Search
  • Follow NativePlanet
Share
» »ಮುರ್ಷಿದಾಬಾದ್‌ನಲ್ಲಿ ಬಂಗಾಳಿ ಆಹಾರ ಟೇಸ್ಟ್ ಮಾಡಲೇ ಬೇಕು

ಮುರ್ಷಿದಾಬಾದ್‌ನಲ್ಲಿ ಬಂಗಾಳಿ ಆಹಾರ ಟೇಸ್ಟ್ ಮಾಡಲೇ ಬೇಕು

ಮೂಲತಃ ಮುಖ್ಸುದಾಬಾದ್ ಎಂದು ಕರೆಯಲ್ಪಡುವ ಮುರ್ಷಿದಾಬಾದ್, ಭಾರತದ ಪಶ್ಚಿಮ ಬಂಗಾಳ ರಾಜ್ಯದ ದೊಡ್ಡ ಮುರ್ಷಿದಾಬಾದ್ ಜಿಲ್ಲೆಯ ಒಂದು ನಗರ. ಇದು ದೇಶದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ. ಇದು ಗಂಗಾ ನದಿಯ ಉಪನದಿಯಾದ ಭಾಗೀರಥಿ ನದಿಯ ತೀರದಲ್ಲಿದೆ. ಇದು ಪ್ರಸಿದ್ಧವಾದ ಹಜರಾದೊರೈ ಅರಮನೆಗೆ ಹೆಸರುವಾಸಿಯಾಗಿದೆ ಮತ್ತು ಹುಂಗ್ಲಿ ನದಿಗೆ ಹತ್ತಿರದಲ್ಲಿದೆ.

ಕೃಷಿ ಕೈಗಾರಿಕೆಗಳಿಗೆ ಫೇಮಸ್

ಕೃಷಿ ಕೈಗಾರಿಕೆಗಳಿಗೆ ಫೇಮಸ್

PC: Abhishek karmakar

ಮುರ್ಷಿದಾಬಾದ್, ರಾಜಧಾನಿ ಕೋಲ್ಕತಾಗೆ ಹತ್ತಿರದಲ್ಲಿರುವುದರಿಂದ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ. ನಗರದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲವು ಆಕರ್ಷಣೀಯ ಸ್ಥಳಗಳನ್ನು ಹೊಂದಿದೆ . ಮುರ್ಷಿದಾಬಾದ್ ನಲ್ಲಿ ಶಾಪಿಂಗ್, ಖರೀದಿ ಕರಕುಶಲ ಮತ್ತು ಕೃಷಿ ಕೈಗಾರಿಕೆಗಳಿಗೆ ಮುರ್ಷಿದಾಬಾದ್ ಬಹಳ ಹೆಸರುವಾಸಿಯಾಗಿದ್ದು, ನಗರದ ರಸ್ತೆ ಬದಿಯಲ್ಲಿ ಕಡಿಮೆ ಬೆಲೆಯಲ್ಲಿ ಶಾಪಿಂಗ್ ಮಾಡಬಹುದು. ಪ್ರಸಿದ್ಧ ಮಣ್ಣಿನ ತಯಾರಿಕೆಗಳು ಆಶ್ಚರ್ಯಕರ ಉತ್ತಮ ಬೆಲೆಯಲ್ಲಿ ಲಭ್ಯವಿವೆ. ಸಿಲ್ಕ್ ಉತ್ಪನ್ನ ಮುರ್ಷಿದಾಬಾದ್ ಪ್ರದೇಶದ ಮತ್ತೊಂದು ಪ್ರಸಿದ್ಧ ಉತ್ಪನ್ನವಾಗಿದೆ. ಮತ್ತು ಭಾರತೀಯ ಸೀರೆ ಮತ್ತು ಶಿರೋವಸ್ತ್ರಗಳು ಇಲ್ಲಿ ತಯಾರಿಸಲಾಗುತ್ತದೆ.

ಸುತ್ತಲಿನ ಪ್ರವಾಸಿ ತಾಣಗಳು

ಸುತ್ತಲಿನ ಪ್ರವಾಸಿ ತಾಣಗಳು

PC: Abhishek karmakar

ಮುರ್ಷಿದಾಬಾದ್ ಸುತ್ತಲಿನ ಪ್ರವಾಸಿ ತಾಣಗಳು ನವಾಬರ ಕೋಟೆ ಮತ್ತು ಒಂದು ಸಾವಿರ ಬಾಗಿಲುಳ್ಳ ಅರಮನೆಯು ಪರಂಪರೆಯ ಸ್ಥಳವಾಗಿದ್ದು ತಮ್ಮದೇ ರೀತಿಯಲ್ಲಿ ಸ್ಪೂರ್ತಿದಾಯಕ ವಿಸ್ಮಯವನ್ನುಂಟುಮಾಡುತ್ತವೆ. ಒಂದು ಸಾವಿರ ಬಾಗಿಲಿನ ಅರಮನೆಯನ್ನು ಜನಪ್ರಿಯವಾಗಿ ಹಝಾರ್ ದುರೈ ಅರಮನೆ ಎಂದು ಕರೆಯುತ್ತಾರೆ. ಈ ನಗರ ನವಾಬರ ಸ್ಥಾನವಾಗಿದೆ.

ಆಹಾರ ಮತ್ತು ಉತ್ಸವಗಳು

ಆಹಾರ ಮತ್ತು ಉತ್ಸವಗಳು

ಮುರ್ಷಿದಾಬಾದ್ ಗೆ ಭೇಟಿ ನೀಡಿದಾಗ ಇಲ್ಲಿನ ಸ್ಥಳೀಯ ಬಂಗಾಳಿ ತಿನಿಸುಗಳನ್ನು ತಿನ್ನಲು ಮರೆಯಬೇಡಿ. ನೀವು ಉತ್ತಮ ಆಹಾರ ವನ್ನು ತಿನ್ನಲು ಬಯಸಿದರೆ ರಸ್ತೆಯ ಬದಿಯಲ್ಲಿನ ಆಹಾರಗಳು ಮತ್ತು ಸಾಗರದ ತಾಜಾ ಮೀನು ಮೊದಲಾದವುಗಳನ್ನೂ ಸಹ ಸವಿಯಬಹುದು. ನಗರವನ್ನು ಸುತ್ತಲು ಬೀದಿಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಬಹುದು. ಮತ್ತು ಮಹಾರಾಜರ ಕಾಲವನ್ನು ನೆನಪಿಸುವ, ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುವ ಸೈಕಲ್ ರಿಕ್ಷಾಗಳು ಮತ್ತು ಪ್ರಸಿದ್ಧ ಕುದುರೆ ಗಾಡಿಗಳು ಸಹ ಪ್ರಯಾಣಕ್ಕೆ ಲಭ್ಯ. ಪ್ರತಿಯೊಂದು ಪಾರಂಪರಿಕ ಕಟ್ಟಡಗಳು ವಸಾಹತು ಮತ್ತು ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಹೊಂದಿದ್ದು ಇವುಗಳ ಮೂಲರೂಪ ಬಿಳಿಯ ವರ್ಣ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:Abhishek karmakar

ಮುರ್ಷಿದಾಬಾದ್ ತಲುಪಲು ಉತ್ತಮ ಸಮಯ ನಗರದಲ್ಲಿ ಆಚರಿಸುವ ದುರ್ಗಾ ಪೂಜೆ, ದೀಪಾವಳಿ ಮತ್ತು ದಸರಾ ಹಬ್ಬಗಳೊಂದಿಗೆ ಉತ್ಸಾಹದಲ್ಲಿ ಭಾಗವಹಿಸಲು ಈ ಸಮಯದಲ್ಲಿಯೇ ಭೇಟಿ ನೀಡಬಹುದು. ಇಲ್ಲಿ ಆಚರಿಸಲಾಗುವ ಇತರ ಹಬ್ಬಗಳೆಂದರೆ ಹೋಳಿ ಮತ್ತು ರಾಮ ನವಮಿ ಮೊದಲಾದವು. ಈ ಸಣ್ಣ ನಗರದಲ್ಲಿ ಶಾಪಿಂಗ್, ಮತ್ತು ಆಹಾರ ಅತ್ಯುತ್ತಮ ಸಮಯವನ್ನು ನಿಮ್ಮದಾಗಿಸುತ್ತದೆ.

ಮುರ್ಷಿದಾಬಾದ್ ತಲುಪುವುದು ಹೇಗೆ?

ಮುರ್ಷಿದಾಬಾದ್ ತಲುಪುವುದು ಹೇಗೆ?

PC: Biswarup Ganguly

ವಿಮಾನದ ಮೂಲಕ: ಮುರ್ಷಿದಾಬಾದ್ ಬದಲಿಗೆ ನೀವು ನೇತಾಜಿ ಸುಭಾಸ್ ಚಂದ್ರ ವಿಮಾನ ನಿಲ್ದಾಣಕ್ಕೆ ನಿಯಮಿತವಾಗಿ ವಿಮಾನ ಪಡೆಯಬಹುದು.ಮುರ್ಷಿದಾಬಾದ್ ವಿಮಾನ ನಿಲ್ದಾಣವು 176 ಕಿ.ಮೀ ದೂರದಲ್ಲಿದೆ. ಕೋಲ್ಕತಾದ ನೇತಾಜಿ ಸುಭಾಸ್ ಚಂದ್ರ ವಿಮಾನ ನಿಲ್ದಾಣ (ಸಿಸಿಯು), ಬಾಗ್ದೋಗ್ರಾ ವಿಮಾನ ನಿಲ್ದಾಣ (ಐಎಕ್ಸ್‌ಬಿ), ಬಾಗ್ದೋಗ್ರಾ ದಿಂದ ಮುರ್ಷಿದಾಬಾದ್ 281 ಕಿ.ಮೀ ದೂರದಲ್ಲಿದೆ.

ರೈಲಿನ ಮೂಲಕ: ದೇಶದ ಇತರ ಪ್ರಮುಖ ನಗರಗಳಿಂದ ಮುರ್ಷಿದಾಬಾದ್‌ಗೆ ನಿಯಮಿತವಾಗಿ ರೈಲುಗಳಿವೆ.

ರಸ್ತೆ ಮೂಲಕ: ಮುರ್ಷಿದಾಬಾದ್‌ಗೆ ಬಸ್ ನಿಲ್ದಾಣವಿಲ್ಲ. ಹತ್ತಿರದ ಆಯ್ಕೆ ಮಾಲ್ಡಾ.ಇಲ್ಲಿಂದ ಮುರ್ಷಿದಾಬಾದ್ 95 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more