Search
  • Follow NativePlanet
Share
» »ಶಕುನಿ ದೇವಾಲಯವೂ ಇದೆ ಎಂಬುದು ನಿಮಗೆ ಗೊತ್ತ?

ಶಕುನಿ ದೇವಾಲಯವೂ ಇದೆ ಎಂಬುದು ನಿಮಗೆ ಗೊತ್ತ?

ಶಕುನಿಯು ಮಹಾಭಾರತದಲ್ಲಿ ಬಹಳ ಪ್ರಮುಖವಾದ ಪಾತ್ರವಾಗಿದೆ. ಶಕುನಿಯು ಕೌರವರ ಸೋದರಮಾವ, ಅಂದರೆ ಗಾಂಧರಿಯ 100 ಮಂದಿ ಅಣ್ಣಂದಿರಲ್ಲಿ ಕೊನೆಯವನು. ಮಹಭಾರತದ ಯುದ್ಧಕ್ಕೆ ಹಾಗು ಕೌರವರ ನಾಶಕ್ಕೆ ಈ ಶಕುನಿಯೇ ಕಾರಣ.

ಶಕುನಿಯು ಮಹಾಭಾರತದಲ್ಲಿ ಬಹಳ ಪ್ರಮುಖವಾದ ಪಾತ್ರವಾಗಿದೆ. ಶಕುನಿಯು ಕೌರವರ ಸೋದರಮಾವ, ಅಂದರೆ ಗಾಂಧರಿಯ 100 ಮಂದಿ ಅಣ್ಣಂದಿರಲ್ಲಿ ಕೊನೆಯವನು. ಮಹಭಾರತದ ಯುದ್ಧಕ್ಕೆ ಹಾಗು ಕೌರವರ ನಾಶಕ್ಕೆ ಈ ಶಕುನಿಯೇ ಕಾರಣ.

ಮಹಾಭಾರತ ಯುದ್ಧ ನಡೆಯುವ ಸಮಯದಲ್ಲಿ ಶಕುನಿ ತನ್ನ ಸಹೋದರ ಆಳಿಯರೊಂದಿಗೆ ಪಾಂಡವರನ್ನು ಹುಡುಕುತ್ತಾ ದೇಶವೆಲ್ಲಾ ತಿರುಗುತ್ತಾ ಈ ಪ್ರಾಂತ್ಯಕ್ಕೆ ಭೇಟಿ ನೀಡಿದರಂತೆ. ಈ ಪ್ರದೇಶದಲ್ಲಿಯೇ ಕೌರವರು ತಮ್ಮ ಆಯುಧಗಳನ್ನು ಹಂಚಿಕೊಂಡರಂತೆ. ಹಾಗಾಗಿಯೇ ಇದನ್ನು ಪಾಕುಥೇಶ್ವರ ಎಂಬ ಹೆಸರನ್ನು ನಂತರದ ದಿನಗಳಲ್ಲಿ ಪವಿತ್ರೇಶ್ವವಾಗಿ ಮಾರ್ಪಾಟಾಯಿತು ಎಂದು ಹೇಳುತ್ತಾರೆ.

ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗ ಯಾವುದು ಗೊತ್ತ?ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗ ಯಾವುದು ಗೊತ್ತ?

ಶಕುನಿ ಪರಮ ಶಿವಭಕ್ತನಾಗಿ, ಮಹಾಭಾರತ ಯುದ್ಧದ ನಂತರ ಈ ಸ್ಥಳಲ್ಲಿ ಭೇಟಿ ನೀಡಿ. ಪರಮಶಿವನನ್ನು ಪಾರ್ಥನೆ ಮಾಡಿ ಮೋಕ್ಷವನ್ನು ಪಡೆದನು ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಆ ವಿಧವಾಗಿ ಭಗವಾನ್ ಶಿವನ ಅನುಗ್ರಹ ಪಡೆದನಾದ್ದರಿಂದ ಹಾಗಾಗಿ ಇತನನ್ನು ಭಗವಾನ್ ಶಕುನಿ ಎಂದು ಕರೆಯುತ್ತಾರೆ. ಇಲ್ಲಿ ಹಲವಾರು ಉತ್ಸವಗಳು ನಡೆಯುತ್ತವೆ. ವಿಶೇಷವೆನೆಂದರೆ ಈ ದೇವಾಲಯದ ಸಮೀಪದಲ್ಲಿಯೇ ದುರ್ಯೋಧನನ ದೇವಾಲಯ ಕೂಡ ಇದೆ.

ಪ್ರಸ್ತುತ ಲೇಖನದಲ್ಲಿ ಶಕುನಿ ದೇವಾಲಯದ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ನಾವು ಎಂದೂ ಕೇಳಿರದ ದೇವಾಲಯ ಎಂದರೆ ತಪ್ಪಾಗಲಾರದು. ಈ ಶಕುನಿ ದೇವಾಲಯ ಇರುವುದು ಕೇರಳ ಜಿಲ್ಲೆಯಲ್ಲಿನ ಪವಿತ್ರೇಶ್ವರ ದೇವಾಲಯದಲ್ಲಿ. ಅಲ್ಲಿ ಒಂದು ಪುರಾತನವಾದ ಕಟ್ಟಡವಿದೆ. ಅದು ಅತ್ಯಂತ ಹಳೆಯ ಕಾಲದ ಕಟ್ಟಡವಾಗಿದೆ. ಇದನ್ನೇ ಶಕುನಿ ದೇವಾಲಯ ಎಂದು ಕರೆಯುತ್ತಾರೆ.

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಮಹಾಭಾರತ ಓದುತ್ತಿದ್ದರೆ ಮಹಾ ಪ್ರತಿ ನಾಯಕನಾಗಿ ನಮಗೆ ಶಕುನಿ ಕಾಣಿಸುತ್ತಾನೆ. ಆತನಿಗೆ ಇರುವುದೆಲ್ಲಾ ತಂತ್ರಕಾರಿಗೆಯ ಗುಣ. ಆದರೆ ಅಷ್ಟು ಕೆಟ್ಟ ಲಕ್ಷಣಗಳು ಇರುವ ಶಕುನಿಯಲ್ಲಿಯೂ ಕೂಡ ಒಳ್ಳೆಯ ಲಕ್ಷಣಗಳನ್ನು ಹೊಂದಿರುವ ಮಹಾನ್ ಪುರುಷ ಎಂದು ಕೇರಳದ ಕುರುವಾರ್ ವಂಶಿಕರು ಧೃಡವಾಗಿ ನಂಬುತ್ತಾರೆ.

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಹಲವಾರು ವರ್ಷಗಳ ಹಿಂದೆಯೇ ನಿರ್ಮಾಣವಾದ ಈ ಶಕುನಿಯ ದೇವಾಲಯದ ನಿರ್ವಹಣೆಯನ್ನು ಈ ವಂಶಿಕರೇ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಮತ್ತೊಂದು ವಿಶೇಷ ಏನೆಂದರೆ ಈ ದೇವಾಲಯದಲ್ಲಿ ಶಕುನಿ ಕುಳಿತುಕೊಂಡ ಸಿಂಹಾಸನವಿದೆ.

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಈ ಶಕುನಿ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡುವುದಿಲ್ಲ. ಅಷ್ಟೋತ್ತರ, ಸಹಸ್ರನಾಮಾವಳಿಯಂತಹವು ಕೂಡ ಮಾಡುವುದಿಲ್ಲ. ಮಹಾಭಾರತ ಯುದ್ಧ ನಡೆಯುವ ಸಮಯದಲ್ಲಿ ಶಕುನಿ ತನ್ನ ಸಹೋದರ ಅಳಿಯರೊಂದಿಗೆ ದೇಶವೆಲ್ಲಾ ತಿರುಗುತ್ತಾ ಈ ಪ್ರದೇಶಕ್ಕೆ ಬಂದು ನೆಲೆಸಿದ್ದರಂತೆ.

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಈ ಪ್ರದೇಶದಲ್ಲಿಯೇ ಕೌರವರು ತಮ್ಮ ಆಯುದ್ಧವನ್ನು ಹಂಚಿಕೊಂಡರು. ಹಾಗಾಗಿಯೇ ಇದನ್ನು ಪಾಕುತೇಶ್ವರ ಎಂದು ಅವರನ್ನು ಕರೆಯುತ್ತಾರೆ. ಹಾಗೆಯೇ ನಂತರದ ಕಾಲದಲ್ಲಿ ಈ ದೇವಾಲಯವನ್ನು ಪವಿತ್ರೇಶ್ವರ ಎಂದು ಮಾರ್ಪಾಟಾಯಿತು ಎಂದು ಹೇಳಲಾಗುತ್ತದೆ.

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಶಕುನಿ ಪರಮಶಿವಭಕ್ತನಾಗಿದ್ದನು. ಇತನಿಗೆ ಈ ದೇವಾಲಯದಲ್ಲಿ ಭಕ್ತರು ಟೆಡ್ಡಿ, ರೇಷ್ಮೆ ವಸ್ತ್ರ, ತೆಂಗಿನಕಾಯಿಗಳನ್ನು ಒದಗಿಸುತ್ತಾರೆ. ಈ ದೇವಾಲಯವು ಕೇರಳದ ವಾಸ್ತು ಶಿಲ್ಪ ಶೈಲಿಯಲ್ಲಿದೆ.

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಈ ದೇವಾಲಯದ ಒಳಭಾಗದಲ್ಲಿ ಕಿರಾಥ ಮೂರ್ತಿ, ಭುವನೇಶ್ವರಿ ದೇವಿ ಮತ್ತು ನಾಗರಾಜ ಇನ್ನು ಇತರ ದೇವತಾ ಮೂರ್ತಿಗಳನ್ನು ಇಲ್ಲಿ ಕಾಣಬಹುದಾಗಿದೆ. ಖಳನಾಯಕರಿಗೆ ಈ ದೇವಾಲಯಗಳು ಒಂದು ಉತ್ತಮವಾದ ಉದಾಹರಣೆಯಾಗಿದೆ.

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಶಕುನಿಗೆ ಅಲ್ಲಿ ದೇವತಾ ಮೂರ್ತಿಯಾಗಿ ಪೂಜಿಸುತ್ತಾರೆ

ಶಕುನಿಯ ಮಗನಾದ ಉಲುಕುವನ್ನು ಸಹದೇವ ಸಾಯಿಸುತ್ತಾನೆ. ಇದರಿಂದಾಗಿ ಮಗನನ್ನು ಕೊಂದ ಕೋಪದಿಂದ ಶಕುನಿಯು ಸಹದೇವನ ಮೇಲೆ ತನ್ನ ಆಯುದ್ಧವನ್ನು ಹಿಡಿದು ದಾಳಿ ಮಾಡಲು ಹೋಗುತ್ತಾನೆ. ತದನಂತರ ಮಹಾಭಾರತದ ಗ್ರಂಥದ ಪ್ರಕಾರ ಶಕುನಿಯು ಯುದ್ಧ ಮಾಡುತ್ತಾ ಪಾಂಡವರಲ್ಲಿ ಚಿಕ್ಕವನಾದ ಸಹದೇವನ ಕೈಯಲ್ಲಿ ಮರಣ ಹೊಂದಿತ್ತಾನೆ.

PC:Ramanarayanadatta astri

ಭೇಟಿಗೆ ಉತ್ತಮ ಸಮಯ

ಭೇಟಿಗೆ ಉತ್ತಮ ಸಮಯ

ಈ ಪವಿತ್ರೇಶ್ವರ ದೇವಾಲಯಕ್ಕೆ ಭೇಟಿ ನೀಡಲು ಅತ್ಯುತ್ತಮವಾದ ಸಮಯವೆಂದರೆ ಮಾಳಕ್ಕುಡ ಮಹೋತ್ಸವಂ ನಡೆಯುವ ಸಂದರ್ಭದಲ್ಲಿ. ಅಂದರೆ ಜನವರಿ ತಿಂಗಳಿನಿಂದ ಫೆಬ್ರವರಿ ತಿಂಗಳ ಮಧ್ಯೆ ಇಲ್ಲಿ ವಾರ್ಷಿಕ ಹಬ್ಬ ನಡೆಯುತ್ತದೆ. ಈ ಸಮಯದಲ್ಲಿ ಶಕುನಿಯ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಕೇರಳದ ಕೊಟ್ಟಾರಕ್ಕರ ತಿರುವನಂತಪುರಂನಿಂದ ಸುಮಾರು 65 ಕಿ.ಮೀ ದೂರದಲ್ಲಿದೆ. ಕೊಟ್ಟಾರಕ್ಕರ ತಾಲ್ಲೂಕಿನಿಂದ ಕೇವಲ 16 ಕಿ.ಮೀ ದೂರದಲ್ಲಿ ಪವಿತ್ರೇಶ್ವರ ದೇವಾಲಯವಿದೆ. ಬಸ್ಸುಗಳ ಮೂಲಕ ತೆರಳಲು ಹಲವಾರು ಖಾಸಗಿ ಬಸ್ಸುಗಳ ವ್ಯವಸ್ಥೆ ಇಲ್ಲಿದೆ.

ರೈಲು ಮಾರ್ಗ: ಮುನೊತುರುತು ರೈಲು ನಿಲ್ದಾಣದಿಂದ ಕೇವಲ 30 ಕಿ.ಮೀ ದೂರದಲ್ಲಿ ಕೊಟ್ಟಾರಕ್ಕರಕ್ಕೆ ತಲುಪಬಹುದಾಗಿದೆ. ಇದೊಂದು ಸಮೀಪದ ರೈಲ್ವೆ ನಿಲ್ದಾಣವಾಗಿದೆ.

ವಿಮಾನ ಮಾರ್ಗ: ಈ ದೇವಾಲಯಕ್ಕೆ ತೆರಳಬೇಕಾದರೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ತಿರುವನಂತಪುರಂ ವಿಮಾನ ನಿಲ್ದಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X