» »ಶಿವಮೊಗ್ಗದಲ್ಲಿನ ಅತ್ಯುತ್ತಮವಾದ ಪ್ರವಾಸಿತಾಣಗಳು: ಒಮ್ಮೆ ಭೇಟಿ ನೀಡಿ

ಶಿವಮೊಗ್ಗದಲ್ಲಿನ ಅತ್ಯುತ್ತಮವಾದ ಪ್ರವಾಸಿತಾಣಗಳು: ಒಮ್ಮೆ ಭೇಟಿ ನೀಡಿ

Written By:

ಶಿವಮೊಗ್ಗ ಹಲವಾರು ಸುಂದರವಾದ ಸ್ಥಳಗಳನ್ನು ಹೊಂದಿರುವ ತಾಣ. ಇಲ್ಲಿಗೆ ಸಾವಿರಾರು ಪ್ರವಾಸಿಗರು ತಮ್ಮ ಕುಟುಂಬ, ಮಕ್ಕಳು, ದಂಪತಿಗಳು, ಸ್ನೇಹಿತರ ಜೊತೆಗೆ ಭೇಟಿ ನೀಡುತ್ತಿರುತ್ತಾರೆ. ಆದರೆ ಶಿವಮೊಗ್ಗದ ಕೆಲವು ತಾಣಗಳಿಗೆ ಹೆಚ್ಚಾಗಿ ಕಪಲ್ಸ್ (ಜೋಡಿ) ಗಳು ಭೇಟಿ ನೀಡುತಿರುತ್ತಾರೆ. ವಿಶೇಷವೆನೆಂದರೆ ಶಿವಮೊಗ್ಗದಲ್ಲಿ ಒಟ್ಟು 45 ಪ್ರವಾಸಿ ತಾಣಗಳಿವೆ.

ಇಲ್ಲಿನ ಪ್ರವಾಸಿ ಆಕರ್ಷಣೆಗಳೆಂದರೆ ತಾವರೆಕೊಪ್ಪ ಟೈಗರ್, ಸಿಂಹಗಳ ಸಫಾರಿ, ಶಿವಪ್ಪನಾಯಕ ಪ್ಯಾಲೆಸ್ ಮ್ಯೂಸಿಯಂ, ಶಿವನ ದೇವಾಲಯ, ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯ, ಜೋಗ ಜಲಪಾತ, ಲಿಂಗನ ಮಕ್ಕಿ ಡ್ಯಾಂ ಇನ್ನೂ ಹಲವಾರು. ಬೆಂಗಳೂರಿನಿಂದ ಶಿವಮೊಗ್ಗಗೆ ಸುಮಾರು 310 ಕಿ,ಮೀ ದೂರವಿದ್ದು, 5 ಗಂಟೆ 30 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ.

ಪ್ರಸ್ತುತ ಲೇಖನದ ಮೂಲಕ ಶಿವಮೊಗ್ಗದಲ್ಲಿನ ಸುಂದರವಾದ ಸ್ಥಳಗಳ ಬಗ್ಗೆ ತಿಳಿಯೋಣ.

ಲಿಂಗನ ಮಕ್ಕಿ ಡ್ಯಾಂ

ಲಿಂಗನ ಮಕ್ಕಿ ಡ್ಯಾಂ

ಲಿಂಗನ ಮಕ್ಕಿ ಡ್ಯಾಂ ಶಿವಮೊಗ್ಗದ ಸುಂದರವಾದ ಪ್ರವಾಸಿತಾಣಗಳಲ್ಲಿ ಇದೂ ಒಂದಾಗಿದೆ. ಶಿವಮೊಗ್ಗದ ಸಮೀಪದಲ್ಲಿರುವ ವಿಶ್ವ ವಿಖ್ಯಾತ ಜೋಗ ಜಲಪಾತದಿಂದ ಸುಮಾರು 6 ಕಿ,ಮೀ ದೂರದಲ್ಲಿದೆ ಲಿಂಗನ ಮಕ್ಕಿ ಡ್ಯಾಂ (ಅಣೆಕಟ್ಟು) ಇದೆ. ಇದು ಸಾಮಾನ್ಯವಾಗಿ ಪಿಕ್ನಿಕ್ ತಾಣವಾಗಿ ಪ್ರಸಿದ್ಧಿಯನ್ನು ಪಡೆದಿದೆ. 554 ಮೀಟರ್ ಎತ್ತರದಲ್ಲಿರುವ ಈ ಅಣೆಕಟ್ಟು ಶರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.


PC:Chidambara

ಶಿವಪ್ಪ ನಾಯಕ ಪ್ಯಾಲೆಸ್ ಮ್ಯೂಸಿಯಂ

ಶಿವಪ್ಪ ನಾಯಕ ಪ್ಯಾಲೆಸ್ ಮ್ಯೂಸಿಯಂ

ಶಿವಪ್ಪ ನಾಯಕ ಅರಮನೆಯು ಶಿವಮೊಗ್ಗ ನಗರದ ಜನಪ್ರಿಯವಾದ ಆಕರ್ಷಣೆಯಾಗಿದೆ. ತುಂಗಾ ನದಿಯ ದಂಡೆಯ ಮೇಲಿರುವ ಈ ಅರಮನೆಯು 16 ನೇ ಶತಮಾನದಲ್ಲಿ ಕೆಳದಿಯ ಶಿವಪ್ಪ ನಾಯಕರಿಂದ ರೋಸ್ ವುಡ್ ನಿರ್ಮಿಸಲ್ಪಟ್ಟಿತ್ತು. ಈ ಅರಮನೆಯಲ್ಲಿ ಕೆಳದಿಯ ಕಾಲದ ಸುಂದರವಾದ ಕೆತ್ತನೆಗಳು ಹಾಗೂ ಅವಶೇಷಗಳನ್ನು ಪ್ರದರ್ಶನವನ್ನು ಇಲ್ಲಿ ಕಾಣಬಹುದಾಗಿದೆ. ಈ ಅರಮನೆಗೆ ತೆರಳಲು ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ತೈವಾರೆಕೊಪ್ಪ

ತೈವಾರೆಕೊಪ್ಪ

ಈ ತೈವಾರೆಕೊಪ್ಪವು ಶಿವಮೊಗ್ಗ ನಗರದಿಂದ ಸುಮಾರು 10 ಕಿ,ಮೀ ದೂರದಲ್ಲಿದೆ. ಇದೊಂದು ಜನಪ್ರಿಯವಾದ ಪಿಕ್ನಿಕ್ ತಾಣವಾಗಿದೆ. ತೈವಾರೆಕೊಪ್ಪದಲ್ಲಿ ಸಿಂಹ ಹಾಗೂ ಹುಲಿಗಳ ಸಫಾರಿಗಾಗಿಯೇ ಪ್ರಸಿದ್ಧಿಯನ್ನು ಪಡೆದಿದೆ. ಈ ಸಫಾರಿ 1998 ರಲ್ಲಿ ಪ್ರಾರಂಭವಾಯಿತು. 200 ಹೆಕ್ಟೇರ್ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಸಿಂಹ, ಹುಲಿ, ಚಿರತೆ, ಕರಡಿ, ಜಿಂಕೆ ಇನ್ನೂ ಹಲವಾರು ವನ್ಯ ಜೀವಿಗಳನ್ನು ಕಾಣಬಹುದಾಗಿದೆ.


PC:Harikrishnan18

ಗುಡ್ವವಿ ಪಕ್ಷಿಧಾಮ

ಗುಡ್ವವಿ ಪಕ್ಷಿಧಾಮ

ಗುಡ್ವವಿ ಪಕ್ಷಿಧಾಮವು ಶಿವಮೊಗ್ಗದ ಸೊರೊಬ್ ಎಂಬ ಪಟ್ಟಣದಲ್ಲಿದೆ. ಪಕ್ಷಿಗಳ ಪ್ರೇಮಿಗಳಿಗೆ ಇದೊಂದು ಸ್ವರ್ಗವಾಗಲಿದೆ. ಸುಮಾರು 0.75 ಚದರ ಕಿ.ಮೀ ಪ್ರದೇಶದಲ್ಲಿ ವಿಸ್ತಾರಿಸಿರುವ ಅಭಯಾರಣ್ಯವು ಗುಡ್ವಿ ಸರೋವರದ ದಡದಲ್ಲಿದೆ. ಇಲ್ಲಿ ಜುಲೈನಿಂದ ಅಕ್ಟೋಬರ್‍ನವರೆಗೆ ವಲಸೆ ಹಕ್ಕಿಗಳನ್ನು ಸ್ವಾಗತಿಸುತ್ತದೆ.

ಇಲ್ಲಿ ಹಲವಾರು ಜಾತಿಗಳ ಹಕ್ಕಿಗಳನ್ನು ಕಾಣಬಹುದಾಗಿದೆ. ಅವುಗಳೆಂದರೆ ಜಂಗಲ್ ಕೋಳಿ, ಬೂದು ಹೆರನ್, ಕಪ್ಪು ತಲೆಯ ಕ್ರೇನ್, ಡಾರ್ಟರ್, ಇಂಡಿಯನ್ ಷಾಗ್, ಲಿಟಲ್ ಗ್ರೀಬ್, ಪರಿಯಾ ಕೈಟ್, ವೈಟ್ ಐಬಿಸ್ ಇನ್ನೂ ಹಲವಾರು...

PC:Shrikanth Hegde

ಕೊಡಚಾದ್ರಿ

ಕೊಡಚಾದ್ರಿ

ಕೊಡಚಾದ್ರಿ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟ ಶಿಖರವಾಗಿದೆ. ಈ ಕೊಡಚಾದ್ರಿಯು ಶಿವಮೊಗ್ಗ ನಗರದಿಂದ ಸುಮಾರು 115 ಕಿ,ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರದಲ್ಲಿರುವ ಕೊಡಚಾದ್ರಿ ವೈವಿದ್ಯಮಯವಾದ ಪ್ರಾಣಿ ಹಾಗೂ ಸಸ್ಯ ಪ್ರಭೇದಗಳನ್ನು ಹೊಂದಿದೆ.

ಕೊಡಚಾದ್ರಿಯ ಪ್ರಮುಖವಾದ ಆರ್ಕಷಣೆಯೆಂದರೆ ಅದು ಸರ್ವಜ್ಞ ಪೀಠವಾಗಿದೆ. ಇದು ಆದಿ ಶಂಕಾರಾಚಾರ್ಯರು ಧ್ಯಾನ ಮಾಡುತ್ತಿದ್ದ ಪವಿತ್ರವಾದ ಸ್ಥಳ ಎಂದು ನಂಬಲಾಗಿದೆ. ಅರಿಸ್ಟಾಗುಡಿ ಜಲಪಾತಗಳು ಮತ್ತು ಅಗಸ್ತ್ಯ ತೀರ್ಥ ಜಲಪಾತಗಳು ಕೊಡಚಾದ್ರಿ ಸಮೀಪದಲ್ಲಿನ ಇತರ ಆಕರ್ಷಣೀಯ ಸ್ಥಳಗಳು.

PC:Chinmayahd

ಜೋಗ ಜಲಪಾತ

ಜೋಗ ಜಲಪಾತ

ಶಿವಮೊಗ್ಗ ಎಂದರೆ ಮೊದಲು ನೆನೆಪಿಗೆ ಬರುವುದೇ ಜೋಗ ಜಲಪಾತ. ಈ ವಿಶ್ವ ವಿಖ್ಯಾತವಾದ ಜಲಪಾತವಿರುವುದು ನಮ್ಮ ಕರ್ನಾಟಕದ ಪುಣ್ಯವೇ ಸರಿ. ಶಿವಮೊಗ್ಗದಿಂದ ಸುಮಾರು 100 ಕಿ,ಮೀ ದೂರದಲ್ಲಿ ಜೋಗ ಜಲಪಾತವಿದೆ. ಭಾರತದ ಅತ್ಯಂತ ಎತ್ತರವಾದ ಜಲಪಾತ ಎಂಬ ಹೆಸರಿಗೂ ಕೂಡ ಪಾತ್ರವಾಗಿದೆ.

ಜೋಗದ ಗುಂಡಿ, ಜೋಗ ಫಾಲ್ಸ್ ಎಂದು ಸಹ ಕರೆಯುತ್ತಾರೆ. ಸುಮಾರು 253 ಮೀಟರ್ ಎತ್ತರದಿಂದ ಹಾಲಿನ ನೊರೆಯಂತೆ ಭೋರ್ಗರೆಯುತ್ತದೆ ಈ ಜೋಗ ಜಲಪಾತ.
ಇಲ್ಲಿ ರಾಜ, ರೋರರ್, ರಾಣಿ, ರಾಕೆಟ್ ಎಂಬ ನಾಲ್ಕು ಕಮಾನುಗಳಿವೆ. ಈ ಜೋಗ ಜಲಪಾತಕ್ಕೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅದು ಮಳೆಗಾಲ.

PC:Shuba

ಉತ್ತಮ ಕಾಲಾವಧಿ

ಉತ್ತಮ ಕಾಲಾವಧಿ

ಈ ಎಲ್ಲಾ ಪ್ರವಾಸಿತಾಣಗಳಿಗೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅದು ಫೆಬ್ರವರಿ, ಮಾರ್ಚ್, ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳು.


PC:Shuba

ತಲುಪುವ ಬಗೆ?

ತಲುಪುವ ಬಗೆ?

ರೈಲು ಮಾರ್ಗದ ಮೂಲಕ: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ರೈಲುಗಳಿದ್ದು, ಸುಲಭವಾಗಿ ತಲುಪಬಹುದಾಗಿದೆ.

ರಸ್ತೆ ಮಾರ್ಗದ ಮುಲಕ: ಬೆಂಗಳೂರಿನಿಂದ ಶಿವಮೊಗ್ಗಗೆ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳ ಸೌಲಭ್ಯಗಳಿವೆ.

Please Wait while comments are loading...