Search
  • Follow NativePlanet
Share
» »ಈ ವಿನಾಯಕ ಮಾಡುತ್ತಿರುವ ಅದ್ಭುತದ ಬಗ್ಗೆ ನಿಮಗೆ ಗೊತ್ತೆ?

ಈ ವಿನಾಯಕ ಮಾಡುತ್ತಿರುವ ಅದ್ಭುತದ ಬಗ್ಗೆ ನಿಮಗೆ ಗೊತ್ತೆ?

ಈ ಮಾಹಿಮಾನ್ವಿತ ವಿನಾಯಕನ ಕಿವಿಯಲ್ಲಿ ತಮ್ಮ ಕೋರಿಕೆಗಳನ್ನು ಹೇಳಿದರೆ ಖಚಿತವಾಗಿ ನೆರವೇರಿಸುತ್ತಾನೆ. ವಕ್ರತುಂಡ ಮಹಾಕಾಯ, ಕೋಟಿ ಸೂರ್ಯ ಸಮಪ್ರಭ, ನಿರ್ವಿಘನಂ ಕುರುಮೇ ದೇವಾ, ಸರ್ವ ಕಾರ್ಯೆಷು ಸರ್ವದಾ ಎನ್ನುತ್ತಾ ಕೋರಿಕೆಯನ್ನು ಬೇಡಿಕೊಳ್ಳಬೇಕಂತ

ಈ ಮಾಹಿಮಾನ್ವಿತ ವಿನಾಯಕನ ಕಿವಿಯಲ್ಲಿ ತಮ್ಮ ಕೋರಿಕೆಗಳನ್ನು ಹೇಳಿದರೆ ಖಚಿತವಾಗಿ ನೆರವೇರಿಸುತ್ತಾನೆ. ವಕ್ರತುಂಡ ಮಹಾಕಾಯ, ಕೋಟಿ ಸೂರ್ಯ ಸಮಪ್ರಭ, ನಿರ್ವಿಘನಂ ಕುರುಮೇ ದೇವಾ, ಸರ್ವ ಕಾರ್ಯೆಷು ಸರ್ವದಾ ಎನ್ನುತ್ತಾ ಕೋರಿಕೆಯನ್ನು ಬೇಡಿಕೊಳ್ಳಬೇಕಂತೆ. ಹಲವಾರು ಭಕ್ತರ ಕೋರಿಕೆಗಳನ್ನು ಇಲ್ಲಿನ ಗಣಪತಿ ನೇರವೇರಿಸಿದ್ದಾನಂತೆ.

ಹಾಗಾದರೆ ಅಂತಹ ಅದ್ಭುತವಾದ ದೇವಾಲಯ ಎಲ್ಲಿದೆ? ಎಂದು ಯೋಚಿಸುತ್ತಿದ್ದೀರಾ? ಆಂಧ್ರ ಪ್ರದೇಶದ ತೂರ್ಪು ಗೋದಾವರಿ ಜಿಲ್ಲೆಯ ಬಿಕ್ವವೊಲ್‍ನಲ್ಲಿನ ಶ್ರೀ ಲಕ್ಷ್ಮೀ ಗಣಪತಿ ದೇವಾಲಯ. ಇಲ್ಲಿ ನೆಲೆಸಿರುವ ವಿನಾಯಕನು ಅತ್ಯಂತ ಶಕ್ತಿವಂತನು. ವಿನಾಯಕ ನೆಲೆಸಿರುವ ಈ ದೇವಾಲಯ ಅತ್ಯಂತ ಪುರಾತನವಾದುದ್ದರಿಂದ ಇಲ್ಲಿನ ಸ್ವಾಮಿಯನ್ನು ಪೂಜಿಸಿದರೆ ಸಕಲ ಪಾಪಗಳು ನಾಶವಾಗಿ ಶುಭವಾಗುತ್ತದೆ ಎಂದು ಹೇಳುತ್ತಾರೆ. ಈ ದೇವಾಲಯವನ್ನು ಕ್ರಿ.ಶ 840ರಲ್ಲಿ ಚಾಲುಕ್ಯರು ನಿರ್ಮಾಣ ಮಾಡಿದರು ಎಂಬುದಕ್ಕೆ ಆಧಾರಗಳು ಇವೆ.

ಈ ವಿನಾಯಕನ ಮಹಿಮೆ ಅಪಾರ ಹಾಗಾಗಿ ಲೇಖನದ ಮೂಲಕ ಗಣೇಶ ಹಬ್ಬದ ದಿನ ಗಜಮುಖನನ್ನು ಭಕ್ತಿಯಿಂದ ನಮಿಸುತ್ತಾ ಲೇಖನ ವಿವಿರವನ್ನು ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

ಈ ಮಾಹಿಮಾನ್ವಿತವಾದ ವಿನಾಯಕನ ದೇವಾಲಯವು ಆಂಧ್ರ ಪ್ರದೇಶದ ತೂರ್ಪು ಗೋದಾವರಿ ಜಿಲ್ಲೆಗೆ ಸೇರಿದ ಒಂದು ಬಿಕ್ಕವೊಲು ಎಂಬ ಗ್ರಾಮದಲ್ಲಿದೆ.

ಮಂದಿರಗಳು

ಮಂದಿರಗಳು

ಈ ಗ್ರಾಮದಲ್ಲಿ ತೂರ್ಪು ಚಾಳುಕ್ಯರ ಕಾಲಕ್ಕೆ ಸೇರಿದ ಹಲವಾರು ದೇವಾಲಯಗಳನ್ನು ಕಾಣಬಹುದಾಗಿದೆ.

ಗುಣಗ ವಿಜಯಾದಿತ್ಯ

ಗುಣಗ ವಿಜಯಾದಿತ್ಯ

ಕ್ರಿ.ಶ 849 ರಿಂದ 892 ಮಧ್ಯಕಾಲದಲ್ಲಿ ಚಾಳುಕ್ಯರ ರಾಜ 3 ನೇ ಗುಣಗ ವಿಜಯಾದಿತ್ಯನ ಹೆಸರಿನ ಮೇಲೆ ಈ ಗ್ರಾಮಕ್ಕೆ ಆ ಹೆಸರು ಬಂದಿತಂತೆ.

ಶ್ರೀ ಚಂದ್ರಶೇಖರಸ್ವಾಮಿ ದೇವಾಲಯ

ಶ್ರೀ ಚಂದ್ರಶೇಖರಸ್ವಾಮಿ ದೇವಾಲಯ

ಅವರ ಕಾಲದಲ್ಲಿ ನಿರ್ಮಾಣ ಮಾಡಿದ ಆನೇಕ ದೇವಾಲಯಗಳೆಂದರೆ ಶ್ರೀ ರಾಜರಾಜೇಶ್ವರಿ ದೇವಾಲಯ ಮತ್ತು ಶ್ರೀ ಚಂದ್ರಶೇಖರ ಸ್ವಾಮಿ ದೇವಾಲಯಗಳು ಮುಖ್ಯವಾದುದು.

ಗಣನಾಥನು

ಗಣನಾಥನು

ಅಂದಿಗೆ ಈ ದೇವಾಲಯ ಭೂಮಿಯಲ್ಲಿಯೇ ಇತ್ತಂತೆ. 19 ನೇ ಶತಮಾನದಲ್ಲಿ ಒಬ್ಬ ಭಕ್ತನ ಕನಸ್ಸಿನಲ್ಲಿ ಸ್ವಾಮಿಯು ಕಾಣಿಸಿ ಗಣನಾಥನು ಇದ್ದ ಸ್ಥಾನವನ್ನು ವಿವಿರಿಸಿದ ಎಂದು ಒಂದು ದಂತ ಕಥೆ.

ಭಕ್ತರು

ಭಕ್ತರು

ಆ ನಂತರ ಆ ಭಕ್ತನು ಗ್ರಾಮಸ್ಥರಿಗೆ ಈ ವಿಷಯವನ್ನು ತಿಳಿಸಿ ದೇವಾಲಯದಲ್ಲಿ ಅಗೆದಾಗ ಸ್ವಾಮಿಯ ವಿಗ್ರಹವು ಬೆಳಕಿಗೆ ಬಂದಿತು ಎಂದು ಹೇಳುತ್ತಾರೆ.

ವಿನಾಯ ವಿಗ್ರಹ

ವಿನಾಯ ವಿಗ್ರಹ

ಭೂಮಿಯಿಂದ ಹೊರಬಂದ ನಂತರ ವಿನಾಯಕ ವಿಗ್ರಹ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಇದೆ ಎಂತೆ.

ವಿಘ್ನೆಶ್ವರ

ವಿಘ್ನೆಶ್ವರ

ಈ ದೇವಾಲಯಕ್ಕೆ ಭೇಟಿ ನೀಡುವ ಹಲವಾರು ಭಕ್ತರು ವಿನಾಯಕನ ಕಿವಿಯಲ್ಲಿ ತಮ್ಮ ಕೋರಿಕೆಗಳನ್ನು ಹೇಳುತ್ತಾರೆ.

ಭಕ್ತರ ವಿಶ್ವಾಸ

ಭಕ್ತರ ವಿಶ್ವಾಸ

ಕೋರಿಕೆಗಳನ್ನು ಹೇಳಿ ಮುಡುಪು ಕಟ್ಟಿದ್ದರೆ ತಮ್ಮ ಕೋರಿಕೆಗಳು ತ್ವರಿತವಾಗಿ ನೆರವೇರುತ್ತದೆ ಎಂದು ಭಕ್ತರ ನಂಬಿಕೆಯಾಗಿದೆ. ಹಾಗೆಯೇ ಇಲ್ಲಿನ ನಂದಿ ಹಾಗು ಭೂಲಿಂಗೇಶ್ವರನನ್ನು ದರ್ಶನ ಮಾಡಿದರೆ ಸಕಲ ಪಾಪ ಪರಿಹಾರವಾಗುತ್ತದೆ ಎಂದು ನಂಬಲಾಗಿದೆ. ಇಲ್ಲಿ ರಾಜರಾಜೇಶ್ವರಿ ದೇವಾಲಯ ಕೂಡ ಇದೆ.

ದಿವ್ಯಾನುಭೂತಿ

ದಿವ್ಯಾನುಭೂತಿ

ಈ ದೇವಾಲಯಕ್ಕೆ ಪ್ರವೇಶಿಸುತ್ತಿದ್ದ ಹಾಗೆಯೇ ದಿವ್ಯನೂಭೂತಿಯಾಗುತ್ತದೆ. ಭಕ್ತಿ ಈ ದೇವಾಲಯದಲ್ಲಿ ಅವರಿಸುತ್ತದೆ ಎಂದು ಭಕ್ತರು ನಂಬುತ್ತಾರೆ.

ಸುಬ್ರಹ್ಮಣ್ಯ ಸ್ವಾಮಿ ದೇವಾಲಯ

ಸುಬ್ರಹ್ಮಣ್ಯ ಸ್ವಾಮಿ ದೇವಾಲಯ

ವೀರಭಧ್ರನ ಜೊತೆ ಸುಬ್ರಹ್ಮಣ್ಯ ಸ್ವಾಮಿಯು ಕೂಡ ಇಲ್ಲಿ ನೆಲೆಸಿದ್ದಾನೆ. ಗಣಪತಿ ಉತ್ಸವದ ಜೊತೆ ಜೊತೆಗೆ ಸುಬ್ರಹ್ಮಣ್ಯನ ಸ್ವಾಮಿಯ ಉತ್ಸವ ಕೂಡ ನಡೆಸುತ್ತಾರೆ.

ಗಣಪತಿ ಹೋಮ

ಗಣಪತಿ ಹೋಮ

ಇಲ್ಲಿ ಗಣಪತಿ ಹೋಮ ಮಾಡಿಸುವವರಿಗೆ ಸ್ವಾಮಿಯು ರಕ್ಷಣೆಯಾಗಿ ಇರುತ್ತಾನೆ ಎಂಬುದು ಭಕ್ತರ ಗಾಢ ನಂಬಿಕೆಯಾಗಿದೆ.

ಇತರ ದೇವಾಲಯಗಳು

ಇತರ ದೇವಾಲಯಗಳು

ಪುರಾತನವಾದ, ಚಾರಿತ್ರಿಕವಾದ ಜೈನ ಶಿವ ದೇವಾಲಯಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ಶಿಲ್ಪಕಲಾ ಸಂಪತ್ತಿಗೆ ಯಾರೇ ಆಗಲಿ ತಲೆಬಾಗಲೇ ಬೇಕಾಗಿದೆ.

ಶ್ರೀ ಗೋಲಿಲಿಂಗೇಶ್ವರ ಸ್ವಾಮಿ ದೇವಾಲಯ

ಶ್ರೀ ಗೋಲಿಲಿಂಗೇಶ್ವರ ಸ್ವಾಮಿ ದೇವಾಲಯ

ಶ್ರೀ ಗೋಲಿಲಿಂಗೇಶ್ವರ ಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿ ಶಿಲೆಗಳ ಮೇಲೆ ಕೆತ್ತನೆ ಮಾಡಿರುವ ರಚನೆಗಳು ಮುಖ್ಯವಾದುದು. ಗರ್ಭ ಗುಡಿಯ ದ್ವಾರದ ಮೇಲೆ 33 ಶಾಸನಗಳನ್ನು ಕಾಣಬಹುದಾಗಿದೆ.

ಸುಂದರವಾದ ಶಿಲ್ಪಗಳು

ಸುಂದರವಾದ ಶಿಲ್ಪಗಳು

ಮುಖಮಂಟಪದ ಪೂರ್ವ ಚಾಳುಕ್ಯರ 2 ಸುಂದರವಾದ ಶಿಲ್ಪಗಳು ಇವೆ. ಇವುಗಳಲ್ಲಿ ಒಂದು " ಆಲಿಂಗನ ಚಂದ್ರಶೇಖರ ಮೂರ್ತಿ" ಎಂಬ ಶಿವ ಪಾರ್ವತಿಗಳ ಶಿಲ್ಪಗಳನ್ನು ಕಾಣಬಹುದು.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ಈ ಮಾಹಿಮಾನ್ವಿತವಾದ ದೇವಾಲಯಕ್ಕೆ ತಲುಪಲು ಮೊದಲು ಆಂಧ್ರ ಪ್ರದೇಶಕ್ಕೆ ತಲುಪಿ ತದನಂತರ ರಾಜಮಂಡ್ರಿಯಿಂದ (39 ಕಿ,ಮೀ), ಕಾಕಿನಾಡದಿಂದ (31 ಕಿ.ಮೀ) ದೂರದಲ್ಲಿ ಬಿಕ್ಕವೊಲಗೆ ಬಸ್ಸು ಸೌಕರ್ಯವಿದೆ.

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ ಸಾಗಬೇಕಾದರೆ ಬಿಕ್ಕವೊಲಕ್ಕೆ ಸುಮಾರು 10 ಕಿ.ಮೀ ದೂರದಲ್ಲಿ ಸಾಮರ್ಲಕೋಟೆ ರೈಲ್ವೆ ಜಂಕ್ಷನ್ ಇದೆ. ಇಲ್ಲಿಂದ ವಿಶಾಖಪಟ್ನಂ ಸಾಗುವ ದಾರಿಯಲ್ಲಿ ರೈಲು ಮಾರ್ಗವಿದೆ. ಇಲ್ಲಿಂದ ಸುಲಭವಾಗಿ ರೈಲ್ವೆ ಮಾರ್ಗದ ಮೂಲಕ ತಲುಪಬಹುದಾಗಿದೆ.

ವಿಮಾನ ನಿಲ್ದಾಣ

ವಿಮಾನ ನಿಲ್ದಾಣ

ಬಿಕ್ಕವೊಲಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮದುರಪೂಡಿ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಕೇವಲ 35 ಕಿ.ಮೀ ದೂರದಲ್ಲಿ ವಿಮಾನ ನಿಲ್ದಾಣವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X