Search
  • Follow NativePlanet
Share
» »ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

ಪೂರಿ ಜಗನ್ನಾಥನ ದೇವಾಲಯವು ಒರಿಸ್ಸಾ ರಾಜ್ಯದಲ್ಲಿದೆ. ಭಾರತ ದೇಶದ ಪೂರ್ವ ಭಾಗದಲ್ಲಿ ಬಂಗಾಳಕೊಲ್ಲಿಯ ತೀರದಲ್ಲಿದೆ. ಇದು ಒರಿಸ್ಸಾ ರಾಜಧಾನಿಯಾದ ಭುವನೇಶ್ವರದಿ ಂದ 60 ಕಿ.ಮೀ ದೂರದಲ್ಲಿದೆ. ಪೂರಿ ನಗರವು ಅನೇಕ ಪ್ರಸಿದ್ಧಿಯನ್ನು ಪಡೆದಿದೆ. ಜಗನ್ನಾಥ ದೇವಾಲಯವನ್ನು ಜಗನ್ನಾಥ ಪೂರಿ ಎಂದು ಕೂಡ ಕರೆಯುತ್ತಾರೆ. ಭಾರತ ದೇಶದಲ್ಲಿ ಪ್ರಜೆಗಳು ಹಿಂದೂ ಧರ್ಮ ತೀರ್ಥ ಯಾತ್ರೆ ಎಂದು ಪೂರಿಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ರಾಧಾ, ದುರ್ಗಾ, ಲಕ್ಷ್ಮಿ, ಪಾರ್ವತಿ, ಸತಿ ಮತ್ತು ಕೃಷ್ಣ ಹಾಗು ಶಕ್ತಿ ದೇವಾಲಯಗಳು ಕೂಡ ಇದೆ. ಜಗನ್ನಾಥನ ಈ ಸ್ಥಳವನ್ನು ಪವಿತ್ರವಾದ ಭೂಮಿಯಾಗಿ ಭಾವಿಸುತ್ತಾರೆ. ಪ್ರಸ್ತುತ ಇರುವ ಪೂರಿಯನ್ನು ಒಂದು ಸಮಯದಲ್ಲಿ ಪುರುಷೋತ್ತಮ ಪುರಿ, ಪುರುಷೋತ್ತಮ ಕ್ಷೇತ್ರ, ಪುರುಷೋತ್ತಮ ಧರ್ಮ, ನೀಲಾಚಲ, ನೀಲಾದ್ರಿ, ಶ್ರೀಕ್ಷೇತ್ರ, ಶಂಖಕ್ಷೇತ್ರದಂತಹ ಅನೇಕ ಹೆಸರುಗಳಿಂದ ಕರೆಯುತ್ತಿದ್ದಾರೆ.

1.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

1.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

ಪೂರಿಯಲ್ಲಿ ದೊಡ್ಡ ಉತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ರಥಯಾತ್ರೆ ಅಥವಾ ರಥ ಫೆಸ್ಟಿವಲ್ ಸಮಯದಲ್ಲಿ ಭೇಟಿ ನೀಡುತ್ತಿರುತ್ತಾರೆ. ಹಬ್ಬದ ಸಮಯದಲ್ಲಿ ದೇವತೆಗಳಾದ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯರ ವಿಗ್ರಹಗಳನ್ನು ಸುಂದರವಾಗಿ ಅಲಂಕಾರ ಮಾಡಿ ಉತ್ಸವವನ್ನು ಮಾಡಿ ಜಗನ್ನಾಥ ದೇವಾಲಯಕ್ಕೆ ತೆಗೆದುಕೊಂಡು ಹೋಗುತ್ತಾರೆ.

2.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

2.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

ಈ ಉತ್ಸವಗಳು ಸಾಧಾರಣವಾಗಿ ಜುಲೈ ತಿಂಗಳಿನಲ್ಲಿ ನಡೆಯುತ್ತದೆ. ಈ ಉತ್ಸವವು ಪೂರಿ ಪ್ರವಾಸಿ ಕ್ಯಾಲೆಂಡರ್‍ನಲ್ಲಿ ಅತ್ಯಂತ ಮುಖ್ಯವಾದ ಆಕ್ಷರಣೆಯಾಗಿ ಹೇಳಿಕೊಳ್ಳಬಹುದು. ಪೂರಿ ಮತ್ತು ಸುತ್ತ-ಮುತ್ತಲಿನ ಪರಿಸರದಲ್ಲಿ ಪ್ರವಾಸಕ್ಕೆ ಭೇಟಿ ನೀಡಬಹುದಾದ ಅನೇಕ ದೇವಾಲಯಗಳು ಕೂಡ ಇವೆ. ಅವುಗಳೆಲ್ಲಾವನ್ನು ಕೂಡ ಭೇಟಿ ನೀಡಿ ಬರಬಹುದು. ಹಿಂದೂಗಳಿಗೆ ಪೂರಿ ಭಾರತ ದೇಶದಲ್ಲಿರುವ 7 ಅತ್ಯಂತ ಪವಿತ್ರ ಸ್ಥಳಗಳಲ್ಲಿ ಇದು ಕೂಡ ಒಂದು ಎಂದು ಹೇಳಲಾಗುತ್ತದೆ.

3.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

3.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

ಇಲ್ಲಿ ಪ್ರಪಂಚ ಪ್ರಖ್ಯಾತಿ ಜಗನ್ನಾಥ ದೇವಾಲಯವೇ ಅಲ್ಲದೇ ಚಕ್ರ ತೀರ್ಥ ದೇವಾಲಯ, ಮುಸಿಮ ಎಂಬ ದೇವಾಲಯ, ಸುನಾರ್ ಗೌರಂಗ್ ದೇವಾಲಯ, ಶ್ರೀ ಲೋಕನಾಥ್ ದೇವಾಲಯ, ಶ್ರೀ ಗುಂಡಿಚ ದೇವಾಲಯ, ಅಲರ್ನಾಥ ದೇವಾಲಯ ಮತ್ತು ಬಲಿಹಾರ ಚಂಡಿ ದೇವಾಲಯ ಮೊದಲಾದವು ಹಿಂದೂಗಳಿಗೆ ಮುಖ್ಯವಾದ ಪ್ರಾರ್ಥನ ಪ್ರದೇಶಗಳಿವೆ.

4.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

4.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

ಗೋವರ್ಧನ ಮಠದಂತಹ ಮಠಗಳು ದೈವಿಕ ಉಪಶಮನವನ್ನು ನೀಡುತ್ತದೆ. ಇಲ್ಲಿ ಬೇಡಿ ಹನುಮಾನ್ ದೇವಾಲಯಕ್ಕೆ ಸಂಬಂಧಿಸಿದಂತೆ ಸ್ಥಾನಿಕ ಪುರಾಣಗಳು ಕೂಡ ಹೊಂದಿದೆ. ಪೂರಿ ಬೀಚ್ ಮತ್ತೊಂದು ಮುಖ್ಯವಾದ ಪ್ರವಾಸಿ ಆಕರ್ಷಣೆ ಕೇಂದ್ರವಾಗಿದೆ. ಇಲ್ಲಿನ ಪೂರಿ ಬೀಚ್ ಫೆಸ್ಟಿವಲ್ ಪೂರಿ ಪ್ರವಾಸಿಗರಿಗೆ ಆಕರ್ಷಣೆಯನ್ನು ಉಂಟು ಮಾಡುತ್ತದೆ.

5.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

5.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

ಈ ಬೀಚ್ ಹಿಂದೂಗಳಿಗೆ ಪವಿತ್ರವಾದುದು ಎಂದು ಭಾವಿಸುತ್ತಾರೆ. ಅಷ್ಟೇ ಅಲ್ಲ ಈ ಬೀಚ್ ಸುಂದರವಾದ ವೀಕ್ಷಣೆ ಮಂತ್ರ ಮುಗ್ಧರನ್ನಾಗಿಸುತ್ತದೆ. ಸೂರ್ಯಾಸ್ತವನ್ನು ಹಾಗು ಸೂರ್ಯೋದಯವು ಅತ್ಯಂತ ಸುಂದರವಾಗಿ ಕಾಣುವ ಸಲುವಾಗಿ ಈ ಸ್ಥಳಕ್ಕೆ ನೂರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಬೀಚ್ ನೋಡಿದ ನಂತರವೇ ತೀರ್ಥ ಯಾತ್ರೆ ಮುಗಿಯುತ್ತದೆ ಎಂದು ಹೇಳುತ್ತಾರೆ.

6.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

6.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

ಪೂರಿಯಿಂದ ಸುಮಾರು 14 ಕಿ.ಮೀ ದೂರದಲ್ಲಿ ಭಾರತ ದೇಶದ ಸಾಂಸ್ಕøತಿಕ ರಾಜಧಾನಿಯಾದ ರಘುರಾಜ್ ಪುರ್ ಇದೆ. ಒರಿಸ್ಸಾದಲ್ಲಿ ಅತ್ಯಂತ ಪ್ರಮುಖ ಪುಣ್ಯಕ್ಷೇತ್ರವಾದ ಷಾಖಿಗೋಪಾಲ್ ಪೂರಿಯಿಂದ ಕೇವಲ 20 ಕಿ.ಮೀ ದೂರದಲ್ಲಿದೆ.

7.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

7.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

ಪ್ರೇಮಿಗಳಿಗೆ ಸುಂದರವಾದ ವಾತಾವರಣ ಅಸ್ವಾಧಿಸಲು ಮತ್ತೊಂದು ಅದ್ಭುತವಾದ ಆಕರ್ಷಣೆ ಕೇವಲ ಪೂರಿಯಿಂದ ಸುಮಾರು 50 ಕಿ.ಮೀ ದೂರದಲ್ಲಿ ಸಾತ್ಪದಾದ ಸಮೀಪದಲ್ಲಿದೆ. ಪೂರಿಯಿಂದ ಸಾತ್ಪದಾ ಸೇರಿಕೊಳ್ಳಲು ಅನೇಕ ಬಸ್ಸುಗಳು ಮತ್ತು ಟ್ಯಾಕ್ಸಿಗಳು ದೊರೆಯುತ್ತವೆ.

8.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

8.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

ರಿ.ಪೂ 1174 ರಲ್ಲಿ ಕಳಿಂಗ ರಾಜ್ಯವನ್ನು ಆಳ್ವಿಕೆ ಮಾಡಿದ ಭೀಮದೇವನು ಪೂರಿಜಗನ್ನಾಥ ದೇವಾಲಯವನ್ನು ಸಂಪೂರ್ತಿಯಾಗಿ ನಿರ್ಮಾಣ ಮಾಡಿದ ಹಾಗೆ ಅಲ್ಲಿ ಲಭಿಸಿದ ರಾಗಿ ಫಲಕಗಳ ಮೇಲೆ ಲಿಖಿತಗೊಂಡಿರುವ ಶಾಸನದಿಂದ ತಿಳಿಯುತ್ತದೆ. ಕ್ರಿ.ಶ 1558 ರಲ್ಲಿ ಅಫ್ಘನ್ ಸೇನೆಗಳು ಪೂರಿ ದೇವಾಲಯದ ಮೇಲೆ ಅನೇಕ ಬಾರಿ ದಾಳಿಗಳು ಮಾಡಿವೆ. ಆ ನಂತರ ಕೆಲವು ವರ್ಷಗಳ ನಂತರ ರಾಮಚಂದ್ರ ಎಂಬ ರಾಜನು ಆಳ್ವಿಕೆ ನಡೆಸಿದ್ದಾರೆ.

9.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

9.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

ಆತನ ಕಾಲದಲ್ಲಿ ಪೂರಿ ದೇವಾಲಯವನ್ನು ಪ್ರಕ್ಷಾಳನ ಮಾಡಿ ಜಗನ್ನಾಥನಿಗೆ ಮತ್ತೊಂದು ಪೂಜೆಗಳು ಮಾಡುವುದು ಪ್ರಾರಂಭಿಸಿದರು. ಕೆಲವರು ಪುರಾವಸ್ತು ಶಾಸ್ತ್ರಜ್ಞರ ಅಭಿಪ್ರಾಯದ ಪ್ರಕಾರ ಪ್ರಸ್ತುತ ಪೂರಿ ದೇವಾಲಯದಲ್ಲಿರುವ ಸ್ಥಳದಲ್ಲಿ ಒಂದು ಬೌದ್ಧ ಸ್ತೂಪ ಇರುತ್ತಿತ್ತಂತೆ. ಆ ಸ್ತೂಪದ ಕೆಳಗೆ ಗೌತಮಬುದ್ಧನ ದಂತವನ್ನು ಭದ್ರಗೊಳಿಸಿದ ನಂತರ ಪೂರಿ ಬೌದ್ಧಸ್ತೂಪವು ನಾಶಗೊಳಿಸಿ ಅಲ್ಲಿರುವ ಬುದ್ಧನನ್ನು ದಂತವನ್ನು ಶ್ರೀಲಂಕದ ಕ್ಯಾಂಡಿ ಪಟ್ಟಣಕ್ಕೆ ಕಳುಹಿಸಿದರು ಎಂದು ತಿಳಿದುಬರುತ್ತದೆ.

10.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

10.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

ಕ್ರಿ.ಶ 10 ನೇ ಶತಮಾನದ ಕಾಲದಲ್ಲಿ ಒರಿಸ್ಸಾವನ್ನು ಆಳ್ವಿಕೆ ಮಾಡುತ್ತಿರುವ ಸೋಮವಂಶದ ರಾಜನಾದ ವೈಷ್ಣವ ಧರ್ಮಕ್ಕೆ ಪ್ರೋಹಿಸ್ಸಾಹಿಸುತ್ತಿದ್ದರು. ಫಲಿತವಾಗಿ ಜಗನ್ನಾಥನ ಪೂಜೆ ಅಪಾರವಾಗಿ ಪ್ರಸಿದ್ಧಿಯನ್ನು ಪಡೆಯಿತು. ಪಂಜಾಬ್‍ನಲ್ಲಿ ಆಳ್ವಿಕೆ ಮಾಡಿದ ಸಿಖ್ ಮಹಾರಾಜನಾದ ರಂಜಿತ್ ಸಿಂಗ್ ಪೂರಿ ಜಗನ್ನಾಥಕ್ಕೆ ಸುಮಾರು 100 ಕೆ.ಜಿ ಬಂಗಾರವನ್ನು ನೀಡಿದನು. ತಮ್ಮ ಧರ್ಮ ದೇವಾಲಯವಾದ ಸ್ವರ್ಣ ದೇವಾಲಯಕ್ಕೆ ನೀಡಿದ ಬಂಗಾರಕ್ಕಿಂತ ಅಧಿಕ ಪ್ರಮಾಣದಲ್ಲಿ ಜಗನ್ನಾಥ ದೇವಾಲಯಕ್ಕೆ ಬಂಗಾರವನ್ನು ನೀಡಿದ ರಾಜನೆಂದರೆ ಅದು ಸಿಖ್ ರಾಜನಾದ ಧನ್ಯನು.

10.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

10.ಪೂರಿ ಜಗನ್ನಾಥನ ದೇವಾಲಯಕ್ಕೆ 100 ಕೆ.ಜಿ ಬಂಗಾರ ನೀಡಿದವರು ಯಾರು ಗೊತ್ತ?

ರಂಜಿತ್ ಸಿಂಗ್‍ಗೆ ಪೂರಿ ಜಗನ್ನಾಥನ ಮೇಲೆ ಭಕ್ತಿಯ ಪರಾಕಾಷ್ಟೆಯಾಗಿ ತನ್ನ ಹತ್ತಿರವಿರುವ ಪ್ರಪಂಚ ಪ್ರಖ್ಯಾತಿಯಾದ ಕೊಹಿನೂರ್ ವಜ್ರವನ್ನು ಜಗನ್ನಾಥನಿಗೆ ಸಮರ್ಪಿಸಬೇಕು ಎಂದು ಒಂದು ಪತ್ರದಲ್ಲಿ ಬರೆದಿದ್ದಾನೆ ಎಂದು ಹೇಳಲಾಗಿದೆ. ದುರಾದೃಷ್ಟವಶಾತ್ತು ರಂಜಿತ್ ಸಿಂಗ್ ಮರಣಿಸಿದ ತಕ್ಷಣವೇ ಆತನ ರಾಜ್ಯವನ್ನು ಬ್ರಿಟೀಷ್‍ರು ಆಕ್ರಮಿಸಿ ಪೂರಿ ಜಗನ್ನಾಥನಿಗೆ ಸೇರಬೇಕು ಎಂದು ಕೊಹಿನೂರ್ ವಜ್ರವನ್ನು ಅವರು ಸ್ವಾಧೀನ ಮಾಡಿಕೊಂಡರು.

12.ಸ್ವರ್ಗ ದ್ವಾರ

12.ಸ್ವರ್ಗ ದ್ವಾರ

ಪೂರಿಯಲ್ಲಿ ಸ್ವರ್ಗ ದ್ವಾರ ಎಂಬ ಒಂದು ಹಿಂದೂ ಧರ್ಮದ ಶ್ಮಶಾನವಿದೆ. ಹೆಸರೇ ಸೂಚಿಸುವಂತೆ ಇದು ಸ್ವರ್ಗಕ್ಕೆ ದ್ವಾರ ಎಂದು ಹಿಂದೂಗಳು ನಂಬುತ್ತಾರೆ. ಭಾರತ ದೇಶ ವ್ಯಾಪಕವಾಗಿ ಈ ಸ್ಥಾನದಲ್ಲಿ ನಡೆದ ವಿವಿಧ ಪೌರಾಣಿಕ ಕಥೆಗಳ ಕಾರಣವಾಗಿ ಸ್ವರ್ಗದ್ವಾರಕ್ಕೆ ಭೇಟಿ ನೀಡಿದರು. ಈ ಪವಿತ್ರವಾದ ಪ್ರದೇಶದಲ್ಲಿ ಮರಣ ಹೊಂದಿದರೆ ನೇರವಾಗಿ ಸ್ವರ್ಗಕ್ಕೆ ತೆರಳಿ ಪೂರ್ತಿ ಮೋಕ್ಷವನ್ನು ಹೊಂದುತ್ತಾರೆ ಎಂದು ನಂಬುತ್ತಾರೆ. ಭಕ್ತರು ಮುಕ್ತಿಯನ್ನು ಹೊಂದುವ ಸಲುವಾಗಿ ಸ್ವರ್ಗ ದ್ವಾರ ಬೀಲ್‍ನಲ್ಲಿ ಸ್ನಾನವನ್ನು ಮಾಡುತ್ತಾರೆ.

13.ಸಾತ್ಪದಾ ಡಾಲ್ಫಿನ್ ಕೇಂದ್ರ

13.ಸಾತ್ಪದಾ ಡಾಲ್ಫಿನ್ ಕೇಂದ್ರ

ಸಾತ್ಪದಾ ಡಾಲ್ಫಿನ್ ಕೇಂದ್ರ ಪೂರಿಯಿಂದ ಸುಮಾರು 50 ಕಿ.ಮೀ ದೂರದಲ್ಲಿ ಒರಿಸ್ಸಾ ರಾಜ್ಯದ ಪೂರ್ವಕ್ಕೆ ಇದೆ. ಇದು ರಾಜ್ಯದಲ್ಲಿನ ಅತ್ಯಂತ ಪ್ರಸಿದ್ಧ ಹೊಂದಿರುವ ಪ್ರವಾಸಿ ಆಕರ್ಷಣೆಯಲ್ಲಿ ಒಂದಾಗಿದೆ. ಸುಂದರವಾದ ಡಾಲ್ಫಿನ್‍ನ ಜೊತೆ ಜೊತೆಗೆ ಒಂದು ಅಸಾಧಾರಣ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವನ್ನು ವೀಕ್ಷಣೆ ಮಾಡಲು ಅದ್ಭುತವಾದ ಸ್ಥಳವೇ ಆಗಿದೆ.

14.ಗೋವರ್ಧನ ಮಠ

14.ಗೋವರ್ಧನ ಮಠ

ಗೋವರ್ಧನ ಮಠವನ್ನು ಸಾಧಾರಣವಾಗಿ ವರ್ಧನ ಮಠ ಎಂದೇ ಕರೆಯುತ್ತಾರೆ. ವಿವಿಧ ಸನ್ಯಾಸಿಗಳು ಸಮೂಹಗಳ ಒಂದಾಗಿ ಇರುವುದಕ್ಕೆ ಆದಿ ಶಂಕರಾಚಾರ್ಯರ ಮೂಖಾಂತರ 8 ನೇ ಶತಮಾನದಲ್ಲಿ ಸ್ಥಾಪಿಸಲಾಯಿತು. 4 ಪ್ರಧಾನವಾದ ವೇದಗಳಲ್ಲಿ ಒಂದಾಗಿದೆ ಈ ಮಠ. ಪೂರಿ ನಗರದಲ್ಲಿರುವ ಗೋವರ್ಧನ ಮಠವು ಋಗ್ವೇದದ್ದು ಎಂದು ನಂಬಲಾಗಿದೆ. ಈ ಆಶ್ರಮದಲ್ಲಿ ಜಗನ್ನಾಥ (ಭೈರವ) ಮತ್ತು ದೇವಿ ವಿಮಲ (ಭೈರವಿ) ಪ್ರಧಾನವಾದ ದೇವತೆಗಳನ್ನು ಪೂಜಿಸುವುದರಿಂದ ಜಗನ್ನಾಥ ದೇವಾಲಯದ ಚರಿತ್ರೆಯನ್ನು ತಿಳಿಯಬಹುದು.

15.ಶ್ರೀ ಲೋಕನಾಥ ದೇವಾಲಯ

15.ಶ್ರೀ ಲೋಕನಾಥ ದೇವಾಲಯ

ಶ್ರೀ ಲೋಕನಾಥ ದೇವಾಲಯವು ಪೂರಿ ಜಗನ್ನಾಥನ ದೇವಾಲಯದ ನಂತರ ಸ್ಥಾನದಲ್ಲಿರುವ ದೇವಾಲಯವಾಗಿದೆ. ಪ್ರಪಂಚ ಪ್ರಸಿದ್ಧಿಯನ್ನು ಜಗನ್ನಾಥನ ದೇವಾಲಯದಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಈ ದೇವಾಲಯವು ಶಿವನಿಗೆ ಅಂಕಿತವಾದ ದೇವಾಲಯವೇ ಆಗಿದೆ. ಇಲ್ಲಿ ಮಹಾ ಶಿವನು ಶನಿ ದೇವನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಇಲ್ಲಿರುವ ಕೊಳದ ಕೆಳಗೆ ಅಡಗಿಸಿಕೊಂಡಿದ್ದರು ಎಂದು ಹೇಳುತ್ತಾರೆ. ಈ ದೇವಾಲಯದಲ್ಲಿ ಲಿಂಗವನ್ನು ಶ್ರೀ ರಾಮನು ಪ್ರತಿಷ್ಟಾಪನೆ ಮಾಡಿದನು ಎಂದು ನಂಬಲಾಗಿದೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ರೈಲ್ವೆ ಮಾರ್ಗದ ಮೂಲಕ
ಪೂರಿಯಲ್ಲಿ ಒಂದು ರೈಲ್ವೆ ನಿಲ್ದಾಣವಿದೆ. ನೇರವಾಗಿ ರೈಲ್ವೆ ಸೇವೆಗಳು ಪೂರಿಯಿಂದ ಕೋಲ್ಕತ್ತಾ, ನ್ಯೂ ಡೆಲ್ಲಿ, ಗೌಹಾಟಿ, ಬೆಂಗಳೂರು, ಚೆನ್ನೈ ಮೊದಲಾದ ನಗರಗಳು ಮತ್ತು ಆನೇಕ ಮುಖ್ಯವಾದ ಒಡಿಶಾ ಪ್ರದೇಶಗಳಿಂದ ಸುಲಭವಾಗಿ ರೈಲುಗಳು ಲಭಿಸುತ್ತವೆ.

ವಿಮಾನ ಮಾರ್ಗದ ಮೂಲಕ
ಸಮೀಪದ ವಿಮಾನ ನಿಲ್ದಾಣವು ಭುವನೇಶ್ವರದಲ್ಲಿದೆ. ಪೂರಿಯಿಂದ ಕೇವಲ 56 ಕಿ.ಮೀ ದೂರದಲ್ಲಿದೆ. ಭುವನೇಶ್ವರದಿಂದ ಪೂರಿಗೆ ಸೇರಿಕೊಳ್ಳಲು ಒಂದು ಗಂಟೆಯ ಪ್ರಯಾಣ ಬೇಕಾಗುತ್ತದೆ. ಭುವನೇಶ್ವರ ವಿಮಾನ ನಿಲ್ದಾಣದಿಂದ ಭಾರತ ದೇಶದಿಂದ ಮತ್ತು ಒರಿಸ್ಸಾದ ಇತರ ಪ್ರದೇಶಗಳಿಂದ ಸಂಪರ್ಕ ಸಾಧಿಸುತ್ತದೆ. ಬಸ್ಸುಗಳು ಟ್ಯಾಕ್ಸಿಗಳು ವಿಮಾನ ನಿಲ್ದಾಣದಿಂದ ಪೂರಿಗೆ ಸಂಪರ್ಕ ಸಾಧಿಸುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more