Search
  • Follow NativePlanet
Share
» »ಅರ್ಧರಾತ್ರಿಯ ಸಮಯದಲ್ಲಿ ಆ ದೇವಾಲಯದಲ್ಲಿ ವಿಭಿನ್ನವಾದ ಶಬ್ಧಗಳು..

ಅರ್ಧರಾತ್ರಿಯ ಸಮಯದಲ್ಲಿ ಆ ದೇವಾಲಯದಲ್ಲಿ ವಿಭಿನ್ನವಾದ ಶಬ್ಧಗಳು..

ನಾಗಲೋಕದ ಬಗ್ಗೆ ನಮ್ಮ ಪುರಾಣಗಳಲ್ಲಿ ಪ್ರತ್ಯೇಕವಾಗಿ ವಿವರಿಸಲಾಗಿದೆ. ಆ ವಿಷಯದ ಮೇಲೆ ಹಲವಾರು ಸಿನಿಮಾಗಳು ಕೂಡ ಬಂದಿವೆ. ನಾಗದೇವತೆಯಂತಹ ಉತ್ತಮವಾದ ಚಿತ್ರಗಳಿಂದ ನಾಗಲೋಕದ ಬಗ್ಗೆ ಮತ್ತು ಅವರ ಮಹಿಮೆಯ ಬಗ್ಗೆ ಹಲವಾರು ಮಾಹಿತಿಗಳು ನಿಮಗೆ ತಿಳಿದೇ ಇದೆ. ನಿಮಗೆ ಗೊತ್ತ? ಕ್ಷೀರ ಸಾಗರದಲ್ಲಿದ್ದ ವಾಸುಕಿ ಸರ್ಪವು ಭೂಮಿಯ ಮೇಲೆ ಇದೆ ಎಂದರೆ ನೀವು ನಂಬುತ್ತೀರಾ? ವಾಸುಕಿ ಒಂದು ಪವಿತ್ರವಾದ ಸರ್ಪವಾಗಿದೆ.

ಕ್ಷೀರ ಸಾಗರದ ಕಥೆ ಏನೆಂದರೆ ದೇವತೆಗಳು ಹಾಗು ರಾಕ್ಷಸರು ಅಮೃತಕ್ಕಾಗಿ ಹೋರಾಡುತ್ತಿರುವಾಗ (ಸರ್ಪದ ಮೂಲಕ ಎಳೆಯುತ್ತಿರುತ್ತಾರೆ) ಅದೇ ವಾಸುಕಿ ಸರ್ಪವಾಗಿದೆ. ಅದಕ್ಕೆ ಸಜೀವ ಸಾಕ್ಷಿ ಎಂಬಂತೆ ನಾಗಲೋಕವಿದೆಯೇ? ನಾಗಲೋಕಕ್ಕೆ ಸಂಬಂಧಿಸಿದ ಕಟ್ಟುಕಥೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಉಳಿದವರು ಅದು ನಿಜವೇ ಎಂದು ಹೇಳುತ್ತಿದ್ದಾರೆ.

ಉತ್ತರಾಖಂಡದಲ್ಲಿರುವ ಪಾತಾಳಭುವನೇಶ್ವರ ದೇವಾಲಯ

1.ಜೀಮೂತಕೇತುವು ಎಂಬ ರಾಜನು ಅನೇಕ ಕಾಲದಿಂದ ಆಳ್ವಿಕೆ ಮಾಡಿ ತುಂಬ ಒಳ್ಳೆಯವನು ಎಂದು, ನ್ಯಾಯಮೂರ್ತಿ ಎಂದು ಕೀರ್ತಿ ಹೊಂದಿದನು. ಇತನಿಗೆ ಜೀಮೂತವಾಹನ ಎಂಬ ಕುಮಾರನು ಇದ್ದನು. ಇತನು ಜೀವವಿರುವ ಎಲ್ಲಾ ಪ್ರಾಣಿಗಳನ್ನು ಸಮಾನವಾಗಿ ಪ್ರೇಮಿಸುತ್ತಿದ್ದನು. ತಂದೆ-ತಾಯಿಯ ಮೇಲೆ ಅಪರಿಮಿತವಾದ ಭಕ್ತಿಯನ್ನು ಹೊಂದಿದ್ದ ಕುಮಾರನು ರಾಜ್ಯವನ್ನು ಆಳ್ವಿಕೆ ಮಾಡು ಎಂದರೆ ಆತನು ತಂದೆಯ ಮಾತಿಗೆ ಅಂಗೀಕಾರ ಮಾಡಿದರು.

ಉತ್ತರಾಖಂಡದಲ್ಲಿರುವ ಪಾತಾಳಭುವನೇಶ್ವರ ದೇವಾಲಯ

2.ತನ್ನ ರಾಜ್ಯವನ್ನು ಮಂತ್ರಿಗಳಿಗೆ ಒಪ್ಪಿಸಿ ಕೋರಿದನ್ನೆಲ್ಲಾ ನೀಡುವ ಕಲ್ಪವೃಕ್ಷವನ್ನು ಕೂಡ ಬಡವರಿಗೆ ದಾನವನ್ನು ನೀಡಿದನು. ಒಂದು ದಿನ ಪರ್ಣಶಾಲೆಗಾಗಿ ಮಲಯ ಪರ್ವತ ಎಂಬ ಬೆಟ್ಟದ ಮೇಲೆ ಹೋದನು. ಅಲ್ಲಿ ಗೌರಿದೇವಿಯನ್ನು ಇಂಪಾದ ವೀಣಾಗಾನ ಪ್ರಾರ್ಥಿಸುತ್ತಿದ್ದ ಮಲಯಮತಿಯನ್ನು ಕಂಡು, ಪ್ರೇಮಿಸಿ, ವಿವಾಹವನ್ನು ಮಾಡಿಕೊಂಡನು. ಹಾಗೇ ಪರ್ವತದ ಮೇಲೆ ವಿಹಾರಿಸುತ್ತಿರುವಾಗ ಆತನಿಗೆ ಒಂದು ಬಿಳಿಯ ಪರ್ವತದ ಹಾಗೆ ಕಾಣುತ್ತಿರುವ ಹಾವುಗಳ ಗುಡ್ಡ ಕಂಡು ಆಶ್ಚರ್ಯ ಪಟ್ಟನು.

ಉತ್ತರಾಖಂಡದಲ್ಲಿರುವ ಪಾತಾಳಭುವನೇಶ್ವರ ದೇವಾಲಯ

3.ಆ ಎಲ್ಲಾ ಹಾವುಗಳಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವ್ಯಥೆಪಟ್ಟನು. ಅಲ್ಲಿಯೇ ಅಳುತ್ತಿದ್ದ ಒಬ್ಬ ತಾಯಿಯನ್ನು ಕಂಡನು. ವಿಷಯವನ್ನು ತಿಳಿದುಕೊಳ್ಳುವ ಸಲುವಾಗಿ ವಿವರಗಳನ್ನು ಕೇಳಿದಾಗ ಆ ದಿನ ಗುರುತ್ಮಾಂತುಕನಿಗೆ ತನ್ನ ಮಗನಾದ ಶಂಖಚೂಡನು ಆಹಾರವಾಗಿ ತೆರಳುತ್ತಿದ್ದಾನೆ ಎಂದು ಹೇಳಿದಳು. ಗುರುತ್ಮಾಂತುಕನಿಗೆ ಹಾವುಗಳೆಂದರೆ ವಿರೋಧವಿತ್ತು.

ಉತ್ತರಾಖಂಡದಲ್ಲಿರುವ ಪಾತಾಳಭುವನೇಶ್ವರ ದೇವಾಲಯ

4.ಆತನು ನಾಗಲೋಕದ ಮೇಲೆ ಬಿದ್ದು, ಹಾವುಗಳನ್ನು ಕನಿಕರವೇ ಇಲ್ಲದೇ ತಿನ್ನುತ್ತಿದ್ದನು. ಆ ಸಮಯದಲ್ಲಿ ನಾಗರಾಜನಾದ ವಾಸುಕಿಯು ಗುರುತ್ಮಾಂತುಕ ಪ್ರತಿ ದಿನ ಹಾವುಗಳನ್ನು ಆಹಾರವಾಗಿ ಕಳುಹಿಸುತ್ತೇನೆ ಎಂದು ಪ್ರಾರ್ಥಿಸಿ ಒಪ್ಪಸಿದನು. ಈ ದಿನ ನನ್ನ ಮಗನ ಸರದಿ ಎಂದು ಹೇಳಿದಳು.

ಉತ್ತರಾಖಂಡದಲ್ಲಿರುವ ಪಾತಾಳಭುವನೇಶ್ವರ ದೇವಾಲಯ

5.ಆಗ ಶಂಖಚೂಢನಿಗೆ ಬದಲಾಗಿ ತಾನೇ ಗುರುತ್ಮಾಂತುಕನಿಗೆ ಆಹಾರವಾಗುತ್ತೇನೆ ಎಂದು ಆ ತಾಯಿಗೆ ಹೇಳಿ, ಬಲಿಪೀಠದ ಮೇಲೆ ಪೆದ್ದ ಬಂಡೆಯ ಮೇಲೆ ಜೀಮೂತವಾಹನನು ಮಲಗಿದನು. ಗುರುತ್ಮಾಂತುಕನು ಬಂಡೆಯ ಮೇಲೆ ಇರುವ ಜೀಮೂತ ವಾಹನನ್ನು ತಿನ್ನಲು ಮುಂದಾದನು.

ಉತ್ತರಾಖಂಡದಲ್ಲಿರುವ ಪಾತಾಳಭುವನೇಶ್ವರ ದೇವಾಲಯ

6.ಕೆಲವು ಕ್ಷಣಗಳ ನಂತರ ಏನೋ ತಪ್ಪಾಗಿದೆ ಎಂದು ಸಂದೇಹವನ್ನು ಪಟ್ಟು, ತಿನ್ನುವುದನ್ನು ನಿಲ್ಲಿಸಿ ತಾನು ತಿನ್ನುತ್ತಿರುವುದು ಜೀಮೂತವಾಹನನ್ನು ಎಂದು ತಿಳಿದುಕೊಂಡನು. ಆತ ಮಾಡಿದ ತಪ್ಪಿಗೆ ತಾನೇ ನೊಂದುಕೊಂಡನು. ಶಂಖಚೂಡನು ಚಿಕ್ಕ ಮಕ್ಕಳ ಹಾಗೆ ಅಳುತ್ತಾ ಅಲ್ಲಿಯೇ ಕುಳಿತುಕೊಂಡನು. ಜೀಮೂತವಾಹನನ ಪತ್ನಿ, ತಂದೆ, ತಾಯಿಗಳು ಸೇರಿ ಅಳುತ್ತಿದ್ದರು.

ಉತ್ತರಾಖಂಡದಲ್ಲಿರುವ ಪಾತಾಳಭುವನೇಶ್ವರ ದೇವಾಲಯ

7.ಹೇಗಾದರೂ ಮಾಡಿ ಅವರ ದುಃಖವನ್ನು ಹೋಗಲಾಡಿಸಬೇಕು, ಇಲ್ಲವಾದರೇ ತನಗೆ ಮನಃಶಾಂತಿ ಲಭಿಸುವುದಿಲ್ಲ ಎಂದು ದೇವಲೋಕಕ್ಕೆ ತೆರಳಿ ಅಮೃತವನ್ನು ತೆಗೆದುಕೊಂಡು ಬಂತು ಜೀಮೂತವಾಹನವನ್ನು ಬದುಕಿಸುತ್ತಾನೆ. ಎಲ್ಲರೂ ಸಂತೋಷ ಪಟ್ಟರು. ಆಗ ಜೀಮೂತವಾಹನನು ಗುರುತ್ಮಾಂತುಕನ ಶಕ್ತಿ-ಸಾಮಥ್ರ್ಯವನ್ನು ಹೊಗಳಿ, ರಾಜನನ್ನು ಬದುಕಿಸಿದನು. ಹಾಗೆಯೇ ಈಗಾಗಲೇ ತಿಂದ ಹಾವುಗಳನೆಲ್ಲಾ ಬದುಕಿಸಿ ಪುಣ್ಯವನ್ನು ಕಟ್ಟಿಕೋ ಎಂದು ಹೇಳಿದನು. ಹಾಗಾಗಿ ಗುರುತ್ಮಾಂತುಕನು ಅಂಗೀಕಾರ ಮಾಡಿ ಎಲ್ಲಾ ಹಾವುಗಳನ್ನು ಬದುಕಿಸಿದನು.

ಉತ್ತರಾಖಂಡದಲ್ಲಿರುವ ಪಾತಾಳಭುವನೇಶ್ವರ ದೇವಾಲಯ

8.ಅದಕ್ಕೆ ಬಲ ಎಂಬಂತೆ ಉತ್ತರಾಖಂಡದಲ್ಲಿನ ಫಿತುರ್ಗಡ್ ಜಿಲ್ಲೆಯಲ್ಲಿ ಕಾಣಬಹುದು. ಇಲ್ಲಿಂದ 85 ಕಿ.ಮೀ ದೂರದಲ್ಲಿ ಪಾತಾಳಭುವನೇಶ್ವರ ಎಂಬ ಗುಹೆಗಳಿವೆ. ಈ ಗುಹೆಯಲ್ಲಿ ನಾಗಲೋಕದಲ್ಲಿ ರಹಸ್ಯವಾಗಿದೆ. ಈ ಗುಹೆಯಲ್ಲಿ ವಾಸುಕಿ ಸರ್ಪದ ವಾಸಸ್ಥಾನಗಳು ಕಾಣಿಸುತ್ತಿದೆ. ಆದರೆ ಅಲ್ಲಿಗೆ ಹೋಗುವುದು ಅಷ್ಟು ಸುಲಭವಲ್ಲ.

ಉತ್ತರಾಖಂಡದಲ್ಲಿರುವ ಪಾತಾಳಭುವನೇಶ್ವರ ದೇವಾಲಯ

9.ವುಪರಿತಲಂನಿಂದ 90 ಅಡಿ ಎತ್ತರದಲ್ಲಿದೆ ಒಂದು ಗುಹೆ. ಇಲ್ಲಿ ಶೇಷನಾಗನ ಆಕಾರದಲ್ಲಿ ಒಂದು ಆಕೃತಿ ಕಾಣಿಸುತ್ತದೆ. ಅದರ ಮೇಲೆ ಒಂದು ಸಹಜ ನಿರ್ಮಾಣವಿದೆ. ಇನ್ನು ಶೇಷನಾಗನ ವಿಷವುಳ್ಳ ಚಿತ್ರವು ಸ್ಪಷ್ಟವಾಗಿ ಕಾಣಿಸುತ್ತದೆ.

ಉತ್ತರಾಖಂಡದಲ್ಲಿರುವ ಪಾತಾಳಭುವನೇಶ್ವರ ದೇವಾಲಯ

10.ಸರಿಯಾಗಿ ಇದೇ ಪ್ರದೇಶದಲ್ಲಿ ಪೂರ್ವ ಕೆಲವು ಲಕ್ಷಾಧಿ ಹಾವುಗಳು ಇದ್ದವಂತೆ. ಈ ಪ್ರದೇಶದಲ್ಲಿ ಅರ್ಜುನನ ಮೊಮ್ಮಗನಾದ ಜನಮೆಯ ಮಹಾರಾಜ ತನ್ನ ತಂದೆಯನ್ನು ಹಾವು ಕಚ್ಚಿದ್ದರಿಂದ ನಾಗಜಾತಿಯನ್ನೇ ನಾಶ ಮಾಡಬೇಕು ಎಂದು, ಒಂದು ಸರ್ಪಯಾಗವನ್ನು ಮಾಡಿದನು. ಈ ಯಾಗದಲ್ಲಿ ಕೆಲವು ಲಕ್ಷಾಧಿ ಹಾವುಗಳು ಮರಣ ಹೊಂದಿದ್ದವು. ಈ ಗುಹೆಯಲ್ಲಿ ಜನಮೇಯ ಮಾಡಿದ ಸರ್ಪಯಾಗ ಕುಂಡ ಕೂಡ ಇಲ್ಲಿಯೇ ಇದೆ.

11.ಇಲ್ಲಿ ವಾಸುಕಿ ಸರ್ಪದ ಒಂದು ಶಿವಲಿಂಗವನ್ನು ಪ್ರತಿಷ್ಟಾಪಿಸಿ ಭಕ್ತಿಯಿಂದ ಪೂಜೆಯನ್ನು ಮಾಡಿದನಂತೆ. ಅದಕ್ಕೆ ನಿದರ್ಶನ ಎಂಬಂತೆ ಇಲ್ಲಿ ಶಿವಲಿಂಗ ದರ್ಶನವನ್ನು ನೀಡುತ್ತದೆ. ಈ ಗುಹೆಯ ಬಗ್ಗೆ ಸ್ಕಂದ ಪುರಾಣದಲ್ಲಿ ಆನೇಕ ವಿವರವನ್ನು ನೀಡಲಾಗಿದೆ. ಈ ಗುಹೆಯಲ್ಲಿ ವಿಭಿನ್ನವಾದ ಶಬ್ಧಗಳು ಕೇಳಿಸುತ್ತವೆ ಎಂದು ಹೇಳಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X