• Follow NativePlanet
Share
» »ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಅಡಗಿರುವ ರಹಸ್ಯಗಳು

ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಅಡಗಿರುವ ರಹಸ್ಯಗಳು

Written By:

ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯವು ಭಾರತ ದೇಶದ ಕೇರಳ ರಾಜ್ಯದ ತಿರುವನಂತಪುರದಲ್ಲಿ ಇದೆ. ಪ್ರಸ್ತುತವಿರುವ ಗೋಪುರವನ್ನು 1568 ರಲ್ಲಿ ನಿರ್ಮಾಣ ಮಾಡಿದರು. ದೇವಾಲಯದ ಮೂಲ ವಿಗ್ರಹವನ್ನು 1208 ಸಾಲಿಗ್ರಾಮದ ಮೂಲಕ ತಯಾರು ಮಾಡಿದರು. ಪ್ರಸ್ತುತದಲ್ಲಿ ಗರ್ಭ ಗುಡಿಯಲ್ಲಿನ ದೇವರನ್ನು ಕಾಣಬೇಕಾದರೆ 3 ದ್ವಾರಗಳ ಮೂಲಕ ದರ್ಶನ ಪಡೆಯಬೇಕು.

ಆದಿ ಶೇಷನ ಮೇಲೆ ಪವಳಿಸಿದ ಹಾಗೆ ಕಾಣುವ ವಿಗ್ರಹವು, ಮೊದಲ ದ್ವಾರದಲ್ಲಿ ನಿಂತು ನೋಡಿದರೆ ಸ್ವಾಮಿಯ ತಲೆಯ ಭಾಗ, ಮಧ್ಯ ದ್ವಾರದಿಂದ ತಾವರೆಯನ್ನು ಕೈಯಲ್ಲಿ ಹಿಡಿದಿರುವ, ಕೊನೆಯ ದ್ವಾರದಲ್ಲಿ ಸ್ವಾಮಿಯ ಪಾದಗಳು ಕಾಣಿಸುತ್ತದೆ.

ಈ ದೇವಾಲಯವು ಪ್ರಸ್ತುತ ತ್ರಿವಾಂಕೊರ ರಾಜ ಕುಟುಂಬ ನಿರ್ವಹಣೆಯನ್ನು ನಡೆಸುತ್ತಿದೆ. ಆನಂತ ಪದ್ಮನಾಭಸ್ವಾಮಿ ದೇವಾಲಯ ಅತ್ಯಂತ ಪುರಾತನವಾದ ದೇವಾಲಯ. ಈ ದೇವಾಲಯದ ಹೆಸರಿನಿಂದಲೇ ತಿರುವನಂತರಪುರಕ್ಕೆ ಹೆಸರು ಬಂದಿತು. ಈ ದೇವಾಲಯವನ್ನು ಪಟ್ಟುವಿಟ್ಟಲ್ ಪಿಲ್ಲಮಾರ್ ಎಂಬ ನಾಯಾರ್ ಕುಟುಂಬವು ನಿರ್ವಹಿಸುತ್ತಿತ್ತು. ಕಾಲ ಉರುಳಿದ ನಂತರ ಈ ದೇವಾಲಯವು ಟ್ರಾವೆನೆ ಕೂರ್ ಸಂಸ್ಥಾಪಕನಾದ ಮಾರ್ತಾಂಡ ವರ್ಮ ಕೈ ಸೇರಿತು.

ಲೇಖನದ ಮೂಲಕ ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ಹಿಂದೆ ಇರುವ ರಹಸ್ಯಗಳ ಬಗ್ಗೆ ತಿಳಿಯೋಣ.

108 ದಿವ್ಯಕ್ಷೇತ್ರ

108 ದಿವ್ಯಕ್ಷೇತ್ರ

ಟ್ರಾವಂಕೊರ್ ರಾಜ ಕುಟುಂಬಕ್ಕೆ ಸೇರಿದವರು ಹಾಗೂ ಕುಲಶೇಖರ ಸನ್ಯಾಸಿ ಆಳ್ವಾರ್ ಸಂತತಿಯವರು. ಈ ದೇವಾಲಯದ ಶ್ರೀ ಮಹಾ ವಿಷ್ಣುವಿನ 108 ದಿವ್ಯದಶಗಳಲ್ಲಿ ಒಂದಾಗಿದೆ. 108 ದಿವ್ಯಾದಶ ಎಂದರೆ ಶ್ರೀ ಮಹಾವಿಷ್ಣುವಿನ ಒಂದು ದೇವಾಲಯದ ದಿವ್ಯಕ್ಷೇತ್ರ ಎಂದು ಅರ್ಥ.

PC:sreepadmanabhaswamytemple official website

ಪವಿತ್ರವಾದ ದೇವಾಲಯ

ಪವಿತ್ರವಾದ ದೇವಾಲಯ

"ತಿರು ಅನಂತಪುರಂ" ಎಂದರೆ ಮಹಿಮಾನ್ವಿತ ದೇವತಾ ಮೂರ್ತಿ ಶ್ರೀ ಅನಂತ ಪದ್ಮಸ್ವಾಮಿ ಇರುವ ಪವಿತ್ರವಾದ ದೇವಾಲಯ ಎಂದು ಅರ್ಥ. ಈ ನಗರಕ್ಕೆ ಆನಂತಪುರಂ, ಶಯನಂತರಪುರಂ ಎಂದು ಸಹ ಕರೆಯುತ್ತಾರೆ. ಆನಂತ ಎಂದರೆ ಶ್ರೀ ಪದ್ಮನಾಭ ಸ್ವಾಮಿ ರೂಪವೇ. ಹಿಂದೂ ಧರ್ಮದಲ್ಲಿ ಭಗವಂತನ ರೂಪವನ್ನು ಸಚ್ಚಿದಾನಂತ ಎಂದು ಕರೆಯುತ್ತಾರೆ.


PC:sreepadmanabhaswamytemple official website

ತಿರುವನಂತ ಪುರಂ

ತಿರುವನಂತ ಪುರಂ

ಕ್ರಿ.ಶ 16 ನೇ ಶತಮಾನದಲ್ಲಿ ಈ ದೇವಾಲಯದ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಿತು. ಆ ಸಮಯದಲ್ಲಿ ಈ ದೇವಾಲಯಕ್ಕೆ ಸುಂದರ ಗೋಪುರ ನಿರ್ಮಾಣ ನಡೆಯಿತು.

PC:Shishirdasika

ತಿರುವಟ್ರಾರ್ ಶ್ರೀ ಆದಿಕೇಶವ ಪೆರುಮಾಳ್ ದೇವಾಲಯ

ತಿರುವಟ್ರಾರ್ ಶ್ರೀ ಆದಿಕೇಶವ ಪೆರುಮಾಳ್ ದೇವಾಲಯ

ಈ ದೇವಾಲಯ ಪ್ರಸಿದ್ದ ತಿರುವಟ್ರಾರ್ ಶ್ರಿ ಆದಿ ಕೇಶವ ಪೆರುಮಾಳ್ ದೇವಾಲಕ್ಕೆ ಪ್ರತಿರೂಪ ಎಂದು ಕೆಲವರು ಹೇಳುತ್ತಾರೆ. ಈ ದೇವಾಲಯದ ಕಾರಣಕ್ಕಾಗಿಯೇ ತಿರುವನಂತಪುರಂ ಎಂಬ ಹೆಸರು ನಗರಕ್ಕೆ ಇಡಲಾಯಿತು.


PC:rusticus80

ಬಲರಾಮದೇವನು

ಬಲರಾಮದೇವನು

ಶ್ರೀ ಮತ್ ಭಾಗವತದಲ್ಲಿ ಬಲರಾಮದೇವನು ತನ್ನ ತೀರ್ಥಯಾತ್ರೆ ಭಾಗವಾಗಿ ಫಾಲ್ಗುಣದಂದು ಈ ದೇವಾಲಯಕ್ಕೆ ಬಂದು ದರ್ಶನ ಮಾಡಿದನಂತೆ. ಇಲ್ಲಿ ಇರುವ ಪದ್ಮ ತೀರ್ಥದಲ್ಲಿ ಸ್ನಾನ ಮಾಡಿ ಹಾಗು 10,000 ಗೋವುಗಳನ್ನು ಬ್ರಾಹ್ಮಣರಿಗೆ ದಾನವಾಗಿ ನೀಡಿದನಂತೆ.


PC:Maheshsudhakar

ಪದ್ಮನಾಭಸ್ವಾಮಿ ಅನಂತಶಯನಂ

ಪದ್ಮನಾಭಸ್ವಾಮಿ ಅನಂತಶಯನಂ

ದೇವಾಲಯ ಗರ್ಭಗುಡಿಯಲ್ಲಿ ಪ್ರಧಾನ ದೈವವಾದ ಪದ್ಮನಾಭ ಸ್ವಾಮಿ ಅನಂತರಶಯನ ಭಂಗಿಯಲ್ಲಿ ನೆಲೆಸಿದ್ದಾನೆ. ಟ್ರಿವಾಂಕೊರ್ ಮಹಾರಾಜ ತನಗೆ ತಾನೆ ಪದ್ಮನಾಭ ದಾಸ ಎಂದು ನಾಮಕರಣ ಮಾಡಿಕೊಂಡನಂತೆ.

PC:Ks.mini


ಟನ್ನು ಗಟ್ಟಲೆ ಬಂಗಾರ ಅಭರಣ

ಟನ್ನು ಗಟ್ಟಲೆ ಬಂಗಾರ ಅಭರಣ

ಇಂದಿನವರೆವಿಗೂ ಪ್ರಪಂಚದಲ್ಲಿಯೇ ಅತ್ಯಂತ ಸಂಪತ್ತನ್ನು ಹೊಂದಿರುವ ದೇವಾಲಯ ಎಂದರೆ ತಿರುಮಲ ಶ್ರೀನಿವಾಸ ದೇವಾಲಯ. ಈ ಮಧ್ಯೆ ಕಾಲದಲ್ಲಿ ಕೇರಳದ ತಿರುವನಂತ ಪುರದಲ್ಲಿನ ಅನಂತಪದ್ಮ ನಾಭ ಸ್ವಾಮಿಯ ದೇವಾಲಯದಲ್ಲಿ ಬೆಳಕಿಗೆ ಬಂದ ಅನಂತ ಸಂಪತ್ತು, ವಜ್ರ, ವೈಡುರ್ಯ, ಟನ್ನುಗಳಷ್ಟು ಬಂಗಾರ ಅಭರಣಗಳು ಲೆಕ್ಕವೇ ಹಾಕಲಾಗದ ಸಂಪತ್ತನ್ನು ಹೊಂದಿ ಮೊದಲ ಸ್ಥಾನದಲ್ಲಿದೆ.

PC:Aravind Sivaraj

ನೆಲ ಮಾಳಿಗೆ

ನೆಲ ಮಾಳಿಗೆ

ಇನ್ನೂ ಬೆಳಕಿಗೆ ಬರಬೇಕಾಗಿರುವ ಸಾಕಷ್ಟು ಸಂಪತ್ತುಗಳಿವೆ. ಅನಂತ ಪದ್ಮನಾಭ ಸ್ವಾಮಿಯ ದೇವಾಲಯದ ನೆಲ ಮಾಳಿಗೆಯಲ್ಲಿ ಇನ್ನು ಒಂದು ಕೊಠಡಿಯನ್ನು ತೆರೆದಿಲ್ಲ. ಅಲ್ಲಿ ಇನ್ನಷ್ಟೊ ಸಂಪತ್ತು ಇರಬೇಕು ಎಂದು ಊಹಿಸುತ್ತಿರುವಾಗ. ಆದರೆ ಆ ಕೊಠಡಿಯನ್ನು ತೆರೆಯುವಂತಿಲ್ಲ ಎಂದು ದೇವಾಲಯದ ಅಧಿಕಾರಿಗಳು ತಿಳಿಸುತ್ತಿದರಂತೆ.


PC:Ilya Mauter

ಸರ್ಪಬಂಧನ

ಸರ್ಪಬಂಧನ

ಈ ವಿಶೇಷವಾದ ಕೊಠಡಿಗೆ ಸರ್ಪಬಂಧನವಿದೆ. ಈ ಕೊಠಡಿಯನ್ನು ತೆರಯಬೇಕಾದರೆ ಕೇವಲ ಮಂತ್ರ ಶಕ್ತಿಯಿಂದ ಮಾತ್ರ ಸಾಧ್ಯವಂತೆ. ಹಾಗೆನಾದರೂ ಬಲವಂತವಾಗಿ ತೆರೆಯಲು ಪ್ರಯತ್ನ ಪಟ್ಟರೆ ಜಗತ್ ಪ್ರಳಯವಾಗುತ್ತದೆ ಎಂದು ಪಂಡಿತರು ತಿಳಿಸುತ್ತಿದ್ದಾರೆ. ಅಸಲಿಗೆ ಆ ಕೊಠಡಿಯಲ್ಲಿ ಅಂತಹದೇನಿದೆ? ಎಂಬುದೇ ಎಲ್ಲರ ಕುತೂಹಲ.

ಟ್ರಾವೆಂಕೂರ್

ಟ್ರಾವೆಂಕೂರ್

ಆದರೆ ನೂರಾರು ವರ್ಷಗಳಿಂದಲೂ ಆ ಕುಟುಂಬಕ್ಕೆ ಸೇರಿದ ರಾಜ ತಿರುನಾಳ್ ಬಲರಾಮ ವರ್ಮನನ್ನು ಅಂದಿನ ಸರ್ಕಾರ ರಾಜ ಪ್ರಮುಖನಾಗಿ ನೇಮಿಸಿದರು. ಆ ರಾಜ ಕುಟುಂಬಿಕರೇ ಈ ದೇವಾಲಯ ನಿರ್ವಹಣ ಟ್ರಸ್ಟಿಗಳಾಗಿ ಮುಂದುವರೆಸುತ್ತಿದ್ದಾರೆ.

PC:Ilya Mauter

ಮಾಹಿಮಾನ್ವಿತ ಕ್ಷೇತ್ರ

ಮಾಹಿಮಾನ್ವಿತ ಕ್ಷೇತ್ರ

ಈ ಸಂಪತ್ತು ಬೆಳಕಿಗೆ ಬಂದ ನಂತತ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಸಂಪತ್ತು ಹೊಂದಿರುವ ಕ್ಷೇತ್ರ ಎಂದು ಪ್ರಖ್ಯಾತವಾಯಿತು. ಈ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸಂಪತ್ತುನ್ನು ಹೊರತು ಪಡಿಸಿದರೆ, ಅನಂತ ಪದ್ಮನಾಭ ಸ್ವಾಮಿ ಅತ್ಯಂತ ಮಹಿಮಾನ್ವಿತವಾದ ದೇವತಾ ಮೂರ್ತಿಯಾಗಿದ್ದಾನೆ.

PC:Aravind Sivaraj

ಶ್ರೀ ಕೃಷ್ಣ ದೇವರಾಯನ ಕಾಲದ ನಾಣ್ಯಗಳು

ಶ್ರೀ ಕೃಷ್ಣ ದೇವರಾಯನ ಕಾಲದ ನಾಣ್ಯಗಳು

16 ನೇ ಶತಮಾನದ ಶ್ರೀ ಕೃಷ್ಣ ದೇವರಾಯ ಕಾಲದ ನಾಣ್ಯಗಳು, ಈಸ್ಟ್ ಇಂಡಿಯಾ ಕಾಲದ ನಾಣ್ಯಗಳು, ನೆಪೋಲಿಯನ್ ಬೊನೋ ಪಾರ್ಟೆ ಕಾಲದ ನಾಣ್ಯಗಳು ಈ ದೇವಾಲಯದಲ್ಲಿ ದೊರೆತಿವೆ.

PC:Manveechauhan

ಸಂಪತ್ತು

ಸಂಪತ್ತು

ಅಷ್ಟೇ ಅಲ್ಲದೇ ಚಿತ್ರ ವಿಚಿತ್ರವಾದ ವಸ್ತುಗಳು ಸಾಕಷ್ಟು ಇವೆ. ಬಂಗಾರದ ತೆಂಗಿನಕಾಯಿ, ಬಂಗಾರದ ಶಂಖಗಳು ಹೀಗೆ ಇನ್ನೂ ಹಲವಾರು ವಿಧ ವಿಧವಾದ ವಸ್ತುಗಳು ಬೆಳಕಿಗೆ ಬಂದಿತು. 5 ಮಾಳಿಗೆಯಲ್ಲಿನ ಈ ಸಂಪತ್ತು ಮತ್ತೇ 6 ನೇ ಮಾಳಿಗೆ ಸಂಪತ್ತು ಎನ್ನು ಎಷ್ಟು ಇರಬಹುದು ಊಹಿಸಿ.

PC:Ilya Mauter

ಸಮೀಪ ಪ್ರದೇಶಗಳು

ಸಮೀಪ ಪ್ರದೇಶಗಳು

ಈ ದೇವಾಲಯಕ್ಕೆ ಸಮೀಪದಲ್ಲಿ ಯಾನ್ಯಮಲೈ, ಅಗಸ್ತ್ಯ ಪರ್ವತ, ಪರ್ವತಗಳು ಇನ್ನೂ ಹಲವಾರು.


PC:Hans A. Rosbach

ಮಾರ್ಗ

ಮಾರ್ಗ

ತಿರುವನಂತಪುರಂ ಕೇರಳ ರಾಷ್ಟ್ರ ರಾಜಧಾನಿ. ತಿರುವನಂತಪುರಂ ಅನ್ನು ತ್ರಿವೆಂಡ್ರಂ ಎಂದೂ ಸಹ ಕರೆಯುತ್ತಾರೆ. ಚೆನ್ನೈ ನಿಂದ ತಿರುವನಂತಪುರಕ್ಕೆ ರೈಲು ಮಾರ್ಗವಿದೆ. ತಿರುವನಂತಪುರಂ ಸೆಂಟ್ರಲ್ ಸ್ಟೇಷನ್‍ನಿಂದ 1 ಕಿ,ಮೀ ಅಂತರದಲ್ಲಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ