» »ಕುತುಬ್ ಮಿನಾರ್‍ನ ಬಗ್ಗೆ ಕೆಲವು ಸತ್ಯಗಳು

ಕುತುಬ್ ಮಿನಾರ್‍ನ ಬಗ್ಗೆ ಕೆಲವು ಸತ್ಯಗಳು

Written By:

ದೆಹಲಿಯಲ್ಲಿರುವ ಕುತುಬ್ ಮಿನಾರ್‍ನ ಬಗ್ಗೆ ತಿಳಿಯದೇ ಇರುವವರು ಸಾಮಾನ್ಯವಾಗಿ ಯಾರು ಇಲ್ಲ. ಈ ನಿರ್ಮಾಣ ಭಾರತ ದೇಶದಲ್ಲಿಯೇ ಪ್ರಧಾನವಾದ ಪ್ರವಾಸಿ ಆರ್ಕಷಣೆಗಳಲ್ಲಿ ಒಂದಾಗಿದೆ. ಚರಿತ್ರೆಗಳಲ್ಲಿಯೇ ಉತ್ತಮವಾದ ಸ್ಮಾರಕಗಳಲ್ಲಿ ಕುತುಬ್ ಮಿನಾರ್ ಕೂಡ ಒಂದಾಗಿದೆ.

ಕುತುಬ್ ಮಿನಾರ್‍ನ ಸುತ್ತಮುತ್ತ ಪ್ರಧಾನವಾದ ಆರ್ಕಷಣೆಗಳ ಮೂಲಕ ಇನ್ನಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಕುತುಬ್ ಮಿನಾರ್ ನಿರ್ಮಾಣದಿಂದಾಗಿ ದೇಶದ ಕೀರ್ತಿ ಪ್ರತಿಷ್ಟೆಗೆ ಇನ್ನಷ್ಟು ಮೆರುಗು ತಂದಿದೆ. ಹಾಗಾದರೆ ಇಂಥಹ ಪ್ರಧಾನವಾದ ಪ್ರವಾಸಿ ತಾಣ ಆರ್ಕಷಣೆಯ ಬಗ್ಗೆ ಕೆಲವು ಕುತೂಹಲಕಾರಿಯಾದ ವಿಷಯಗಳನ್ನು ತಿಳಿಯೋಣ...

ಎಲ್ಲಿದೆ?

ಎಲ್ಲಿದೆ?

ಕುತುಬ್ ಮಿನಾರ್ ಸ್ಮಾರಕವು ದೆಹಲಿಯಲ್ಲಿರುವ ಪ್ರಸಿದ್ಧವಾದ ಕಟ್ಟಡವಾಗಿದೆ. ಇದರಲ್ಲಿ ಮುಖ್ಯವಾದುದು ಎಂದರೆ ಅದು ಕುತುಬ್ ಮಿನಾರ್ ಗೋಪುರ. ಇದನ್ನು ಗುಲಾಮ ಸಂತತಿಯ ಮೊದಲ ಸುಲ್ತಾನ ಕುತ್ಬುದ್ದೀನ್ ಐಬಕ್ ನಿರ್ಮಾಣ ಮಾಡಿದನು.

ಯುನೆಸ್ಕು

ಯುನೆಸ್ಕು

ದೆಹಲಿಗೆ ಭೇಟಿ ನೀಡುವ ಪ್ರವಾಸಿಗರು ತಪ್ಪದೇ ಕುತುಬ್ ಮಿನಾರ್‍ಗೆ ತೆರಳುತ್ತಾರೆ. ಈ ಮನೋಹರವಾದ ಕಟ್ಟಡವು ಯುನೆಸ್ಕು ವಿಶ್ವ ಪರಂಪರೆ ಪಟ್ಟಿಯಲ್ಲಿ ಕುತುಬ್ ಮಿನಾರ್‍ನ್ನು ಸೇರಿಸಲಾಗಿದೆ.

ಕುತುಬ್ ಮಿನಾರ್‍

ಕುತುಬ್ ಮಿನಾರ್‍

ಎತ್ತರವಾದ ಈ ಕುತುಬ್ ಮಿನಾರ್‍ನನ್ನು ಇಟ್ಟಿಗೆಗಳಿಂದ ನಿರ್ಮಾಣ ಮಾಡಲಾಗಿರುವ ಅತ್ಯಂತ ಎತ್ತರವಾದ ಕಟ್ಟಡವಾಗಿದೆ. ಕುತುಬ್ ಮಿನಾರ್‍ನ ಎತ್ತರ 72.5 ಮೀಟರ್ ಹಾಗಾಗಿ ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಗೋಪುರ ನಿರ್ಮಾಣ ಎಂದು ಪ್ರಖ್ಯಾತತೆ ಪಡೆದಿದೆ.

ಕುತುಬ್ ಮಿನಾರ್‍

ಕುತುಬ್ ಮಿನಾರ್‍

ಕುತುಬ್ ಮಿನಾರ್ ನಿರ್ಮಾಣ ಶೈಲಿ ಅದ್ಭುತವಾಗಿದೆ. ಅಂದಿನ ವಾಸ್ತುಶಿಲ್ಪ ಶೈಲಿಗೆ ನಾವು ತಲೆಬಾಗಲೇ ಬೇಕು. ಕುತುಬ್ ಮಿನಾರ್ ಇಂಡೋ-ಮೊಗಲ್ ಶಿಲ್ಪ ಶೈಲಿಗಳಿಂದ ಕೂಡಿದ ಸುಂದರವಾದ ಸೂಕ್ಷ್ಮ ಕೆತ್ತನೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಕುತುಬ್ ಮಿನಾರ್‍

ಕುತುಬ್ ಮಿನಾರ್‍

ಕುತುಬ್ ಮಿನಾರ್ ಕಾಂಪ್ಲೆಕ್ಸ್‍ನ ಒಳಭಾಗದಲ್ಲಿ ಕಬ್ಬಿಣದ ಸ್ತಂಭಗಳಲ್ಲಿ ಅದಕ್ಕೆ ಸಂಬಂಧಿಸಿದ ಹಲವಾರು ರಹಸ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಹಾಗೆಯೇ ಹೊರಭಾಗದಲ್ಲಿ ಕೆಂಪು ಮರಳುಶಿಲೆ ಮತ್ತು ಅಮೃತಶಿಲೆಯಿಂದ ಕೂಡಿದೆ.

ಕುತುಬ್ ಮಿನಾರ್‍

ಕುತುಬ್ ಮಿನಾರ್‍

ಇಲ್ಲಿ ಸುಮಾರು 379 ಹಂತಗಳ ಸುರುಳಿಯಾಕಾರದ ಮೆಟ್ಟಿಲುಗಳಿವೆ. ಇದರ ವಿನ್ಯಾಸವನ್ನು ಪಶ್ಚಿಮ ಆಫ್ಘಾನಿಸ್ತಾನದ ಮಿನರೆಟ್ ಆಫ್ ಜಾಮ್ ಅನ್ನು ಆಧರಿಸಿದೆ ಎಂದು ಭಾವಿಸಲಾಗಿದೆ.

ಕುತುಬ್ ಮಿನಾರ್‍

ಕುತುಬ್ ಮಿನಾರ್‍

ಈ ಕುತುಬ್ ಮಿನಾರ್‍ನಲ್ಲಿ ಹಲವಾರು ಐತಿಹಾಸಿಕದ ಸ್ಮಾರಕಗಳನ್ನು ಕಾಣಬಹುದಾಗಿದೆ. ಇದರಲ್ಲಿ ಖುವಾಟ್-ಉಲ್-ಇಸ್ಲಾಮಿಕ್ ಮಸೀದಿ, ದೆಹಲಿಯ ಐರನ್ ಪಿಲ್ಲರ್‍ಗಳಿವೆ. ಗೋಪುರವನ್ನು 19 ನೇ ಶತಮಾನದಲ್ಲಿ ಪುನಃ ಸ್ಥಾಪನೆಯ ಅವಶೇಷವಾಗಿದೆ.

ಕುತುಬ್ ಮಿನಾರ್‍

ಕುತುಬ್ ಮಿನಾರ್‍

1974 ಕ್ಕಿಂತ ಮುಂಚೆ, ಸಾಮಾನ್ಯ ಜನರಿಗೆ ಆಂತರಿಕ ಮೆಟ್ಟಿಲುಗಳ ಮೂಲಕ ಪ್ರವೇಶದ ಅನುಮತಿಯನ್ನು ನೀಡಲಾಗುತ್ತಿತ್ತು. 1981 ಡಿಸೆಂಬರ್ 4 ರಂದು ಮೆಟ್ಟಿಲ ಬೆಳಕು ಇಲ್ಲದೇ ಇದ್ದಿದ್ದರಿಂದ ಹಲವಾರು ಪ್ರವಾಸಿಗರು ಮೃತ ಪಟ್ಟರು.

ಕುತುಬ್ ಮಿನಾರ್‍

ಕುತುಬ್ ಮಿನಾರ್‍

ಜನರ ನೂಕು ನುಗ್ಗಲಿನಲ್ಲಿ ಸುಮಾರು 45 ಮಂದಿ ಸಾವನ್ನಪ್ಪಿದ್ದರು ಮತ್ತು ಕೆಲವರು ಗಾಯಗೊಂಡಿದ್ದರು. ಇವುಗಳಲ್ಲಿ ಹೆಚ್ಚಿನದಾಗಿ ಮಕ್ಕಳಾಗಿದ್ದರು. ಹಾಗಾಗಿಯೇ ಅಂದಿನಿಂದ ಗೋಪುರದ ಒಳಗೆ ಸಾರ್ವಜನಿಕ ಪ್ರವೇಶವನ್ನು ನಿಲ್ಲಿಸಲಾಯಿತು.

ಕುತುಬ್ ಮಿನಾರ್‍

ಕುತುಬ್ ಮಿನಾರ್‍

ಕುತುಬ್ ಮಿನಾರ್ ನಿರ್ಮಾಣದ ಸುತ್ತಮುತ್ತ ಸುಮಾರು 27 ದೇವಾಲಯಗಳು ಇವೆ. ಈ ದೇವಾಲಯಗಳು ಒಂದು ಕಾಲದಲ್ಲಿ ನಮ್ಮ ದೇಶಕ್ಕೆ ಯುದ್ಧದ ನೆಪದಲ್ಲಿ ದಾಳಿ ಮಾಡಿ ಹಲವಾರು ದೇವಾಲಯವನ್ನು ಧ್ವಂಸಗೊಳಿಸಿದರು.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಸಮೀಪದ ವಿಮಾನ ನಿಲ್ದಾಣ
ಕುತುಬ್ ಮಿನಾರ್‍ಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.

ಸಮೀಪದ ರೈಲ್ವೆ ನಿಲ್ದಾಣ

ಸಮೀಪದ ರೈಲ್ವೆ ನಿಲ್ದಾಣ

ಕುತುಬ್ ಮಿನಾರ್‍ಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಕುತುಬ್ ಮಿನಾರ್ ಮೆಟ್ರೋ ಸ್ಟೇಷನ್ ಆಗಿದೆ. ಇಲ್ಲಿಂದ ಕೇವಲ 3 ನಿಮಿಷಗಳ ಕಾಲುನಡಿಗೆಯಲ್ಲಿ ಸುಲಭವಾಗಿ ಐತಿಹಾಸಿಕ ಸ್ಮಾರಕ ಕುತುಬ್ ಮಿನಾರ್‍ಗೆ ತಲುಪಬಹುದಾಗಿದೆ.

Please Wait while comments are loading...