Search
  • Follow NativePlanet
Share
» »ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

By Souparnika

ಒಂದು ಪುಸ್ತಕದ ಸಮಾಚಾರದ ಪ್ರಕಾರ ಶ್ರೀರಾಮನು ಹುಟ್ಟಿದ ಅಯೋಧ್ಯ...ಇಂದು ಯುಪಿಯಲ್ಲಿನ ಅಯೋಧ್ಯೆ ಅಲ್ಲ ಎಂದೂ, ನಿಜವಾಗಲೂ ಅದು ಪಾಕಿಸ್ಥಾನದಲ್ಲಿ ಇದೆ ಎಂದು ಪ್ರಸಿದ್ಧ ಪುರಾತತ್ವ ಶಾಸ್ತ್ರಕಾರನಾದ ಜೆಸ್ಸುರಾಮ ತನ್ನ ಸಿದ್ಧಾಂತ ಗ್ರಂಥದಲ್ಲಿ ಬರೆದಿದ್ದಾನೆ. ಅಸಲಿಗೆ ಅಯೋಧ್ಯ ಹೆಸರಿನಿಂದಲೇ 2 ಪಟ್ಟಣಗಳು ಇವೆಯಂತೆ. ಈ 2 ಅಯೋಧ್ಯೆಗಳಲ್ಲಿ ಒಂದು ಮಾತ್ರ ಶ್ರೀರಾಮನ ಮುತ್ತಾತ ರಾಜ ರಘು ನಿರ್ಮಾಣ ಮಾಡಿದನಂತೆ. ಮತ್ತೊಂದು ಅಯೋಧ್ಯೆ ಪಟ್ಟಣವನ್ನು ಶ್ರೀರಾಮನೇ ಸ್ವಯಂ ಆಗಿ ನಿರ್ಮಾಣ ಮಾಡಿದನಂತೆ.

ರಾಮಾಯಣದ ಕಥೆಯ ಪ್ರಕಾರ...ಸರಯೂ ನದಿ ತೀರದಲ್ಲಿ ರಾಮನು ಮೊದಲ ಪಟ್ಟಣವನ್ನು ನಿರ್ಮಾಣ ಮಾಡಿ ಅದಕ್ಕೆ ಅಯೋಧ್ಯೆ ಎಂದು ಹೆಸರು ಇಟ್ಟನಂತೆ. ಐರಾವತಿ ಮತ್ತು ಸರಯೂ ನದಿ ಮಧ್ಯದಲ್ಲಿ ಅಯೋಧ್ಯೆ ಇರುತ್ತಿತ್ತು ಎಂದು ಮಹಾಭಾರತದಲ್ಲಿಯೂ ಕೂಡ ಉಲ್ಲೇಖವಿದೆ.

ಅಯೋಧ್ಯೆ....ಈ ಹೆಸರು ಕೇಳಿದ ತಕ್ಷಣ ಎಲ್ಲರಿಗೂ ಗುರುತಿಗೆ ಬರುತ್ತದೆ. ಉತ್ತರ ಪ್ರದೇಶದಲ್ಲಿನ ಪೈಜಾಬಾದ್ ಜಿಲ್ಲೆಯ ಸರಯೂ ನದಿ ತೀರದಲ್ಲಿ ನೆಲೆಸಿರುವ ಒಂದು ಚಾರಿತ್ರಿಕ ನಗರ ನಮ್ಮ ಮುಂದೆ ಪ್ರತ್ಯಕ್ಷವಾಗುತ್ತದೆ. ಏಕೆ ಅಯೋಧ್ಯೆಯ ಬಗ್ಗೆ ಹೇಳುತ್ತಿದ್ದೇನೆ ಎಂದರೆ, ಒಂದು ವಾರ್ತಾ ಪತ್ರಿಕೆಯಲ್ಲಿ ಒಬ್ಬ ಅಧಿಕಾರಿ ಬರೆದ ಪುಸ್ತಕದಲ್ಲಿ ಅಯೋಧ್ಯ ಇದು ಅಲ್ಲವೆಂದೂ, ರಾಮ ಆಳ್ವಿಕೆ ಮಾಡಿದ ಅಯೋಧ್ಯೆಯು ಪಾಕಿಸ್ತಾನದಲ್ಲಿದೆ ಎಂದು ಬರೆದಿದ್ದಾನೆ. ಅಲ್ಲಿಯೇ ಶ್ರೀ ರಾಮನು ಜನಿಸಿದರಂತೆ. ಇದಕ್ಕೆ ಚಾರಿತ್ರಿಕವಾದ ಆಧಾರಗಳು ಕೂಡ ತೋರಿಸುತ್ತಿದ್ದಾರೆ.

ಇನ್ನು ಈ ಸರಯೂ ನದಿ ತೀರದಲ್ಲಿ ನೆಲೆಸಿರುವ ಹಿಂದುಗಳ ಪವಿತ್ರವಾದ ಪುಣ್ಯಕ್ಷೇತ,್ರ ಅಯೋಧ್ಯೆ ಪಟ್ಟಣದ ಬಗ್ಗೆ ಇಂದು ನಾವು ಲೇಖನದ ಮೂಲಕ ತಿಳಿದುಕೊಳ್ಳೋಣ. ವಿಷ್ಣುಮೂರ್ತಿ ಅವತಾರದ 7 ನೇ ಅವತಾರವಾದ ಭಗವಾನ್ ಶ್ರೀ ರಾಮನಿಗೆ ಈ ಪಟ್ಟಣಕ್ಕೆ ಅನುಬಂಧವಿದೆಯಂತೆ. ರಾಮಾಯಣ ಎಂಬ ಇತಿಹಾಸದ ಪ್ರಕಾರ ಶ್ರೀ ರಾಮನು ಜನಿಸಿದ ರಘು ವಂಶಿಕರ ರಾಜಧಾನಿಯಾಗಿ ಅಯೋಧ್ಯೆ ನಗರ ಒಂದು ಇತ್ತು.

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ರಾಮ ಜನ್ಮ ಭೂಮಿ

ಅಯೋದ್ಯೆ ಶ್ರೀ ರಾಮ ಜನ್ಮ ಸ್ಥಾನವಾಗಿದೆ ಎಂದು ನಂಬಲಾಗಿದೆ. ಇದನ್ನೇ ರಾಮ ಜನ್ಮ ಭೂಮಿಯಾಗಿ ಕರೆಯುತ್ತಾರೆ. ಇಲ್ಲಿ ಚಿಕ್ಕ ಶ್ರೀರಾಮನ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಈ ಪ್ರದೇಶವನ್ನು ಆಕ್ರಮಿಸಿದ ಮೊದಲ ಮೊಗಲ್ ಚಕ್ರವರ್ತಿಯಾದ ಬಾಬರ್ 15 ನೇ ಶತಮಾನದಲ್ಲಿ ಈ ದೇವಾಲಯದ ಪ್ರದೇಶದಲ್ಲಿ ಬಾಬ್ರಿ ಮಸೀದಿಯನ್ನು ನಿರ್ಮಾಣ ಮಾಡಿದನು. 1528 ರಿಂದ 1853 ರವರೆಗೆ ಮುಸ್ಲಿಂರ ಪ್ರಾರ್ಥನ ಸ್ಥಳವಾಗಿತ್ತು. ವಿವಾದಾಸ್ಪದ ಪ್ರದೇಶವಾದ ಕಾರಣ ಸರ್ಕಾರವು ಹಿಂದೂಗಳಿಗೆ ಹಾಗು ಮುಸ್ಲಿಂರಿಗೆ ಬೇರೆ ಬೇರೆ ಪ್ರಾರ್ಥನ ಮಂದಿರವನ್ನು ಏರ್ಪಾಟು ಮಾಡಿತು.

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಹನುಮಾನ್ ಘರ್

ಅಯೋಧ್ಯೆಯಲ್ಲಿ ಹೆಚ್ಚಾಗಿ ಭೇಟಿ ನೀಡುವ ಪವಿತ್ರವಾದ ಕ್ಷೇತ್ರಗಳಲ್ಲಿ ಒಂದು ಹನುಮಾನ್ ಘರ್ ಅಥವಾ ಹನುಮನ ನಿವಾಸ. ಹನುಮಂತನಿಗೆ ಅಂಕಿತವಾಗಿರುವ ದೇವಾಲಯ ಇದಾಗಿದೆ. ಇದು ಅಯೋಧ್ಯೆಯಲ್ಲಿನ ಒಂದು ಮಣ್ಣಿನ ದಿಬ್ಬದ ಮೇಲೆ ನೆಲೆಸಿರುವ ಈ ದೇವಾಲಯವನ್ನು ದೂರದಿಂದಲೂ ಕೂಡ ಕಾಣಬಹುದು. ಈ ದೇವಾಲಯಕ್ಕೆ ಸೇರಿಕೊಳ್ಳಲು ಸುಮಾರು 76 ಮೆಟ್ಟಿಲುಗಳು ಹತ್ತಬೇಕು. ಹನುಮಾನ್ ದೇವಾಲಯವು ಒಂದು ಗುಹಾ ದೇವಾಲಯ. ಚದರ ಆಕೃತಿಯಲ್ಲಿರುವ ಈ ಕೋಟೆಯಂತಹ ಭವನದಲ್ಲಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಅಂಜನಾ ದೇವಿ ಹಾಗು ಬಾಲ ಹನುಮಾನ್ ತನ್ನ ಮಡಿಲಲ್ಲಿ ಇರುವ ಪ್ರತಿಮೆ ಕಾಣಿಸುತ್ತದೆ. ಈ ದೇವಾಲಯವನ್ನು ದರ್ಶಿಸಿದರೆ ಕೋರಿಕೆಗಳು ನೆರವೇರುತ್ತದೆ ಎಂದು ಭಕ್ತರು ದೃಡವಾದ ನಂಬಿಕೆಯೇ ಆಗಿದೆ. ಹಾಗಾಗಿಯೇ ವರ್ಷದ ಉದ್ದಕ್ಕೂ ಈ ದೇವಾಲಯಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.

Photo Courtesy: Vishwaroop2006

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ರಾಮ ಕಿ ಪೈದಿ

ರಾಮ ಕಿ ಪೈದಿ ಅಯೋಧ್ಯೆಯಲ್ಲಿನ ಸರಯೂ ನದಿ ತೀರದ ನಯಘಾಟ್‍ನ ಮೇಲೆ ಇದೆ. ಎಷ್ಟೊ ಮಂದಿ ಭಕ್ತರು ಈ ಚಾರಿತ್ರಿಕ ನದಿಯಲ್ಲಿ ಪವಿತ್ರವಾದ ಜಲದಲ್ಲಿ ಸ್ನಾನ ಮಾಡುತ್ತಾರೆ. ಸರಯೂ ನದಿಯಿಂದ ನೀರನ್ನು ಈ ಘಾಟ್ ಕಿ ಮೋಟರ್ ಪಂಪುಗಳ ಮೂಲಕ ಸಂಪರ್ಕ ನೀಡಿದ್ದಾರೆ. ಶ್ರೀ ರಾಮನ ಅನೇಕ ಭಕ್ತರು ಇಲ್ಲಿ ಹಬ್ಬವನ್ನು ವಿಜೃಂಬಣೆಯಿಂದ ಮಾಡುತ್ತಾರೆ. ಇಲ್ಲಿನ ಸರಾಯೂ ನದಿಯಲ್ಲಿ ಸ್ನಾನ ಮಾಡುವುದರಿಂದ ಅವರವರ ಪಾಪಗಳು ಪರಿಹಾರವಾಗುತ್ತವೆ ಎಂದು ಭಕ್ತರ ನಂಬಿಕೆಯಾಗಿದೆ.

Photo Courtesy: Ramnath Bhat

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ತುಳಸಿ ಸ್ಮಾರಕ ಭವನ

ರಾಮಯಾಣವನ್ನು ಬರೆದ ಭಕ್ತ, ಕವಿಯಾದ ಗೋಸ್ವಾಮಿ ತುಳಸಿ ದಾಸ್‍ರಿಗೆ ಈ ತುಳಸಿ ಸ್ಮಾರಕ ಭವನವನ್ನು ನಿರ್ಮಾಣ ಮಾಡಲಾಯಿತು. ಇಲ್ಲಿ ತುಳಸಿ ದಾಸ ರಾಮಾಯಣವನ್ನು ರಚಿಸಿದರು ಎಂದು ನಂಬುತ್ತಾರೆ. ಇಲ್ಲಿರುವ ಗ್ರಂಥಾಲಯ ಚರಿತ್ರೆಗಾರರಿಗೆ ಹಾಗು ಪಂಡಿತರಿಗೆ ಅತ್ಯಂತ ಬೆಲೆಬಾಳುವಂತಹದು. ಶ್ರೀ ರಾಮನ ಚರಿತ್ರೆಗೆ ಸಂಬಂಧಿಸಿದ ವಿಶೇಷಗಳನ್ನು ಇಲ್ಲಿ ಶೇಕರಿಸಿ ಪ್ರದರ್ಶಿಸುತ್ತಾರೆ. ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳು ಇಲ್ಲಿ ನಿರ್ವಹಿಸುತ್ತಾರೆ. ತುಳಸಿ ಜಯಂತಿಯಂದು ಇಲ್ಲಿ ಶ್ರಾವಣ ಮಾಸದಲ್ಲಿ 7 ನೇ ದಿನ ನಡೆಸುವ ದೊಡ್ಡ ಹಬ್ಬ ಇದಾಗಿದೆ.

Photo Courtesy: Ram-Katha-Museum.jsp

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಚಕ್ರ ಹಾರಜಿ ವಿಷ್ಣು ದೇವಾಲಯ

ಸರಾಯು ನದಿ ತೀರದಲ್ಲಿ ಗುಪ್ತರ ಘಾಟ್‍ನ ಸಮೀಪದಲ್ಲಿ ಫೈಜಾಬಾದ್‍ನಲ್ಲಿರುವ ಈ ಚಕ್ರ ಹಾರಜಿ ವಿಷ್ಣು ದೇವಾಲಯವು ಹಿಂದುಗಳಿಂದ ವಿಶೇಷವಾದ 2 ವಿಷಯಗಳನ್ನು ಹೊಂದುತ್ತದೆ. ಮೊದಲನೆಯದು ಇಲ್ಲಿ ಚಕ್ರವನ್ನು ಧರಿಸಿದ ವಿಷ್ಣು ಮೂರ್ತಿಯ ವಿಗ್ರಹವನ್ನು ಅನೇಕ ಮಂದಿ ಭಕ್ತರಿಗೆ ಆಕರ್ಷಿಸುತ್ತದೆ. ಸಾಧಾರಣವಾಗಿ ಸುದರ್ಶನ ಚಕ್ರವನ್ನು ಶ್ರೀ ಮಹಾ ವಿಷ್ಣುವು ರಾಕ್ಷಸರನ್ನು ಸಂಹಾರ ಮಾಡುವುದಕ್ಕೆ ಬಳಸುತ್ತಾನೆ. ವಿಷ್ಣು ಮೂರ್ತಿ ಈ ಚಕ್ರವನ್ನು ಧರಿಸಿರುವುದು ಅತ್ಯಂತ ಸುಂದರವಾಗಿ ಕಾಣುತ್ತದೆ. ಮತ್ತೊಂದು ವಿಶೇಷವೆನೆಂದರೆ ಶ್ರೀ ರಾಮನ ಪಾದ ಮುದ್ರೆಗಳು. ಇವು ಸ್ವಯಂ ಶ್ರೀ ರಾಮನ ಪಾದ ಮುದ್ರೆಗಳು ಇವೆಯಾದ್ದರಿಂದ ಭಕ್ತರು ಅತ್ಯಂತ ಪವಿತ್ರವಾದುದು ಎಂದು ಆರಾಧಿಸುತ್ತಾರೆ.

Photo Courtesy: rama / Marcus334

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ದಶರಥ ಭವನ

ದಶರಥ ಭವನ ನಗರದ ಮಧ್ಯದಲ್ಲಿದೆ. ಶ್ರೀರಾಮನ ತಂದೆಯಾದ ದಶರಥನ ರಾಜ ಮಂದಿರವಿರುವ ಸ್ಥಳವೇ ಎಂದು ನಂಬುತ್ತಾರೆ. ಶ್ರೀ ರಾಮನು ತನ್ನ ಸಹೋದರರೊಂದಿಗೆ ತನ್ನ ಬಾಲ್ಯವನ್ನು ಹಾಗು ಯವ್ವನವನ್ನು ಕಳೆದ ಪ್ರದೇಶವೇ ಆಗಿದೆ. ಈ ಭವನದಲ್ಲಿ ಸೀತಾ ಸಮೇತನಾದ ಶ್ರೀರಾಮ, ಲಕ್ಷಣ ಸಮೇತನಾಗಿರುವ ವಿಗ್ರಗಳು ಇವೆ. ಈ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ಆಧ್ಯಾತ್ಮಿಕತೆ ಹೆಚ್ಚು ಮಾಡುತ್ತದೆ. ಶ್ರೀರಾಮನು ವಾಸವಿದ್ದ ಪ್ರದೇಶ ಎಂದು ಭಾವಿಸುವ ಈ ಪ್ರದೇಶವನ್ನು ನೋಡುವ ಸಲುವಾಗಿ ಅನೇಕ ಮಂದಿ ಭಕ್ತರು ವಿಶೇಷವಾಗಿ ಭೇಟಿ ನೀಡುತ್ತಿರುತ್ತಾರೆ.

Photo Courtesy: ayodhya

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಬಹು ಬೇಗಂ ಮಕ್ಬರಾ

ಮಕ್ಬರಾ ಅಥವಾ ಬಹು ಬೇಗಂ ಸಮಾಧಿಯನ್ನು ಷಜು-ಉದ್-ದೌಲಾ ನವಾಬನ ಪ್ರಿಯವಾದ ಪತ್ನಿಯ ಗುರುತಿಗಾಗಿ ಸ್ಥಾಪಿಸಿದರು. ಈ ಮಕ್ಬರಾ ಮೊಗಲ್ ನಿರ್ಮಾಣ ಶೈಲಿಗೆ ಉತ್ತಮವಾದ ಉದಾಹಣೆಯೇ ಆಗಿದೆ. ಚರಿತ್ರೆ ಸೃಷ್ಟಿಯಲ್ಲಿ ತಾಜ್ ಮಹಲ್‍ಗೆ ಪುನರ್ ಸೃಷ್ಟಿಯಾಗಿ ಇದನ್ನು 1816 ರಲ್ಲಿ ಸ್ಥಾಪಿಸಲಾಯಿತು. ಇದು ಬೆಳ್ಳಗಿನ ಅಮೃತ ಶಿಲೆಯಿಂದ ಚಂದ್ರ ಕಾಂತಿಯಲ್ಲಿ ಕಾಣಿಸುತ್ತದೆ. ಈ ಸಮಾಧಿಯು ಪ್ರಕಾಶವಂತವಾಗಿ ಅಮರತ್ವವಾಗಿರುವಂತೆ ಕಾಣುತ್ತದೆ. ಇದು ಸುಮಾರು 42 ಮೀಟರ್ ಎತ್ತರದಲ್ಲಿದ್ದು, ಬಣ್ಣದ ಫೈಜಾಬಾದ್‍ನಲ್ಲಿನ ಪರಿಸರ ಸುಂದರವಾದ ದೃಶ್ಯಗಳು ನೀಡುತ್ತದೆ.

Photo Courtesy: up tourism

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ನಾಗೇಶ್ವರನಾಥ ದೇವಾಲಯ

ಅಯೋಧ್ಯೆಯಲ್ಲಿನ ರಾಮ ಕಿ ಪೈರಿಯಲ್ಲಿರುವ ಈ ದೇವಾಲಯವು ಹೆಸರೇ ಸೂಚಿಸುವಂತೆ ನಾಗೇಶ್ವರನಾಥ ಮತ್ತು ನಾಗರ ದೈವವಾಗಿ ಪ್ರಸಿದ್ಧಿಯನ್ನು ಹೊಂದಿರುವ ಮಹಾ ಶಿವನಿಗೆ ಅಂಕಿತವಾಗಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ 12 ಜ್ಯೋತಿರ್‍ಲಿಂಗಗಳು ಇವೆ. ಪುರಾಣಗಳ ಪ್ರಕಾರ ಒಂದು ದಿನ ಶ್ರೀ ರಾಮನ ಚಿಕ್ಕ ಮಗನಾದ ಕುಶನು ಸರಯು ನದಿಯಲ್ಲಿ ಸ್ನಾನ ಮಾಡುವಾಗ ನೀರಿನಲ್ಲಿ ಬಿದ್ದು ಹೋಗುತ್ತಾನೆ. ಎಷ್ಟೇ ಹುಡುಕಿದರು ಸಿಗುವುದಿಲ್ಲ, ಕೊನೆಯದಾಗಿ ಮಹಾ ಶಿವನ ಭಕ್ತೆ ಒಂದು ಸರ್ಪ ಕುಮಾರಿ ನಾಗ ಕನ್ಯೆಯು ಕುಶನನ್ನು ಉಳಿಸುತ್ತಾಳೆ. ಇದಕ್ಕೆ ಕೃತಜ್ಞತೆಯ ಸಲುವಾಗಿ ನಾಗೇಶ್ವರನಾಥ ದೇವಾಲಯವನ್ನು ಕುಶನು ನಿರ್ಮಾಣ ಮಾಡುತ್ತಾನೆ.

Photo Courtesy: Gopal Ganesh

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಟ್ರೆಟಾ-ಕೆ0-ಠಾಕೂರ್

ಶಾಸನದ ಪ್ರಕಾರ, ರಾವಣಸುರನ ಮೇಲೆ ವಿಜಯವನ್ನು ಶ್ರೀರಾಮ ಆಶ್ವಮೇಧ ಯಾಗವನ್ನು ನಿರ್ವಹಿಸುತ್ತಾನೆ. ಪ್ಯಾಲೆಸ್ ನಿರ್ಮಾಣ ಮಾಡಿದ ಟ್ರೆಟಾ-ಕೆಂ-ಠಾಕೂರ್ ಎಂಬ ದೇವಾಲಯದಲ್ಲಿ ಈ ಯಜ್ಞವನ್ನು ನಿರ್ವಹಿಸುತ್ತಾನೆ. ಹಿಮಾಚಲ ಪ್ರದೇಶದಲ್ಲಿನ ಕುಲು ರಾಜಾ ಅಯೋಧ್ಯೆಯಲ್ಲಿನ ನಯಾಘೂಟ್‍ನಲ್ಲಿ 300 ವರ್ಷಕ್ಕಿಂತ ಹಿಂದೆ ಈ ದೇವಾಲಯವನ್ನು ನಿರ್ಮಾಣ ಮಾಡಿದನು. ಸರಾಯು ನದಿ ತೀರದಲ್ಲಿರುವ ಮುಖ್ಯವಾದ ಮಂದಿರದಿಂದ ಸೀತಾ ರಾಮರ ಹಾಗು ಮೂರು ಜನರ ಸಹೋದರ ಪ್ರತಿಮೆಗಳನ್ನು ಇಲ್ಲಿ ಕಾಣಬಹುದಾಗಿದೆ. ಆ ಪ್ರತಿಮೆಗಳನ್ನು ಒಂದೇ ಒಂದು ಕಪ್ಪಗಿನ ಕಲ್ಲಿನಿಂದ ಕೆತ್ತನೆ ಮಾಡಿದ್ದಾರೆ. ಕಾರ್ತಿಕ ಮಾಸದಲ್ಲಿ ಅಥವಾ ಏಕಾದಶಿ ದಿನದಂದು ಮಾತ್ರವೇ ಈ ದೇವಾಲಯವನ್ನು ತೆರೆಯುತ್ತಾರೆ. ಅನೇಕ ಮಂದಿ ಭಕ್ತರು ಶ್ರೀ ರಾಮನ ಆಶೀರ್ವಾದಕ್ಕೆ ಇಲ್ಲಿ ಭೇಟಿ ನೀಡುತ್ತಿರುತ್ತಾರೆ.

Photo Courtesy: Ajay Kumar

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ವಾಯು ಮಾರ್ಗ ಮೂಲಕ:

ಅಯೋಧ್ಯೆಯಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಲಕ್ನೋ ವಿಮಾನ ನಿಲ್ದಾಣವು ಅಯೋಧ್ಯಕ್ಕೆ ಸಮೀಪದಲ್ಲಿಯೇ ಇರುವ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಯಾವುದಾದರೂ ಟ್ಯಾಕ್ಸಿ ಅಥವಾ ಬಸ್ಸಿನ ಮೂಲಕ ನಗರಕ್ಕೆ ತೆರಳಬಹುದಾಗಿದೆ. ಅಮೌಸಿ, ವಾರಣಾಸಿ ಮತ್ತು ಕಾನ್ಪೂರ್‍ನ ಸಮೀಪದಲ್ಲಿರುವ ದೇಶಿಯ ವಿಮಾನ ನಿಲ್ದಾಣವು ಆಯೋಧ್ಯೆಗೆ ಸಮೀಪದಲ್ಲಿದೆ.

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ಅಯೋಧ್ಯ ನಗರ - ಒಂದು ರಹಸ್ಯಾತ್ಮಕ ಪ್ರದೇಶ..!!

ರೈಲ್ವೆ ಮಾರ್ಗದ ಮೂಲಕ

ದೆಹಲಿ, ಲಕ್ನೋ, ವಾರಣಾಸಿ ಮತ್ತು ಅಲಹಾಬಾದ್‍ನಂತಹ ಪ್ರಧಾನವಾದ ನಗರಗಳಿಂದ ಅಯೋಧ್ಯೆಗೆ ರೈಲುಗಳು ಸಂಪರ್ಕ ಸಾಧಿಸುತ್ತವೆ. ಸಮೀಪದಲ್ಲಿರುವ ರೈಲ್ವೆ ಹಾಡ್ಸ್ ಅಲಹಾಬಾದ್ ಎಕ್ಸ್‍ಪ್ರೆಸ್, ಕೋಲ್ಕತ್ತ ಎಕ್ಸ್‍ಪ್ರೆಸ್ಸ್, ದೆಹಲಿ ಎಕ್ಸ್‍ಪ್ರೆಸ್‍ಗಳಿಂದ ಸುಲಭವಾಗಿ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X