Search
  • Follow NativePlanet
Share
» »ಓಣಂ 2022: ದೇವರ ಸ್ವಂತ ನಾಡು ಕೇರಳದಲ್ಲಿ ಓಣಂ ಹೇಗೆ ಆಚರಿಸಲಾಗುತ್ತದೆ ನೋಡೋಣ ಬನ್ನಿ!

ಓಣಂ 2022: ದೇವರ ಸ್ವಂತ ನಾಡು ಕೇರಳದಲ್ಲಿ ಓಣಂ ಹೇಗೆ ಆಚರಿಸಲಾಗುತ್ತದೆ ನೋಡೋಣ ಬನ್ನಿ!

ಓಣಂ ಇದು ಕೇರಳದ ಅತಿದೊಡ್ಡ ಮತ್ತು ಅತ್ಯಂತ ಪ್ರಮುಖ ಹಬ್ಬವಾಗಿದ್ದು, ಈ ಹಬ್ಬವು ಇಲ್ಲಿಯ ಸುಗ್ಗಿಯ ಹಬ್ಬವೆಂದು ಗುರುತಿಸಲ್ಪಡುತ್ತದೆ ಮತ್ತು ಮಲೆಯಾಳಿ ಕ್ಯಾಲೆಂಡರ್ ಪ್ರಕಾರ ಇದು ಇಲ್ಲಿಯ ಜನರ ಹೊಸ ವರ್ಷವಾಗಿದೆ. ಈ ಹಬ್ಬವನ್ನು ಜಾತಿ ಮತ ಪಂಗಡವೆನ್ನುವ ಭೇದವಿಲ್ಲದೆ ಬಹಳ ಸಂಭ್ರಮ ಹಾಗೂ ಉತ್ಸಾಹದಿಂದ ಯಾವುದೇ ಪರಿವೆ ಇಲ್ಲದೆ ಆಚರಿಸಲಾಗುತ್ತದೆ.

ಹತ್ತು ದಿನಗಳವರೆಗೆ ನಡೆಯಲಾಗುವ ಈ ಹಬ್ಬವು ಕಳೆದ ವರ್ಷ ಬಹಳ ಸಂಭ್ರಮದಿಂದ ಆಚರಿಸಲಾಗಿದೆ. ಈ ಹಬ್ಬವು ಇಲ್ಲಿನ ಸಂಸ್ಕೃತಿ ಮತ್ತು ನಂಬಿಕೆಗಳ ವಿವಿಧ ಅಂಶಗಳನ್ನು ಪ್ರದರ್ಶಿಸುತ್ತದೆ. ಈ ಹತ್ತು ದಿನಗಳಲ್ಲಿ ಪ್ರಮುಖವಾದವುಗಳೆಂದರೆ ಮೊದಲ ದಿನ, ಆಟಂ ಮತ್ತು ಕೊನೆಯ ಅಥವಾ ಹತ್ತನೇ ದಿನ, ತಿರು ಓಣಂ.

ಈ ಸಮಯವು ಕೇರಳಕ್ಕೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಸಮಯವಾಗಿದ್ದು ಈ ಸಮಯದಲ್ಲಿ ಇಡೀ ಕೇರಳದ ಮೂಲೆ ಮೂಲೆಗಳಲ್ಲಿಯೂ ಸಂಭ್ರಮಾಚರಣೆಗಳಿಂದ ತುಂಬಿರುವುದನ್ನು ಕಾಣಬಹುದಾಗಿದೆ. ಈ ಸಮಯದಲ್ಲಿ ಇಲ್ಲಿಯ ಕೆಲವು ಅಪ್ಪಟ ಕಲಾರೂಪಗಳು ಮತ್ತು ನೃತ್ಯಗಳನ್ನು ದೇವಾಲಯಗಳು ಮತ್ತು ಬೀದಿಗಳಲ್ಲಿ ನಡೆಯುವುದನ್ನು ಕಾಣಬಹುದಾಗಿದೆ. ಅಲ್ಲದೆ ಈ ಸಮಯದಲ್ಲಿ ಆನೆಗಳ ಬೃಹತ್ ಮೆರವಣಿಗೆಯೂ ನಡೆಯುವುದನ್ನು ಕಾಣಬಹುದಾಗಿದೆ.

ಪಾಲಕ್ಕಾಡ್

ಪಾಲಕ್ಕಾಡ್

"ಕೇರಳದ ಕಣಜ" ಎಂದೂ ಕರೆಯಲ್ಪಡುವ ಪಾಲಕ್ಕಾಡ್ ಒಂದು ವಿಸ್ತಾರವಾದ ಹುಲ್ಲು ಪೊದೆಗಳನ್ನು ಹೊಂದಿದ ಗದ್ದೆಗಳು, ಪಾಮ್ ಮರಗಳು, ಉಷ್ಣವಲಯದ ಕಾಡುಗಳು ಮತ್ತು ಗುಡ್ಡಗಾಡು ಪ್ರದೇಶಗಳನ್ನು ಒಳಗೊಂಡಿರುವ ಸ್ಥಳವಾಗಿದೆ. ಬೇರೆ ಸಮಯದಲ್ಲಿ ಮೌನವಾಗಿರುವ ಈ ಪ್ರದೇಶವು ಓಣಂ ಹಬ್ಬದ ಸಮಯದಲ್ಲಿ ಜೀವಂತಿಕೆಯನ್ನು ಪಡೆದು ಕಳೆಕಳೆಯಾಗಿ ಕಾಣುತ್ತದೆ. ಜನರು ವಿವಿಧ ಪೌರಾಣಿಕ ಪಾತ್ರಗಳು ಮತ್ತು ಪ್ರಾಣಿಗಳಂತೆ ಬಣ್ಣ ಧರಿಸಿಕೊಂಡು ಬೀದಿಗಳಲ್ಲಿ ಮೆರವಣಿಗೆಗಳನ್ನು ನಡೆಸುವುದನ್ನು ಕಾಣಬಹುದಾಗಿದೆ.

ಅಲ್ಲದೆ ಈ ಸಮಯದಲ್ಲಿ ಪೌರಾಣಿಕ ವಿಷಯಗಳಿಗೆ ಕುರಿತಾದ ನಾಟಕಗಳನ್ನು ಹಮ್ಮಿಕೊಳ್ಳಲಾಗುತ್ತದೆ ಹಾಗೂ ಹಾಡುಗಳೂ ಮತ್ತು ನೃತ್ಯಗಳು ಇದರ ಒಂದು ಭಾಗವಾಗಿರುತ್ತದೆ. ಈ ಪ್ರದೇಶದ ಸುತ್ತಲೂ ವರ್ಣಮಯ ಮತ್ತು ಜೀವಂತಿಕೆಯ ಕಳೆಯಿಂದ ಕೂಡಿರುವ ಈ ಸಮಯದಲ್ಲಿ ಭೇಟಿ ಕೊಡಲು ಅತ್ಯಂತ ಸೂಕ್ತವಾದ ಸಮಯವಾಗಿರುತ್ತದೆ. ನೀವು ರೈಲಿನಲ್ಲಿ ಇಲ್ಲಿಗೆ ತಲುಪಬಹುದು ಅಥವಾ ಹತ್ತಿರದ ಪಟ್ಟಣಗಳಿಂದ ಬಸ್ ಮೂಲಕ ಹೋಗಬಹುದು. ನೀವು ವಿಮಾನದಲ್ಲಿ ಪ್ರಯಾಣಿಸಲು ಯೋಜಿಸಿದರೆ ನಂತರ ನೀವು ಕೊಯಮತ್ತೂರ್‌ಗೆ ಪ್ರಯಾಣಿಸಬಹುದು ಮತ್ತು ನಂತರ ರಸ್ತೆ ಅಥವಾ ರೈಲಿನಲ್ಲಿ ಪಾಲಕ್ಕಾಡ್‌ ತಲುಪಬಹುದಾಗಿದೆ.

ಅಲ್ಲೆಪ್ಪೀ

ಅಲ್ಲೆಪ್ಪೀ

ಅಲ್ಲೆಪ್ಪೀ ಯನ್ನು ಅಲಪ್ಪುಝಾ ಎಂದೂ ಕರೆಯಲಾಗುತ್ತಿದ್ದು, ಅಸಂಖ್ಯಾತ ಸರೋವರಗಳು, ಆವೃತ ಪ್ರದೇಶಗಳು ಮತ್ತು ಸಿಹಿನೀರಿನ ನದಿಗಳಿಂದಾಗಿ 'ಪೂರ್ವದ ವೆನಿಸ್' ಎಂದು ಕರೆಯಲಾಗುತ್ತದೆ. ಈ ಹಿನ್ನೀರಿನ ಪಟ್ಟಣವು ಓಣಂ ಸಮಯದಲ್ಲಿ ನೆಹರು ಬೋಟ್ ರೇಸ್ ನಂತಹ ಪ್ರಮುಖ ಆಕರ್ಷಣೆಗಳನ್ನು ಆಯೋಜಿಸುತ್ತಾ ಅತ್ಯಂತ ಚಟುವಟಿಕೆಗಳ ತಾಣವಾಗಿ ಗುರುತಿಸಲ್ಪಡುತ್ತದೆ. ಹಬ್ಬದ ಸಮಯದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರು ಓಟದ ಉನ್ಮಾದ ಮತ್ತು ಅಡ್ರೆಲಾನಿನ್ ಚಟುವಟಿಕೆಗಳನ್ನು ವೀಕ್ಷಿಸಬಹುದು.

ಈ ಓಟದಲ್ಲಿ 50 ಕ್ಕೂ ಹೆಚ್ಚು ದೋಣಿಗಳು ಭಾಗವಹಿಸುತ್ತವೆ ಎಂದು ಹೇಳಲಾಗುತ್ತದೆ ಮತ್ತು ಪ್ರತಿ ದೋಣಿಯು ಇಲ್ಲಿ ವಾಸಿಸುವ ಕೆಲವು ಕುಟುಂಬಗಳ ಒಡೆತನದಲ್ಲಿದೆ. ಅಲೆಪ್ಪಿ ತನ್ನದೇ ಆದ ರೈಲು ಮಾರ್ಗವನ್ನು ಹೊಂದಿರುವುದರಿಂದ ಇಲ್ಲಿಗೆ ಪ್ರಯಾಣಿಸಲು ಸುಲಭವಾಗಿದೆ. ವಿಮಾನದಲ್ಲಿ ಪ್ರಯಾಣಿಸುವವರು ತಿರುವಂತಪುರಂ ವಿಮಾನ ನಿಲ್ದಾಣ ಅಥವಾ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗುತ್ತದೆ. ಹತ್ತಿರದ ಪಟ್ಟಣಗಳಿಂದಲೂ ಬಸ್ಸುಗಳು ಲಭ್ಯವಿದೆ.

ತ್ರಿಶೂರ್

ತ್ರಿಶೂರ್

ತ್ರಿಶೂರ್ ಕೇರಳದ ಸಾಂಸ್ಕೃತಿಕ ರಾಜಧಾನಿಯಾಗಿದ್ದು ಇದು ಪ್ರತಿ ವರ್ಷ ತ್ರಿಶೂರ್ ಪೂರಂ ಅನ್ನು ಆಯೋಜಿಸುವುದರೊಂದಿಗೆ ಹಬ್ಬದ ನಾಡೆನಿಸಿದೆ. ಈ ಜಿಲ್ಲೆಯು ಸಾಂಸ್ಕೃತಿಕ ಪರಂಪರೆಗ, ಧಾರ್ಮಿಕ ತಾಣಗಳು ಮತ್ತು ಶೈಕ್ಷಣಿಕ ಮಹತ್ವಕ್ಕೆ ಹೆಸರುವಾಸಿಯಾಗಿರುವ ಪಟ್ಟಣವಾಗಿದೆ. ಓಣಂ ಹಬ್ಬದ ಸಮಯದಲ್ಲಿ ಈ ಪಟ್ಟಣಕ್ಕೆ ವಿಭಿನ್ನವಾದ ಮೆರುಗು ಬರುತ್ತದೆ. ಇಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವವರು ಹುಲಿಗಳ ಹಾಗೆ ವೇಷ ಭೂಷಣಗಳನ್ನು ತೊಟ್ಟು, ನೃತ್ಯ ಮಾಡುತ್ತಾರೆ ಇದನ್ನು ಪುಲಿಕಲಿ ಎಂದು ಕರೆಯಲಾಗುತ್ತದೆ.

ಇದು ದೇಶದ ವಿಭಿನ್ನ ಕಲಾ ಪ್ರಕಾರಗಳಲ್ಲಿ ಒಂದೆನಿಸಿದೆ. ಈ ಕಲೆಯ ಆಸಕ್ತಿದಾಯಕ ವಿಷಯವೆಂದರೆ ಪ್ರತಿ ಪ್ರದರ್ಶಕನಿಗೆ ತಯಾರಾಗಲು ನಾಲ್ಕು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇಲ್ಲಿನ ಜನರು ಅಲಂಕರಿಸಿಕೊಂಡು ಮತ್ತು ನೃತ್ಯ ಮಾಡಲು ಹೊರಡುತ್ತಾರೆ, ಏಕೆಂದರೆ ಹಬ್ಬದ ಕೊನೆಯಲ್ಲಿ ಉತ್ತಮ ಉಡುಗೆ ತೊಟ್ಟ ವ್ಯಕ್ತಿ ಮತ್ತು ಉತ್ತಮ ನೃತ್ಯಗಾರನಿಗೆ ಹೆಚ್ಚು ಅಪೇಕ್ಷಿತ ಬಹುಮಾನವನ್ನು ನೀಡಲಾಗುತ್ತದೆ. ಈ ವಿಶಿಷ್ಟವಾದ ಕಲಾ ರೂಪವನ್ನು ವೀಕ್ಷಿಸಲು ಜಗತ್ತಿನಾದ್ಯಂತದ ಪ್ರವಾಸಿಗರು ಬರುತ್ತಾರೆ ಮತ್ತು ತಾವೂ ಪಾಲ್ಗೊಳ್ಳುತ್ತಾರೆ. ಪ್ರಯಾಣಿಸಲು ಉತ್ತಮ ಮಾರ್ಗವೆಂದರೆ ರೈಲು ಅಥವಾ ಬಸ್ಸುಗಳ ಮೂಲಕ. ವಿಮಾನದಲ್ಲಿ ಪ್ರಯಾಣಿಸುವವರು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕು ಮತ್ತು ಇಲ್ಲಿಗೆ ತಲುಪಲು ರೈಲು ಅಥವಾ ಬಸ್‌ನಲ್ಲಿ ಹೋಗಬೇಕು.

ತಿರುವನಂತಪುರಂ

ತಿರುವನಂತಪುರಂ

ತಿರುವನಂತಪುರಂ ಕೇರಳದ ರಾಜಧಾನಿಯಾಗಿದ್ದು, ಇದು ಆರ್ಥಿಕತೆ ಮತ್ತು ವಾಣಿಜ್ಯೀಕರಣದ ಹಬ್ ಎನಿಸಿದೆ. ಗ್ರಾಮೀಣ ಭಾಗಗಳನ್ನು ಹೊಂದಿರುವ ರಾಜ್ಯದ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿ, ಈ ನಗರವು ಸಂಪೂರ್ಣವಾಗಿ ನಗರೀಕರಣಗೊಂಡಿದೆ. ಇಲ್ಲಿ ಓಣಂ ಆಚರಣೆಗಳನ್ನು ಸಾಮಾನ್ಯವಾಗಿ ರಾಜ್ಯಸರಕಾರದಿಂದ ಹಮ್ಮಿಕೊಳ್ಳಲಾಗುತ್ತಿದೆ ಮತ್ತು ನಾಟಕಗಳು, ಸಾಂಸ್ಕೃತಿಕ ನೃತ್ಯಗಳು ಮತ್ತು ಪ್ರಸಿದ್ದ ಸಂಗೀತಗಾರರಿಂದ ಸಂಗೀತ ಕಾರ್ಯಕ್ರಮಗಳನ್ನು ಒಳಗೊಂಡ ಹಲವಾರು ಸ್ಟೇಜ್ ಶೋಗಳನ್ನು ಇಲ್ಲಿ ಆಯೋಜಿಸಲಾಗುತ್ತಿದ್ದು ಅವುಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದು.

ಇಲ್ಲಿಗೆ ವೀಕ್ಷಿಸಲು ಬರುವ ಪ್ರವಾಸಿಗರು ಮೊದಲೆ ಪಾಸ್ ಗಳನ್ನು ಪಡೆದುಕೊಂಡು ಇಲ್ಲಿಯ ಕಾರ್ಯಕ್ರಮಗಳಲ್ಲಿ ಅತ್ಯಂತ ವಿನೋದ ಹಾಗೂ ಉಲ್ಲಾಸದಿಂದ ಭಾಗವಹಿಸುತ್ತಾರೆ. ನೀವು ಇಲ್ಲಿಗೆ ಟ್ರೈನ್, ಬಸ್ಸು ಅಥವಾ ವಿಮಾನಗಳಲ್ಲಿಯೂ ಪ್ರಯಾಣಿಸಬಹುದಾಗಿದೆ.

ಪತ್ತನಂತಿಟ್ಟ

ಪತ್ತನಂತಿಟ್ಟ

ಪತ್ತನಂತಿಟ್ಟ ಇದು ಕೇರಳದ ಮಾರುಕಟ್ಟೆ ಪಟ್ಟಣವೆನಿಸಿದ್ದು, ಇದು ದೇವಾಲಯಗಳು, ನದಿಗಳು ಪರ್ವತಗಳು ಮತ್ತು ತೆಂಗಿನ ತೋಪುಗಳನ್ನು ಒಳಗೊಂಡ ಪ್ರಾಂತ್ಯವಾಗಿದೆ. ಈ ನಿರಂತರವಾಗಿರುವ ಪಟ್ಟಣವು ಮಾರಾಟಗಾರರು ಖರೀದಿಸುವವರು ಮತ್ತು ಅಂಗಡಿಗಳನ್ನು ಹೊಂದಿರುವವರು ತಮ್ಮ ವಸ್ತುಗಳನ್ನು ಖರೀದಿ ಮಾಡಲು ಜನರನ್ನು ಕರೆಯುವ ಒಂದು ತೆರೆದ ಮಾರುಕಟ್ಟೆಗಳನ್ನು ಹೊಂದಿದೆ. ಓಣಂ ಇಲ್ಲಿ ಆಚರಿಸಲಾಗುವ ಅತ್ಯಂತ ಪ್ರಮುಖ ಹಬ್ಬವಾಗಿರುವುದರ ಜೊತೆಗೆ ಈ ಸಮಯದಲ್ಲಿ ಆಯೋಜಿಸಲಾಗುವ ಅರನ್ಮುಲಾ ಬೋಟ್ ರೇಸ್ ಕೂಡಾ ಒಂದು ಪ್ರಮುಖ ಆಕರ್ಷಣೆಯಾಗಿದೆ. ಸ್ನೇಕ್ ಬೋಟ್ ರೇಸ್ ಎಂದು ಕರೆಯಲ್ಪಡುವ ವ್ಯಾಪಾರಿಗಳು ತೆಳುವಾದ ತೆಳ್ಳಗಿನ ದೋಣಿಗಳನ್ನು ಓಡಿಸುವುದನ್ನು ನೋಡಬಹುದು, ಮೊದಲು ಬರಲು ತೀವ್ರ ಪೈಪೋಟಿ ನಡೆಸುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರು ಈ ಓಟದ ಹುಚ್ಚುತನದಿಂದ ಆಶ್ಚರ್ಯಚಕಿತರಾಗುತ್ತಾರೆ.

ಇಲ್ಲಿಗೆ ತಲುಪಲು ಸುಲಭವಾದ ಮಾರ್ಗವೆಂದರೆ ರಸ್ತೆಯ ಮೂಲಕ ಇದು ಹತ್ತಿರದ ಪಟ್ಟಣಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ನೀವು ಚೆಂಗನ್ನೂರು ಅಥವಾ ತಿರುವಲ್ಲಾಗೆ ರೈಲಿನಲ್ಲಿ ಪ್ರಯಾಣಿಸಬಹುದು ಮತ್ತು ನಂತರ ರಸ್ತೆಯ ಮೂಲಕ ಪ್ರಯಾಣಿಸಬಹುದು. ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ತಿರುವನಂತಪುರಂ.

ಕೊಚ್ಚಿ

ಕೊಚ್ಚಿ

ಕೇರಳದ ಕಡಲತೀರದ ಪಟ್ಟಣವಾದ ಕೊಚ್ಚಿಯು ತನ್ನ ಸುಂದರವಾದ ಕಡಲತೀರಗಳು ಮತ್ತು ಪೋರ್ಚುಗೀಸ್ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಓಣಂ ಹಬ್ಬವು ಅಲಂಕೃತ ಆನೆಗಳು, ಸಂಗೀತಗಾರರು ಮತ್ತು ಕಲಾ ಕಲಾವಿದರಿಂದ ಬೀದಿಗಳಲ್ಲಿ ಮೆರವಣಿಗೆಯನ್ನು ಒಳಗೊಂಡಿದೆ.ಅಥಾಚಮಯಂ ಪ್ರದರ್ಶನವು ಮೆರವಣಿಗೆಯ ಪ್ರಮುಖ ಅಂಶವಾಗಿದೆ, ಅಲ್ಲಿ ಜನ ಉತ್ತಮ ಬಟ್ಟೆಗಳನ್ನು ಧರಿಸುತ್ತಾ ಅಲಂಕರಿಸಿಕೊಂಡು ಇರುತ್ತಾರೆ.

ಇಡೀ ಪಟ್ಟಣವನ್ನು ಸ್ಟ್ರೀಮರ್ ಬಲೂನ್‌ಗಳು ಮತ್ತು ಹೂವುಗಳಿಂದ ಅಲಂಕರಿಸಲಾಗುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರು ಭವ್ಯ ಮೆರವಣಿಗೆಯನ್ನು ವೀಕ್ಷಿಸಬಹುದು ಮತ್ತು ಆಸಕ್ತಿದಾಯಕ ಫೋಟೋಗಳನ್ನು ತೆಗೆದುಕೊಳ್ಳಬಹುದು. ಎಲ್ಲಾ ಸಾರಿಗೆ ವಿಧಾನಗಳಿಂದ ಉತ್ತಮ ಸಂಪರ್ಕವನ್ನು ಹೊಂದಿರುವುದರಿಂದ ನೀವು ವಿಮಾನ, ರಸ್ತೆ ಅಥವಾ ರೈಲಿನ ಮೂಲಕ ಇಲ್ಲಿಗೆ ಪ್ರಯಾಣಿಸಬಹುದು.

ಪೂಕಳಂ

ಪೂಕಳಂ

ಪೂಕಳಂ ಎಂಬುದು ನೆಲದ ಮೇಲೆ ಹಾಕಲಾದ ಹೂವುಗಳ ಸಂಕೀರ್ಣ ಮತ್ತು ವರ್ಣರಂಜಿತ ಜೋಡಣೆಯಾಗಿದೆ. ಪೂಕಳಂಗಳನ್ನು ರಚಿಸುವ ಸಂಪ್ರದಾಯವು ಕೇರಳದಲ್ಲಿ ಅತ್ಯಂತ ಜನಪ್ರಿಯವಾಗಿದೆ ಮತ್ತು ಓಣಂ ಆಚರಣೆಯ ಸಮಯದಲ್ಲಿ ಪ್ರತಿ ಮನೆಯಲ್ಲೂ ಇದನ್ನು ಒಂದು ಆಚರಣೆಯಾಗಿ ಅನುಸರಿಸಲಾಗುತ್ತದೆ.ಪೂಕಳಂ ಈ ಹೆಸರಿನಲ್ಲಿ ಎರಡು ಪದಗಳು ಸೇರಿದ್ದು 'ಪೂವ್ ' ಎಂದರೆ ಹೂವು ಎಂದೂ 'ಕಳಂ' ಎಂದರೆ ಅಲಂಕರಿಸುವುದೆಂದೂ ಅರ್ಥಬರುತ್ತದೆ. ಮಹಾಬಲಿ ಚಕ್ರವರ್ತಿಯ ಆತ್ಮವು ಓಣಂ ಹಬ್ಬದ ಸಮಯದಲ್ಲಿ ಕೇರಳದ ಪ್ರತಿ ಮನೆಗೂ ಭೇಟಿ ಕೊಡುತ್ತದೆ ಎಂದು ಇಲ್ಲಿ ನಂಬಿಕೆ ಇದೆ. ಪೋಕಳಂ ಬಲಿ ಚಕ್ರವರ್ತಿಯ ಆತ್ಮವನ್ನು ಸ್ವಾಗತಿಸುವುದಕ್ಕಾಗಿ ಮಾಡಲಾಗುವ ಹೂವಿನ ಅಲಂಕಾರವಾಗಿದೆ.

ಹಬ್ಬದೂಟ

ಹಬ್ಬದೂಟ

ಓಣಂ ಹಬ್ಬದ ಸಮಯದಲ್ಲಿ ವೈವಿಧ್ಯಮಯವಾದ ಹಬ್ಬದೂಟದ ಜೊತೆಗೆ ಆಚರಣೆ ಇಲ್ಲದದಿದ್ದಲ್ಲಿ ಹಬ್ಬವು ಖಂಡಿತವಾಗಿಯೂ ಅಪೂರ್ಣವೇ ಸರಿ. ಸಾಂಪ್ರದಾಯಿಕವಾಗಿ ಇದನ್ನು ಓನಸಾಡ್ಯ ಎಂದು ಕರೆಯಲಾಗುತ್ತಿದ್ದು, ಇಲ್ಲಿ ಕೇರಳದ ಬಾಯಿ ನೀರೂರಿಸುವ ಸಾಂಪ್ರದಾಯಿಕ ಪಾಕ ಪದ್ದತಿಗಳನ್ನು ಒಳಗೊಂಡ ಬಾಳೆ ಎಲೆಯ ಮೇಲೆ ಬಡಿಸುವ 20 ಕ್ಕೂ ಹೆಚ್ಚು ವಿಭಿನ್ನ ಭಕ್ಷ್ಯಗಳನ್ನು ಒಳಗೊಂಡಿರುತ್ತದೆ. ಓಣಂ ಹಬ್ಬದಂದು ಇಲ್ಲಿಗೆ ಬರುವವರೆಲ್ಲರೂ ಈ ಭವ್ಯ ಭೋಜನವನ್ನು ಸವಿಯುವುದು ಅತ್ಯಗತ್ಯ. ಬೇರೆ ಸಮಯದಲ್ಲಿ ನಿಮಗೆ ಇಲ್ಲಿಯ ಪಾಕ ಪದ್ದತಿಗಳ ಸವಿಯನ್ನು ಅನುಭವಿಸಲು ಸಾಧ್ಯವಾಗುತ್ತೋ ಇಲ್ಲವೋ ಆದರೆ ಓಣಂ ದಿನದಂದು ಪ್ರತಿ ಮನೆಯವರು ಈ ಭೋಜನವನ್ನು ಸರ್ವಶಕ್ತನಿಗೆ ಕೃತಜ್ಞತೆ ಸಲ್ಲಿಸಲು, ಸಂತೋಷ ಮತ್ತು ಶ್ರೀಮಂತಿಕೆಯಿಂದ ಆಶೀರ್ವಾದ ಪಡೆಯಲು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ.

Read more about: onam kerala ಓಣಂ ಕೇರಳ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X