Search
  • Follow NativePlanet
Share
» »ಹನುಮಾನ್ ಸಂಜೀವಿನಿ ಮೂಲಿಕೆ ತಂದಿದ್ದು ಇದೇ ಪರ್ವತದಿಂದ

ಹನುಮಾನ್ ಸಂಜೀವಿನಿ ಮೂಲಿಕೆ ತಂದಿದ್ದು ಇದೇ ಪರ್ವತದಿಂದ

ಹಿಮಾಚಲ ಪ್ರದೇಶ ಪ್ರಾಕೃತಿಕ ಸಂಪತ್ತಿನಲ್ಲಿ ಸಿರ್ಮೌರ್‌ ಪೀಚ್ ಹಣ್ಣಿನ ಕಠೋರಿ ಎನ್ನಲಾಗುತ್ತದೆ. ರಾಜ್ಯದ ದಕ್ಷಿಣ ಪೂರ್ವದಲ್ಲಿರುವ ಈ ಸ್ಥಳವನ್ನು 1090ರಲ್ಲಿ ಸ್ಥಾಪಿಸಲಾಯಿತು. ಬ್ರಿಟಿಷರ ಆಳ್ವಿಕೆಯಲ್ಲೂ ಇತ್ತು. ಆದರೆ ಇದೀಗ ಸಿರಮೌರ್ ತನ್ನ ವಿಭಿನ್ನ ಪ್ರಾಕೃತಿಕ ಸ್ಥಳಗಳಿಂದಾಗಿ ಹಿಮಾಚಲ ಪ್ರದೇಶದ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ವಾತವರಣ ಹಿತಕರವಾಗಿದೆ. ಹಾಗಾದ್ರೆ ಬನ್ನಿ ಈ ಸ್ಥಳವು ಎಷ್ಟೊಂದು ವಿಶೇಷವಾಗಿ ಎನ್ನುವುದನ್ನು ತಿಳಿಯೋಣ...

ಚೂರ್‌ಧಾರ್‌

ಚೂರ್‌ಧಾರ್‌

PC: Hariom5463

ಸಿರ್ಮೌರ್‌ ಸುತ್ತಾಡುವ ಮೊದಲು ನೀವು ಇಲ್ಲಿನ ಧಾರ್ಮಿಕ ಸ್ಥಳದಿಂದ ಪ್ರಾರಂಭಿಸಬೇಕು. ಸಮುದ್ರ ಮಟ್ಟದಿಂದ 3,646 ಮೀಟರ್ ಎತ್ತರದಲ್ಲಿರುವ ಈ ಸ್ಥಳವು ಚೂರ್‌ಧಾರ್‌ ರಾಜ್ಯದ ಅತ್ಯಂತ ಎತ್ತರದ ಪರ್ವತಗಳಲ್ಲಿ ಒಂದಾಗಿದೆ. ಈ ಶಿಖರವು ಒಂದು ಪವಿತ್ರ ಸ್ಥಳವಾಗಿದ್ದು ಶಿವನ ಪವಿತ್ರ ತೀರ್ಥಗಳಲ್ಲಿ ಇದೂ ಒಂದು. ಪೌರಾಣಿಕ ಕಥೆಯ ಪ್ರಕಾರ ಹನುಮಾನ್‌ ಮೂರ್ಛೇ ಹೋಗಿದ್ದ ಲಕ್ಷ್ಮಣನಿಗೆ ಸಂಜೀವಿನಿ ಮೂಲಿಕೆಯನ್ನು ತಂದಿದ್ದು ಈ ಬೆಟ್ಟದಿಂದಲೇ ಎನ್ನಲಾಗುತ್ತದೆ.

ರೇಣುಕಾಜೀ

ರೇಣುಕಾಜೀ

PC:Harvinder Chandigarh

ಚೂರ್‌ಧಾರ್‌ ಪರ್ವತವನ್ನು ಸುತ್ತಾಡಿದ ನಂತರ ನೀವು ಇಲ್ಲಿನ ಪ್ರಾಚೀನ ಕೆರೆ ರೇಣುಕಾಜೀ ಯನ್ನು ಭೇಟಿ ನೀಡುವ ಪ್ಲ್ಯಾನ್ ಮಾಡಬಹುದು. ಇದು ಇಲ್ಲಿನ ಪ್ರಸಿದ್ಧ ತೀರ್ಥ ಸ್ಥಳವಾಗಿದೆ. ಇಲ್ಲಿಗೆ ಪ್ರತಿದಿನವೂ ಪ್ರವಾಸಿಗರು ಬರುತ್ತಾ ಇರುತ್ತಾರೆ. ಇಲ್ಲಿ ಗೇಮಿಂಗ್ ಹಾಗೂ ವನ್ಯಜೀವಿಗಳ ಅಭಯಾರಣ್ಯ ಕೂಡಾ ಇದೆ. ಇಲ್ಲಿ ವಿಭಿನ್ನ ವನಸ್ಪತಿ ಹಾಗೂ ಜೀವಿಗಳ ಪ್ರಜಾತಿಯನ್ನು ನೋಡಬಹುದು. ಹಿಂದೂ ಕ್ಯಾಲೆಂಡರ್‌ನ ಕಾರ್ತೀಕ ಏಕಾದಶಿ ದಿನ ಇಲ್ಲಿ ವಿಭಿನ್ನ ಉತ್ಸವವನ್ನು ಆಯೋಜಿಸಲಾಗುತ್ತದೆ.

ಹರಿಪುರ

ಹರಿಪುರ

PC: subhas4u

ಸಿರ್ಮೌರ್‌ನಲ್ಲಿ ಐತಿಹಾಸಿಕ ಸ್ಥಳಗಳಲ್ಲಿ ನೀವು ಹರಿಪುರವನ್ನು ಸುತ್ತಾಡುವ ಪ್ಲ್ಯಾನ್ ಹಾಕಿಕೊಳ್ಳಬಹುದು. ಸಮುದ್ರಮಟ್ಟದಿಂದ ಸುಮಾರು 647 ಮೀಟರ್ ಎತ್ತರದಲ್ಲಿದೆ. ಹರಿಪುರವು ಹರಿಪುರ ಧಾರ ಎನ್ನುವ ಬೆಟ್ಟಕ್ಕೆ ಪ್ರಸಿದ್ಧವಾಗಿದೆ. ಇಲ್ಲಿ ಬೆಟ್ಟದಲ್ಲಿರುವ ಪ್ರಾಚೀನ ಕೋಟೆಯು ಪ್ರವಾಸಿಗರನ್ನು ಪ್ರಭಾವಿಸುತ್ತದೆ. ಈ ಕೋಟೆಯ ನಿರ್ಮಾಣವನ್ನು ಸಿರಮೌರ್‌ನ ರಾಜರಿಂದ ಮಾಡಲ್ಪಟ್ಟಿದೆ. ಅಷ್ಟೇ ಅಲ್ಲದೆ ಹರಿಪುರ ವಿವಿಧ ಸಾಹಸಮಯ ಕ್ರೀಡೆಗಳಿಗೂ ಹೆಸರುವಾಸಿಯಾಗಿದೆ.

ಹಬ್ಬನ್‌ ಘಾಟಿ

ಹಬ್ಬನ್‌ ಘಾಟಿ

PC: Ashish Gupta

ಇಲ್ಲಿ ನೀವು ಹಬ್ಬನ್ ಘಾಟಿಯನ್ನು ಸುತ್ತಾಡಬಹುದು. ಈ ಸ್ಥಳವು ಆಧುನಿಕ ನಗರ ಹಾಗೂ ಜೀವನ ಶೈಲಿಗಿಂತ ಭಿನ್ನವಾಗಿದೆ. ವಿಭಿನ್ನ ಮಂದಿರಗಳು ಹಾಗೂ ಸಂಸ್ಕೃತಿಗೆ ಪ್ರಸಿದ್ಧವಾಗಿದೆ. ಇಲ್ಲಿನ ಹೆಚ್ಚಿನ ಮಂದಿರಗಳನ್ನು ರಜಪೂತರ ಕಾಲದಲ್ಲಿ ನಿರ್ಮಿಸಲಾಗಿದ್ದು. ಇಲ್ಲಿನ ಮಂದಿರಗಳಲ್ಲಿ ಶಿರಗುಲ್ ದೇವತೆ, ಪಲೂ ದೇವತೆ ಹಾಗೂ ಕಾಳಿ ಮಂದಿರವೂ ಇದೆ. ಆಧ್ಯಾತ್ಮಿಕ ಅನುಭವವನ್ನು ಪಡೆಯಬೇಕಾದರೆ ಇಲ್ಲಿಗೆ ಪ್ರವಾಸ ಕೈಗೊಳ್ಳುವುದು ಉತ್ತಮ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Ashish Gupta

ಸಿರ್ಮೌರ್‌ ಉತ್ತರಪ್ರದೇಶದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಗೆ ನೀವು ವಿಮಾನದ ಮೂಲಕ ಹೋಗುವುದಾದರೆ ಡೆಹ್ರಾಡೂನ್ ಹಾಗೂ ಚಂಡೀಘಡ್ ಏರ್‌ಪೋರ್ಟ್ ಸಮೀಪದಲ್ಲಿದೆ. ರೈಲಿನಲ್ಲಿ ಹೋಗುವುದಾದರೆ ಜಗಧಾರಿ, ಡೆಹ್ರಾಡೂನ್, ಕಾಲಕಾ ರೈಲ್ವೆ ಸ್ಟೇಶನ್ ಮೂಲಕ ಹೋಗಬಹುದು.
ಸಿರ್ಮೌರ್‌ಗೆ ಹಿಮಾಚಲಪ್ರದೇಶದ ದೊಡ್ಡದೊಡ್ಡ ನಗರದಿಂದ ಬಸ್‌ ವ್ಯವಸ್ಥೆ ಇದೆ. ದೆಹಲಿಯಿಂದ ಸಿರ್ಮೌರ್‌ಗೆ ಬಸ್ ವ್ಯವಸ್ಥೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X