Search
  • Follow NativePlanet
Share
» »ನಮ್ಮ ಊಹೆಗೂ ನಿಲುಕದ್ದು ಭಾರತದ ಈ ಅತ್ಯುತ್ಕೃಷ್ಟವಾದ ಶಿಲಾ ಸ್ಮಾರಕಗಳು !!

ನಮ್ಮ ಊಹೆಗೂ ನಿಲುಕದ್ದು ಭಾರತದ ಈ ಅತ್ಯುತ್ಕೃಷ್ಟವಾದ ಶಿಲಾ ಸ್ಮಾರಕಗಳು !!

ಯಾವುದಕ್ಕೂ ಸರಿಸಾಟಿಯಿಲ್ಲದ ರಾಕ್ ಕಟ್ ಸ್ಮಾರಕಗಳ ಅತ್ಯುನ್ನತ ನಿದರ್ಶನಗಳು

ನಿಸ್ಸಂದೇಹವಾಗಿಯೂ ಭಾರತವು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿರುವ ಹಳೆಯ ದೇಶವಾಗಿದ್ದು, ಇಲ್ಲಿ ಅದ್ಬುತಗಳ ನಿಧಿಯನ್ನೇ ಕಾಣಬಹುದಾಗಿದೆ. ಇಂದು ಭಾರತವು ತನ್ನಲ್ಲಿರುವ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳು ಮತ್ತು ಶ್ರೀಮಂತ ಪ್ರಕೃತಿ, ಮತ್ತು ಐತಿಹಾಸಿಕ ಸೌಂದರ್ಯದ ಕಾರಣದಿಂದಾಗಿ ಜಗತ್ತಿನ ಅತ್ಯಂತ ಹೆಚ್ಚಾಗಿ ಭೇಟಿ ನೀಡಲ್ಪಡುವ ಸ್ಥಳಗಳಲ್ಲಿ ಒಂದಾಗಿದೆ.

ಭಾರತದಲ್ಲಿನ ಬಂಡೆಯಿಂದ ಕತ್ತರಿಸಿ ನಿರ್ಮಿಸಲಾದ ಸ್ಮಾರಕಗಳನ್ನು ಬಗ್ಗೆ ತಿಳಿಸುತ್ತಿದ್ದೇವೆ ಈ ಸ್ಮಾರಕಗಳು, ಅದು ಖಂಡಿತವಾಗಿಯೂ ಅಸಮಾನ್ಯ ಮತ್ತು ಎಲ್ಲಾ ಪದಗಳಲ್ಲಿ ಅತ್ಯುತ್ಕೃಷ್ಟವಾಗಿದೆ, ಅದು ಅವರ ವಾಸ್ತುಶಿಲ್ಪ, ರಚನೆ, ಇತಿಹಾಸ ಅಥವಾ ಹಿತವಾದ ಪರಿಸರಕ್ಕೆ ಸಂಬಂಧಿಸಿದಂತೆ ಎಲ್ಲವೂ ಊಹೆಗೂ ನಿಲುಕದ್ದು! ಇಂತಹ ರಚನೆಗಳಲ್ಲಿ ಗುಹೆಗಳಿಂದ ದೇವಾಲಯದವರೆಗೂ ಇದ್ದು ಭಾರತವು ಬಂಡೆಗಳಿಂದ ನಿರ್ಮಿತವಾದ ಹಲವಾರು ವಾಸ್ತು ಶಿಲ್ಪ ಅದ್ಬುತಗಳನ್ನೊಳಗೊಂಡಿದ್ದು ಇವುಗಳಿಗೆ ಯಾವುದೂ ಸರಿಸಾಟಿಯಿಲ್ಲ!

ಕನ್ಹೇರಿ ಗುಹೆಗಳು

ಕನ್ಹೇರಿ ಗುಹೆಗಳು

ಮುಂಬೈನ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಕಾಡುಗಳಲ್ಲಿ ನೆಲೆಸಿರುವ ಕನ್ಹೇರಿ ಗುಹೆಗಳು ಭೇಟಿ ಕೊಡಲೇ ಬೇಕಾದಂತಹ ಸ್ಥಳವಾಗಿದೆ. ನೀವು ನಿಮ್ಮ ಕುಟುಂಬ ಅಥವಾ ಸ್ನೇಹಿತರ ಜೊತೆಗೆ ದಟ್ಟವಾಅದ ಪ್ರಕೃತಿ ಮತ್ತು ಮಧುರ ವಾತಾವರಣದ ಜೊತೆಗೆ ಯಾವುದಾದರು ಐತಿಹಾಸಿಕ ಸೌಂದರ್ಯತೆಯನ್ನು ಸವಿಯಬೇಕೆಂದು ನೋಡುತ್ತಿದ್ದಲ್ಲಿ, ಕನ್ಹೇರ್‍ಇ ಗುಹೆಗಳು ನಿಮ್ಮ ಅಭಿರುಚಿಗೆ ತಕ್ಕಂತೆ ಇದೆ. ದೊಡ್ಡ ಹಜಾರಗಳು ದೊಡ್ಡ ಸ್ಥಂಭಗಳು ಮತ್ತು ಸ್ಮಾರಕ ಶಿಲ್ಪಗಳು ಇತ್ಯಾದಿಗಳನ್ನು ಹೊಂದಿರುವ ಕನ್ಹೇರ್‍ಇ ಗುಹೆಗಳು ದಟ್ಟವಾದ ಹಸಿರು ಬೆಟ್ಟದ ಮೇಲೆ ನೆಲೆಸಿದ್ದು ಇತಿಹಾಸವನ್ನು ಪ್ರಕೃತಿಯ ಜೊತೆಗೆ ಅನ್ವೇಷಣೆ ಮಾಡಲು ಇಷ್ಟಪಡುವ ಸಾವಿರಾರು ಸಂದರ್ಶಕರನ್ನು ಪ್ರತೀ ತಿಂಗಳು ಆಕರ್ಷಿಸುತ್ತದೆ.

100 ಕ್ಕೂ ಹೆಚ್ಚು ಪ್ರವೇಶದ್ವಾರಗಳೊಂದಿಗೆ, ಕನ್ಹೇರಿ ಗುಹೆಗಳನ್ನು ಧ್ಯಾನ ಮತ್ತು ಕಲಿಕಾ ಕೇಂದ್ರಗಳಾಗಿ ನಿರ್ಮಿಸಲಾಗಿದೆ, ಅಲ್ಲಿ ಆಧ್ಯಾತ್ಮಿಕ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರ, ವಿಜ್ಞಾನ ಮತ್ತು ಕಲೆಗಳಂತಹ ವಿವಿಧ ವಿಷಯಗಳ ಬಗ್ಗೆ ಜ್ಞಾನವನ್ನು ನೀಡುವುದರ ಜೊತೆಗೆ ಜೀವನದ ಕೆಲವು ಅಂಶಗಳ ಬಗ್ಗೆ ಉಪನ್ಯಾಸ ನೀಡುತ್ತಿದ್ದರು. ಈ ಸುಂದರವಾದ ಗುಹೆಗಳಿಗೆ ಪ್ರವಾಸವನ್ನು ಯೋಜಿಸಿದರೆ ಹೇಗಿರಬಹುದು?

ಲೆನ್ಯಾದ್ರಿ ಗುಹೆಗಳು

ಲೆನ್ಯಾದ್ರಿ ಗುಹೆಗಳು

ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯಲ್ಲಿರುವ ಇನ್ನೊಂದು ಅದ್ಬುತವೆಂದರೆ ಅದು ಲೆನ್ಯಾದ್ರಿ ಗುಹೆಗಳು ಇವು ಬೌದ್ಧಧರ್ಮಕ್ಕೆ ಸಮರ್ಪಿತವಾದ 30 ಬಂಡೆಯ ಗುಹೆಗಳ ಸರಣಿಯಾಗಿದೆ. 1 ನೇ ಶತಮಾನದ ಅವಧಿಗೆ ಹಿಂದಿನ ಹಲವಾರು ಗುಹೆಗಳೊಂದಿಗೆ, ಲೆನ್ಯಾದ್ರಿಯು ಗುಹೆಗಳ ರೂಪದಲ್ಲಿ ರಾಕ್-ಕಟ್ ಸ್ಮಾರಕಗಳಿಗೆ ಅತ್ಯಂತ ಹಳೆಯ-ಪ್ರಸಿದ್ಧ ಸ್ಮಾರಕ ರಚನೆಗಳಲ್ಲಿ ಒಂದೆನಿಸಿದೆ.

ಇಂದು, ಹಲವಾರು ಗುಹೆಗಳನ್ನು ಹಿಂದೂ ದೇವಾಲಯಗಳಾಗಿ ಪರಿವರ್ತಿಸಲಾಗಿದೆ ಆದುದರಿಂದ ಅಸಂಖ್ಯಾತ ಹಿಂದೂ ಭಕ್ತರು ಇಲ್ಲಿ ದೇವರಿಗೆ ಗೌರವ ಸಲ್ಲಿಸಲು ಬರುತ್ತಿರುವುದನ್ನು ಕಾಣಬಹುದು. ಲೆನ್ಯಾದ್ರಿ ಗುಹೆಗಳ ಸೌಂದರ್ಯವು ಅದರ ಅಲಂಕರಿಸಿದ ಕಂಬಗಳು, ಅಲಂಕೃತ ಗೋಡೆಗಳು ಮತ್ತು ಸುಂದರವಾದ ಮೇಲ್ಛಾವಣಿಯಲ್ಲಿದೆ. ಲೆನ್ಯಾದ್ರಿ ಗುಹೆಗಳ ಐತಿಹಾಸಿಕ ಯುಗದ ಮೂಲಕ ಹಾದುಹೋಗ ಬಯಸುವಿರಾ?

ಐಹೊಳೆಯ ಸ್ಮಾರಕಗಳ ಸಮೂಹ

ಐಹೊಳೆಯ ಸ್ಮಾರಕಗಳ ಸಮೂಹ

ರಾಕ್ ಕಟ್ ವಾಸ್ತು ಶಿಲ್ಪಕ್ಕೆ ಅದ್ಬುತವಾದ ಮತ್ತೊಂದು ಸಾಕ್ಷಿಯೆಂದರೆ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಐಹೊಳೆಯಲ್ಲಿ ನಿರ್ಮಿಸಲಾಗಿರುವ ಸ್ಮಾರಕ ಸಮೂಹಗಳು. ಹಲವಾರು ಹಿಂದೂ, ಜೈನ ಮತ್ತು ಬೌದ್ದ ದೇವರುಗಳನ್ನೊಳಗೊಂಡಿರುವ ದೇವಾಲಯಗಳ ಜೊತೆಗೆ ಕೆಲವು ಮಠಗಳನ್ನೂ ಈ ಒಳಗೊಂಡಿದೆ. ಐಹೊಳೆಯ ಈ ಸಂಕೀರ್ಣಕ್ಕೆ ನಾಲ್ಕನೇ ಶತಮಾನಕ್ಕೂ ಹಿಂದಿನ ಇತಿಹಾಸವಿದ್ದು ಇದು ದೇವಾಲಯಗಳ ಸಮೂಹವೆಂದೇ ಹೆಸರುವಾಸಿಯಾಗಿದೆ. ಇಲ್ಲಿ ಶಿವ ಮತ್ತು ದುರ್ಗಾದೇವಿಯರಿಗೆ ಅರ್ಪಿತವಾದ ದೇವಾಲಯಗಳಿವೆ. ಐಹೊಳೆಯ ಸ್ಮಾರಕಗಳ ವೈಶಿಷ್ಟ್ಯವು ಇದರ ಐತಿಹಾಸಿಕ ಮಹತ್ವ ಮತ್ತು ಪುರಾತತ್ವಗಳ ಪ್ರಾಮುಖ್ಯತೆಯಲ್ಲಿ ಅಡಗಿದೆ.

ಮಹಾಬಲಿಪುರಂ

ಮಹಾಬಲಿಪುರಂ

ಚೆನ್ನೈನ ಕೋರಮಂಡಲ ಕರಾವಳಿಯಲ್ಲಿ ನೆಲೆಸಿರುವ ಮಹಾಬಲಿಪುರಂ ಭಾರತದ ಮತ್ತೊಂದು ಮಹತ್ವಪೂರ್ಣ ತಾಣವಾಗಿದ್ದು ಇದು ಸುಮಾರು 400 ಪ್ರಾಚೀನ ಸ್ಮಾರಕಗಳ ಜೊತೆಗೆ ಕಲ್ಲಿನ ಕೆತ್ತನೆಗಳನ್ನು ತನ್ನಲ್ಲಿ ಹೊಂದಿದೆ. ಇಲ್ಲಿನ ರಾಕ್ ಕಟ್ ಸ್ಮಾರಕಗಳು ಏಳನೇ ಶತಮಾನದ ಪಲ್ಲವ ರಾಜವಂಶಕ್ಕೆ ಸೇರಿದವೆಂದು ನಂಬಲಾಗುತ್ತದೆ.

ಮಹಾಬಲಿಪುರಂ ಸಮುದ್ರ ತೀರದ ಪಕ್ಕದಲ್ಲಿರುವ ತನ್ನ ತೀರದ ದೇವಾಲಯಕ್ಕೆ ಪ್ರವಾಸಿಗರಲ್ಲಿ ಪ್ರಸಿದ್ಧವಾಗಿದೆ, ಇದು ವಾಸ್ತುಶಿಲ್ಪದ ಉತ್ತಮ ಕೆಲಸವನ್ನು ಚಿತ್ರಿಸುತ್ತದೆ. ಸಮುದ್ರ, ದೇವಾಲಯಗಳು ಮತ್ತು ಬಂಡೆಗಳ ಉತ್ಸಾಹಭರಿತ ವಾತಾವರಣದಿಂದ ಸುತ್ತುವರೆದಿರುವುದನ್ನು ನೋಡುವುದು ಹೇಗಿರಬಹುದು?

ಬಾದಾಮಿ ಗುಹಾಂತರ ದೇವಾಲಯಗಳು

ಬಾದಾಮಿ ಗುಹಾಂತರ ದೇವಾಲಯಗಳು

ಜಾತ್ಯತೀತತೆಯನ್ನು ಆಚರಿಸಲು ಒಂದು ಪರಿಪೂರ್ಣ ತಾಣವಾಗಿರುವ, ಬಾದಾಮಿ ಹಲವಾರು ಹಿಂದೂ, ಜೈನ ಮತ್ತು ಬೌದ್ಧ ದೇವಾಲಯಗಳಿಗೆ ನೆಲೆಯಾಗಿದೆ ಹಾಗೂ ಅದರ ಗುಹೆ ದೇವಾಲಯಗಳ ಸಂಕೀರ್ಣವು ಭಾರತದಲ್ಲಿನ ಅತ್ಯುತ್ತಮ ವಾಸ್ತುಶಿಲ್ಪದ ಕೆಲಸಗಳನ್ನು ಹೊಂದಿದೆ.

ಚಾಲುಕ್ಯ ರಾಜವಂಶದ ಕಾಲದಿಂದಲೂ ಪ್ರವರ್ಧಮಾನಕ್ಕೆ ಬರುತ್ತಿರುವ ಬಾದಾಮಿ ಗುಹೆ ದೇವಾಲಯಗಳು ಶಿವ ಮತ್ತು ವಿಷ್ಣುವಿಗೆ ಸಮರ್ಪಿತವಾದ ಕೆಲವು ಹಳೆಯ ಹಿಂದೂ ದೇವಾಲಯಗಳಿಗೆ ನೆಲೆಯಾಗಿದೆ. ಅದರ ಆವರಣದಲ್ಲಿ ಆರು ಗುಹೆಗಳೊಂದಿಗೆ, ಬಾದಾಮಿಯು ಖಂಡಿತವಾಗಿಯೂ ಎದುರುನೋಡಬೇಕಾದ ಸ್ಥಳವಾಗಿದೆ ಏಕೆಂದರೆ ಅದರ ಶತಮಾನಗಳ-ಹಳೆಯ ಕಂಬಗಳು ಮತ್ತು ಅಲಂಕೃತ ಗೋಡೆಗಳ ಹಿಂದೆ ಅದರ ಶಾಶ್ವತ ಸೌಂದರ್ಯವು ಅಡಗಿದೆ.

ಎಲ್ಲೋರಾ ಗುಹೆಗಳು

ಎಲ್ಲೋರಾ ಗುಹೆಗಳು

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಾಗಿರುವ ಮಹಾರಾಷ್ಟ್ರ ರಾಜ್ಯದಲ್ಲಿ ನೆಲೆಸಿರುವ ಎಲ್ಲೋರಾ ಗುಹೆಗಳು ರಾಕ್ ಕಟ್ ಸ್ಮಾರಕಗಳನ್ನು ಗುಹೆಗಳು ಮತ್ತು ದೇವಾಲಯಗಳ ರೂಪದಲ್ಲಿ ಮತ್ತು ಅವುಗಳ ಅನನ್ಯ ವಾಸ್ತುಶಿಲ್ಪವನ್ನು ನೋಡ ಬಯಸುವವರಿಗೆ ಈ ಸ್ಥಳವು ಅತ್ಯಂತ ಸೂಕ್ತವಾದ ಮತ್ತು ಮೊದಲನೆ ಆಯ್ಕೆ ಎನ್ನಬಹುದಾಗಿದೆ. ಕೈಲಾಶ ದೇವಾಲಯಕ್ಕೆ ನೆಲೆಯಾಗಿರುವ ಇದು ವಿಶ್ವದ ಅತಿದೊಡ್ಡ ಏಕಶಿಲೆಯ ರಾಕ್ ಕಟ್ ಸ್ಮಾರಕವೆಂದು ನಂಬಲಾಗಿದೆ.

ಎಲ್ಲೋರಾ ಗುಹೆಗಳು ಸಾಮಾನ್ಯವಾಗಿ ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಕ್ಕೆ ಸಮರ್ಪಿತವಾದ ಹಲವಾರು ಗುಹೆ ದೇವಾಲಯಗಳ ಸಂಕೀರ್ಣವಾಗಿದೆ. ಆದ್ದರಿಂದ, ಇದು ಭಾರತದಲ್ಲಿ ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ. 100 ಕ್ಕೂ ಹೆಚ್ಚು ಗುಹೆಗಳೊಂದಿಗೆ, ಇದು ವಿಶ್ವದ ಅತಿದೊಡ್ಡ ರಾಕ್-ಕಟ್ ಸಂಕೀರ್ಣಗಳಲ್ಲಿ ಒಂದಾಗಿದೆ. ಎಲ್ಲೋರಾ ಗುಹೆಗಳಲ್ಲಿ ಐತಿಹಾಸಿಕ ಮಹತ್ವವನ್ನು ಅನ್ವೇಷಣೆ ಮಾಡುವ ಅನುಭವ ಹೇಗಿರಬಹುದು?

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+