Search
  • Follow NativePlanet
Share
» » ಓಂಕಾರೇಶ್ವರ ಗುಡ್ಡಕ್ಕೆ ಹೋಗಿದ್ದೀರಾ...ದೇವರ ದರ್ಶನಾನೂ ಆಗುತ್ತೆ...ಟ್ರಕ್ಕಿಂಗೂ ಆಗುತ್ತೇ

ಓಂಕಾರೇಶ್ವರ ಗುಡ್ಡಕ್ಕೆ ಹೋಗಿದ್ದೀರಾ...ದೇವರ ದರ್ಶನಾನೂ ಆಗುತ್ತೆ...ಟ್ರಕ್ಕಿಂಗೂ ಆಗುತ್ತೇ

ಬೆಂಗಳೂರು ಸುತ್ತಮುತ್ತಲೂ ತಿರುಗಾಡುವಂತಹ ಅನೇಕ ಸ್ಥಳಗಳಿವೆ. ಬಹುತೇಕರಿಗೆ ಧಾರ್ಮಿಕ ಕ್ಷೇತ್ರಗಳು ಇಷ್ಟವಾದರೆ ಇನ್ನೂ ಕೆಲವರಿಗೆ ಶಾಪಿಂಗ್ ಹೋಗೋದು, ಮಾಲ್ ಸುತ್ತಾಡೋದು ಇಷ್ಟವಾಗುತ್ತದೆ. ಇನ್ನೂ ಕೆಲವರಿಗೆ ಪಾರ್ಕ್‍ ಸುತ್ತಾಡೋದು ಖುಷಿ ಕೊಡುತ್ತದೆ. ಒಂದೇ ಮನೆಯಲ್ಲಿ ಇರುವವರಿಗೆ ಈ ರೀತಿ ಭಿನ್ನ ಅಭಿರುಚಿಯಿದ್ದರೆ ಪ್ರವಾಸ ಸ್ವಲ್ಪ ಕಷ್ಟವಾಗುತ್ತದೆ. ಅಂತಹವರು ಓಂಕಾರೇಶ್ವರ ಗುಡ್ಡಕ್ಕೆ ಬರಬಹುದು. ರಾಜ ರಾಜೇಶ್ವರಿ ನಗರದ ಆವೃತ್ತಿಯಲ್ಲಿ ಬರುವ ಈ ಗುಡ್ಡ ಬಹಳ ಎತ್ತರದಲ್ಲಿದೆ. ದೇವರ ದರ್ಶನ ಹಾಗೂ ಚಾರಣ ಎರಡೂ ಈಡೇರುವುದರಿಂದ ಒಂದು ದಿನದ ಪ್ರವಾಸ ಕೈಗೊಳ್ಳಬಹುದು.

 ಓಂಕಾರಾಶ್ರಮ

ಓಂಕಾರಾಶ್ರಮ

PC: youtube

ಇಲ್ಲಿರುವ ದೇಗುಲ ಶ್ರೀ ಶಿವಪುರಿ ಮಹಾಸ್ವಾಮೀಜಿ 1992ರಲ್ಲಿ ಓಂಕಾರಾಶ್ರಮದ ಸಂಸ್ಥಾನವನ್ನು ಸ್ಥಾಪಿಸಿದರು. ಇಲ್ಲಿ ಗಣಪತಿ, ವನದುರ್ಗ, ದ್ವಾದಶ ಜ್ಯೋತಿರ್ಲಿಂಗ, ಮತ್ಸ ನಾರಾಯಣ, ನಾಗದೇವ, ಮುನೀಶ್ವರ ದೇಗುಲ ಇರುವುದನ್ನು ಕಾಣಬಹುದು. ವೇದಾಗಮನ ಪಾಠ ಶಾಲೆ ಹಾಗೂ ಗೋಶಾಲೆಯಿದೆ.

ಗೋಪುರದ ಗಡಿಯಾರ

ಗೋಪುರದ ಗಡಿಯಾರ

PC: youtube

ಇಲ್ಲೊಂದು ಗೋಪುರದ ಗಡಿಯಾರವಿದೆ. ಈ ಗಡಿಯಾರ ಪ್ರತಿ ಒಂದು ಗಂಟೆಗೆ ಸದ್ದು ಮಾಡುತ್ತದೆ. ಇನ್ನೊಂದು ಆಕರ್ಷಣೆ ಎಂದರೆ ಸರ್ವಧರ್ಮ ಸಮನ್ವಯ ಪೀಠ . ಮಧ್ಯದಲ್ಲಿ ಒಂದು ಆಲದಮರ, ಸುತ್ತಲೂ 8 ಸಣ್ಣ ಗುಡಿಗಳಿವೆ. ಇದು ಎಲ್ಲಾ ಧರ್ಮದವರೂ ಒಂದೇ ಎನ್ನುವ ಸಂದೇಶವನ್ನು ಸಾರುತ್ತದೆ.

ಸಮುದ್ರ ಮಟ್ಟಕ್ಕಿಂತ 2800 ಅಡಿ ಎತ್ತರದಲ್ಲಿದೆ

ಸಮುದ್ರ ಮಟ್ಟಕ್ಕಿಂತ 2800 ಅಡಿ ಎತ್ತರದಲ್ಲಿದೆ

PC: youtube

ಪರಿಸರದ ಸೌಂದರ್ಯ ಸಮುದ್ರ ಮಟ್ಟಕ್ಕಿಂತ 2800 ಅಡಿ ಎತ್ತರದಲ್ಲಿರುವುದರಿಂದ, ಇಲ್ಲಿಯ ಪ್ರಕೃತಿ ಸೌಂದರ್ಯ ಬಹಳ ಸುಂದರವಾಗಿ ಕಾಣುವುದು. ಅಲ್ಲದೆ ಗುಡ್ಡದ ಮೇಲೆ ನಿಶ್ಯಬ್ದವಾದ ವಾತಾವರಣ, ಹಕ್ಕಿಗಳ ಕಲರವ ಎಲ್ಲವೂ ಮನವನ್ನು ತಿಳಿಗೊಳಿಸುವುದು. ಚಾರಣ ಮಾಡಲು ಇಷ್ಟ ಪಡುವವರು ಮುಂಜಾನೆ ಬೇಗ ಇಲ್ಲಿಗೆ ಬಂದು ಇಬ್ಬನಿಯಲ್ಲಿ ನೆನೆಯುತ್ತ, ಪ್ರಕೃತಿ ಮಡಿಲಲ್ಲಿ ಕಾಲಕಳೆಯಬಹುದು.

ಬೈಕ್ ರೈಡಿಂಗ್ ಮಾಡಬಹುದು

ಬೈಕ್ ರೈಡಿಂಗ್ ಮಾಡಬಹುದು

PC: youtube

ತುರಹಳ್ಳಿ ಕಾಡು ಹತ್ತಿರದಲ್ಲೇ ತುರಹಳ್ಳಿ ಕಾಡಿದೆ. ಇಲ್ಲಿ ಬೈಕ್ ರೈಡಿಂಗ್ ಮಾಡುವ ಹುಮ್ಮಸ್ಸು ಉಳ್ಳವರು ಹೋಗಬಹುದು. ಚಾರಣದ ಸವಿಯನ್ನು ಸವಿಯಬಹುದು. ಸ್ನೇಹಿತರೊಟ್ಟಿಗೆ ಸಾಕಷ್ಟು ಸಮಯ ಕಳೆಯಲು ಹೇಳಿ ಮಾಡಿಸಿದಂತಹ ಜಾಗ ಇದಾಗಿದೆ.

 ತಲುಪುವುದು ಹೇಗೆ ?

ತಲುಪುವುದು ಹೇಗೆ ?

PC: youtube

ಓಂಕಾರೇಶ್ವರ ಗುಡ್ಡ ಬೆಂಗಳೂರಿನ ಮೈಸೂರು ರಸ್ತೆಯಿಂದ 4-5 ಕಿ.ಮೀ. ದೂರದಲ್ಲಿದೆ. ಬಸ್ಸಲ್ಲಿ ಬರುವುದಾದರೆ ಉತ್ತರ ಹಳ್ಳಿ ಅಥವಾ ಕೆಂಗೇರಿ ಬಸ್ಸಿಗೆ ಬಂದರೆ ಈ ದೇವಾಲಯದ ಹತ್ತಿರ ಇಳಿದುಕೊಳ್ಳಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+