರುವ ಹಲವಾರು ಹೆಲಿಪ್ಯಾಡ್ ಗಳು ಒದಗಿಸುತ್ತವೆ.
ಅತ್ಯಂತ ಉತ್ತಮ ಹಾಗೂ ಆಧುನಿಕ ಸೌಲಭ್ಯಗಳನ್ನು ಪಡೆಯಿರಿ
ರುದ್ರ ಗುಫಾವನ್ನು ಪ್ರವಾಸಿಗರಿಗೆ 'ಆಧುನಿಕ ಧ್ಯಾನ ಗುಹೆ' ಎಂದು ಪ್ರಸ್ತುತಪಡಿಸಲಾಗಿದೆ ಎಂಬ ಅಂಶವನ್ನು ಪರಿಗಣಿಸಿ, ಆಧುನಿಕ ಸೌಕರ್ಯಗಳ ಬಗ್ಗೆ ಖಂಡಿತವಾಗಿಯೂ ಇಲ್ಲಿ ಕೇಳಿರದ ವಿಷಯವಲ್ಲ, ಆದರೂ ಈ ಸ್ಥಳವು ಸಂಪೂರ್ಣವಾಗಿ ಪ್ರತ್ಯೇಕ ಪ್ರದೇಶದಲ್ಲಿದೆ. ಅತಿಥಿಯಾಗಿ, ನಿಮಗೆ ಕುಡಿಯುವ ನೀರು ಮತ್ತು ವಿದ್ಯುತ್ ಅನ್ನು ಒದಗಿಸಲಾಗುತ್ತದೆ ಮತ್ತು ಗುಹೆಯೊಳಗೆ ಹೀಟರ್ ಮತ್ತು ಲಗತ್ತಿಸಲಾದ ಟಾಯ್ಲೆಟ್ ಕೂಡ ಇರುತ್ತದೆ.
ಬೆಳಿಗ್ಗೆ ಮತ್ತು ಸಂಜೆ ಚಹಾ ಮತ್ತು ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಸೇರಿದಂತೆ ದಿನವಿಡೀ ಆಹಾರವನ್ನು ನೀಡಲಾಗುತ್ತದೆ. ಈ ಊಟವನ್ನು ಒದಗಿಸಲು ಒಂದು ನಿರ್ದಿಷ್ಟ ವೇಳಾಪಟ್ಟಿ ಇದ್ದರೂ, ನಿಮ್ಮ ಆದ್ಯತೆಗೆ ತಕ್ಕಂತೆ ನೀವು ಅವುಗಳನ್ನು ಬದಲಾಯಿಸಬಹುದು.

ಇಲ್ಲಿಯ ವಾಸ್ತವ್ಯಕ್ಕೆ ಎಷ್ಟು ವೆಚ್ಚವಾಗಬಹುದು
ಗುಹೆಯಲ್ಲಿ ಉಳಿಯಲು ಜಿಎಮ್ ವಿ ಎನ್ ಪೋರ್ಟಲ್‌ನಿಂದ ಆನ್‌ಲೈನ್‌ನಲ್ಲಿ ಮಾತ್ರ ಬುಕ್ ಮಾಡಬಹುದು ಮತ್ತು ಒಂದು ದಿನಕ್ಕೆ 990 ರೂಪಾಯಿ ವೆಚ್ಚವಾಗುತ್ತದೆ. ಆರಂಭದಲ್ಲಿ, ದರವು ತುಂಬಾ ಹೆಚ್ಚಿತ್ತು (3000 ರೂಪಾಯಿಗಳು) ಆದರೆ ಇತ್ತೀಚೆಗೆ ಪರಿಷ್ಕರಿಸಲಾಗಿದೆ ಮತ್ತು ಈ ಮೊತ್ತಕ್ಕೆ ಇಳಿಸಲಾಗಿದೆ. ಪ್ರಧಾನಿ ಮೋದಿಯವರ ಭೇಟಿಯ ನಂತರ ಮಾಧ್ಯಮಗಳ ಪ್ರಸಾರದಿಂದಾಗಿ ಆಸಕ್ತಿಯಲ್ಲಿ ಹೆಚ್ಚಳ ಕಂಡುಬಂದಿದೆಯಾದರೂ, ಅತ್ಯಂತ ತಂಪಾದ ತಾಪಮಾನದ ಕಾರಣದಿಂದಾಗಿ ಕೆಲವೇ ಕೆಲವು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಲು ಬಯಸುತ್ತಾರೆ.
ನಿಮಗೆ ಗೊತ್ತಿರಬೇಕಾದ ನಿಯಮಗಳು
ಈ ಗುಹೆಯ ಆರಂಭಿಕ ಹಂಚಿಕೆ ಕನಿಷ್ಠ ಮೂರು ದಿನಗಳ ಕಾಲ ನಡೆಯುತ್ತದೆ. ಇಲ್ಲಿ ಇರಬಯಸುವವರು ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಾಗುತ್ತದೆ ಇದಕ್ಕಾಗಿ ಬುಕ್ಕಿಂಗ್‌ನ ನಿಗದಿತ ದಿನಾಂಕಕ್ಕಿಂತ ಒಂದೆರಡು ದಿನಗಳ ಮೊದಲು ಜಿ ಎಮ್ ವಿ ಎನ್ ನ ಗುಪ್ತಕಾಶಿ ಕಚೇರಿಯಲ್ಲಿ ವರದಿ ಮಾಡಬೇಕಾಗುತ್ತದೆ. ದೈಹಿಕವಾಗಿ ಸದೃಢ ಮತ್ತು ವೈದ್ಯಕೀಯವಾಗಿ ಸದೃಢರಾಗಿರುವ ವ್ಯಕ್ತಿಯನ್ನು ಇಲ್ಲಿ ಉಳಿಯಲು ಅನುಮತಿಸಲಾಗುತ್ತದೆ.
ಗುಹೆಯೊಳಗೆ ಯಾವುದೇ ನೀಡಲಾದ ಸಮಯದಲ್ಲಿ ಒಬ್ಬ ವ್ಯಕ್ತಿಯನ್ನು ಮಾತ್ರ ಅನುಮತಿಸಲಾಗುತ್ತದೆ. ರದ್ದತಿಗೆ ಕಾರಣವನ್ನು ಲೆಕ್ಕಿಸದೆ, ವ್ಯಕ್ತಿಯು ರದ್ದುಗೊಳಿಸಲು ಆಯ್ಕೆಮಾಡಿದರೂ ಸಹ, ಬುಕಿಂಗ್ ಅನ್ನು ದೃಢೀಕರಿಸಿದ ನಂತರ ಮರುಪಾವತಿಯನ್ನು ಒದಗಿಸಲಾಗುವುದಿಲ್ಲ.
ನೀವು ಅನುಸರಿಸಬೇಕಾದ ಕೆಲವು ಮಾಡಬೇಕಾದ ಮತ್ತು ಮಾಡಬಾರದು ಎನ್ನುವಂತಹ ವಿಷಯಗಳು
ನೀವು ಇಲ್ಲಿಗೆ ಒಳಗೆ ಹೋಗುವ ಸಮಯದಲ್ಲಿ ನಿಮ್ಮ ಎರಡು ಫೋಟೋ ಐಡಿಯನ್ನು ಕಡ್ಡಾಯವಾಗಿ ಒದಗಿಸುವ ಅಗತ್ಯವಿರುತ್ತದೆ. 12 ಮಧ್ಯಾಹ್ನ ಹೊರಗೆ ಬಿಡುವ ಸಮಯವಾಗಿರುತ್ತದೆ
ನಿಮ್ಮ ಕೊಠಡಿಯಿಂದ ಹೊರಗೆ ಹೋಗುವ ಸಮಯದಲ್ಲಿ ನೀವು ಹೀಟರ್, ಗೀಸರ್, ಫ಼್ಯಾನ್ , ಲೈಟ್ ಗಳನ್ನು ಆರಿಸಬೇಕು ಮತ್ತು ಬಾಗಿಲನ್ನು ಹಾಕಬೇಕು. ನೀವು ತಂಗಿರುವ ಕೊಠಡಿಗಳಲ್ಲಿ ಅಮೂಲ್ಯವಸ್ತುಗಳನ್ನು ಇರಿಸುವುದನ್ನು ಆದಷ್ಟು ತಪ್ಪಿಸಿ ನೀವೇನಾದರೂ ಕಳೆದುಕೊಂಡಲ್ಲಿ ಹೋಟೇಲಿನವರು ಜವಾಬ್ದಾರರಾಗಿರುವುದಿಲ್ಲ.
ಆವರಣದಲ್ಲಿ ಮದ್ಯ ಸೇವನೆ, ಧೂಮಪಾನ ಮತ್ತು ಸಾಕುಪ್ರಾಣಿಗಳನ್ನು ನಿಷೇಧಿಸಲಾಗಿದೆ.
ಯಾವುದೇ ಪ್ರಶ್ನೆಗಳಿದ್ದಲ್ಲಿ, ರಿಸೆಪ್ಷನ್ ನಲ್ಲಿ ವಿಚಾರಿಸಬಹುದಾಗಿದೆ.


Click it and Unblock the Notifications

















