Search
  • Follow NativePlanet
Share
» »ಶಿವನ ತಲೆ ಆ ಗುಹೆಗೆ ತಾಕಿದರೆ ಸೃಷ್ಟಿ ನಾಶ...ಪಾತಾಳ ದ್ವಾರದ ಅಸಲು ರಹಸ್ಯ

ಶಿವನ ತಲೆ ಆ ಗುಹೆಗೆ ತಾಕಿದರೆ ಸೃಷ್ಟಿ ನಾಶ...ಪಾತಾಳ ದ್ವಾರದ ಅಸಲು ರಹಸ್ಯ

ಪಾತಾಳ ಭುವನೇಶ್ವರ ದೇವಾಲಯವು ಸಮುದ್ರ ಮಟ್ಟಕ್ಕೆ ಸುಮಾರು 1350 ಮೀ ಎತ್ತರದಲ್ಲಿದೆ. ಇದು ಭುವನೇಶ್ವರ ಸಮೀಪದಲ್ಲಿದೆ. ಇಲ್ಲಿ ಶಿವನಿಗಾಗಿ ಅಂಕಿತವಾದ ಒಂದು ಗುಹೆ ಇದೆ. ಈ ಗುಹೆಯಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ಭಕ್ತರು ನಂಬುತ್ತಾರ

ಪಾತಾಳ ಭುವನೇಶ್ವರ ದೇವಾಲಯವು ಸಮುದ್ರ ಮಟ್ಟಕ್ಕೆ ಸುಮಾರು 1350 ಮೀ ಎತ್ತರದಲ್ಲಿದೆ. ಇದು ಭುವನೇಶ್ವರ ಸಮೀಪದಲ್ಲಿದೆ. ಇಲ್ಲಿ ಶಿವನಿಗಾಗಿ ಅಂಕಿತವಾದ ಒಂದು ಗುಹೆ ಇದೆ. ಈ ಗುಹೆಯಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ಭಕ್ತರು ನಂಬುತ್ತಾರೆ.

ಒಂದು ಚಿಕ್ಕ ಸುರಂಗ ಮಾರ್ಗದ ಮೂಲಕ ಗುಹೆಗೆ ತೆರಳುವ ಸಮಯದಲ್ಲಿ ಸ್ಟಾಲಗ್ಮಟ್ ಕಲ್ಲಿನಿಂದ ನಿರ್ಮಾಣ ಮಾಡಲಾಗಿರುವ ವಿವಿಧ ದೇವತೆಗಳನ್ನು ಕೆತ್ತನೆಗಳ ಮೂರ್ತಿಗಳನ್ನು ಕಾಣಬಹುದಾಗಿದೆ. ಈ ದೇವಾಲಯವು ಗಂಗೋಲಿಹಟ್‍ನ ಉತ್ತರ ಪೂರ್ವ ದಿಕ್ಕಿನಿಂದ ಸುಮಾರು 16 ಕಿ.ಮೀ ದೂರದಲ್ಲಿ ಇದೆ. ಹಾಗೆಯೇ ಇಲ್ಲಿಂದ ರಾಜ್ ರಂಭ, ಪಂಚಾಚುಲಿ, ನಂದಾ ದೇವಿ ಮತ್ತು ನಂದ ಖೇಟ್ ಪರ್ವತ ಶಿಖರಗಳ ಸೌಂದರ್ಯವನ್ನು ಕಾಣಬಹುದಾಗಿದೆ.

ಈ ಪ್ರದೇಶವನ್ನು ಚಾರ್ ಧಾಮ್‍ಗೆ ಸಮಾನವಾದುದು ಎಂದು ಭಾವಿಸುತ್ತಾರೆ. ನವೀನ ಪ್ರಪಂಚ, ನವೀನ ಸೃಷ್ಟಿ, ನವೀನ ಯುಗವು ಪ್ರಾರಂಭವಾಗುತ್ತದೆ. ಹಿಮಾಲಯದಲ್ಲಿನ ಒಂದು ದೇವಾಲಯದಲ್ಲಿ ಆ ಪರಮಶಿವನ ಲಿಂಗವು ಪ್ರತಿ ವರ್ಷವು ಬೆಳೆಯುತ್ತಿರುತ್ತದೆ ಎಂತೆ. ಈ ಶಿವಲಿಂಗವು ಆ ಗುಹೆಯ ಮೇಲ್ಭಾಗವನ್ನು ತಾಕಿಸಿದರೆ ಆ ದಿನವೇ ಭೂಮಿಯ ಕೊನೆಯ ದಿನವಾಗುತ್ತದೆ ಎಂದು ಹೇಳುತ್ತಾರೆ. ತದನಂತರ ಸತ್ಯ ಯುಗ ಎಂಬ ನೂತನ ಯುಗವು ಪ್ರಾರಂಭವಾಗುತ್ತದೆ ಎಂತೆ.

ಅಷ್ಟಕ್ಕೂ ಆ ಗುಹೆ ಇರುವುದಾದರು ಎಲ್ಲಿ? ಆ ಗುಹೆಯ ರಹಸ್ಯವಾದರು ಏನು ಎಂಬ ಹಲವಾರು ಪ್ರಶ್ನೆಗೆ ಲೇಖನದ ಮೂಲಕ ಉತ್ತರವನ್ನು ಪಡೆಯಿರಿ..

ಗುಹೆ ಎಲ್ಲಿದೆ?

ಗುಹೆ ಎಲ್ಲಿದೆ?

ಭೂ ಗರ್ಭ ಶಿವನು, 33 ಕೋಟಿ ದೇವಾನು ದೇವತೆಗಳು, 90 ಅಡಿ ಆಳದಲ್ಲಿ, 163 ಮೀಟರ್ ಎತ್ತರದಲ್ಲಿ ಕೆಲವು ಗುಹಾ ಸುಮುದಾಯಗಳಿವೆ. ಇದು ಉತ್ತರಾಖಂಡ ರಾಜ್ಯದಲ್ಲಿ ಪಿತೋರ್ಖರ್ ಜಿಲ್ಲೆಯ ಗಂಗೋಲಿ ಹಟ್‍ನಿಂದ ಸುಮಾರು 14 ಕಿ.ಮೀ ದೂರದಲ್ಲಿ ಭುವನೇಶ್ವರ ಗ್ರಾಮದಲ್ಲಿರುವ ದೇವಾಲಯವೇ ಭುವನೇಶ್ವರ ದೇವಾಲಯ. ಈ ದೇವಾಲಯವು ಕೆಲವು ಗುಹೆಗಳ ಸಮುದಾಯವಾಗಿದೆ. ಈ ಗುಹೆಯನ್ನೇ ಪಾತಾಳ ಭುವನೇಶ್ವರ ಎಂದು ಕರೆಯುತ್ತಾರೆ.

ಈ ಗುಹೆಗೆ ಹೇಗೆ ಸಾಗಬೇಕು?

ಈ ಗುಹೆಗೆ ಹೇಗೆ ಸಾಗಬೇಕು?

ಈ ಗ್ರಾಮಕ್ಕೆ 2 ಕಿ.ಮೀ ದೂರದಲ್ಲಿ ಇರುವ ಈ ಗುಹೆಯ ಒಳಭಾಗದಲ್ಲಿ ತೆರಳಬೇಕಾದರೆ ಒಂದು ಚೈನ್ ಮೂಲಕ ತೆರಳಬೇಕಾಗುತ್ತದೆ. ಈ ಗುಹೆಯ ಪ್ರವೇಶ ದ್ವಾರವು ಅತ್ಯಂತ ಚಿಕ್ಕದಾಗಿದ್ದು ಕೇವಲ ಒಬ್ಬರೇ ಒಬ್ಬರು ಈ ದೇವಾಲಯದ ಒಳಗೆ ಪ್ರವೇಶ ಮಾಡಬಹುದಾಗಿದೆ. ನಂತರ ಸಾಲಾಗಿ ಒಬ್ಬೊಬ್ಬರಾಗಿ ತೆರಳಬಹುದಾಗಿದೆ.

ಪ್ರಕೃತಿಸಿದ್ಧವಾಗಿ ಏರ್ಪಟ್ಟ ಗುಹೆಗಳು

ಪ್ರಕೃತಿಸಿದ್ಧವಾಗಿ ಏರ್ಪಟ್ಟ ಗುಹೆಗಳು

ಇವು ಪ್ರಕೃತಿ ಸಿದ್ಧವಾಗಿ ನಿರ್ಮಾಣವಾದ ಗುಹೆಗಳಾಗಿವೆ. ಪುರಾಣ ಕಥೆಗಳ ಪ್ರಕಾರ ಈ ಭೂ ಗರ್ಭ ಗುಹೆಯಲ್ಲಿ ಶಿವನು ಮತ್ತು 33 ಕೋಟಿ ದೇವತೆಗಳು ನೆಲೆಸಿದ್ದಾರೆ. ಈ ಗುಹೆಯ ಬಗ್ಗೆ ಪುರಾಣ ಹಾಗು ಇತಿಹಾಸದ ಪ್ರಕಾರ ಸೂರ್ಯವಂಶಕ್ಕೆ ಸೇರಿದ ಬೂತುವರ್ಣ ಮಹಾರಾಜ ಈ ಗುಹೆಯನ್ನು ಗುರುತಿಸಿದನು. ಆ ಕಥೆಯ ವಿಷಯಕ್ಕೆ ಬಂದರೆ ನಳ ಮಾಹಾರಾಜ, ಆತನ ಪತ್ನಿಯಾದ ದಮಯಂತಿಯ ಕೈಯಲ್ಲಿ ಸೋತನು.

ಬೂತುವರ್ಣ ಮಹಾರಾಜ

ಬೂತುವರ್ಣ ಮಹಾರಾಜ

ದಮಯಂತಿ ವಿಧಿಸಿದ್ದ ಕಾರಾಗಾರವಾಸದಿಂದ ಮುಕ್ತಿ ಮಾಡಿ ತನ್ನನ್ನು ಎಲ್ಲಿಯಾದರೂ ಅಡಗಿಸು ಎಂದು ಬೂತುವರ್ಣ ಮಾಹಾರಾಜನಿಗೆ ಕೇಳಿಕೊಂಡಾಗ ಹಿಮಾಲಯದಲ್ಲಿನ ಅರಣ್ಯದಲ್ಲಿ ಅಡಗಿಕೊ ಎಂದು ಹೇಳುತ್ತಾನೆ.

ಬೂರ್ತುವರ್ಣ ಮಹಾರಾಜ

ಬೂರ್ತುವರ್ಣ ಮಹಾರಾಜ

ಅದೇ ಸಮಯದಲ್ಲಿ ನಳನು ಅರಣ್ಯದಲ್ಲಿನ ಒಂದು ಜಿಂಕೆಯನ್ನು ಕಂಡು ಆಕರ್ಷಣೆಗೊಳ್ಳುತ್ತಾನೆ. ಅದನ್ನು ಹಿಡಿದುಕೊಳ್ಳಲು ಹೋಗುವಾಗ ಒಂದು ಮರದ ಬಳಿ ಕೆಲವು ಕಾಲ ವಿಶ್ರಾಂತಿ ಪಡೆಯುತ್ತಾನೆ. ಆಗ ನಳನಿಗೆ ಒಂದು ಕನಸ್ಸು ಬೀಳುತ್ತದೆ.

ಬೂರ್ತುವರ್ಣ ಮಹಾರಾಜ

ಬೂರ್ತುವರ್ಣ ಮಹಾರಾಜ

ಅದರಲ್ಲಿ ಜಿಂಕೆಯು ತನ್ನನ್ನು ಎಲ್ಲಿಯೂ ಹುಡುಕಬೇಡ ಎಂದು ಹೇಳುತ್ತದೆ. ಎಚ್ಚರವಾದ ನಳನು ಸಮೀಪದಲ್ಲಿಯೇ ಇದ್ದ ಒಂದು ಗುಹೆಯ ಒಳಗೆ ಪ್ರವೇಶ ಪಡೆಯಬೇಕು ಎಂದು ತೆರಳುವಾಗ ಅಲ್ಲಿ ಒಬ್ಬ ರಾಕ್ಷಸ ಭಟನು ನಳನ ಬಗ್ಗೆ ತಿಳಿದು ಪ್ರವೇಶಕ್ಕೆ ಅನುಮತಿ ನೀಡುತ್ತಾನೆ.

ಶೇಷನಾಗು

ಶೇಷನಾಗು

ಅನುಮತಿಯನ್ನು ಪಡೆದ ನಳ ಮಹಾರಾಜನು ಗುಹೆಯ ಬಲಗಡೆಯ ಪ್ರವೇಶದ್ವಾರದಲ್ಲಿ ಒಂದು ಶೇಷನಾಗು ಇರುತ್ತದೆ. ಆ ಶೇಷನಾಗುವು ನಳ ಮಾಹಾರಾಜನನ್ನು ಕಂಡು ಶಿವ ಹಾಗು 33 ಕೋಟಿ ದೇವತೆಗಳು ನೆಲೆಸಿರುವ ಅದ್ಭುತವಾದ ದೃಶ್ಯವನ್ನು ತೋರಿಸುತ್ತದೆ.

ಕಲಿಯುಗದಲ್ಲಿ

ಕಲಿಯುಗದಲ್ಲಿ

ಆ ನಂತರ ಈ ಗುಹೆಗಳು ಕೆಲವು ಯುಗಗಳು ಮುಚ್ಚಿದ್ದಾಗಿಯೂ ಆ ನಂತರ ಮತ್ತೇ ಕಲಿಯುಗದಲ್ಲಿ ಗುರುತಿಸಿ ತೆರೆದಿರುವ ಹಾಗೆ ಸ್ಕಂದ ಪುರಾಣದಲ್ಲಿ ತಿಳಿಸಲಾಗಿದೆ. ಅಂದಿನಿಂದ ಈ ದೇವಾಲಯದಲ್ಲಿ ಪೂಜೆಗಳು ನಡೆಯುತ್ತಿವೆ.

ಗುಪ್ತ ಮಾರ್ಗ

ಗುಪ್ತ ಮಾರ್ಗ

ಹಾಗೆಯೇ ತ್ರೇತಾಯುಗದಲ್ಲಿ ಪಾಂಡವರು ಮಹಾಭಾರತ ಯುದ್ಧದ ನಂತರ ಇಲ್ಲಿ ಕೆಲವು ದಿನಗಳು ಈ ಗುಹೆಯಲ್ಲಿ ತಪಸ್ಸು ಮಾಡಿದ್ದರು ಎಂದು ಸ್ಥಳ ಪುರಾಣವು ತಿಳಿಸುತ್ತದೆ. ಇಲ್ಲಿ ಒಂದು ಗುಪ್ತ ಮಾರ್ಗವಿದ್ದು, ಕೈಲಾಸಕ್ಕೆ ತೆರಳಲು ನೇರವಾದ ಮಾರ್ಗವಿದೆ ಎಂದು ಹೇಳಲಾಗುತ್ತದೆ.

ಚಾರ್ ಧಾಮ ಯಾತ್ರೆಗೆ ಸಮಾನವಾದ ಈ ಗುಹೆಯ ದರ್ಶನ

ಚಾರ್ ಧಾಮ ಯಾತ್ರೆಗೆ ಸಮಾನವಾದ ಈ ಗುಹೆಯ ದರ್ಶನ

ಈ ಗುಹೆಯಿಂದ ಕೈಲಾಸ ಪರ್ವತಕ್ಕೆ ಹಾಗೆಯೇ ಚಾರ್ ಧಾಮಕ್ಕೂ ಭೂಗರ್ಭ ಮಾರ್ಗ ಇವೆ ಎಂದು ಹೇಳುತ್ತಾರೆ. ಈ ಗುಹೆಯಲ್ಲಿ ಮಾಹಾ ಶಿವನ ದರ್ಶನವು ಚಾರ್ ಧಾಮ ಯಾತ್ರೆಗೆ ಸಮಾನವಾದುದು ಎಂದು ಭಕ್ತರು ಭಾವಿಸಲಾಗುತ್ತದೆ.

ದಿನ ದಿನಕ್ಕೆ ಗಾತ್ರ ಹೆಚ್ಚಾಗುತ್ತಿರುವ ಶಿವಲಿಂಗ

ದಿನ ದಿನಕ್ಕೆ ಗಾತ್ರ ಹೆಚ್ಚಾಗುತ್ತಿರುವ ಶಿವಲಿಂಗ

ಹಿಮಾಲಯದಲ್ಲಿನ ಗುಹೆಯಲ್ಲಿರುವ 6 ಇಂಚಿನ ಶಿವಲಿಂಗವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅದು ಹಾಗೆ ಎತ್ತರವಾಗಿ ಗುಹೆಯ ಮೇಲ್ಭಾಗವನ್ನು ಶಿವಲಿಂಗವು ತಾಕಿಸಿದರೆ ಆ ದಿನವೇ ಭೂಮಿಯ ಕೊನೆಯ ದಿನವಾಗುತ್ತದೆ.

ಪ್ರಚಾರದಲ್ಲಿರುವ ಕಥೆ

ಪ್ರಚಾರದಲ್ಲಿರುವ ಕಥೆ

ಹಿಮಾಲಯದಲ್ಲಿನ ಗುಹೆಯಲ್ಲಿರುವ ಈ ಶಿವಲಿಂಗವು ತ್ರೇತ ಯುಗದಲ್ಲಿ ಸೂರ್ಯವಂಶಕ್ಕೆ ಸೇರಿದ ರಾಜನು ಗುರುತಿಸಿದನು. ಇದಕ್ಕೆ ಸಂಬಂಧಿಸಿದ ಒಂದು ಕಥೆಯು ಕೂಡ ಪ್ರಚಾರದಲ್ಲಿದೆ.

ನಿತ್ಯ ಪೂಜೆಗಳು

ನಿತ್ಯ ಪೂಜೆಗಳು

ಅದ್ದರಿಂದಲೇ ಅನುಗುಣವಾಗಿ ಕಲಿಯುಗದಲ್ಲಿ ಶಂಕರಾಚಾರ್ಯನು ಆ ಗುಹೆಯನ್ನು ಗುರುತಿಸಿದನು. ಇದರಿಂದಾಗಿ ಅಂದಿನಿಂದ ಆ ಗುಹೆಯಲ್ಲಿರುವ ಶಿವಲಿಂಗಕ್ಕೆ ನಿತ್ಯವು ಪೂಜೆಗಳು, ಅಭಿಷೇಕಗಳು ನಡೆಯುತ್ತಿರುತ್ತದೆ.

90 ಅಡಿ ಆಳದಲ್ಲಿ

90 ಅಡಿ ಆಳದಲ್ಲಿ

ಆದರೆ ಶಿವನು ನೆಲೆಸಿರುವ ಗುಹೆಯು ಅತ್ಯಂತ ವಿಭಿನ್ನವಾದುದು ಎಂದೇ ಹೇಳಬಹುದಾಗಿದೆ. ಈ ಗುಹೆಯ ಒಳ ಪ್ರವೇಶ ಪಡೆಯಬೇಕಾದರೆ ಮೇಲಿನಿಂದ ಕೆಳಗೆ ಸುಮಾರು 90 ಅಡಿ ಆಳದಲ್ಲಿ ಇಳಿಯಬೇಕು. ಹಾಗೆಯೇ ಒಳಗೆ ಸಣ್ಣದಾದ ರಂಧ್ರಗಳು ಇರುತ್ತವೆ.

ಪಾತಾಳ ಭುವನೇಶ್ವರ ಗುಹೆ

ಪಾತಾಳ ಭುವನೇಶ್ವರ ಗುಹೆ

ಗುಹೆಯು ಸಂಪೂರ್ಣವಾಗಿ 160 ಮೀಟರ್ ಎತ್ತರವಾಗಿದೆ. ಇದರಲ್ಲಿ ಇನ್ನು ಹಲವಾರು ಗುಹೆಗಳನ್ನು ಇಲ್ಲಿ ಕಾಣಬಹುದಾಗಿದೆ. ಕೆಲವು ಗುಹೆಗಳಲ್ಲಿ ನೀರು ಇದೆ. ಕೊನೆಯ ಗುಹೆಯನ್ನು ಪಾತಾಳ ಭುವನೇಶ್ವರ ಗುಹೆ ಎಂದು ಕರೆಯುತ್ತಾರೆ.

ಹಿಮಾಲಯದಲ್ಲಿನ ಆ ಗುಹೆ

ಹಿಮಾಲಯದಲ್ಲಿನ ಆ ಗುಹೆ

ದ್ವಾಪರ ಯುಗದಲ್ಲಿ ಪಾಂಡವರು ಒಮ್ಮೆ ಈ ಗುಹೆಯನ್ನು ಗುರುತಿಸಿದರು ಎಂದು ಅದರಲ್ಲಿ ಕೆಲವು ಕಾಲ ನಿವಾಸವಾಗಿದ್ದರು ಎಂದೂ ಕೂಡ ಪುರಾಣದಲ್ಲಿ ಉಲ್ಲೇಖವಿದೆ. ಹಿಮಾಲಯದಲ್ಲಿನ ಆ ಗುಹೆಯಲ್ಲಿನ 6 ಇಂಚುಗಳ ಶಿವಲಿಂಗವು ಇನ್ನೂ ಬೆಳೆಯುತ್ತಿದೆ ಎಂತೆ.

ಸತ್ಯ ಯುಗ

ಸತ್ಯ ಯುಗ

ಈ ಕ್ರಮದಲ್ಲಿ ಅದು ಗುಹೆಯ ಮೇಲ್ಭಾಗವನ್ನು ತಾಕಿಸಿದರೆ ಆ ದಿನವೇ ಭೂಮಿ ನಾಶವಾಗುತ್ತದೆ. ಸೃಷ್ಠಿ ನಾಶದ ನಂತರ ಮತ್ತೇ ಸತ್ಯಯುಗವು ಪ್ರಾರಂಭವಾಗುತ್ತದೆ ಎಂತೆ. ಆಗ ಮತ್ತೇ ಸೃಷ್ಟಿ ನಾಶವಾಗಿ ಮತ್ತೊಂದು ಹೊಸ ಪ್ರಪಂಚ ನಿರ್ಮಾಣವಾಗುತ್ತದೆ ಎಂತೆ.

ಪುರಾತನವಾದ ಗುಹೆಗಳು

ಪುರಾತನವಾದ ಗುಹೆಗಳು

ಈ ಗುಹೆಯ ಸಮೀಪದಲ್ಲಿ ಇನ್ನೂ ಹಲವಾರು ಮಾಹಿಮಾನ್ವಿತವಾದ ಹಾಗು ಪುರಾತನವಾದ ಗುಹೆಗಳು ಇವೆ. ಅವುಗಳು ಯಾವುವೆಂದರೆ ಮಹಾಕಾಳಿ ದೇವಾಲಯ, ಚಾಮುಂಡೇಶ್ವರಿ ದೇವಾಲಯಗಳು ಇವೆ. ಈ ದೇವಾಲಯಕ್ಕೂ ಕೂಡ ಹಲವಾರು ಭಕ್ತರು ಭೇಟಿ ನೀಡುತ್ತಾ ಇರುತ್ತಾರೆ.

ಶಿವಲಿಂಗಕ್ಕೆ ಪೂಜೆಗಳು

ಶಿವಲಿಂಗಕ್ಕೆ ಪೂಜೆಗಳು

1191ರ ವರ್ಷದಿಂದಲೂ ಈ ಗುಹೆಯಲ್ಲಿರುವ ಶಿವಲಿಂಗಕ್ಕೆ ಪೂಜೆಗಳು ನಡೆಯುತ್ತಿವೆ. ಗುಹೆಯಲ್ಲಿನ ಕಲ್ಲುಗಳು ಹಿಂದೂ ದೇವತೆಗಳಂತೆ ಕಾಣಿಸುತ್ತದೆ. ಈ ಗುಹೆಗೆ ಸೇರಿಕೊಳ್ಳಬೇಕಾದರೆ ಅರ್ಧ ಕಿ.ಮೀ ದೂರ ನಡೆಯಬೇಕಾಗುತ್ತದೆ.

ಸಮೀಪ ಪ್ರದೇಶಗಳು

ಸಮೀಪ ಪ್ರದೇಶಗಳು

ಇಲ್ಲಿನ ಸಮೀಪದ ಪ್ರವಾಸಿ ತಾಣಗಳು ಎಂದರೆ ಕೌಸಾನಿ, ಧಾರ್ಚುಲ, ಅಲ್ಮೋರ, ರಾಣಿಖೇಟ್, ಜಗೇಶ್ವರ, ಚಂಪಾವತ್, ಭಮಾಲ್, ರಾಂ ಘುರ್, ಮುಕ್ತೇಶ್ವರ, ಜಿಯಾಲ್ಕೊಟ್, ಸತ್ತಾಲ್, ರುದ್ರ ಪ್ರಯಾಗ, ಜೋಷಿಮತ್, ನೈನಿತಾಲ್, ಕೊತ್ಗೊಡ ಇನ್ನೂ ಹಲವಾರು.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಬೆಂಗಳೂರಿನಿಂದ ಪಾತಾಳ ಭುವನೇಶ್ವರಕ್ಕೆ ಸುಮಾರು 41 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗಿರುತ್ತದೆ. ನೀವು ನ್ಯೂಡೆಲ್ಲಿ ಮಾರ್ಗದಲ್ಲಿ ತೆರಳಿದರೆ 42 ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X