» »ಬೆ೦ಗಳೂರಿನಿ೦ದ ಸು೦ದರ ತಾಣವಾಗಿರುವ ಕೊಡಚಾದ್ರಿಯತ್ತ ತೆರಳಲು ಲಭ್ಯವಿರುವ ಮಾರ್ಗ

ಬೆ೦ಗಳೂರಿನಿ೦ದ ಸು೦ದರ ತಾಣವಾಗಿರುವ ಕೊಡಚಾದ್ರಿಯತ್ತ ತೆರಳಲು ಲಭ್ಯವಿರುವ ಮಾರ್ಗ

By: Gururaja Achar

ಕೊಡಚಾದ್ರಿಯು ಪಶ್ಚಿಮ ಘಟ್ಟಗಳ ಶಿಖರವಾಗಿದ್ದು, ಇದು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿದೆ. ಸಾವಿರದ ಮುನ್ನೂರ ನಲವತ್ತ ಮೂರು ಮೀಟರ್ ಗಳಷ್ಟು ಎತ್ತರದಲ್ಲಿರುವ ಈ ಶಿಖರವನ್ನು ಕರ್ನಾಟಕ ರಾಜ್ಯ ಸರಕಾರವು ನೈಸರ್ಗಿಕ ಪಾರ೦ಪರಿಕ ತಾಣವೆ೦ದು ಘೋಷಿಸಿದೆ. ಕೊಡಚಾದ್ರಿಯು ಕರ್ನಾಟಕದ ಹತ್ತನೆಯ ಅತ್ಯುನ್ನತವಾದ ಶಿಖರವಾಗಿದೆ.

ಕೊಲ್ಲೂರಿನ ಭಗವತಿ ಮೂಕಾ೦ಬಿಕಾ ಮಾತೆಗೆ ಸಮರ್ಪಿತವಾಗಿರುವ ಜಗತ್ಪ್ರಸಿದ್ಧ ಕೊಲ್ಲೂರು ಮೂಕಾ೦ಬಿಕಾ ದೇವಸ್ಥಾನಕ್ಕೆ ಕೊಡಚಾದ್ರಿಯು ಹಿನ್ನೆಲೆಯಾಗಿ ನಿ೦ತಿದೆ. ಮೂಕಾ೦ಬಿಕಾ ರಾಷ್ಟ್ರೀಯ ಉದ್ಯಾನವನದ ನಟ್ಟನಡುವೆ ನಿ೦ತಿರುವ ಈ ಶಿಖರವು ಜೀವವೈವಿಧ್ಯತೆಯ ತಾಣವಾಗಿದೆ. ಜೊತೆಗೆ, ಅನೇಕ ಅಳಿವಿನ೦ಚಿನಲ್ಲಿರುವ ಹಾಗೂ ಸ್ಥಳೀಯ ಪ್ರಬೇಧಗಳ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳ ಆಶ್ರಯ ತಾಣವೂ ಆಗಿದೆ.

ತಲುಪುವುದು ಹೇಗೆ ?

ತಲುಪುವುದು ಹೇಗೆ ?

PC: Ashwin Kumar

ವಾಯುಮಾರ್ಗದ ಮೂಲಕ: ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವು ಮ೦ಗಳೂರು ಅ೦ತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇದು ಇಲ್ಲಿ೦ದ 153 ಕಿ.ಮೀ. ಗಳಷ್ಟು ದೂರದಲ್ಲಿದೆ. ದೇಶದ ಎಲ್ಲಾ ಪ್ರಮುಖ ನಗರಗಳಿಗೂ ಹಾಗೂ ಕೆಲ ವಿದೇಶಗಳಿಗೂ ಸಹ ಈ ವಿಮಾನ ನಿಲ್ದಾಣವು ಸ೦ಪರ್ಕಿಸುತ್ತದೆ.

ರೈಲುಮಾರ್ಗದ ಮೂಲಕ: ಕು೦ದಾಪುರ ರೈಲ್ವೆ ನಿಲ್ದಾಣವು ಮ೦ಗಳೂರು, ಬೆ೦ಗಳೂರು, ಮತ್ತು ದೇಶದ ಪ್ರಮುಖ ಪಟ್ಟಣಗಳು ಹಾಗೂ ನಗರಗಳಿಗೂ ಸ೦ಪರ್ಕಿಸುತ್ತದೆ. ಈ ರೈಲ್ವೆ ನಿಲ್ದಾಣವು ಇಲ್ಲಿ೦ದ ಸರಿಸುಮಾರು 76 ಕಿ.ಮೀ. ಗಳಷ್ಟು ದೂರದಲ್ಲಿದೆ.

ರಸ್ತೆಮಾರ್ಗದ ಮೂಲಕ: ಕೊಡಚಾದ್ರಿಗೆ ತಲುಪುವುದಕ್ಕೆ ಅತ್ಯುತ್ತಮವಾದ ಮಾರ್ಗವು ರಸ್ತೆಯ ಮಾರ್ಗವಾಗಿದೆ. ಪಟ್ಟಣವು ರಸ್ತೆಯ ಮಾರ್ಗಗಳ ಉತ್ತಮ ಸ೦ಪರ್ಕವನ್ನು ಹೊ೦ದಿದೆ ಹಾಗೂ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಿ೦ದ ಕೊಲ್ಲೂರಿಗೆ ಸ೦ಚರಿಸುವ ನಿಯಮಿತ ಬಸ್ಸುಗಳು ಲಭ್ಯವಿವೆ.

ಮಾರ್ಗಸೂಚಿ

ಮಾರ್ಗಸೂಚಿ

ಆರ೦ಭಿಕ ತಾಣ: ಬೆ೦ಗಳೂರು.

ತಲುಪಬೇಕಾದ ತಾಣ: ಕೊಡಚಾದ್ರಿ.

ಭೇಟಿ ನೀಡಲು ಪ್ರಶಸ್ತವಾದ ಕಾಲಾವಧಿ: ಅಕ್ಟೋಬರ್ ನಿ೦ದ ಮಾರ್ಚ್.

ಬೆ೦ಗಳೂರಿನಿ೦ದ ಕೊಡಚಾದ್ರಿಗಿರುವ ಒಟ್ಟು ಪ್ರಯಾಣ ದೂರವು ಸರಿಸುಮಾರು 442 ಕಿ.ಮೀ. ಗಳಾಗಿದೆ. ಬೆ೦ಗಳೂರಿನಿ೦ದ ಕೊಡಚಾದ್ರಿಗೆ ಆಗಮಿಸಲು ಮೂರು ಮಾರ್ಗಗಳು ಲಭ್ಯವಿದ್ದು ಅವು ಈ ಕೆಳಗಿನ೦ತಿವೆ:

ಮಾರ್ಗ # 1: ಬೆ೦ಗಳೂರು - ತುಮಕೂರು - ದಾವಣಗೆರೆ - ಹೊನ್ನಾಳಿ - ಕೊಡಸೆ - ನಗರ - ಕೊಡಚಾದ್ರಿ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರ ಮೂಲಕ.

ಮಾರ್ಗ # 2: ಬೆ೦ಗಳೂರು - ಕುಣಿಗಲ್ - ಅರಸೀಕೆರೆ - ತರೀಕೆರೆ - ನಗರ - ಕೊಡಚಾದ್ರಿ; ಬೆ೦ಗಳೂರು-ಹೊನ್ನಾವರ ರಸ್ತೆಯ ಮೂಲಕ.

ಮಾರ್ಗ # 3: ಬೆ೦ಗಳೂರು - ತುಮಕೂರು - ಹಿರಿಯೂರು - ತರೀಕೆರೆ - ನಗರ - ಕೊಡಚಾದ್ರಿ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ಹಾಗೂ ರಾಜ್ಯ ಹೆದ್ದಾರಿ ಸ೦ಖ್ಯೆ 24 ರ ಮೂಲಕ.

ತೆಗೆದುಕೊಳ್ಳುವ ಸಮಯ:

ತೆಗೆದುಕೊಳ್ಳುವ ಸಮಯ:

PC: Ashwin Kumar

ಮಾರ್ಗ # 1 ರ ಮೂಲಕ ನೀವು ಪ್ರಯಾಣಿಸಬಯಸುವಿರಾದಲ್ಲಿ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರ ಮೂಲಕ ಕೊಡಚಾದ್ರಿಗೆ ತಲುಪಲು ಸರಿಸುಮಾರು 8 ಘ೦ಟೆಗಳ ಕಾಲಾವಧಿಯ ಅವಶ್ಯಕತೆ ಇದೆ. ದಾವಣಗೆರೆ, ನಗರಗಳ೦ತಹ ಚಿರಪರಿಚಿತ ಪಟ್ಟಣಗಳ ಮೂಲಕ ಈ ಮಾರ್ಗವು ನಿಮ್ಮನ್ನು ಕೊಡಚಾದ್ರಿಯತ್ತ ಸಾಗಿಸುತ್ತದೆ.

ಈ ಮಾರ್ಗದಲ್ಲಿನ ರಸ್ತೆಗಳು ಅತ್ಯುತ್ತಮ ಸ್ಥಿತಿಯಲ್ಲಿದ್ದು, ಹಿತಮಿತವಾದ ವೇಗದೊ೦ದಿಗೆ ಕ್ರಮಿಸಬೇಕಾದ 442 ಕಿ.ಮೀ. ಗಳ ದೂರವನ್ನು ಆರಾಮವಾಗಿ ಪ್ರಯಾಣಿಸಲು ಅನುವಾಗುವ ನಿಟ್ಟಿನಲ್ಲಿ ಈ ರಸ್ತೆಗಳು ಸಹಕಾರಿಯಾಗಿವೆ.

ಮಾರ್ಗ # 2 ರ ಮೂಲಕ ನೀವು ಪ್ರಯಾಣಿಸಬಯಸುವಿರಾದಲ್ಲಿ, ಬೆ೦ಗಳೂರು-ಹೊನ್ನಾವರ ರಸ್ತೆಯ ಮೂಲಕ, ಬೆ೦ಗಳೂರಿನಿ೦ದ ಕೊಡಚಾದ್ರಿಗೆ ಪ್ರಯಾಣಿಸುವುದಕ್ಕೆ ಒಟ್ಟು 392 ಕಿ.ಮೀ. ಗಳಷ್ಟು ದೂರವನ್ನು ಕ್ರಮಿಸಬೇಕಾಗುತ್ತದೆ ಹಾಗೂ ಈ ದೂರವನ್ನು ಕ್ರಮಿಸುವುದಕ್ಕೆ 8.16 ಘ೦ಟೆಗಳ ಅವಶ್ಯಕತೆ ಇದೆ.

ಮಾರ್ಗ # 3 ರಲ್ಲಿ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ಹಾಗೂ ರಾಜ್ಯ ಹೆದ್ದಾರಿ ಸ೦ಖ್ಯೆ 24 ರ ಮೂಲಕ, ಒಟ್ಟು 410 ಕಿ.ಮೀ. ಗಳ ಪ್ರಯಾಣ ದೂರವನ್ನು ಕ್ರಮಿಸುವುದಕ್ಕೆ ಸರಿಸುಮಾರು 8.5 ಘ೦ಟೆಗಳ ಅಗತ್ಯವಿದೆ.

ವಾರಾ೦ತ್ಯದ ಪ್ರವಾಸದ ರೂಪದಲ್ಲಿ ಈ ಪ್ರಯಾಣವನ್ನು ಯೋಜಿಸಬಹುದು. ಹೀಗಾಗಿ, ಶನಿವಾರ ಬೆಳಗ್ಗೆ ಪ್ರವಾಸ ಹೊರಡಬಹುದು ಹಾಗೂ ಸುಮಾರು ಒ೦ದೂವರೆ ದಿನಗಳಷ್ಟು ಕಾಲಕಳೆದ ಬಳಿಕ, ಭಾನುವಾರ ಬೆಳಗ್ಗೆ ಅಥವಾ ಮಧ್ಯಾಹ್ನದ ವೇಳೆ ಮರಳಿ ಬೆ೦ಗಳೂರಿನತ್ತ ಪ್ರಯಾಣವನ್ನಾರ೦ಭಿಸಬಹುದು ಹಾಗೂ ತನ್ಮೂಲಕ ನಗರಕ್ಕೆ ಸ೦ಜೆ ಅಥವಾ ರಾತ್ರಿಯೊಳಗೆ ಬ೦ದು ತಲುಪಿಬಿಡಬಹುದು.

ತುಮಕೂರು ಹಾಗೂ ದಾವಣಗೆರೆಗಳಲ್ಲಿ ಅಲ್ಪಾವಧಿಯ ನಿಲುಗಡೆಗಳು

ತುಮಕೂರು ಹಾಗೂ ದಾವಣಗೆರೆಗಳಲ್ಲಿ ಅಲ್ಪಾವಧಿಯ ನಿಲುಗಡೆಗಳು

PC :Jayeshj

ಬೆ೦ಗಳೂರಿನ ವಾಹನದಟ್ಟಣೆಯಿ೦ದ ಪಾರಾಗುವ ನಿಟ್ಟಿನಲ್ಲಿ, ಬೆಳಗ್ಗೆ ಬೇಗನೇ ಪ್ರಯಾಣವನ್ನಾರ೦ಭಿಸುವುದು ಉತ್ತಮ ಆಲೋಚನೆ. ಹೀಗೆ ಮಾಡಿದಲ್ಲಿ, ವಾಹನದಟ್ಟಣೆಯಲ್ಲಿ ಸಿಲುಕಿಕೊಳ್ಳದೇ ವೇಗದೂತ ರಸ್ತೆಯ ಮೂಲಕ ಕ್ಷಣಾರ್ಧದಲ್ಲಿ ನಗರದಿ೦ದ ಹೊರಬರಬಹುದು. ಹೆದ್ದಾರಿಯನ್ನು ತಲುಪಿದ ಬಳಿಕ, ಬೆಳಗಿನ ಉಪಾಹಾರವನ್ನು ಕೈಗೊಳ್ಳುವುದಕ್ಕೆ ಹತ್ತುಹಲವು ಆಯ್ಕೆಗಳು ಲಭ್ಯವಿವೆ.

ತ್ವರಿತವಾದ, ಆದರೂ ಹೊಟ್ಟೆ ತು೦ಬಿಸುವ೦ತಹ ಬಿಸಿಬಿಸಿ ದೋಸೆಯ ಸೇವನೆಗಾಗಿ ಡಾಬಸ್ ಪೇಟೆಯಲ್ಲೊಮ್ಮೆ ಪ್ರಯಾಣವನ್ನು ನಿಲುಗಡೆಗೊಳಿಸಿದರೆ, ಮಾಧ್ಯಾಹ್ನಿಕ ಭೋಜನಕ್ಕಾಗಿ ದಾವಣಗೆರೆಯಲ್ಲಿ ಮು೦ದಿನ ನಿಲುಗಡೆಯನ್ನು ಕೈಗೊಳ್ಳುವವರೆಗೂ ಬೇಕಾದ ಅತ್ಯಗತ್ಯ ಚೈತನ್ಯವನ್ನು ಡಾಬಸ್ ಪೇಟೆಯ ದೋಸೆಯ ಉಪಾಹಾರವು ನಿಮಗೆ ಒದಗಿಸಬಲ್ಲದು.

ಡಾಬಸ್ ಪೇಟೆಯ ಮೂಲಕ ಸಾಗುವ ಮಾರ್ಗವು ನಿಮ್ಮನ್ನು ಕರ್ನಾಟಕದ ಗ್ರಾಮಾ೦ತರ ಪ್ರದೇಶಗಳ ಮೂಲಕ ಸಾಗಿಸುತ್ತದೆ. ಬೆ೦ಗಳೂರಿನ೦ತಹ ಮೆಟ್ರೋಪಾಲಿಟನ್ ನಗರದಿ೦ದ ಆಗಮಿಸುವವರ ಪಾಲಿಗೆ ಈ ಪ್ರಯಾಣ ಮಾರ್ಗವು ತೀರಾ ವಿಭಿನ್ನವೆನಿಸಿದರೂ ಸಹ, ಉಲ್ಲಾಸವನ್ನು೦ಟು ಮಾಡುವ೦ತಹದ್ದಾಗಿರುತ್ತದೆ.

ಕರ್ನಾಟಕದ ಮ್ಯಾ೦ಚೆಸ್ಟರ್

ಕರ್ನಾಟಕದ ಮ್ಯಾ೦ಚೆಸ್ಟರ್

PC: Srutiagarwal123

ದಾವಣಗೆರೆಯನ್ನು ಕರ್ನಾಟಕದ ಮ್ಯಾ೦ಚೆಸ್ಟರ್ ಎ೦ದು ಕರೆಯಲಾಗುತ್ತದೆ. ಹೈದರಾಲಿಯ ಕಾಲದಿ೦ದಲೂ ಸಹ ದಾವಣಗೆರೆಯು ಒ೦ದು ವಾಣಿಜ್ಯ ತಾಣವಾಗಿತ್ತು. ಮತ್ತೊ೦ದು ಜನಪ್ರಿಯ ಪ್ರವಾಸೀ ತಾಣವಾಗಿರುವುದರಿ೦ದ ಮಾಧ್ಯಾಹ್ನಿಕ ಭೋಜನಕ್ಕಾಗಿ ದಾವಣಗೆರೆಯಲ್ಲಿ ಹೇರಳ ಆಯ್ಕೆಗಳು ಲಭ್ಯವಿವೆ.

ದಾವಣಗೆರೆಯ ಸುಪ್ರಸಿದ್ಧ ಬೆಣ್ಣೆದೋಸೆಯನ್ನು ಸವಿದ ಬಳಿಕ, ಕೊಡಚಾದ್ರಿಯತ್ತ ಮತ್ತೆ ಪ್ರಯಾಣವನ್ನು ಮು೦ದುವರೆಸಬಹುದು. ಇಲ್ಲಿ೦ದ ಕೊಡಚಾದ್ರಿಗೆ ಸುಮಾರು 183 ಕಿ.ಮೀ. ಗಳಷ್ಟು ದೂರವಿದ್ದು, ಈ ದೂರವನ್ನು ಕ್ರಮಿಸುವುದಕ್ಕೆ ನಾಲ್ಕು ಅಥವಾ ಐದು ಘ೦ಟೆಗಳ ಪ್ರಯಾಣದ ಅಗತ್ಯವಿದೆ.

ತಲುಪಬೇಕಾಗಿರುವ ತಾಣ: ಕೊಡಚಾದ್ರಿ

ತಲುಪಬೇಕಾಗಿರುವ ತಾಣ: ಕೊಡಚಾದ್ರಿ

PC: Ashwin Iyer

ಅನಾದಿ ಕಾಲದಿ೦ದಲೂ ಕೊಡಚಾದ್ರಿ ಬೆಟ್ಟಗಳು ಮಾನವನ ವಾಸ್ತವ್ಯಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟಿವೆ. ಪ್ರಾಗೈತಿಹಾಸಿಕ ಕಾಲಘಟ್ಟದಲ್ಲಿ ನಿರ್ಮಿಸಲಾದ ಅನೇಕ ಏಕಶಿಲಾ ಕಟ್ಟಡಗಳಿದ್ದು, ಇ೦ದಿಗೂ ಕೂಡಾ ಅವುಗಳನ್ನು ಕಾಣಬಹುದಾಗಿದೆ.

ಸು೦ದರವಾದ ಶೋಲಾ ಅರಣ್ಯವು ಕೊಡಚಾದ್ರಿ ಹಾಗೂ ಸುತ್ತಲಿನ ಬೆಟ್ಟಗಳಿಗೆ ದಟ್ಟವಾದ ಹಸಿರು ಹೊದಿಕೆಯನ್ನು ಹೊದಿಸುತ್ತದೆ. ಹೀಗಾಗಿ ಈ ಸ್ಥಳವು ಮತ್ತಷ್ಟು ಸು೦ದರವಾಗಿ ಕಾಣಿಸುತ್ತದೆ.

ಸರ್ವಜ್ಞಪೀಠ

ಸರ್ವಜ್ಞಪೀಠ

PC: Ashwin Iyer

ಆದಿಶ೦ಕರಾಚಾರ್ಯರು ಈ ಸ್ಥಳವನ್ನು ಸ೦ದರ್ಶಿಸಿ, ಇಲ್ಲಿ ತಪಗೈದ ಬಳಿಕ, ಕೊಲ್ಲೂರಿನಲ್ಲಿ ಮೂಕಾ೦ಬಿಕಾ ದೇವಸ್ಥಾನವನ್ನು ಸ೦ಸ್ಥಾಪಿಸಿದರೆ೦ದು ನ೦ಬಲಾಗಿದೆ. ಆದಿಶ೦ಕರಾಚಾರ್ಯರ ಗೌರವಾರ್ಥವಾಗಿ ಶಿಲೆಯಿ೦ದ ನಿರ್ಮಿಸಲಾಗಿರುವ ಸರ್ವಜ್ಞಪೀಠವೆ೦ಬ ಹೆಸರಿನ ಪುಟ್ಟ ದೇವಸ್ಥಾನವನ್ನು ಕಾಣಬಹುದಾಗಿದೆ.

ಬೆಟ್ಟದ ಅಗ್ರಭಾಗದಲ್ಲಿ ಮೂಕಾ೦ಬಿಕಾ ದೇವಿಗೆ ಸಮರ್ಪಿತವಾಗಿರುವ ಮತ್ತೊ೦ದು ದೇವಸ್ಥಾನವಾಗಿದೆ. ಬೆಟ್ಟದ ತಪ್ಪಲಲ್ಲಿ ಕೊಲ್ಲೂರಿನಲ್ಲಿ ದೇವಸ್ಥಾನದ ಕಟ್ಟಡವನ್ನು ನಿರ್ಮಿಸುವುದಕ್ಕೂ ಮೊದಲು ಈ ದೇವಸ್ಥಾನದ ಸ್ಥಳವು ತಾಯಿ ಮೂಕಾ೦ಬಿಕೆಯ ಮೂಲಸ್ಥಾನವೆ೦ದೇ ಪರಿಗಣಿತವಾಗಿತ್ತು.

ಮೂಕಾ೦ಬಿಕಾ ದೇವಸ್ಥಾನದ ಎದುರು ಸುಮಾರು 40 ಅಡಿಗಳಷ್ಟು ಎತ್ತರದ ಉಕ್ಕಿನ ಸ್ತ೦ಭವೊ೦ದಿದ್ದು, ಇದು ಮೌ೦ಟ್ ಅಬು ಹಾಗೂ ಇನ್ನಿತರ ಸ್ಥಳಗಳಲ್ಲಿ ಕಾಣಸಿಗುವ ಉಕ್ಕಿನ ಸ್ತ೦ಭಗಳನ್ನು ಹೋಲುವ೦ತಿದೆ. ಮೂಕಾಸುರನೆ೦ಬ ರಕ್ಕಸನನ್ನು ಸ೦ಹರಿಸಲು ಭಗವತಿ ಮೂಕಾ೦ಬಿಕೆಯು ಬಳಸಿದ್ದ ತ್ರಿಶೂಲವು ಇದಾಗಿತ್ತೆ೦ದು ಭಕ್ತಾದಿಗಳ ನ೦ಬಿಕೆಯಾಗಿದೆ.

ಕೊಲ್ಲೂರು ಮೂಕಾ೦ಬಿಕಾ ದೇವಿ

ಕೊಲ್ಲೂರು ಮೂಕಾ೦ಬಿಕಾ ದೇವಿ

PC: Vinayaraj

ಕೊಲ್ಲೂರಿನಲ್ಲಿರುವ ದೇವಸ್ಥಾನವು ಸ೦ದರ್ಶಿಸಲೇಬೇಕಾದ ಮತ್ತೊ೦ದು ಸ್ಥಳವಾಗಿದೆ. ತಾಯಿಯ ಮೂರು ರೂಪಗಳಾದ ಸರಸ್ವತಿ, ದುರ್ಗಾ, ಮತ್ತು ಲಕ್ಷ್ಮಿಯ ರೂಪದಲ್ಲಿ ಮಾತೆ ಮೂಕಾ೦ಬಿಕಾದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ.

ದೇವಸ್ಥಾನವು ಯಾವಾಗಿನಿ೦ದ ಅಸ್ತಿತ್ವಕ್ಕೆ ಬ೦ತು ಎ೦ದು ಕರಾರುವಕ್ಕಾಗಿ ಹೇಳುವ ಯಾವುದೇ ಸಮುಚಿತ ದಾಖಲೆಗಳು ಲಭ್ಯವಿಲ್ಲ. ತಾಯಿ ಮೂಕಾ೦ಬಿಕೆಯ ಮೂರ್ತಿಯನ್ನು ಆದಿಶ೦ಕರಾಚಾರ್ಯರು ಪ್ರತಿಷ್ಟಾಪಿಸಿದರೆ೦ದು ನ೦ಬಲಾಗಿದ್ದು, ಜಗತ್ತಿನಾದ್ಯ೦ತ ಭಕ್ತಾದಿಗಳನ್ನು ಈ ದೇವಸ್ಥಾನವು ತನ್ನತ್ತ ಸೆಳೆಯುತ್ತಿದೆ.

Please Wait while comments are loading...