• Follow NativePlanet
Share
» »ಈ ನಗರಗಳಲ್ಲಿ ಗಂಡಸರೇ ತಮ್ಮ ಮನೆ ಹೆಂಗಸರಿಗೆ ಗಿರಾಕಿ ಹುಡುಕ್ತಾರಂತೆ !

ಈ ನಗರಗಳಲ್ಲಿ ಗಂಡಸರೇ ತಮ್ಮ ಮನೆ ಹೆಂಗಸರಿಗೆ ಗಿರಾಕಿ ಹುಡುಕ್ತಾರಂತೆ !

Written By:

ಭಾರತದಲ್ಲಿ ವೇಶ್ಯಾವಾಟಿಕೆ ಕಾನೂನು ಬಾಹಿರವಾಗಿದ್ದರು ವೇಶ್ಯಾವಾಟಿಯನ್ನೇ ವೃತ್ತಿಯಾಗಿಸಿರುವ 7 ಸ್ಥಳಗಳಿವೆ. ಅವುಗಳು ಯಾವುದು ಅನ್ನೋದು ನಿಮಗೆ ಗೊತ್ತಾ? ಇಲ್ಲಿನ ಮಹಿಳೆಯರು ಇದರಿಂದಲೇ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿನ ಗಂಡಸರೇ ಮಹಿಳೆಯರಿಗೆ ಗಿರಾಕಿಯನ್ನು ತಂದುಕೊಡುತ್ತಾರೆ ಎನ್ನುವುದು ವಿಶೇಷ.

ಮೂರೇ ದಿನದ ಗೋವಾ ಟ್ರಿಪ್... ಬಾಡಿಗೆ ಬೈಕ್ ಪಡೆಯೋದನ್ನು ಮರೆಯಬೇಡಿ

ಕಾಮಾತಿಪುರ ಮುಂಬೈ

ಕಾಮಾತಿಪುರ ಮುಂಬೈ

PC: youtube
ಕಾಮಾತಿ ಪುರದ ಹಳೆಯ ಹೆಸರು ಈಗ ಅಸ್ತಿತ್ವದಲ್ಲಿಲ್ಲ. ಈಗ ಇದು ರೆಡ್ ಲೈಟ್ ಏರಿಯಾ ಆಗಿ ಫೇಮಸ್ ಆಗಿದೆ. ಏಷ್ಯಾದಲ್ಲೇ ಎರಡನೇ ಅತೀದೊಡ್ಡ ರೆಡ್‍ಲೈಟ್ ಏರಿಯಾ ಆಗಿ ಪರಿವರ್ತನೆಯಾಗಿದೆ. ಮುಂಬೈ ಅಂದ ಮೇಲೆ ಕ್ರಿಮಿನಲ್ ಪ್ರಕರಣಗಳಿಗೇನು ಕಡಿಮೆ ಇಲ್ಲ. ಇಲ್ಲಿ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ ಇಳಿಯೋದೆ ಇಲ್ಲ.

ಜಿಬಿ ರೋಡ್ ದೆಹಲಿ

ಜಿಬಿ ರೋಡ್ ದೆಹಲಿ

PC: youtube
ನೀವು ದೆಹಲಿ ನಿವಾಸಿಗಳಾಗಿದ್ದರೆ ಈ ಸ್ಥಳದ ಬಗ್ಗೆ ತಿಳಿದಿರದೆ ಇರಲಿಕ್ಕಿಲ್ಲ. ಇದನ್ನು ಗಾಸ್ಟಿನ್ ಬಾಸ್ಟಿಯನ್ ರೋಡ್ ಎನ್ನುತ್ತಾರೆ. ಇದು ಜಿಬಿ ರೋಡ್ ಎಂದೇ ಫೇಮಸ್. ಇಲ್ಲಿ ಕಮರ್ಶಿಯಲ್ ಸೆಂಟರ್‍ಗಳು, ಅನೇಕ ಮಹಡಿಯ ಕಟ್ಟಡಗಳು ಕಾಣಸಿಗುತ್ತದೆ. ಕೆಳಗಿನ ಅಂತಸ್ತು ಅಂಗಡಿ ಮುಗ್ಗಟ್ಟುಗಳಾದರೆ ಮೇಲಿನ ಅಂತಸ್ತುಗಳೆಲ್ಲಾ ವೇಶ್ಯಾಗ್ರಹಗಳು.

ಗೋವಾದ ಈ ಪ್ರೇತಭಾದಿತ ಸ್ಥಳಗಳ ಬಗ್ಗೆ ನಿಮಗೆ ಗೊತ್ತಾ?

ನಾಟ್ ಪುರ್ವಾ, ಉತ್ತರ ಪ್ರದೇಶ

ನಾಟ್ ಪುರ್ವಾ, ಉತ್ತರ ಪ್ರದೇಶ

PC: youtube
ಇದೊಂದು ಉತ್ತರ ಪ್ರದೇಶದ ಸಣ್ಣ ಊರಾಗಿದೆ. ಇಲ್ಲಿ ವೇಶ್ಯಾವಾಟಿಕೆಯು ಸುಮಾರು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಲಖನೌನಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರಯಾಣ ಮಾಡಬೇಕು. ಈ ಊರಿನಲ್ಲಿ ಸುಮಾರು 5000 ಜನರು ತಮ್ಮ ಜೀವನೋಪಾಯಕ್ಕಾಗಿ ಈ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಲ್ಲಿನ ಹೆಚ್ಚಿನ ಮಕ್ಕಳಿಗೆ ತಮ್ಮ ತಂದೆ ಯಾರೆಂಬುವುದೇ ಗೊತ್ತಿಲ್ಲ.

ವಾಡಿಯಾ, ಗುಜರಾತ್

ವಾಡಿಯಾ, ಗುಜರಾತ್

PC: youtube
ಈ ಪ್ರದೇಶದ ಮಹಿಳೆಯರು ತಮ್ಮ ಫ್ಯಾಮಿಲಿಗೆ ಈ ಕೆಲಸದ ಮೂಲಕ ಹಣಕಾಸಿನಲ್ಲಿ ಸಹಾಯಮಾಡುತ್ತಾರೆ. ಇಲ್ಲಿ ಪುರುಷರೇ ಮಹಿಳೆಯರಿಗೆ ಗಿರಾಕಿಯನ್ನು ಹುಡುಕಿಕೊಡುತ್ತಾರೆ. ಅಂದರೆ ಇಲ್ಲಿನ ಪುರುಷರು ಪಿಂಪ್‍ಗಳ ಕೆಲಸ ಮಾಡುತ್ತಾರೆ. ತಮ್ಮ ಮನೆಯ ಮಹಿಳೆಯರಿಗೆ ಗಿರಾಕಿಯನ್ನು ತರುತ್ತಾರೆ. ಈ ಕಾಯಕ ಹಲವಾರು ವರ್ಷಗಳಿಂದ ನಡೆದು ಬಂದಿದೆ. ವಿದ್ಯಾಭ್ಯಾಸ ಹಾಗೂ ಸಾಮೂಹಿಕ ವಿವಾಹದಿಂದಾಗಿ ಸ್ವಲ್ಪಮಟ್ಟಿಗೆ ಪರಿಣಾಮ ಬೀರಿತಾದರೂ, ಕಾನೂನು ಬಾಹಿರವಾಗಿ ಈ ಕೆಲಸ ನಡೆಯುತ್ತಾ ಇದೆ.

ಯೌವನದಲ್ಲಿರುವಾಗಲೇ ಈ ನಗರಗಳ ನೈಟ್‌ ಲೈಫ್‌ಅನುಭವ ಪಡೆಯಲೇ ಬೇಕು

ಶಿವದಾಸ್‍ಪುರ ವಾರಣಾಸಿ

ಶಿವದಾಸ್‍ಪುರ ವಾರಣಾಸಿ

PC: youtube
ಹಳೆಯಕಾಲದಿಂದಲೂ ಈ ಪ್ರದೇಶ ವೇಶ್ಯಾಗ್ರಹಗಳಿಗೆ ಪ್ರಸಿದ್ದಿಹೊಂದಿದೆ. ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ಈ ವೇಶ್ಯಾವೃತ್ತಿಯ ಕರಾಳಮುಖವನ್ನು ತೋರಿಸಿದ್ದಾರೆ, ಆದರೆ ಇಲ್ಲಿ ನಿಜಜೀವನದಲ್ಲಿ ಅದೆಲ್ಲಾ ಕಾಣಸಿಗುತ್ತದೆ. ಈ ಪ್ರದೇಶವು ವಾರಣಾಸಿ ರೈಲ್ವೆ ಸ್ಟೇಶನ್‍ನಿಂದ ಸುಮಾರು 10ಕಿ.ಮಿ ದೂರದಲ್ಲಿದೆ. ಉತ್ತರ ಪ್ರದೇಶದಲ್ಲಿರುವ ರೆಡ್‍ಲೈಟ್ ಏರಿಯಾಗಳಲ್ಲಿ ಅತ್ಯಂತ ದೊಡ್ಡ ರೆಡ್‍ಲೈಟ್ ಏರಿಯಾ ಇದಾಗಿದೆ.

ಶೋನಗಚಿ, ಕೊಲ್ಕತ್ತಾ

ಶೋನಗಚಿ, ಕೊಲ್ಕತ್ತಾ

PC: youtube
ಇದೂ ಕೂಡಾ ಏಷ್ಯಾದ ದೊಡ್ಡ ರೆಡ್‍ಲೈಟ್ ಏರಿಯಾಗಳಲ್ಲಿ ಒಂದಾಗಿದೆ. ಉತ್ತರ ಕೊಲ್ಕತ್ತಾದಲ್ಲಿದೆ. ಈ ಸ್ಥಳವು ಅತಿ ಹೆಚ್ಚಿನ ಕ್ರಿಮಿನಲ್ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಶೋನಗಾಚಿಯಿಂದ 30 ನಿಮಿಷ ದೂರದಲ್ಲಿ ಪ್ರೇಮ್‍ಚಂದ್ ಬೋರಲ್ ಲೇನ್ ಹಾಗೂ ಹಾರ್ಕಾಟಾ ಲೇನ್‍ನಲ್ಲಿ ಈ ವೇಶ್ಯಾ ಸಂಪ್ರದಾಯ ಇನ್ನೂ ಪ್ರಚಲಿತದಲ್ಲಿದೆ.

ದೇವದಾಸಿ, ಕರ್ನಾಟಕ

ದೇವದಾಸಿ, ಕರ್ನಾಟಕ

PC: youtube
ಕರ್ನಾಟಕದ ಕೆಲವು ಭಾಗಗಳಲ್ಲಿ ಇಂದಿಗೂ ದೇವದಾಸಿ ಪದ್ಧತಿ ಜಾರಿಯಲ್ಲಿದೆ. ಇಲ್ಲಿ ಹುಡುಗಿಯು ತನ್ನ ಇಡೀ ಜೀವನವನ್ನು ದೇವರ ಸೇವೆಗಾಗಿ ಮುಡಿಪಾಗಿಡಬೇಕು. ಹುಡುಗಿಯರು ಪರೋಕ್ಷವಾಗಿ ದೇವರ ಜೊತೆ ಮದುವೆಯಾಗುತ್ತಾರೆ. ಆಕೆ ತನ್ನ ಫ್ಯಾಮಿಲಿಗಾಗಿ ಹಣ ಸಂಪಾದಿಸಲು ವೇಶ್ಯಾವೃತ್ತಿಯನ್ನು ಮುಂದುವರಿಸುತ್ತಾಳೆ.

Read more about: india mumbai gujarat karnataka

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ