Search
  • Follow NativePlanet
Share
» »ಟ್ಯಾಟೂ ಹಾಕಿಸ್ಬೇಕಾ... ಹಾಗಾದ್ರೆ ಇಲ್ಲಿದೆ ಬೆಸ್ಟ್ ಟ್ಯಾಟೂ ಆರ್ಟಿಸ್ಟ್ ತಾಣಗಳು

ಟ್ಯಾಟೂ ಹಾಕಿಸ್ಬೇಕಾ... ಹಾಗಾದ್ರೆ ಇಲ್ಲಿದೆ ಬೆಸ್ಟ್ ಟ್ಯಾಟೂ ಆರ್ಟಿಸ್ಟ್ ತಾಣಗಳು

ಯುವಜನತೆಯ ಟ್ಯಾಟೂ ಕ್ರೇಜ್‌ಗೆ ಇಲ್ಲಿದೆ ಒಂದು ಉತ್ತಮ ಸೆಲೆಕ್ಷನ್. ಯಾವ ಸ್ಥಳದಲ್ಲಿ ಹೋಗಿ ಟ್ಯಾಟೂ ಹಾಕಿಸಬೇಕೆಂಬ ಕನ್‌ಫ್ಯೂಷನ್‌ನಲ್ಲಿದ್ದರೆ ಇಲ್ಲಿದೆ ನಿಮಗೆ ಬೆಸ್ಟ್ ಟ್ಯಾಟೂ ಸ್ಪಾಟ್‌. ಗೋವಾ, ನವದೆಹಲಿ, ಕೊಲ್ಕತ್ತಾ, ಬೆಂಗಳೂರು ಮುಂಬೈ ಇಲ್ಲೆಲ್ಲಾ ಚೆನ್ನಾಗಿ ಟ್ಯಾಟೂ ಹಾಕುವ ಟ್ಯಾಟು ಆರ್ಟಿಸ್ಟ್‌ಗಳಿದ್ದಾರೆ. ನಿಮಗೆ ಬೇಕಾದಂತಹ ಟ್ಯಾಟೂ ಹಾಕಿಕೊಡುತ್ತಾರೆ. ನೀವು ಈ ತಾಣಗಳಿಗೆ ಪ್ರವಾಸ ಹೋಗುವುದಾದರೆ ಟ್ಯಾಟೂ ಹಾಕಿಕೊಳ್ಳೋದನ್ನು ಮಾತ್ರ ಮರೆಯಬೇಡಿ.

ಲೈಫ್‌ನಲ್ಲಿ ಒಮ್ಮೆಯಾದರೂ ಪ್ಯಾರಗ್ಲೈಡಿಂಗ್ ಮಾಡಿದ್ದೀರಾ...ಇಲ್ಲಿದೆ ಪ್ಯಾರಗ್ಲೈಡಿಂಗ್ ತಾಣಗಳುಲೈಫ್‌ನಲ್ಲಿ ಒಮ್ಮೆಯಾದರೂ ಪ್ಯಾರಗ್ಲೈಡಿಂಗ್ ಮಾಡಿದ್ದೀರಾ...ಇಲ್ಲಿದೆ ಪ್ಯಾರಗ್ಲೈಡಿಂಗ್ ತಾಣಗಳು

ಗೋವಾ, ಆಂಡೀಸ್ ಟ್ಯಾಟೂ ಸ್ಟೂಡಿಯೋ

ಗೋವಾ, ಆಂಡೀಸ್ ಟ್ಯಾಟೂ ಸ್ಟೂಡಿಯೋ

PC: youtube
ಬೀಚ್‌ಗಳಿಂದ ಕೂಡಿರುವ ಗೋವಾ ಟ್ಯಾಟೂ ಹಾಕಿಸಿಕೊಳ್ಳಲು ಉತ್ತಮ ತಾಣವಾಗಿದೆ. ಈಗಿನ ಫ್ಯಾಶನ್‌ ಹುಡಗರಿಗೆ ಬೇಕಾದಂತಹ ಬಾಡಿ ಆರ್ಟ್, ಕಿವಿ ಚುಚ್ಚೋದು ಇವೆಲ್ಲಾ ಅಲ್ಲಿ ಇದೆ. ಗೋವಾದಲ್ಲಿ ನಿಮಗಿಷ್ಟವಾದಂತಹ ಡಿಸೈನ್‌ ಟ್ಯಾಟೂ ಮಾಡಿ ಕೊಡುತ್ತಾರೆ. ಗೋವಾದಲ್ಲಿ ಹಲವಾರು ಟ್ಯಾಟೂ ಸ್ಟೂಡಿಯೋಗಳಿವೆ. ಡ್ರಾಗನ್ ಇಂಕ್ ಟ್ಯಾಟೂ ಸ್ಟೂಡಿಯೋ, ಕ್ರಿಸ್ ಟ್ಯಾಟೂ ಸ್ಟೂಡಿಯೋ ಕಲಂಗುಟೆ ಬೀಚ್‌ ಬದಿ ಇದೆ. ಕ್ಯಾಟ್‌ ಟೇಲ್ ಸ್ಟೂಡಿಯೋ ಕೂಡಾ ಇಲ್ಲಿ ಫೇಮಸ್.

ಪುಣೆ, ಸಬ್ಬೀಸ್ ಟ್ಯಾಟೂ ಸ್ಟೂಡಿಯೋ

ಪುಣೆ, ಸಬ್ಬೀಸ್ ಟ್ಯಾಟೂ ಸ್ಟೂಡಿಯೋ

PC: youtube
ಪುಣೆಯಲ್ಲಿರುವ ಕೊರೆಗಾನ್ ಪಾರ್ಕ್‌ನಲ್ಲಿ ಪ್ರೋಫೆಷನ್‌ ಆರ್ಟಿಸ್ಟ್‌ಗಳಿಂದ ಟ್ಯಾಟೂ ಹಾಕಿಸಬಹುದು. ಇಲ್ಲಿ ಪರ್ಮನೆಂಟ್ ಹಾಗೂ ಟೆಂಪರೆರಿ ಟ್ಯಾಟೂಗಳನ್ನೂ ಹಾಕುತ್ತಾರೆ. ಸಬ್ಬೀಸ್ ಟ್ಯಾಟೂ ಸ್ಟೂಡಿಯೋ , ಡಿಕಾಯ್ಸ್ ಟ್ಯಾಟೈ ಹಾಗೂ ಆಂಡಿಸ್ ಟ್ಯಾಟೂ ಕೂಡಾ ಇಲ್ಲಿನ ಪೇಮಸ್ ಟ್ಯಾಟೂ ಆರ್ಟಿಸ್ಟ್ ಸ್ಟೂಡಿಯೋಗಳಾಗಿವೆ.

ಮುಂಬೈ, ನೋಟಿ ನೀಡಲ್ಸ್ ಟ್ಯಾಟೂ ಸ್ಟೂಡಿಯೋ

ಮುಂಬೈ, ನೋಟಿ ನೀಡಲ್ಸ್ ಟ್ಯಾಟೂ ಸ್ಟೂಡಿಯೋ

PC: youtube
ಕನಸಿನ ನಗರಿಯಾಗಿರುವ ಮುಂಬೈ ನಿಮ್ಮ ಟ್ಯಾಟೂ ಆಸೆಯನ್ನು ಈಡೇರಿಸುವಲ್ಲಿ ಸಹಕರಿಸುತ್ತದೆ. ಇಲ್ಲಿ ದೇಶದ ಬೆಸ್ಟ್ ಟ್ಯಾಟೂ ಆರ್ಟಿಸ್ಟ್‌ಗಳು ಟ್ಯಾಟೂ ಹಾಕುತ್ತಾರೆ. ನೋಟಿ ನೀಡಲ್ಸ್‌ ಟ್ಯಾಟೂ ಸ್ಟೂಡಿಯೋ, ಬಾಡಿ ಕ್ಯಾನ್‌ವಸ್ ಆಲ್ಸ್‌ ಟ್ಯಾಟೂ ಸ್ಟೂಡಿಯೋ ಇವೆಲ್ಲಾ ಮುಂಬೈನ ಬೆಸ್ಟ್ ಟ್ಯಾಟೂ ಸ್ಪಾಟ್‌ಗಳಾಗಿವೆ.

ದೆಹಲಿ: ಟ್ಯಾಟೂಸ್ ಬೈ ಮೈಕ್

ದೆಹಲಿ: ಟ್ಯಾಟೂಸ್ ಬೈ ಮೈಕ್

PC: youtube
ದೆಹಲಿಯಲ್ಲಿ ಬೇಕಾದಷ್ಟು ಟ್ಯಾಟೂ ಆರ್ಟಿಸ್ಟ್‌ಗಳು ಸಿಗುತ್ತಾರೆ. ಪರ್ಮನೆಂಟ್ ಟ್ಯಾಟೂ, ಟೆಂಪರೆರಿ ಟ್ಯಾಟೂ ಕೂಡಾ ಮಾಡಲಾಗುತ್ತದೆ. ಡೆವಿಲ್ಸ್ ಟ್ಯಾಟೂ , ರಿಪ್ ಟ್ಯಾಟೂ ಸ್ಟೂಡಿಯೀ, ಮೈಕ್ಸ್‌ ಬಾಡಿ ಆಟ್ಸ್‌ ಸ್ಟೂಡಿಯೋ , ಇಂಕಿನ್ ಟ್ಯಾಟೂ ಸ್ಟೂಡಿಯೋ ಇವೆಲ್ಲಾ ಇಲ್ಲಿನ ಫೇಮಸ್ ಟ್ಯಾಟೂ ಸ್ಟೂಡಿಯೋಗಳಾಗಿದ್ದು ಬೆಲೆಯೂ ಕಡಿಮೆ ಇದೆ.

ಬೆಂಗಳೂರು

ಬೆಂಗಳೂರು

PC: youtube
ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರಿನಲ್ಲೂ ಟ್ಯಾಟೂ ಆರ್ಟಿಸ್ಟ್‌ಗಳಿಗೇನೂ ಕಮ್ಮಿ ಇಲ್ಲ. ಇಲ್ಲಿ ಟ್ಯಾಟೂ ಕೇವಲ ಯುವಕರು ಮಾತ್ರವಲ್ಲ ಮಧ್ಯವಯಸ್ಕರೂ ಕೂಡಾ ಟ್ಯಾಟೂ ಹಾಕಿಸುತ್ತಾರೆ. ಬ್ರಹ್ಮ ಟ್ಯಾಟೂ ಸ್ಟೂಡಿಯೋ, ಇಂಕ್ ಪ್ರಿಕ್ ಟ್ಯಾಟೂ ಸ್ಟೂಡಿಯೋ ಹಾಗೂ ಎಕ್ಸ್‌ಟ್ರನಲ್ ಎಕ್ಸ್‌ಪ್ರೆಶನ್ ಟ್ಯಾಟೂ ಸ್ಟೂಡಿಯೋ ಕೂಡಾ ಟ್ಯಾಟೂ ಹಾಕಿಸಲು ಬೆಸ್ಟ್ ಆಪ್ಷನ್ ಆಗಿದೆ.

3ಡಿ ಟ್ಯಾಟೂ ಸ್ಟೂಡಿಯೋ , ದೆಹಲಿ

3ಡಿ ಟ್ಯಾಟೂ ಸ್ಟೂಡಿಯೋ , ದೆಹಲಿ

PC: youtube
3ಡಿ ಟ್ಯಾಟೂ ಸ್ಟೂಡಿಯೋ ಇತ್ತೀಚೆಗೆ ತೆರೆಕಂಡಿದೆ. ಈ ಟ್ಯಾಟೂ ಸ್ಟೋಡಿಯೋದ ವಿಶೇಷತೆ ಏನೆಂದರೆ ನಿಮ್ಮ ಹಳೆಯ ಟ್ಯಾಟೂವನ್ನು ಹೊಸದಾಗಿ ಕಾಣಿಸುವಂತೆ ಮಾಟಡುತ್ತಾರೆ.

ಮೋಕ್ಷ ಟ್ಯಾಟೂ ಸ್ಟೂಡಿಯೋ, ಗೋವಾ

ಮೋಕ್ಷ ಟ್ಯಾಟೂ ಸ್ಟೂಡಿಯೋ, ಗೋವಾ

PC: youtube
ಗೋವಾದ ಪ್ರಸಿದ್ಧ ಟ್ಯಾಟೂ ಸ್ಟೂಡಿಯೋ ಇದಾಗಿದ್ದು, ನೀವು ಹೇಳಿದ ಟ್ಯಾಟೂ ಡಿಸೈನ್‌ನ್ನು ಇಲ್ಲಿ ಮಾಡಿ ಕೊಡಲಾಗುತ್ತದೆ, ಬುಡಕಟ್ಟು ಟ್ಯಾಟೂ, ಕಸ್ಟಮ್ ಟ್ಯಾಟೂ ಹಾಕಲಾಗುವುದು. ಈ ಟ್ಯಾಟೂ ಸ್ಟೂಡಿಯೋ ಕಲಾಂಗುಲೇಟ್ ಬೀಚ್ ರಸ್ತೆಯಲ್ಲಿದೆ.

Read more about: india goa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X