Search
  • Follow NativePlanet
Share
» »ಇದು ಕಾಲಜ್ಞಾನಿಯ ಮಠ- ಮಿರಾಕಲ್ಸ್...!

ಇದು ಕಾಲಜ್ಞಾನಿಯ ಮಠ- ಮಿರಾಕಲ್ಸ್...!

By Sowmyabhai

ಕೇವಲ ಆಂಧ್ರ ಪ್ರದೇಶದಲ್ಲಿಯೇ ಅಲ್ಲದೇ ದಕ್ಷಿಣ ಭಾರತ ದೇಶದಲ್ಲಿಯೇ ಅತ್ಯಂತ ಹೆಸರುವಾಸಿಯಾಗಿರುವ ಕಾಲಜ್ಞಾನಿ ವೀರಬ್ರಹ್ಮೇಂದ್ರ ಸ್ವಾಮಿ. ಇವರ ಬಗ್ಗೆ ತಿಳಿಯದೇ ಇರುವವರು ಯಾರು ಇಲ್ಲ ಎಂದೇ ಹೇಳಬಹುದು. ಸ್ವಾಮಿಯು ದೊಡ್ಡ ತತ್ತ್ವ ಶಾಸ್ತ್ರಗಾರ, ಮಾನವತಾವಾದಿಯಾಗಿದ್ದರು. ಭವಿಷ್ಯದಲ್ಲಿಯಾಗುವ ಎಲ್ಲಾ ಘಟನೆಗಳನ್ನು ಮುಂದೆಯೇ ಅರಿತುಕೊಂಡು "ಕಾಲಜ್ಞಾನ"ವನ್ನು ಬರೆದರು. ಅದು ಇಂದಿಗೂ ಒಂದು ಅದ್ಭುತವೆಂದೇ ಪರಿಗಣಿಸಲಾಗುತ್ತಿದೆ. ಸ್ವಾಮಿಯವರು ಬರೆದಿರುವ ಕಾಲಜ್ಞಾನದಲ್ಲಿ ಒಂದೊಂದಾಗಿಯೇ ನಡೆಯುತ್ತಿರುವುದರಿಂದ ಆತನಿಗೆ ದಿನದಿಂದ ದಿನೇ ಭಕ್ತರು ಹೆಚ್ಚಾಗುತ್ತಲೇ ಇದ್ದಾರೆ.

ಬ್ರಹ್ಮಂಗಾರು ಎಂದು ಕರೆಯುವ ಈ ಸ್ವಾಮಿಯು ವಿವಿಧ ಪ್ರದೇಶವೆಲ್ಲಾ ತಿರುಗುತ್ತಾ ಕೊನೆಗೆ ಕಡಪ ಜಿಲ್ಲೆ ಕಂದಿಮಲ್ಲಯಪಲ್ಲಿಯಲ್ಲಿ ಜೀವ ಸಮಾಧಿಯಾದರು. ಕಾಲಕ್ರಮೇಣ ಇಲ್ಲಿ ಆತನ ಮಠ ಕೂಡ ನೆಲೆಸಿತು. ಆತನು ತಿರುಗಾಡಿದ ಆ ನೆಲ, ವಸ್ತುಗಳು, ಸಮಾಧಿಯನ್ನು ದರ್ಶನ ಮಾಡಿಕೊಳ್ಳುವ ಸಲುವಾಗಿ ಅನೇಕ ಕಡೆಗಳಿಂದ ಭಕ್ತರು ಭೇಟಿ ನೀಡುತ್ತಿರುತ್ತಾರೆ.

1.ಬ್ರಹ್ಮಗಾರಿ ಮಠ (ಕಂದಿಮಲ್ಲಯಪಲ್ಲೆ) ಹೇಗೆ ಸೇರಿಕೊಳ್ಳಬೇಕು?

1.ಬ್ರಹ್ಮಗಾರಿ ಮಠ (ಕಂದಿಮಲ್ಲಯಪಲ್ಲೆ) ಹೇಗೆ ಸೇರಿಕೊಳ್ಳಬೇಕು?

ಕಡಪದಲ್ಲಿ ಸಾರಿಗೆ ಎಲ್ಲಾ ವಿಧವಾಗಿಯು ಅನುಕೂಲಕರವಾಗಿದೆ. ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣ ಎಲ್ಲಾ ಇಲ್ಲಿದೆ. ಇಲ್ಲಿಂದ ಕಂದಿಮಲ್ಲಯಪಲ್ಲೆಗೆ ಸುಮಾರು 60 ಕಿ.ಮೀ ದೂರದಲ್ಲಿದೆ. ಕಡಪದಿಂದ ವಯಾ ಮೈದುಕೂರಿನ ಮೇಲೆ ಕಂದಿಮಲ್ಲಯಪಲ್ಲೆ ಸೇರಿಕೊಳ್ಳಬೇಕು. ಮೈದುಕೂರ್‍ನಿಂದ ಕೇವಲ 37 ಕಿ.ಮೀ ದೂರದಲ್ಲಿ ಈ ಮಠವಿದೆ.

2.ಕಂದಿಮಲ್ಲಯಪಲ್ಲಿ

2.ಕಂದಿಮಲ್ಲಯಪಲ್ಲಿ

PC:Akshara Sathwika Ram

ಬ್ರಹ್ಮ ಅವರು ಕಂದಿಮಲ್ಲಯಪಲ್ಲಿಯಲ್ಲಿ ತಮ್ಮ ಜೀವನವನ್ನು ಮುಂದುವರೆಸಿದರು. ಅದಕ್ಕಿಂತ ಮುಂಚೆ ಬನಗಾನಪಲ್ಲೆಯಲ್ಲಿ " ಗರಿಮಿರೆಡ್ಡಿ ಅಚ್ಚಮ್ಮ" ಆಶ್ರಯವನ್ನು ಪಡೆದು, ಪಶುಗಳ ಕಾವಲುಗಾರನಾಗಿ ಇದ್ದರು. ಅಲ್ಲಿಯೇ ಇದ್ದ ಗುಹೆಯಲ್ಲಿ ಕುಳಿತುಕೊಂಡು ಕಾಲಜ್ಞಾನವನ್ನು ರಚಿಸುತ್ತಿದ್ದರು. ಅನಂತರ ಅಚ್ಚಮ್ಮಳಿಗೆ ಅವುಗಳನ್ನು ಬೋಧಿಸಿ ಅನುಗ್ರಹಿಸಿದರು. ಬೋಧನೆ ಮಾಡಿದ ಪ್ರದೇಶವನ್ನು "ಮುಚ್ಚಟ್ಲ ಕೊಂಡ" ಎಂದು ಕರೆಯಲಾಗುತ್ತದೆ.

3.ವಿಭಿನ್ನವಾದ ಘಟನೆ

3.ವಿಭಿನ್ನವಾದ ಘಟನೆ

PC:Kranthi Veer

ಕೆಲವು ಕಾಲ ಕಳೆದ ನಂತರ ಬ್ರಹ್ಮ ಅವರು ಕಂದಿಮಲ್ಲಯ ಪಲ್ಲಿ ಸೇರಿಕೊಂಡು ಜೀವನವನ್ನು ಪ್ರಾರಂಭ ಮಾಡಿದರು. ಇಲ್ಲಿ ನಂಬಲಾಗದ ಒಂದು ಸಂಘಟನೆ ನಡೆಯಿತು. ಅದೆನೆಂದರೆ ಈ ಊರಿನ ಗ್ರಾಮ ದೇವತೆ ಪೊಲೆರಮ್ಮ. ಊರಿನಲ್ಲಿ ಜಾತ್ರೆಯನ್ನು ನಿರ್ವಹಿಸುವ ಸಲುವಾಗಿ ಹಣವನ್ನು ವಸೂಲಿ ಮಾಡುತ್ತಾ ಬ್ರಹ್ಮ ಸ್ವಾಮಿಗೆ ಕೇಳುತ್ತಾರೆ. ಆಗ ಆತನು "ತಾನು ಕಡು ಬಡವನೆಂದು, ಹಣ ನೀಡಲಾಗುವುದಿಲ್ಲವೆಂದು" ಹೇಳುತ್ತಾರೆ. ನೀಡಲೇಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದರಿಂದ ಅದಕ್ಕೆ ಸ್ವಾಮಿಯವರು ಮೊದಲು ದೇವಿಯ ದರ್ಶನ ಮಾಡಿದ ನಂತರ ನೀಡುತ್ತೇನೆ ಎಂದು ರಚ್ಚಬಂಡೆಯ ಹತ್ತಿರ ಹೋಗುತ್ತಾರೆ.

4.ಒಂದು ಘಟನೆ

4.ಒಂದು ಘಟನೆ

PC: Raghuramacharya

ಅಲ್ಲಿ ಮೈ ಬೆಚ್ಚಗೆ ಮಾಡಿಕೊಳ್ಳುವ ಸಲುವಾಗಿ ಸುತ್ತಮುತ್ತಲಿನವರಿಗೆ ಬೆಂಕಿಯನ್ನು ಕೇಳಿದರು. ಅವರು ಇಲ್ಲ ಎಂದು ಹೇಳಿದ ಕಾರಣ " ಪೊಲೆರಮ್ಮ ಮೈ ಬಿಸಿ ಮಾಡಿಕೊಳ್ಳಲು ಬೆಂಕಿಯನ್ನು ತೆಗೆದುಕೊಂಡು ಬಾ..! " ಎಂದು ದೊಡ್ಡದಾಗಿ ಕೂಗಿದರು. ತಕ್ಷಣವೇ ಸ್ವಾಮಿಯ ಸಮೀಪದಲ್ಲಿ ಬೆಂಕಿಯು ಬಂದಿತು. ಇನ್ನು ಸ್ವಾಮಿಯು ಮೈಕಾಯಿಸಿಕೊಂಡು "ಇನ್ನು ಸಾಕು ತಾಯಿ, ತೆಗೆದುಕೊಂಡು ಹೋಗು" ಎಂದ ತಕ್ಷಣ ಪೊಲೆರಮ್ಮ ದೇವಾಲಯದ ಒಳಗೆ ಹೋಗಿಬಿಟ್ಟಳಂತೆ. ಇಂದಿಗೂ ರಚ್ಚಬಂಡೆಯ ಪಕ್ಕದಲ್ಲಿಯೇ ಪೊಲೆರಮ್ಮ ದೇವಾಲಯವಿರುವುದನ್ನು ಕಾಣಬಹುದು.

5.ಇತರ ಆಕರ್ಷಣೆಗಳು

5.ಇತರ ಆಕರ್ಷಣೆಗಳು

PC: Kranthi Veer

ಶ್ರೀ ಈಶ್ವರಮ್ಮ ಸಮಾಧಿ ಶ್ರೀ ಈಶ್ವರಮ್ಮ ಅವರು ಬ್ರಹ್ಮಂ ಅವರ 2 ನೇ ಕುಮಾರನಾದ ಗೋವಿಂದಯ್ಯ ಅವರ ಕುಮಾರಿ. ಈಕೆಯು ಕೂಡ ಹುಟ್ಟಿದಾಗಲಿಂದ ಬ್ರಹ್ಮಜ್ಞಾನಿ ಎಂದು ಹೆಸರುವಾಸಿಯಾದರು. ಈಕೆಯ ಸಮಾಧಿಯು ಕೂಡ ಕಂದಿಮಲ್ಲಯಪಲ್ಲೆಯಲ್ಲಿಯೇ ಇದೆ. ನವರತ್ನ ಮಂಟಪವು ಕೂಡ ಇಲ್ಲಿನ ಪ್ರಸಿದ್ಧವಾದ ಪ್ರವಾಸಿ ಆಕರ್ಷಣೆಯಾಗಿದೆ.

6.ಪೋತುಲೂರಿ ವೀರಬ್ರಹ್ಮೇಂದ್ರಸ್ವಾಮಿ ರಿಜರ್ವಾಯರ್

6.ಪೋತುಲೂರಿ ವೀರಬ್ರಹ್ಮೇಂದ್ರಸ್ವಾಮಿ ರಿಜರ್ವಾಯರ್

PC::Raghuramacharya

ಈ ರಿಜರ್ವಾಯರ್‍ಗೆ ಇರುವ ಮತ್ತೊಂದು ಹೆಸರೇ ಸುಂಡುಪಲ್ಲಿ ರಿಜರ್ವಾಯರ್. ಇದು ತೆಲುಗು ಗಂಗಾ ಇರಿಗೇಷನ್ ಪ್ರಾಜೆಕ್ಟ್‍ನಲ್ಲಿ ಒಂದು ಭಾಗವೇ ಆಗಿದೆ. ಇದರ ಶಿಲಾಫಲಕವನ್ನು ಎನ್. ಟಿ ರಾಮಾರಾವ್ ಸ್ಥಾಪನೆ ಮಾಡಿದರು. ಸುತ್ತಲೂ ಬೆಟ್ಟಗಳು, ರಿಜರ್ವಾಯರ್ ಪ್ರವಾಸಿಗರನ್ನು ಆಕರ್ಷಿಸುತ್ತದೆ.

7.ನಾರಾಯಣ ಸ್ವಾಮಿ ಆಶ್ರಮ

7.ನಾರಾಯಣ ಸ್ವಾಮಿ ಆಶ್ರಮ

PC:Daiva Sannidhi

ಕಂದಿಮಲ್ಲಯಪಲ್ಲೆಯಲ್ಲಿರುವ ನಾರಾಯಣ ಸ್ವಾಮಿ ಆಶ್ರಮವು ಕೂಡ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಅವಧೂತ ನಾರಾಯಣಸ್ವಾಮಿ ಕರ್ನೂಲು ಜಿಲ್ಲೆಯಲ್ಲಿ ವಿಸ್ತøತವಾಗಿ ಪ್ರವಾಸ ಮಾಡಿದ್ದರಿಂದ ಕರ್ನೂಲು ನಾರಾಯಣ ರೆಡ್ಡಿಯಾಗಿ ಅವರು ಪ್ರಸಿದ್ಧಿ ಹೊಂದಿದರು.

8.ಅನುಭೂತಿ

8.ಅನುಭೂತಿ

PC:Sunkesula Ameer

ಎಂದಾದರೂ ಕಂದಿಮಲ್ಲಯಪಲ್ಲೆಯಲ್ಲಿ ಸಂಚಾರ ಮಾಡುತ್ತಾ ಇದ್ದರೆ ಒಂದು ವಿಭಿನ್ನವಾದ ಅನುಭೂತಿಯನ್ನು ಉಂಟು ಮಾಡುತ್ತದೆ. ಅಲ್ಲಿಯೇ ತಿರುಗುವ ಭಕ್ತರೆಲ್ಲರೂ ತಲೆಗೆ ಸ್ನಾನವನ್ನು ಮಾಡಿ, ಕೂದಲನ್ನು ಬಿಟ್ಟು, ಹಣೆಗೆ ಕುಂಕುಮವನ್ನು ಧರಿಸಿ ಕಾಣಿಸುತ್ತಾರೆ.

9.ವಿಶೇಷವಾದ ಉತ್ಸವಗಳು

9.ವಿಶೇಷವಾದ ಉತ್ಸವಗಳು

PC:vishwabrahmana

ಪ್ರತಿ ಮಹಾ ಶಿವರಾತ್ರಿಯಂದು ಶ್ರೀ ಶ್ರೀ ವೀರಬ್ರಹ್ಮೆಂದ್ರ ಸ್ವಾಮಿ ದಂಪತಿಗಳಿಗೆ ರಥೋತ್ಸವವನ್ನು ಅತ್ಯಂತ ವೈಭವವಾಗಿ ಆಚರಿಸಲಾಗುತ್ತದೆ. ವೈಶಾಖ ಶುದ್ಧ ದಶಮಿ ದಿನದಂದು ನಡೆಯುವ ಶ್ರೀ ಸ್ವಾಮಿಯವರ ರಥೋತ್ಸವದಂದು ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ.

10.ದೃಶ್ಯದಲ್ಲಿ....!

10.ದೃಶ್ಯದಲ್ಲಿ....!

PC:venaktesh reddy

ಇದು ಕಾಲಜ್ಞಾನಿಯಾದ ವೀರಬ್ರಹ್ಮೇಂದ್ರ ಸ್ವಾಮಿಯವರ ಮನೆ.

11.ದೃಶ್ಯದಲ್ಲಿ....!

11.ದೃಶ್ಯದಲ್ಲಿ....!

PC:venkatesh reddy

ಬ್ರಹ್ಮ ಅವರು ಒಂದೇ ರಾತ್ರಿಯಲ್ಲಿ ತನ್ನ ಮನೆಯ ಆವರಣದಲ್ಲಿ ಸ್ವತಃ ಅವರೇ ಬಾವಿಯನ್ನು ತೆಗೆದರು ಎಂದು ಹೇಳಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more